ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗಲು ರಾತ್ರಿ ಹೀಗೆ ಮಾಡಿರಿ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ನಾವು ನಿತ್ಯವೂ ಆಹಾರವನ್ನು ಸೇವನೆ ಮಾಡುತ್ತೇವೆ. ಇದು ಸರಿಯಾಗಿ ಜೀರ್ಣವಾದರೆ ನಾವು ಅರೋಗ್ಯವಾಗಿ ಇರುತ್ತೇವೆ ಇಲ್ಲವಾದರೆ ನಮಗೆ ಹೊಟ್ಟೆಗೆ ಸಂಭಂದಿಸಿದ ನೋವುಗಳು ಬರಲು ಶುರು ಆಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಯಾವ ರೀತಿಯ ಆಹಾರವನ್ನು ಸೇವನೆ ಮಾಡಬೇಕು? ಮತ್ತು ಹೇಗೆ ಸೇವನೆ ಮಾಡಿದರೆ ಸರಿಯಾಗಿ ಜೀರ್ಣವಾಗುತ್ತದೆ. ಮತ್ತು ಅಂತಹ ಆಹಾರ ಪದಾರ್ಥಗಳು ಯಾವುವು ಅನ್ನುವುದರ ಪಟ್ಟಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಬನ್ನಿ. ಜೀರ್ಣಾಂಗ ವ್ಯವಸ್ಧೆ ಸರಿಯಾಗಿ ಕೆಲಸವನ್ನು ಮಾಡಿದರೆ ದೇಹದ ಪ್ರತಿಯೊಂದು ಭಾಗವು ಸರಿಯಾಗಿ ಕೆಲಸವನ್ನು ನಿರ್ವಹಿಸುತ್ತವೆ. ಒಂದು ವೇಳೆ ಈ ಜೀರ್ಣಾಂಗ ಕ್ರಿಯೆಯು ಸರಿಯಾಗಿ ಕೆಲಸವನ್ನು ಮಾಡದೆ ಇದ್ದರೆ ದೇಹದಲ್ಲಿ ಏರುಪೇರು ಆಗುತ್ತದೇ ಹಾಗೂ ಅಡಚಣೆ ಕೂಡ ಉಂಟಾಗುತ್ತದೆ. ಆದ್ದರಿಂದ ಜೀರ್ಣ ಕ್ರಿಯೆಯ ಪ್ರಕ್ರಿಯೆ ಮೇಲೆ ವಿಶೇಷವಾದ ಕಾಳಜಿ ವಹಿಸಬೇಕು. ಆದ್ದರಿಂದ ಜೀರ್ಣ ಕ್ರಿಯೆ ಸರಿಯಾಗಿ ಆಗಲು ಯಾವ ಆಹಾರವನ್ನು ಸೇವನೆ ಮಾಡಬೇಕು ಅಂತ ವಿವರವಾಗಿ ತಿಳಿಯೋಣ ಬನ್ನಿ.

ಮೊದಲಿಗೆ ಊಟವಾದ 45 ನಿಮಿಷಗಳ ನಂತರ ನೀರು ಕುಡಿಯಬೇಕು. ಇದರಿಂದ ಜೀರ್ಣ ಕ್ರಿಯೆ ಸರಾಗವಾಗಿ ನಡೆಯುತ್ತದೆ. ಇನ್ನೂ ಎರಡನೆಯದು, ರಾತ್ರಿವೇಳೆಗೆ 5-6 ಬೆಂಡೆ ಕಾಯಿಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಅದನ್ನು ಕತ್ತರಿಸಿ ರಾತ್ರಿವಿಡೀ ನೆನೆಸಿಡಿ ಮರುದಿನ ಬೆಳಿಗ್ಗೆ ಇದರ ನೀರು ಕುಡಿಯುವುದರಿಂದ ಕರುಳು ಮತ್ತು ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಇದರಿಂದ ಅಲ್ಸರ್ ಸಮಸ್ಯೆ ಕೂಡ ಕಡಿಮೆ ಆಗುತ್ತದೆ. ಮತ್ತು ಮಲಬದ್ಧತೆ ಹಾಗೂ ಅಸಿಡಿಟಿ ಸಮಸ್ಯೆಯು ಕೂಡ ನಿವಾರಣೆ ಆಗುತ್ತದೆ. ಇನ್ನೂ ಊಟವಾದ ಮೇಲೆ ಒಂದು ಪೂರ್ತಿಯಾದ ಏಲಕ್ಕಿಯನ್ನು ತಿನ್ನಬೇಕು ಇದರಿಂದ ತಿಂದ ಆಹಾರವು ಜೀರ್ಣವಾಗುತ್ತದೆ. ಮತ್ತು ಒಂದೆರಡು ಈರುಳ್ಳಿಯನ್ನು ಕತ್ತರಿಸಿ ಅದರ ರಸವನ್ನು ಹಿಂಡಿ ಅದರಲ್ಲಿ ಜೇನುತುಪ್ಪವನ್ನು ಹಾಕಿ ಮತ್ತು ಕರಿ ಮೆಣಸು ಹಾಕಿ ಕುಡಿಯಬೇಕು. ಇದರಿಂದ ಅಜೀರ್ಣತೆ ಕಡಿಮೆ ಆಗಿ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ನಡೆಯುತ್ತದೆ. ಚಿಟೀಕೆ ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ ತಿಂದರೆ ಜೀರ್ಣ ಶಕ್ತಿ ಹೆಚ್ಚುತ್ತದೆ. ಪಿತ್ತದಿಂದ ವಾಂತಿ ಆಗುತ್ತಿದ್ದರೆ ಅದು ಕೂಡ ನಿವಾರಣೆ ಆಗುತ್ತದೆ. ಮೊಸರು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಲು ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ.

