ಹುಣುಸೆ ಬೀಜ ಬಿಸಾಡುವ ಮುನ್ನ ಇದರ ಬಗ್ಗೆ ತಿಳಿದುಕೊಂಡರೆ ಯಾವತ್ತೂ ಬಿಸಾಡುವುದಿಲ್ಲ

ಆರೋಗ್ಯ

ನಮಸ್ತೇ ಪ್ರಿಯ ಮಿತ್ರರೇ, ಆಹಾರ ಅಂದರೆ ಅದು ಹುಳಿ ಉಪ್ಪು ಖಾರ ಸಿಹಿ ಕಹಿ ಎಲ್ಲ ಅಂಶಗಳನ್ನು ಒಳಗೊಂಡಿರುತ್ತದೆ. ಇದರಲ್ಲಿರುವ ಅಂಶಗಳಲ್ಲಿ ಯಾವುದಾದರೂ ಒಂದು ಕಡಿಮೆ ಆದರೂ ಕೂಡ ನಮಗೆ ಆಹಾರ ಇಷ್ಟವಾಗುವುದಿಲ್ಲ ಜೊತೆಗೆ ಹಸಿವು ಕೂಡ ತನಿಸುವುದಿಲ್ಲ. ಹೌದು ಅದರಲ್ಲೂ ದಕ್ಷಿಣ ಕನ್ನಡದ ಜನರು ಹುಣಸೆ ಹಣ್ಣು ಇಲ್ಲದೆ ಅಡುಗೆಯನ್ನು ಮಾಡುವುದಿಲ್ಲ. ಅವರು ತಮ್ಮ ಪ್ರತಿ ಅಡುಗೆಯನ್ನು ಹುಣಸೆ ಹಣ್ಣು ಉಪಯೊಗಿಸಿಕೊಂಡಿಯೇ ಮಾಡುತ್ತಾರೆ. ಹುಣಸೆ ಹಣ್ಣು ಬಳಕೆ ಮಾಡುತ್ತಾರೆ ನಿಜ ಗೆಳೆಯರೇ ಆದರೆ ಅದರಲ್ಲಿರುವ ಎಲ್ಲ ಬೀಜಗಳನ್ನು ಎಸೆದು ಬಿಡುತ್ತಾರೆ. ಆದರೆ ಇಂತಹ ತಪ್ಪುಗಳನ್ನು ನೀವು ಮಾಡಬೇಡಿ. ಸಾಮಾನ್ಯವಾಗಿ ನೀವು ಗಮನಿಸಿರಬಹುದು ಪ್ರತಿ ಆಹಾರದಲ್ಲಿ ಹಣ್ಣುಗಳಲ್ಲಿ ಬೀಜಗಳು ಇರುತ್ತವೆ. ತರಕಾರಿ ಹಣ್ಣುಗಳಿಗಿಂತ ಬೀಜದಲ್ಲಿ ಆರೋಗ್ಯಕರ ಪೋಷಕಾಂಶಗಳು ಇರುತ್ತವೆ. ಇವುಗಳನ್ನು ಅರಿಯದ ನಾವು ಅವುಗಳನ್ನು ಕಸದ ತೊಟ್ಟಿಯಲ್ಲಿ ಬಿಸಾಕುತ್ತೆವೆ.

ಹೌದು ಹುಣಸೆ ಹಣ್ಣು ಹಾಗೂ ಅದರ ಬೀಜದ ಬಗ್ಗೆ ಮಾತನಾಡುವುದಾದರೆ ನಮ್ಮ ಬಾಲ್ಯದ ನೆನಪು ಬರುತ್ತದೆ. ನಾವು ಚಿಕ್ಕವರು ಇದ್ದಾಗ ಶಾಲೆಯ ಬಿಡುವಿದ್ದಾಗ ಹುಣಸೆ ಮರದ ಕೆಳಗೆ ಹಣ್ಣುಗಳನ್ನು ಕಲ್ಲಿನಿಂದ ಹೊಡೆದು ಉರುಳಿಸಿ ಉಪ್ಪು ಖಾರ ಹಚ್ಚಿಕೊಂಡು ತಿನ್ನುತ್ತಿದ್ದೆವು ಜೊತೆಗೆ ಅದರಲ್ಲಿರುವ ಬೀಜಗಳನ್ನು ಕೂಡ ಹುರಿದು ತಿನ್ನುತ್ತಿದ್ದೆವು. ಹಾಗೂ ಶಾಲೆಯ ಪಕ್ಕದಲ್ಲಿ ಹುಣಸೆ ಬೀಜಗಳನ್ನು ಹುರಿದು ಮಾಡುತ್ತಿದ್ದರು. ಆದರೆ ಕಾಲ ಬದಲಾದಂತೆ ಹುಣಸೆ ಬೀಜಗಳು ಮರೆತು ಹೋಗುತ್ತಿದ್ದಾರೆ.
ಆದರೆ ಇದರಲ್ಲಿ ಹೇರಳವಾದ ಪೋಷಕಾಂಶಗಳು ಅಡಗಿವೆ ಅಂತ ಹೇಳಿದರೆ ತಪ್ಪಾಗಲಾರದು. ಹುಣಸೆ ಬೀಜದಲ್ಲಿ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಕ್ಯಾಲ್ಷಿಯಂ ವಿಟಮಿನ್ ಸಿ ಹಾಗೂ ಕೆ ಮತ್ತು ಅಮೈನೋ ಆಮ್ಲಗಳು ಅಧಿಕವಾಗಿದೆ. ಈ ಹುಣಸೆ ಬೀಜವನ್ನು ಸೇವನೆ ಮಾಡುವುದರಿಂದ ಯಾವೆಲ್ಲ ಲಾಭಗಳು ಉಂಟಾಗುತ್ತವೆ ಅಂತ ಹೇಳುವುದಾದರೇ ಯಾರಿಗೆ ಕೀಲು ನೋವು ಸಮಸ್ಯೆ ಇರುತ್ತದೆಯೋ ಸಂಧಿವಾತ ಸಮಸ್ಯೆ ಇರುವವರಿಗೆ ಇದು ದಿವ್ಯ ಔಷಧ ಅಂತ ಹೇಳಬಹುದು.

