ಹಸಿ ಬಟಾಣಿ ಕಾಳುಗಳ ಸೇವನೆಯಿಂದ ನಿಮ್ಮ ದೇಹದಲ್ಲಿ ಯಾವೆಲ್ಲ ಬದಲಾವಣೆಗಳು ಆಗುತ್ತವೆ ಗೊತ್ತಾ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಹಸಿ ಬಟಾಣೆಯ ಬಗ್ಗೆ ತಿಳಿಯೋಣ. ಹಸಿ ಬಟಾಣಿ ನೋಡಲು ದುಂಡಾಗಿ ಸುಂದರವಾಗಿ ಹಸಿರು ಬಣ್ಣದಲ್ಲಿದ್ದು ಇದು ತಿನ್ನಲು ಒಣಗಿದ ಹಸಿರು ಬಟಾಣಿಗಿಂತ ತುಂಬಾನೇ ಮೆತ್ತಗೆ ಇರುತ್ತದೆ ಹಾಗೂ ರುಚಿಯಲ್ಲಿ ಅದ್ಭುತವಾಗಿ ಇರುತ್ತದೆ. ಮತ್ತು ಇದರಲ್ಲಿ ಆರೋಗ್ಯಕರ ಪ್ರಯೋಜನಗಳು ಕೂಡ ಅಪಾರ ಅಂತ ಹೇಳಿದರೆ ತಪ್ಪಾಗಲಾರದು. ಅಷ್ಟೇ ಅಲ್ಲದೆ ಈ ಹಸಿರು ಬಟಾಣಿಯನ್ನು ಅಡುಗೆ ಮಾಡಲು ಬಳಕೆ ಮಾಡುತ್ತಾರೆ. ಪಲ್ಯ ಸಾಂಬಾರ ಚಟ್ನಿ ಇತ್ಯಾದಿ ಮಾಡಿ ಸೇವಿಸಬಹುದು. ಜೊತೆಗೆ ಕೆಲವೊಂದು ವಿಶೇಷ ಬಗೆಯ ಅಡುಗೆಗಳಲ್ಲಿ ಇವುಗಳನ್ನು ಬಳಕೆ ಮಾಡುವುದುಂಟು. ಅಷ್ಟೇ ಏಕೆ ನಾವು ರಸ್ತೆ ಬದಿಯಲ್ಲಿ ಇಷ್ಟ ಪಟ್ಟು ತೆಗೆದುಕೊಂಡು ತಿನ್ನುವ ಬೆಲ್ ಪುರಿ, ಪಾನಿಪುರಿ, ಮಸಾಲೆ ಪುರಿ, ಸಮೋಸ ಇತ್ಯಾದಿಗಳಲ್ಲಿ ಬಳಕೆ ಮಾಡುತ್ತಾರೆ. ಹಾಗೂ ಇದು ಆರೋಗ್ಯಕ್ಕೆ ನಿಜಕ್ಕೂ ತುಂಬಾನೇ ಒಳ್ಳೆಯದು. ಪೋಷಕಾಂಶಗಳ ಆಗರ ಆಗಿದೆ ಈ ಹಸಿರು ಬಟಾಣಿ. ಇದು ಪ್ರಾಚೀನ ಕಾಲದಿಂದಲೂ ಬಳಕೆ ಮಾಡಲಾಗಿದ್ದು ಇದರಲ್ಲಿ ಅಧಿಕವಾದ ಪೋಷಕಾಂಶಗಳು ಹೇರಳವಾಗಿ ಅಡಗಿವೆ ಅನ್ನುವ ಮಾಹಿತಿ ಹಲವಾರು ಜನರಿಗೆ ತಿಳಿದೇ ಇಲ್ಲ ಗೆಳೆಯರೇ. ಕೆಲವು ಸಂಶೋಧನೆಯಲ್ಲಿ ಬಟಾಣಿಯಲ್ಲಿ ಅಧಿಕವಾದ ಪ್ರೊಟೀನ್ ಗಳು ಹುದುಗಿದೆ ಅಂತ ತಿಳಿಸಿದ್ದಾರೆ.

