ಮುಖದ ಮೇಲೆ ಆಗಿರುವ ಕಪ್ಪು ಕಲೆಗಳನ್ನು ಅತೀ ವೇಗವಾಗಿ ಹೋಗಲಾಡಿಸುವ ಸೂಪರ್ ಮನೆಮದ್ದುಗಳು

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ನಾವು ಚಿಕ್ಕವರು ಇದ್ದಾಗ ನಮ್ಮ ಚರ್ಮ ಎಷ್ಟೊಂದು ಮೃದುವಾಗಿ ಇರುತ್ತದೆ ಆದರೆ ದೊಡ್ಡವರಾದಂತೆ ಮುಖದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಮೊಡವೆಗಳು ಕಪ್ಪು ಕಲೆಗಳು ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳುತ್ತದೆ ಕೆಲವರಿಗೆ ಮುಖದಲ್ಲಿ ಮೊಡವೆಗಳು ಆದರೆ ಜೀವ ಹೋದಂತೆ ಕೀಳರಿಮೆ ಆವರಿಸುತ್ತಾರೆ. ಇದಕ್ಕೆ ನಾವು ಮುಖದ ಮೇಲೆ ಆಗಿರುವ ಮೊಡವೆಗಳನ್ನು ಹೋಗಲಾಡಿಸಲು ಅಥವಾ ಮುಂದೆ ಕಲೆಗಳು ಬರದಂತೆ ಇರೋ ಎಲ್ಲ ಕೆಲಸಗಳನ್ನೂ ಅಂದರೆ ಸೌಂದರ್ಯ ವರ್ಧಕಗಳನ್ನು ಬಳಸುವುದು, ಸಲೂನ್ ಗೆ ಹೋಗುವುದು ಬೇರೆ ಬೇರೆ ರಾಸಾಯನಿಕ ಪ್ರಾಡಕ್ಟ್ ಉಪಯೋಗಿಸುವುದನ್ನು ಎಲ್ಲ ಬಗೆಯ ಕೆಲಸಗಳನ್ನು ಮಾಡಿ ಸುಸ್ತು ಬಿದ್ದು ಹೋಗಿರುತ್ತೇವೆ ಈಗಿನ ಕಾಲದಲ್ಲಿ ಅಂತೂ ಹೇಳತೀರದು. ಈಗಿನ ಆಧುನಿಕ ಜೀವನ ಶೈಲಿಯಿಂದಾಗಿ ಪ್ರತಿ ಯುವ ಜನತೆ ಒಂದಲ್ಲ ಒಂದು ಚರ್ಮದ ಸಮಸ್ಯೆಯನ್ನು ಎದುರಿಸುತ್ತಿದೆ.

ಅದರಲ್ಲಿ ಮುಖ್ಯವಾಗಿ ಮುಖದಲ್ಲಿ ಕಾಣುವ ಕಪ್ಪು ಕಲೆಗಳು. ಈ ಸಮಸ್ಯೆ ಮುಖ್ಯವಾಗಿ ಯಾವಾಗ ಕಂಡು ಬರುತ್ತದೆ ಅಂದರೆ ಹಾರ್ಮೋನ್ ಗಳಲ್ಲಿ ಬದಲಾವಣೆ ಆದಾಗ ತ್ವಚೆಯಲ್ಲಿ ಬದಲಾವಣೆ ಆದಾಗ ಹಾಗೂ ಸರಿಯಾಗಿ ನಿದ್ದೆ ಮಾಡದೆ ಇದ್ದಾಗ ಅಲರ್ಜಿ ಆದಾಗ ಹಾಗೂ ಜಾಸ್ತಿ ಬಿಸಿಲಿನಲ್ಲಿ ಒಡಾಡಿದಾಗ ಹಾಗೂ ನಿಯಮಿತವಾದ ಮಾತ್ರೆಗಳ ಸೇವನೆ ಇಂದ ಮತ್ತು ಕೂದಲಿಗೆ ಕಲರಿಂಗ್ ಮಾಡುವ ಅಭ್ಯಾಸದಿಂದಾಗಿ ಮುಖದಲ್ಲಿ ಮೊಡವೆಗಳು ಆಗಿ ಕಪ್ಪು ಕಲೆಗಳು ಆಗಿ ಹಾಗೆಯೇ ಉಳಿದು ಬಿಡುತ್ತವೆ. ಅದಕ್ಕಾಗಿ ನೀವು ಮನೆಯಲ್ಲಿಯೇ ಈ ಕಪ್ಪು ಕಲೆಗಳನ್ನು ಕಡಿಮೆ ಮಾಡಿಕೊಂಡು ಕ್ಲೀನ್ ಮತ್ತು ಕ್ಲಿಯರ್ ಅಂಥಹ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ಹೀಗೆ ಮಾಡಿದ್ರೆ ಸಾಕು. ನಿಮ್ಮ ಕಪ್ಪು ಕಲೆಗಳು ಮಾಯವಾಗುತ್ತವೆ. ಮುಖದ ಕಪ್ಪು ಕಲೆಗಳನ್ನು ಹೋಗಲಾಡಿಸಲು ಶ್ರೀಗಂಧ ಬಹಳ ಉಪಯುಕ್ತ. ಹೌದು ಸ್ವಲ್ಪ ಶ್ರೀಗಂಧ ತೆಗೆದುಕೊಂಡು ಜೊತೆಗೆ ಸ್ವಲ್ಪ ಕಡಲೆ ಹಿಟ್ಟು ತೆಗೆದುಕೊಂಡು ಅವುಗಳನ್ನು ಮಿಕ್ಸ್ ಮಾಡಿ ಅದರಲ್ಲಿ ಹಾಲು ಅಥವಾ ರೋಸ್ ವಾಟರ್ ಹಾಕಿ ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಿ.