ಈ ಸಮಸ್ಯೆಗಳಿಂದ ಪಾರಾಗಲು ನೀವು ಹುಣಸೆ ಹಣ್ಣಿನ ಬೀಜಗಳನ್ನು ಹುರಿದು ಸೇವನೆ ಮಾಡುವುದು ಉತ್ತಮ. ಹೌದು ಹುಣಸೆ ಬೀಜಗಳು ಹುರಿದರು ಕೂಡ ತುಂಬಾನೇ ಗಟ್ಟಿಯಾಗಿ ಇರುತ್ತದೆ ಅದನ್ನು ಕಚ್ಚಲು ವಯಸ್ಸಾದವರಿಗೆ ಬಲು ಕಷ್ಟವಾಗುತ್ತದೆ ಅಂಥವರು ಹುಣಸೆ ಬೀಜಗಳನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ ಸೇವನೆ ಮಾಡಬಹುದು. ಅದು ಹೇಗೆಂದರೆ ಒಂದು ಲೋಟ ನೀರಿನಲ್ಲಿ ಒಂದು ಚಮಚ ಹುಣಸೆ ಬೀಜದ ಪುಡಿ ಹಾಕಿ ಮಿಕ್ಸ್ ಮಾಡಿ ವಾರದಲ್ಲಿ ಒಂದು ಅಥವಾ ಎರಡು ಬಾರಿ ಕುಡಿಯಿರಿ. ಇದರಿಂದ ಮಂಡಿನೋವು ಕೀಲು ನೋವು ಸಂಧಿವಾತ ಎಲ್ಲ ಕಡಿಮೆ ಆಗುತ್ತದೆ. ಮತ್ತು ಕರುಳು ಮತ್ತು ಮೂತ್ರ ಪಿಂಡ ದಲ್ಲಿ ಉಂಟಾಗುವ ಬ್ಯಾಕ್ಟೀರಿಯಾ ಅನ್ನು ತಡೆಯುತ್ತದೆ. ಇನ್ನೂ ಹುಣಸೆ ಬೀಜ ಮಧುಮೇಹಿಗಳಿಗೆ ಉತ್ತಮ.

ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ ಹಾಗೂ ಇನ್ಸುಲಿನ್ ಉತ್ಪತ್ತಿ ಮಾಡುವ ಕೋಶದ ಗಾತ್ರವನ್ನು ಹಿಗ್ಗಿಸುತ್ತದೆ. ಅಷ್ಟೇ ಅಲ್ಲದೇ ಹುಣಸೆ ಬೀಜಗಳು ಹಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ಹುಣಸೆ ಬೀಜದ ಪುಡಿಯನ್ನು ನೀವು ವಾರದಲ್ಲಿ ಎರಡು ಬಾರಿ ನಿಮ್ಮ ವಸಡುಗಳಿಗೆ ಹಾಗೂ ಹಲ್ಲುಗಳನ್ನು ಉಜ್ಜಬಹುದು. ಇದರಿಂದ ಹಲ್ಲುಗಳು ಬಲಗೊಳ್ಳುತ್ತವೆ ಮತ್ತು ನಿಮಗೆ ದಂತ ಸಮಸ್ಯೆಗಳು ಕಾಡುತ್ತಿದ್ದರೆ ಅವುಗಳು ಕೂಡ ಕ್ರಮೇಣ ಕಡಿಮೆ ಆಗುತ್ತದೆ. ನೋಡಿದ್ರಲಾ ಹುಣಸೆ ಬೀಜದ ಉಪಗೋಗಗಳನ್ನು. ಅದಕ್ಕಾಗಿ ನಾವು ಯಾವುದೇ ಹಣ್ಣಿನ ಬೀಜಗಳನ್ನು ತೊಟ್ಟಿಗೆ ಬಿಸಾಡಬಾರದು. ಅವುಗಳ ಮಹತ್ವವನ್ನು ಆರೋಗ್ಯಕರ ಗುಣಗಳನ್ನು ತಿಳಿದುಕೊಂಡು ಉಪಯೋಗಿಸಬೇಕು. ಶುಭದಿನ.

Leave a Reply

Your email address will not be published. Required fields are marked *