2022 ಈ ಹೊಸ ವರ್ಷ ಈ ಐದು ರಾಶಿಯವರ ಜೀವನಕ್ಕೆ ಒಲಿದು ಬಂದ ಅದೃಷ್ಟವೋ ಅದೃಷ್ಟ

ಜ್ಯೋತಿಷ್ಯ ಧಾರ್ಮಿಕ

ನಮಸ್ತೇ ಪ್ರಿಯ ಓದುಗರೇ, ಜೀವನದಲ್ಲಿ ಮದುವೆ ಆಗುವುದು ಅಂದರೆ ಜೀವನದ ಅರ್ಧವನ್ನು ಸಂಗಾತಿಯ ಜೊತೆಗೆ ಕಳೆಯುವುದು ಎಂದರ್ಥ. ಸಂಗಾತಿ ಪಡೆದು ಉತ್ತಮವಾದ ಜೀವನವನ್ನು ಹೊಂದಿರುತ್ತಾರೆ. ಕೆಲವರಿಗೆ ಸಂಗಾತಿ ಎಂಬುವವರು ಬೇಗನೆ ಸಿಕ್ಕರೆ ಇನ್ನೂ ಕೆಲವರಿಗೆ ವರ್ಷಗಟ್ಟಲೆ ಕಾಯುತ್ತಿರಬೇಕು. ಮದುವೆಯಲ್ಲಿ ಅಡಚಣೆಗಳು ಬರುತ್ತಾ ಇರುತ್ತವೆ ಮದುವೆಯಲ್ಲಿ ವಿಳಂಬ ಆಗುತ್ತಾ ಇರುತ್ತದೆ. ಅಷ್ಟೇ ಪ್ರೀತಿ ಹುಡುಕುವುದು ಕಷ್ಟ ಆಗುತ್ತಾನೆ ಇರುತ್ತದೆ. ಈ ವರ್ಷ 2022 ಈ ಐದು ರಾಶಿಯವರಿಗೆ ಪ್ರೀತಿಯ ಜೀವನಕ್ಕೆ ಹೊಸ ದಾರಿಯಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಈ ಐದು ರಾಶಿಯವರಿಗೆ ಪ್ರೀತಿ ಸಿಗಲಿದೆ. ಹಾಗೂ ಮದುವೆ ಕೂಡ ಆಗಬಹುದು ಹಾಗಾದರೆ ಆ ರಾಶಿಗಳು ಯಾವುವು ಅಂತ ತಿಳಿಯೋಣ ಬನ್ನಿ.

ಮೇಷ ರಾಶಿ. ಹೌದು ಈ ವರ್ಷ ಈ ರಾಶಿಯವರಿಗೆ ಉತ್ತಮವಾದ ಸಂಗಾತಿ ಸಿಗಲಿದ್ದಾರೆ. ಈಗಾಗಲೇ ಪ್ರೀತಿ ಮಾಡುವವರು ಈ ವರ್ಷ ಮದುವೆ ಕೂಡ ಆಗಬಹುದು. ಮತ್ತು 2022ರ ವರ್ಷದಲ್ಲಿ ಮೇಷ ರಾಶಿಯವರು ಈಗಾಗಲೇ ಮದುವೆ ಆಗಿದ್ದಾರೆ ನಿಮ್ಮ ದಾಂಪತ್ಯ ಜೀವನದಲ್ಲಿ ಉಂಟಾಗುವ ಎಲ್ಲ ಸಮಸ್ಯೆಗಳಿಗೆ ಈ ವರ್ಷ ಕೊನೆಯಾಗುತ್ತದೆ. ಹಾಗೂ ನಿಮ್ಮ ಜೀವನವೂ ಸದಾ ಕಾಲ ಉತ್ತಮ ಆಗಿರುತ್ತದೆ. ಮತ್ತು ಸಾಂಸಾರಿಕ ಜೀವನವೂ ಮತ್ತಷ್ಟು ಬಲಗೊಳ್ಳುತ್ತದೆ. ವೃಷಭ ರಾಶಿ. ಈ ರಾಶಿಯವರು ತಮ್ಮ ಸಂಗಾತಿಗಾಗಿ ವರ್ಷಗಟ್ಟಲೆ ಕಾಯುತ್ತಾನೆ ಇರುತ್ತಾರೆ. ಆದರೆ ಒಮ್ಮೆ ಪ್ರೀತಿ ಎಂಬ ಅಸ್ತ್ರವೂ ಇವರ ಜೀವನದಲ್ಲಿ ಅನಿರೀಕ್ಷಿತವಾಗಿ ಬರುತ್ತದೆ. ಆದರೆ ಒಮ್ಮೆ ಬಂದರೆ ಇವರು ಊಹಿಸಲು ಕೂಡ ಆಗುವುದಿಲ್ಲ ಅಷ್ಟೊಂದು ಪ್ರೀತಿ ಮಾಡುವ ವ್ಯಕ್ತಿಗಳು ಇವರ ಜೀವನದಲ್ಲಿ ಬರುತ್ತಾರೆ. ವಿವಾಹ ಆಗಲಿರುವ ಎಲ್ಲ ವೃಷಭ ರಾಶಿಯವರಿಗೆ ಈ ವರ್ಷ ಉತ್ತಮವಾಗಲಿದೆ.

