ನಮಸ್ತೇ ಪ್ರಿಯ ಓದುಗರೇ, ಅಡಿಕೆ ವಿಸ್ತೀರ್ಣವು ಹೆಚ್ಚಾಗುತ್ತಿರುವ ಕಾರಣ ಅಡಿಕೆಯ ಬೆಲೆಯಲ್ಲಿ ರೈತರಿಗೆ ಕುಂಠಿತ ಆಗುವ ಹಲವಾರು ಸಾಧ್ಯತೆಗಳು ಹೆಚ್ಚು ಕಂಡು ಬರುತ್ತಿವೆ. ಅದಕ್ಕಾಗಿ ಅಡಿಕೆ ವಿಸ್ತೀರ್ಣದಲ್ಲಿ ಹಲವಾರು ಅಂತರದಲ್ಲಿ ಅನೇಕ ಬಗೆಯ ಬೆಳೆಗಳನ್ನು ಬೆಳೆದು ಕೊಳ್ಳಬಹುದು. ಇದರಿಂದ ರೈತರು ತಮ್ಮ ಅಪೇಕ್ಷೆಗೆ ತಕ್ಕಂತೆ ಆದಾಯವನ್ನು ಗಳಿಸಬಹುದು ಉದಾಹರಣೆಗೆ ಜಾಜಿಕಾಯಿ,ಅಡಿಕೆ ಲವಂಗ ಏಲಕ್ಕಿ ಕಾಳುಮೆಣಸು ಕೋಕೋ ಬೆಳೆಗಳನ್ನು ಬೆಳೆಯಬಹುದು ಅಂಥಹ ಅದ್ಭುತವಾದ ರೈತರ ಹೆಸರಿಗೆ ಸೇರಿರುವ ವಿಜೇಂದ್ರ ಭಟ್ ಎನ್ನುವ ರೈತರು ಮೂಲತಃ ಚಿಕ್ಕ ಜೇನಿ ಗ್ರಾಮ ಹೊಸನಗರ ತಾಲೂಕಿನ ಶಿವಮೊಗ್ಗ ಜಿಲ್ಲೆಯವರು. ಇವರು ತಮ್ಮ ಆರು ಎಕರೆ ಜಮೀನಿನಲ್ಲಿ ಅಂತರ ಬೆಳೆಯಾಗಿ ಜಾಯಿಕಾಯಿಯನ್ನು ಬೆಳೆದು ಪ್ರತಿ ಗಿಡಕ್ಕೆ ಒಂದೂವರೆ ಸಾವಿರ ರೂಪಾಯಿ ಆದಾಯವನ್ನು ಗಳಿಸುತ್ತಾರೆ ಹೌದು ಜಾಯಿಕಾಯಿ ಇಂದ ಹಲವಾರು ಬಗೆಯ ಆರೋಗ್ಯಕರ ಗುಣಗಳನ್ನು ಹೊಂದಿದೆ ಅದರಲ್ಲೂ ಕೂದಲಿನ ಸೌಂದರ್ಯಕ್ಕೆ ಇದು ಹೇಳಿ ಮಾಡಿಸಿದ ಪದಾರ್ಥ ಆಗಿದೆ. ಹೌದು ಜಾಯಿಕಾಯಿ ಒಂದು ಸಾಂಬಾರ್ ಪದಾರ್ಥಕ್ಕೆ ಉದಾಹರಣೆ ಆಗಿದೆ. ಇದು ಮಧ್ಯಮ ಗಾತ್ರದ ಮರವಾಗಿದ್ದು, ಅಡಿಕೆ ಬೆಳೆಯ ಮಧ್ಯೆ ಬಹೂಪಯೋಗಿ ಆಗಿ ಬೆಳೆಯುತ್ತದೆ. ಇದನ್ನು ನಾಟಿ ಮಾಡಿದರೆ ಮೂರರಿಂದ ನಾಲ್ಕು ವರ್ಷದಲ್ಲಿ ಫಸಲು ಬರುತ್ತದೆ.
