ನಮಸ್ತೇ ಪ್ರಿಯ ಓದುಗರೇ, ನಿಂಬೆ ಹಣ್ಣು ಜಗತ್ತಿನಲ್ಲಿ ಅತಿ ದೊಡ್ಡ ಸ್ಥಾನವನ್ನು ಪಡೆದಿದೆ. ನಿಂಬೆ ಹಣ್ಣಿನಲ್ಲಿ ಇರುವ ಆರೋಗ್ಯಕರ ಲಾಭಗಳು ನಾವು ಆರೋಗ್ಯವಾಗಿ ಇರಲು ಸಹಾಯ ಮಾಡುತ್ತದೆ. ನಿಂಬೆ ಹಣ್ಣು ಸೇವನೆ ಮಾಡುವುದರಿಂದ ಯಾವ ರೀತಿಯಾಗಿ ದೇಹಕ್ಕೆ ಪ್ರಯೋಜನಗಳು ದೊರೆಯುತ್ತವೆ ಅಂತ ತಿಳಿಯೋಣ ಬನ್ನಿ. ನಿಂಬೆ ಹಣ್ಣಿನ ಪ್ರತಿಯೊಂದು ಭಾಗವು ಮನುಷ್ಯನ ದೇಹದ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ. ನಿಂಬೆ ಹಣ್ಣಿನ ಕೆಲವು ಗುಣಗಳು ಮನುಷ್ಯನ ಆರೋಗ್ಯಕ್ಕೆ ಬಹಳಷ್ಟು ಸಹಕಾರಿಯಾಗಿವೆ. ಬೇಸಿಗೆಯಲ್ಲಿ ತಂಪಾಗಲೆಂದು ಮಾಡಿ ಕುಡಿಯುತ್ತಿದ್ದ ನಿಂಬೆ ಹಣ್ಣಿನ ಪಾನಕದ ಜೊತೆಗೆ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ರಸ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀವೇ ಶಾಕ್ ಆಗುತ್ತೀರಿ. ಹೀಗಾಗಿ ನಾವು ಆರೋಗ್ಯವಾಗಿ ಇರಲು ನಿಂಬೆ ಹಣ್ಣು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಮತ್ತು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸದೃಢ ಮಾಡುತ್ತದೆ. ನಿಮಗೆ ಏನಾದರೂ ಮಲಬದ್ಧತೆ ಸಮಸ್ಯೆ ಇದ್ದರೆ ನಿತ್ಯವೂ ಬೆಳಿಗ್ಗೆ ನಿಂಬೆ ಹಣ್ಣಿನ ರಸವನ್ನು ಕುಡಿಯುತ್ತಾ ಬನ್ನಿ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ ಮತ್ತು ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ.
ಇದರ ಜೊತೆಗೆ ಮಲಬದ್ಧತೆ ಹೊಟ್ಟೆ ಉರಿ ಹೊಟ್ಟೆ ಉಬ್ಬರ ಅಜೀರ್ಣತೆ ಅಸಿಡಿಟಿ ಸಮಸ್ಯೆಯಿಂದ ನರಳಾಡುತ್ತಿರುವವರು ಬೆಳಿಗ್ಗೆ ಎದ್ದು ತಕ್ಷಣ ಒಂದು ಲೋಟ ಬಿಸಿ ನೀರಿಗೆ ನಿಂಬೆ ಹಣ್ಣಿನ ರಸವನ್ನು ಹಾಕಿ ಕುಡಿಯಿರಿ. ಇದು ನೈಸರ್ಗಿಕವಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನ ರಸವನ್ನು ಕುಡಿಯುವುದರಿಂದ ದೊಡ್ಡ ಕರುಳಿನಲ್ಲಿ ಇರುವ ತ್ಯಾಜ್ಯ ವಸ್ತುಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನಲ್ಲಿ ಇರುವ ಪೋಷಕಾಂಶಗಳು ಮತ್ತು ರಾಸಾಯನಿಕಗಳು ಕಿಡ್ನಿ ಮತ್ತು ಲಿವರ್ ಗೆ ಅತ್ಯುತ್ತಮ ರಾಮಬಾಣ ನಿಂಬೆ ಹಣ್ಣಿನ ರಸವನ್ನು ಕುಡಿಯುವುದರಿಂದ ಲಿವರ್ ಉರಿ ಕಡಿಮೆ ಆಗುತ್ತದೆ ಹಾಗೂ ಲಿವರ್ ಶುದ್ಧೀಕರಣಗೊಳ್ಳುತ್ತದೆ. ನಿಂಬೆ ಹಣ್ಣಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಆಂಟಿ ಆಕ್ಸಿಡೆಂಟ್ ಗಳು ಮತ್ತು ಇದರಲ್ಲಿ ಅಧಿಕವಾದ ಸಿಟ್ರಿಕ್ ಆಮ್ಲ ಗಳು ಅಡಗಿರುವ ಕಾರಣ ಇದು ಮೊಡವೆಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಮುಖದ ಮೇಲೆ ಆಗಿರುವ ಡಾರ್ಕ್ ಸರ್ಕಲ್ ಅನ್ನು ಮಾಯ ಮಾಡುತ್ತದೆ ಮತ್ತು ಆರೋಗ್ಯಕರ ಜೀರ್ಣ ವ್ಯವಸ್ಥೆಗೆ ಸಹಕಾರಿಯಾಗುತ್ತದೆ. ಇದರ ಜೊತೆಯಲ್ಲಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಜೀರ್ಣ ಪ್ರಕ್ರಿಯೆಗೆ ಸಂಬಂಧ ಪಟ್ಟ ಸಮಸ್ಯೆಗಳಾದ ಮಲಬದ್ಧತೆ, ಹೊಟ್ಟೆಯ ಉಬ್ಬರ ಮತ್ತು ಭೇದಿಯಂತಹ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.
ಇನ್ನೂ ನಿಯಮಿತವಾಗಿ ನಿಂಬೆ ರಸ ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಮತ್ತು ಬ್ಯಾಕ್ಟೀರಿಯಾ ವಿರೋಧಿ ಆಗಿ ಕೆಲಸವನ್ನು ಮಾಡುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ದೇಹವನ್ನು ಡಿ ಹೈಡ್ರೇಟ್ ಮಾಡುತ್ತದೆ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ನಮ್ಮನ್ನು ಕಾಪಾಡುತ್ತದೆ. ಬೇಸಿಗೆ ಕಾಲದಲ್ಲಿ ಇದು ತುಂಬಾನೇ ಉಪಯುಕ್ತ ವಾಗಿದೆ. ನಿಂಬೆ ಹಣ್ಣಿನ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಹಾಕಿ ಕುಡಿಯುವುದರಿಂದ ತೂಕ ಕಡಿಮೆ ಆಗುತ್ತದೆ ಅಂತ ಕೆಲವರ ನಂಬಿಕೆಯಾಗಿದೆ. ಹೌದು ಇದು ಕೇವಲ ಶೇಕಡಾ 1% ಭಾಗದಷ್ಟು ಮಾತ್ರ ತೂಕವು ಕಡಿಮೆ ಆಗುತ್ತದೆ. ನಿಂಬೆ ರಸ ವು ದೇಹದಲ್ಲಿ ಸೇರಿಕೊಂಡಾಗ ಕೆಟ್ಟ ಕಲ್ಮಶಗಳನ್ನು ಹೊರಹಾಕುತ್ತದೆ. ಇದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಅಸಾಧ್ಯವಾಗುತ್ತದೆ. ತೂಕ ವ್ಯಾಯಾಮ ಯೋಗ ಜಿಮ್ ಮಾಡದೇ ಇದ್ದರೆ ತೂಕ ಇಳಿಸಲು ಕಷ್ಟದಾಯಕ ಆಗುತ್ತದೆ. ಹೀಗಾಗಿ ಉತ್ತಮವಾದ ಡಯೆಟ್ ಪಾಲನೆ ಮಾಡುತ್ತಾ ನಿತ್ಯವೂ ಯೋಗ ಜಿಮ್ ವ್ಯಾಯಾಮ ಕೆಲಸವನ್ನು ಮಾಡಿದರೆ ದೇಹದ ತೂಕವಾನ್ನು ನಷ್ಟ ಮಾಡಿಕೊಳ್ಳಬಹುದು.