ಅತ್ತಿ ಹಣ್ಣನ್ನು ನೀವು ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನ ಮನೆಗೆ ತಂದರೆ ಏನಾಗುತ್ತದೆ ಗೊತ್ತೇ

ಜ್ಯೋತಿಷ್ಯ ಧಾರ್ಮಿಕ

ನಮಸ್ತೇ ಪ್ರಿಯ ಸ್ನೇಹಿತರೆ ಅತ್ತಿ ಮರಕ್ಕೆ ಭಗವಂತನಾದ ವಿಷ್ಣುವಿನ ಕೃಪೆ ಇದೆ. ಈ ಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ನೋಡಿಯೇ ಇರುತ್ತೀರಿ. ಅಮಾವಾಸ್ಯೆಯ ದಿನ ಈ ಹಣ್ಣು ಬಡವರನ್ನು ಶ್ರೀಮಂತರಾಗಿ ಮಾಡುತ್ತದೆ. ಈ ಗಿಡದ ಪ್ರತಿಯೊಂದು ಹಣ್ಣಿನಲ್ಲಿ ತಾಯಿ ಲಕ್ಷ್ಮೀದೇವಿ ವಾಸ ಮಾಡುತ್ತಾರೆ. ಈ ಮರವೂ ನಿಮ್ಮ ಭಾಗ್ಯವನ್ನೇ ಬದಲಿಸಬಹುದು. ಯಾರು ಆತ್ತಿ ಮರದ ಹೂವನ್ನು ನೋಡಿರುತ್ತಾರೆ ಅವರ ಅದೃಷ್ಟವೇ ಬದಲಾಗುತ್ತದೆ. ನಿಮಗೆ ಗೊತ್ತೇ ಅತ್ತಿ ಮರಕ್ಕೆ ಭಗವಂತನಾದ ನರಸಿಂಹನ ಕೃಪೆ ಇದೆ.ಹಾಗೂ ಇದರಿಂದ ಹೇಗೆ ಬಡತನವು ದೂರ ಆಗುತ್ತದೆ ಅಂತ ತಿಳಿಯೋಣ. ಒಂದಾನೊಂದು ಸಮಯದಲ್ಲಿ ಭಗವಾನ್ ವಿಷ್ಣು ನರಸಿಂಹ ಅವತಾರವನ್ನು ಎತ್ತಿದ್ದನು. ಆಗ ಅವರು ಹಿರಣ್ಯ ಕಶ್ಯಪ್ ನನ್ನು ಸಂಹಾರ ಮಾಡಿದ್ದರು. ಇವರು ತಮ್ಮ ಚೂಪಾದ ಉಗುರುಗಳಿಂದ ಹಿರಣ್ಯ ಕಶ್ಯಪ್ ನ ಹೊಟ್ಟೆಯನ್ನು ಬಗೆದಿದ್ದರು. ಈ ಒಂದು ಕಾರಣದಿಂದ ಇವರ ಉಗುರುಗಳಲ್ಲಿ ಕೆರೆತ ಶುರು ಆಗಿರುತ್ತದೆ.

ಈ ಕೆರೆತವನ್ನು ಸಹಿಸಲು ಸಾಧ್ಯವಾಗದೆ ನರಸಿಂಹ ದೇವನು ಉಪಾಯವನ್ನು ಹುಡುಕುತ್ತಾರೆ ಆಗ ಅವರಿಗೆ ಅತ್ತಿ ಮರವೂ ಕಾಣಿಸುತ್ತದೆ. ಆಗ ಅವರು ತಮ್ಮ ಬೆರಳುಗಳ ಉಗುರುಗಳನ್ನು ಅದರಲ್ಲಿ ಸಿಲುಕಿಸಿ ಬಿಡುತ್ತಾರೆ. ಇದರಿಂದ ಅವರಿಗೆ ಕಾಡುವ ಕೆರೆತ ಕಡಿಮೆ ಆಗುತ್ತದೆ. ದೇವರಿಗೆ ತನ್ನ ಕೆರೆತ ಕಡಿಮೆ ಆಯಿತು. ಆದರೆ ಅತ್ತಿ ಮರ ತನ್ನ ರೋಧನೆಯನ್ನು ದೇವರಿಗೆ ಹೇಳುತ್ತಿದೆ. ಅದುವೇ ನಾವು ರಾಕ್ಷಸ ರಕ್ತದಿಂದ ನರಳಾಡುತ್ತಿದ್ದೇವೆ ನಮಗೆ ಇದರಿಂದ ಮುಕ್ತಿಯನ್ನು ತಂದು ಕೊಡಿ ಎಂದು ನರಸಿಂಹ ದೇವರಲ್ಲಿ ಅತ್ತಿ ಮರವೂ ಕೇಳುತ್ತದೆ. ಆಗ ನರಸಿಂಹ ದೇವರು ನೀನು ಜನರ ಕಷ್ಟಗಳಿಗೆ ದುಃಖಗಳಿಗೆ ಬಾಗಿ ಆಗು ಹಾಗೂ ನಾನು ನಿನ್ನಲ್ಲಿ ಸದಾ ಕಾಲ ನೆಲೆಸುವೆ ಅಂತ ಕೇಳಿಕೊಳ್ಳುತ್ತಾರೆ.