ಮತ್ತು ಏಳು ವರ್ಷದಲ್ಲಿ ಒಂದು ಗಿಡದಲ್ಲಿ ಎರಡರಿಂದ ಎರಡೂವರೆ ಸಾವಿರ ಜಾಜಿಕಾಯಿಗಳು ಹುಟ್ಟುತ್ತವೆ ಈ ಜಾಯಿಕಾಯಿ ಅನ್ನು ತೆಗೆದುಕೊಂಡು ಅದರ ಮೇಲಿನ ಸಿಪ್ಪೆಯನ್ನು ತೆಗೆದುಕೊಂಡು ಪತ್ರೆಯನ್ನು ಬಿಡಿಸಿ ಅದರೊಳಗೆ ಇರುವ ಕಾಯಿಯನ್ನು ಹೊರ ತೆಗೆಯಬೇಕು. ಮತ್ತು ಅದನ್ನು 3-4 ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಬೇಕು ಆದರೆ ಇದರ ಪತ್ರೆಯನ್ನೂ ಮಾತ್ರ ನೆರಳಿನಲ್ಲಿ ಒಣಗಿಸಬೇಕು. ಸಾವಿರದ ಎರಡನೂರು ಕಾಯಿಗೆ ಒಂದು ಕೆಜಿ ಪತ್ರೆ ಸಿಗುತ್ತದೆ. ಇದಕ್ಕೆ ಏಳನೂರರಿಂದ ಎರಡು ಸಾವಿರ ರೂಪಾಯಿ ವರೆಗೆ ಬೆಲೆ ಇರುತ್ತದೆ. ಇನ್ನೂ ಜಾಯಿಕಾಯಿ ಬೀಜ 400-700 ಬೀಜಗಳಿಗೆ ಒಂದು ಕೆಜಿ ಸಿಗುತ್ತದೆ. ಅದಕ್ಕೆ 400-700 ರೂಪಾಯಿ ಬೆಲೆ ಇರುತ್ತದೆ. ಈ ಜಾಯಿಕಾಯಿ ಸಿಪ್ಪೆಯಿಂದ ಉಪ್ಪಿನಕಾಯಿ ಹಾಕಬಹುದು. ಹಾಗೂ ಸಕ್ಕರೆಯಲ್ಲಿ ಹಾಕಿ ಚಿಪ್ಸ್ ರೀತಿಯಲ್ಲಿ ಮಾಡಿಕೊಳ್ಳಬಹುದು. ಇದು ವ್ಯಾಪಾರಕ್ಕೆ ಮಾತ್ರವಲ್ಲದೆ ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಇದನ್ನು ಸೌಂದರ್ಯ ವರ್ಧಕಗಳು ಆಗಿ ಬಳಕೆ ಮಾಡುತ್ತಾರೆ ಹೀಗಾಗಿ ನೀವು ಇದನ್ನು ನಿತ್ಯವೂ ಬಳಕೆ ಮಾಡಬಹುದು. ಜಾಯಿಕಾಯಿ ಬೆಲೆಯಲ್ಲಿ ತುಂಬಾನೇ ಮಹತ್ವವಾದ ಸ್ಥಾನವನ್ನು ಹೊಂದಿದೆ. ಈ ಜಾಯಿಕಾಯಿಯಲ್ಲಿ ದೊರೆಯುವ ಪತ್ರೆಗೆ ತುಂಬಾನೇ ಬೆಲೆ ಇದೆ ಕಾಯಿಗೆ ಹೋಲಿಕೆ ಮಾಡಿದರೆ. ಆದ್ದರಿಂದ ಇದನ್ನು ಗರಂ ಮಸಾಲೆ ಆಗಿ ಕೂಡ ಅಡುಗೆಯಲ್ಲಿ ಬಳಕೆ ಮಾಡುತ್ತಾರೆ. ಮತ್ತು ಇದನ್ನು ಔಷಧವಾಗಿ ಬಳಕೆ ಮಾಡುತ್ತಾರೆ ಮತ್ತು ಹೊರದೇಶಗಳಿಗೆ ವ್ಯಾಪಾರಕ್ಕಾಗಿ ಮಾರಾಟ ಕೂಡ ಮಾಡುತ್ತಾರೆ. ಈ ಜಾಯಿಕಾಯಿ ಮೊದಲಿನ ಕಾಲದಿಂದಲೂ ಬಳಕೆಯಲ್ಲಿದ್ದು ಇದನ್ನು ಹಳ್ಳಿಗಳಲ್ಲಿ ಮಕ್ಕಳಿಗೆ ಔಷಧವಾಗಿ ಬಳಕೆ ಮಾಡುತ್ತಾರೆ.
ಸಾಮಾನ್ಯವಾಗಿ ಇ ಮಸಾಲೆ ಪದಾರ್ಥಗಳಿಗೆ ಬಹುಬೇಡಿಕೆ ಇದೆ ಆದ್ದರಿಂದ ರೈತರು ಏನು ಮಾಡುತ್ತಾರೆ ಹೆಚ್ಚಾಗಿ ಅಡಿಕೆಯನ್ನು ಬೆಳೆಯುತ್ತಾರೆ. ಇದರ ನಡುವೆ ಈ ರೀತಿ ಜಾಯಿಕಾಯಿ ಲವಂಗ ಏಲಕ್ಕಿ ಕೋಕೋ ಲಿಂಬೆ ಹಣ್ಣು ಕಿತ್ತಳೆ ಮೋಸಂಬಿ ಬೆಳೆಗಳನ್ನು ಬೆಳೆಯಬಹುದು. ಏಕೆಂದರೆ ಒಂದು ಫಸಲಿನಲ್ಲಿ ನಷ್ಟವಾದರೂ ಸರಿಯೇ ಇನ್ನೊಂದರಲ್ಲಿ ನಾವು ಆದಾಯವನ್ನು ಗಳಿಸಬಹುದು. ಈ ರೀತಿ ಬೆಳೆಗಳನ್ನು ಮಧ್ಯದಲ್ಲಿ ಬೆಳೆಯುವುದರಿಂದ ಅಡಿಕೆ ಬೆಳೆಗೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ. ಈ ಜಾಯಿಕಾಯಿ ವರ್ಷದ ಎಲ್ಲಾ ತಿಂಗಳಿನಲ್ಲಿ ಸಿಗುತ್ತದೆ. ಇದಕ್ಕೆ ಯಾವುದೇ ಔಷಧವನ್ನು ಸಿಂಪಡಣೆ ಮಾಡುವ ಅಗತ್ಯವಿಲ್ಲ ಹಾಗೂ ಮುಖ್ಯವಾಗಿ ಇವುಗಳಿಗೆ ರೋಗವು ಬರುವುದಿಲ್ಲ. ಹಾಗೂ ಈ ಜಾಯಿಕಾಯಿ ಅನ್ನು ಅಡಿಕೆ ತೋಟದಲ್ಲಿ ಬೆಳೆಯುವುದರಿಂದ ಇದರ ಉದುರಿದ ಎಲೆಗಳು ಅಡಿಕೆ ಮರಗಳಿಗೆ ಸಾವಯವ ಗೊಬ್ಬರ ಆಗಿ ದೊರೆಯುತ್ತದೆ. ಈ ಜಾಯಿಕಾಯಿ ಬೆಳೆಯನ್ನು ಅಡಿಕೆ ತೆಂಗುಗಳ ಮಧ್ಯೆ ಏಕೆ ಬೆಳೆಬೇಕೆಂದರೆ ಇದು ಹೆಚ್ಚಾಗಿ ನೆರಳನ್ನು ಬಯಸುತ್ತದೆ. ಈ ರೀತಿಯಾಗಿ ಅಡಿಕೆ ಮತ್ತು ತೆಂಗುಗಳ ಮಧ್ಯೆ ಈ ಉಪ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದು. ಈ ಮಾಹಿತಿಯನ್ನು ಪ್ರತಿ ರೈತರಿಗೂ ಹಂಚಿಕೊಳ್ಳಿ. ಶುಭದಿನ.