ತದ ನಂತರ ಮುಖಕ್ಕೆ ಹಚ್ಚಿಕೊಂಡು ಹದಿನೈದು ನಿಮಿಷಗಳವರೆಗೆ ಬಿಡಿ ಈ ರೀತಿಯಾಗಿ ವಾರದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ಮೊಡವೆಗಳು ಕಪ್ಪು ಕಲೆಗಳು ಮಾಯವಾಗುತ್ತವೆ. ಮತ್ತು ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸಲು ಕಿತ್ತಳೆ ಹಣ್ಣಿನ ಸಿಪ್ಪೆ ತುಂಬಾ ಉಪಯುಕ್ತ. ಹೀಗಾಗಿ ಈ ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಬಳಸಿ ಇಲ್ಲವಾದರೆ ಇದು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಈ ಕಿತ್ತಳೆ ಸಿಪ್ಪೆಯ ಪುಡಿಯನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಮೊಸರು ಹಾಕಿ ಅರ್ಧ ಗಂಟೆ ಕಳ್ಸಿ ಇಡಿ. ನಂತರ ಅದನ್ನು ಮುಖಕ್ಕೆ ಅಗತ್ಯವಿದ್ದ ಜಾಗದಲ್ಲಿ ಮಾತ್ರವೇ ಲೇಪನ ಮಾಡಿ ತದ ನಂತರ ತೊಳೆದುಕೊಳ್ಳಿ. ಬೇವಿನ ಎಣ್ಣೆಯನ್ನು ಮುಖದ ಮೇಲೆ ಆಗಿರುವ ಕಪ್ಪು ಕಲೆಗಳು ಮೇಲೆ ಹಚ್ಚುವುದರಿಂದ ಮುಖದಲ್ಲಿರುವ ಕಲೆಗಳು ಬೇಗನೆ ವಾಸಿಯಾಗುತ್ತವೆ. ಮುಖದ ಕಲೆಗಳನ್ನು ತಪ್ಪಿಸಲು, ಮೊದಲನೆಯದಾಗಿ, ಸೂರ್ಯನಿಂದ ರಕ್ಷಣೆ ಅಗತ್ಯ, ಆದ್ದರಿಂದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ಬಿಸಿಲಿನಲ್ಲಿ ಹೋಗುವುದು ಅನಿವಾರ್ಯವಾದರೆ, ಛತ್ರಿ, ಸ್ಕಾರ್ಫ್ ಅಥವಾ ಟೋಪಿ ಬಳಸಿ. ಮುಖವನ್ನು ಸೂರ್ಯನ ಕಿರಣಗಳಿಂದ ಆದಷ್ಟು ರಕ್ಷಣೆ ಮಾಡಿ. ಮನೆಗೆ ಬಂದು ಸನ್ ಸ್ಕ್ರೀನ್ ನಿಂದ ಮುಖವನ್ನು ತೊಳೆಯಿರಿ. ಹಾಗೂ ನಿತ್ಯವೂ ಸೋಪನ್ನು ಬಳಕೆ ಮಾಡಬೇಡಿ. ಬದಲಾಗಿ ಶುದ್ಧವಾದ ಬೇಸನ್ ಹಿಟ್ಟು ಅಥವಾ ಕಡಲೆ ಹಿಟ್ಟು ಮುಖಕ್ಕೆ ಉಪಯೋಗಿಸಿ. ಇದರಿಂದ ಕಪ್ಪು ಕಲೆ ಹೋಗಲಾಡಿಸಬಹುದು. ಶುಭದಿನ.

Leave a Reply

Your email address will not be published. Required fields are marked *