ಇದು ಕ್ಯಾನ್ಸರ್ ಹಾಗೂ ಜಠರದ ಕ್ಯಾನ್ಸರ್ ಅನ್ನು ಕೂಡ ದೂರ ಮಾಡಲು ಈ ಹಸಿರು ಬಟಾಣಿ ಪರಿಣಾಮಕಾರಿ ಆಗಿ ಕೆಲಸವನ್ನು ಮಾಡುತ್ತದೆ. ಅಷ್ಟೇ ಅಲ್ಲದೇ ಈ ಹಸಿ ಬಟಾಣಿ ಕಾಳುಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತವೆ. ಮಕ್ಕಳಂತೂ ಬಹಳ ಇಷ್ಟ ಪಟ್ಟು ತಮ್ಮ ತಟ್ಟೆಯಲ್ಲಿನ ಆಹಾರಕ್ಕಿಂತ ಹೆಚ್ಚಾಗಿ ಇವುಗಳನ್ನೇ ಸೇವಿಸುತ್ತಾರೆ. ಹಾಗೂ ಇದನ್ನು ನಾವು ನಿತ್ಯವೂ ಸೇವನೆ ಮಾಡುವುದರಿಂದ ಹಲವಾರು ರೋಗ ರುಜಿನಗಳಿಂದ ದೂರವಿರಬಹುದು. ಹಾಗಾದ್ರೆ ಅವುಗಳನ್ನು ಇಂದಿನ ಲೇಖನದಲ್ಲಿ ಒಂದೊಂದಾಗಿ ತಿಳಿಯೋಣ ಬನ್ನಿ. ನೀವು ತುಂಬಾನೇ ದಪ್ಪವಾಗಿದ್ದೀರಿ ತೂಕವನ್ನು ಇಳಿಸಿಕೊಳ್ಳಲು ಹರ ಸಾಹಸ ಮಾಡುತ್ತಿದ್ದೀರಿ ಸ್ಥೂಲಕಾಯದಿಂದ ಬಳಲುತ್ತಿದ್ದರೆ ಬಟಾಣಿಯನ್ನು ನಿಯಮಿತವಾಗಿ ಸೇವಿಸಿ ಇದರಿಂದ ನಿಮ್ಮ ತೂಕವು ಕಡಿಮೆ ಆಗುತ್ತದೆ. ಎರಡನೆಯದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಸಿರು ಬಟಾಣಿಯಲ್ಲಿ ಇರುವ ಪ್ರೊಟೀನ್ ಅಂಶ ನಾರಿನ ಅಂಶ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗೂ ಹೃದ್ರೋಗ ಡಯಾಬಿಟಿಸ್ ರೋಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಈ ಹಸಿರು ಬಟಾಣಿ. ನಾರಿನ ಅಂಶ ಕಡಿಮೆ ಇರುವ ಆಹಾರವನ್ನು ಸೇವನೆ ಮಾಡುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಇದಕ್ಕಾಗಿ ನೀವು ಹಸಿರು ಬಟಾಣಿ ಸೇವಿಸಿ. ಬಟಾಣಿಯ ಅತ್ಯದ್ಭುತವಾದ ಉಪಯೋಗ ಅಂದರೆ ಹೃದ್ರೋಗದ ನಿಯಂತ್ರಣ ಮಾಡುವುದು.

ಹಸಿ ಬಟಾಣಿ ಮಾರುಕಟ್ಟೆಗೆ ಬಂದಂತಹ ಸಂದರ್ಭದಲ್ಲಿ ಅಪ್ಪಿ ತಪ್ಪಿಯೂ ಅವುಗಳನ್ನು ಮರೆತು ಕೂಡ ಮನೆಗೆ ತಂದು ಬಳಕೆ ಮಾಡುವುದನ್ನು ಮರೆಯಬೇಡಿ. ಏಕೆಂದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿ ಪಡಿಸಿಕೊಳ್ಳಲು ನಿಮಗೆ ಇದು ಒಂದು ಸದಾವಕಾಶ. ಮಾರುಕಟ್ಟೆಗಳಲ್ಲಿ ಸಿಗುವ ಹಸಿ ಬಟಾಣಿ ಕಾಯಿ ತಂದು ಎಳೆ ಕಾಯಿಗಳನ್ನು ಹಾಗೆ ತೊಳೆದು ಸಾಂಬಾರ್ ಮಾಡಿ ಸೇವಿಸಬಹುದು. ಹಸಿರು ಬಟಾಣಿ ವಿಟಮಿನ್ ಕೆ ಅಂಶವನ್ನು ಹೊಂದಿದೆ ಆದ್ದರಿಂದ ಇದು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.
ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಯೌವನ ಕಾಪಾಡಿಕೊಳ್ಳಲು ಹಸಿ ಬಟಾಣಿ ಸೇವನೆ ಮಾಡಿರಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ನಿಮ್ಮನ್ನು ದೀರ್ಘಕಾಲ ಚೈತನ್ಯ ಹಾಗೂ ಸುಂದರವಾಗಿ ವಯಸ್ಸಾದರೂ ಯೌವ್ವನ ದ ಹಾಗೆ ಕಾಣುವಂತೆ ಮಾಡುತ್ತದೆ ಈ ಹಸಿರು ಬಟಾಣಿ.

Leave a Reply

Your email address will not be published. Required fields are marked *