ಧನು ರಾಶಿ. ಧನು ರಾಶಿಯವರ ಪ್ರೀತಿಗೆ 2022 ಈ ವರ್ಷ ಬಹಳ ಉತ್ತಮವಾದ ವರ್ಷವಾಗಿದೆ. ಮದುವೆ ಮುಂಜಿಯಲ್ಲಿ ಯಾವುದೇ ಅಡೆ ತಡೆಗಳು ಬರುವುದಿಲ್ಲ. ಈ ರಾಶಿಯವರ ಪ್ರೀತಿ ಸಂಭಂದ ಹೆಚ್ಚುತ್ತಲೇ ಹೋಗುತ್ತದೆ ಹೊರತು ಪ್ರೀತಿಯಲ್ಲಿ ಕೊರತೆ ಆಗುವುದಿಲ್ಲ. ಹಾಗೂ ಪ್ರೀತಿ ಮುಂದುವರೆಯುತ್ತಲೆ ಸಾಗುತ್ತದೆ. ಅವಿವಾಹಿತ ಜನರು ವಿವಾಹಿತರು ಆಗುತ್ತಾರೆ. ಈ ವರ್ಷ ನಿಮ್ಮ ಸಂಗಾತಿಗೆ ಉತ್ತಮವಾದ ಉಡುಗೊರೆಯನ್ನು ಕೊಟ್ಟು ಮೆಚ್ಚಿಸುತ್ತೀರಿ. ಹಾಗೂ ಮೆಮೋರಿಯಲ್ ಪ್ರವಾಸಕ್ಕೆ ಹೋಗುವಿರಿ. ಮಕರ ರಾಶಿ. ಈ ವರ್ಷ ಮಕರ ರಾಶಿ ಯವರ ಜೀವನದಲ್ಲಿ ಪ್ರೇಯಸಿ ಆಗಮನ ಆಗುತ್ತದೆ. ಹೊಸ ವ್ಯಕ್ತಿ ಆಗಮನದಿಂದ ನಿಮ್ಮ ಜೀವನವೇ ಬದಲಾಗುತ್ತದೆ.ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಮೇ 2022 ಮತ್ತು ಜುಲೈ 2022 ರ ನಡುವೆ ಪ್ರೇಮ ಸಂಗಾತಿಗಳು ಮದುವೆಯಾಗುವುದು ಅತ್ಯಂತ ಶುಭಕರವಾಗಿರುತ್ತದೆ. ಮನೆಯಲ್ಲಿ ಮಂಗಳ ವಾದ್ಯ ಕೇಳುವ ಎಲ್ಲ ಅವಕಾಶಗಳು ಸಾಧ್ಯತೆಗಳು ಇವೆ.

ಮದುವೆಯಲ್ಲಿ ಪದೇ ಪದೇ ಸಮಸ್ಯೆಗಳು ಕಾಡುತ್ತಿರುವುದು ನಿಂತು ಹೋಗುತ್ತದೆ. ಕುಂಭ ರಾಶಿ. ಈ ರಾಶಿಯವರು ಈಗಾಗಲೇ ಪ್ರೀತಿ ಮಾಡುತ್ತಿದ್ದರೆ ಇವರ ಪ್ರೀತಿ ಮತ್ತಷ್ಟು ಮುಗಿಲೇರುತ್ತದೆ. ಹಾಗೂ ಅಷ್ಟೇ ಪ್ರಬಲ ಆಗುತ್ತದೆ. ಮತ್ತು ಇವರ ಆಸೆಯಂತೆ ಈ ವರ್ಷ ಪ್ರೇಮಿಗಳು ಸಂಸಾರಿಗಳು ಆಗುತ್ತಾರೆ. ಮದುವೆ ಆಗದೆ ಇರುವವರಿಗೆ ಮದುವೆ ಪ್ರಪೋಸಲ್ ಗಳು ಬರುತ್ತಾ ಇರುತ್ತವೆ. ಹಾಗೂ ಅವಿವಾಹಿತರು ತಮ್ಮ ಪ್ರೀತಿಯ ಸಂಗಾತಿಗಾಗಿ ವರ್ಷದ ಕೊನೆಯಲ್ಲಿ ಕಾಯಬೇಕಾಗುತ್ತದೆ. ಖಂಡಿತವಾಗಿ ನೀವು ಇಷ್ಟ ಪಟ್ಟಂತೆ ಬಯಸಿದಂತೆ ಸಂಗಾತಿ ಸಿಗುತ್ತಾರೆ. ಶುಭದಿನ.

Leave a Reply

Your email address will not be published. Required fields are marked *