ಇದರ ಜೊತೆಗೆ ಅವರು ಇನ್ನೊಂದು ವರವನ್ನು ನೀಡುತ್ತಾರೆ ಯಾರು ಅತ್ತಿ ಮರದ ಕೆಳಗಡೆ ಶವದ ಯಾತ್ರೆಯನ್ನು ಮಾಡಿಕೊಂಡು ಹೋಗುತ್ತಾರೆ ಅವರ ಪುಣ್ಯ ಈ ಮರಕ್ಕೆ ಸಿಗುತ್ತದೆ ಎಂದು ವರದಾನ ನೀಡುತ್ತಾರೆ. ಇನ್ನೂ ಅತ್ತಿ ಮರದ ಲಾಭಗಳ ಬಗ್ಗೆ ತಿಳಿಯೋಣ. ಈ ಮರವೂ ಬಡವನನ್ನು ರಾಜನನ್ನಾಗಿ ಮಾಡುತ್ತದೆ. ಮೊದಲಿಗೆ ನೀವು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಅತ್ತಿ ಮರದ ಹಾಲಿನಿಂದ ಸ್ವಸ್ತಿಕ್ ಚಿನ್ಹೆ ಬರೆಯಬೇಕು. ಈ ರೀತಿ ನೀವು ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ಮಾಡಿ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಧನ ಸಂಪತ್ತು ಆಗುತ್ತದೆ ಮನೆಯಲ್ಲಿ ಹಣದ ಪ್ರಭಾವ ಹೆಚ್ಚುತ್ತದೆ. ನಿಮ್ಮ ಬೀರುವಿನಲ್ಲಿ ಹಣವೂ ಸದಾ ಕಾಲ ಉಳಿಯುತ್ತದೆ. ನಿಮ್ಮ ಮನೋಕಾಮಣೆಗಳು ಪೂರ್ತಿಯಾಗಲೂ ಒಂದು ಎಲೆಯ ಮೇಲೆ ನಿಮ್ಮ ಆಸೆಗಳನ್ನು ಈ ಹಾಲಿನಿಂದ ಬರೆಯಬೇಕು.

ತದ ನಂತರ ಅದನ್ನು ಹರಿಯುವ ನೀರಿನಲ್ಲಿ ಬಿಟ್ಟು ಬರಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನಸ್ಸಿಚ್ಛೆಗಳು ಪೂರ್ತಿಯಾಗುತ್ತವೆ. ಸೂರ್ಯಾಸ್ತ ಆಗುವ ಸ್ವಲ್ಪ ಸಮಯ ಮುಂಚಿತವಾಗಿ ಅತ್ತಿ ಹಣ್ಣು ತೆಗೆದುಕೊಂಡು ಮನೆಗೆ ಬರಬೇಕು ಅದನ್ನು ದೇವರ ಮನೆಯಲ್ಲಿ ಅಥವಾ ನಿಮ್ಮ ಹಣದ ಬೀರುವಿನಲ್ಲಿ ಇಡಬೇಕು. ಅಥವಾ ದವಸ ಧಾನ್ಯಗಳಲ್ಲಿ ಕೂಡ ಇಡಬಹುದು. ಇದರಿಂದ ನಿಮಗೆ ಹಣದ ಕೊರತೆ ಎಂದಿಗೂ ಆಗುವುದಿಲ್ಲ. ಒಂದು ಬಟ್ಟೆಯಲ್ಲಿ ಈ ಹಣ್ಣು ಕಟ್ಟಿ ನೇತು ಹಾಕಿದರೆ ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ ಅಂಗಡಿಗಳಲ್ಲಿ ಕಟ್ಟಿದರೆ ನಿಮ್ಮ ವ್ಯಾಪಾರ ದಲ್ಲಿ ಅಭಿವೃದ್ದಿ ಆಗುತ್ತದೆ. ಮನೆಗೆ ಅಂಟಿರುವ ದಾರಿದ್ರ್ಯವನ್ನು ದೂರ ಮಾಡುತ್ತದೆ. ಅಷ್ಟೊಂದು ಈ ಹಣ್ಣಿನಲ್ಲಿ ಭಗವಂತನಾದ ನರಸಿಂಹ ದೇವರ ಕೃಪೆ ಇರುತ್ತದೆ. ಈ ಹಣ್ಣನ್ನು ನೀವು ಅಮವಾಸ್ಯೆ ಅಥವಾ ಹುಣ್ಣಿಮೆ ದಿನದಂದು ಮನೆಗೆ ತರಬೇಕು. ಇದರಿಂದ ನಿಮಗೆ ಎಲ್ಲ ಮೂಲಗಳಿಂದ ಧನದ ಲಾಭಗಳು ಉಂಟಾಗುತ್ತವೆ.

Leave a Reply

Your email address will not be published. Required fields are marked *