ಇದರಲ್ಲಿರುವ ಬ್ಯಾಕ್ಟಿರಿಯಾಗಳು ಅನೇಕ ಸಮಸ್ಯೆಗಳಾದ ಮಲಬದ್ಧತೆ ಅತಿಸಾರ ವಾಂತಿ ಭೇಧಿ ಹೊಟ್ಟೆಗೆ ಸಂಬಂದಿಸಿದ ಎಲ್ಲ ಕಾಯಿಲೆಗಳನ್ನು ದೂರ ಮಾಡುತ್ತದೆ. ಇನ್ನೂ ಬಾಳೆಹಣ್ಣು ಕೂಡ ಜೀರ್ಣ ಕ್ರಿಯೆಗೆ ಉತ್ತಮ. ಈ ಬಾಳೆಹಣ್ಣಿನಲ್ಲಿ ಇರುವ ಅಂಶವು ಟಾಕ್ಸಿನ್ ಅನ್ನು ಬಿಡುಗಡೆ ಮಾಡುತ್ತದೆ. ಇದನ್ನು ರಾತ್ರಿ ಮಲಗುವಾಗ ತಿಂದು ಮಲಗಿದರೆ ಅಜೀರ್ಣತೆ ಸಮಸ್ಯೆ ದೂರವಾಗುತ್ತದೆ. ಬಾಳೆಹಣ್ಣಿನಲ್ಲಿ ಇರುವ ಫೈಬರ್ ಅಂಶವು ಕರುಳಿನ ಕೆಲಸವನ್ನು ಉತ್ತೇಜಿಸುತ್ತದೆ. ಹಾಗೆಯೆ ಆಹಾರದಲ್ಲಿ ಅಧಿಕವಾದ ಸಕ್ಕರೆಯ ಅಂಶ ಇಲ್ಲದಂತೆ ನೋಡಿಕೊಳ್ಳಿ ಹಾಗೂ ಸಕ್ಕರೆ ಅಂಶವಿರುವ ಆಹಾರವನ್ನು ಕಡಿಮೆ ತಿನ್ನಿ. ಇನ್ನೂ ಕಾಫೀ ಟೀ ಕೆಫೀನ್ ಯುಕ್ತ ಪಾನೀಯಗಳನ್ನು ಕುಡಿಯಬೇಡಿ. ಇನ್ನೂ ಊಟವಾದ ಮೇಲೆ ಕಾಫಿ ಟೀ ಕುಡಿಯಬೇಡಿ ಇದರಿಂದ ಅಸಿಡಿಟಿ ಗಾಳಿ ಹೆಚ್ಚಾಗಿ ಬಿಡುಗಡೆ ಆಗುತ್ತದೆ. ಇದು ಜೀರ್ಣಕ್ರಿಯೆ ಸರಿಯಾಗಿ ಆಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಅಸಿಡಿಟಿ ಸಮಸ್ಯೆ ಹೆಚ್ಚಾಗಿ ಹೊಟ್ಟೆನೋವು ಬರುತ್ತದೆ.ಇನ್ನೂ ಆದಷ್ಟು ಹೆಚ್ಚಾಗಿ ಮಾನಸಿಕ ಒತ್ತಡವನ್ನು ಮಾಡಿಕೊಳ್ಳಬೇಡಿ. ಇದರಿಂದ ಕೂಡ ಅನೇಕ ಸಮಸ್ಯೆಗಳಿಗೆ ದಾರಿ ಆಗುತ್ತದೆ ಆದ್ದರಿಂದ ಶಾಂತ ಮನಸ್ಸಿನಿಂದ ಇರಿ. ಶುಭದಿನ.

Leave a Reply

Your email address will not be published. Required fields are marked *