ಕೇವಲ 24 ಗಂಟೆಯಲ್ಲಿ ಈ ಚಿಕ್ಕದಾದ ಉಪಾಯ ಮಾಡಿರಿ. ನಿಮ್ಮ ಎಲ್ಲ ಬಯಕೆಗಳು ಈಡೇರುತ್ತವೆ

ಜ್ಯೋತಿಷ್ಯ ಧಾರ್ಮಿಕ

ನಮಸ್ತೇ ಪ್ರಿಯ ಸ್ನೇಹಿತರೆ, ಜೀವನದಲ್ಲಿ ಮನುಷ್ಯನಿಗೆ ಆಸೆಗಳು ಅಂದರೆ ತುಂಬಾನೇ ಇಷ್ಟ. ಈ ಆಸೆಗಳು ಕನಸುಗಳು ಇಚ್ಛೆಗಳು ಈಡೇರದಿದ್ದರೆ ಮನಸ್ಸಿಗೆ ಏನೋ ಜಿಗುಪ್ಸೆ ಆಗುತ್ತದೆ. ಮನಸ್ಸಿಗೆ ಶಾಂತಿ ಅನ್ನುವುದು ಲಭಿಸುವುದಿಲ್ಲ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ನಿಮ್ಮ ಮನಸ್ಸಿಚ್ಛೆಗಳು ಈಡೇರಲು ಒಂದು ಚಿಕ್ಕದಾದ ಸುಲಭವಾದ ಉಪಾಯವನ್ನು ತಿಳಿಸಿಕೊಡುತ್ತೇವೆ ಬನ್ನಿ. ಈ ಸಣ್ಣ ಉಪಾಯವನ್ನು ನೀವು ಮಾಡಿದರೆ ನೀವು ಅಂದುಕೊಂಡ ಎಲ್ಲ ಮನಸ್ಸಿನ ಬಯಕೆಗಳು ಈಡೇರುತ್ತವೆ. ಜೀವನದಲ್ಲಿರುವ ಎಲ್ಲ ಸಮಸ್ಯೆಗಳನ್ನು ದೂರ ಮಾಡಬಹುದು. ನಿಮಗೆ ವ್ಯವಸಾಯ ಮತ್ತು ವ್ಯಾಪಾರದಲ್ಲಿ ವೃದ್ಧಿ ಆಗಬೇಕು ಅಂದರೆ ನೌಕರಿ ಸಿಗಬೇಕು ಅಂದರೆ ನಿಮ್ಮ ಕೈಯಲ್ಲಿ ಹಣ ಉಳಿಯಬೇಕು ಅಂದರೆ ನಿಮ್ಮ ಎಲ್ಲ ಕಷ್ಟಗಳು ದೂರವಾಗಬೇಕು ಅಂದರೆ ನಾವು ತಿಳಿಸುವ ಈ ಉಪಾಯವನ್ನು ಮಾಡಿರಿ. ಅಷ್ಟೇ ಅಲ್ಲದೇ ನೀವು ನಿಮ್ಮ ಜೀವನದಲ್ಲಿ ಬಯಸಿದಂತೆ ಎಲ್ಲವೂ ಸಿಗುತ್ತದೆ. ಅದಕ್ಕಾಗಿ ಈ ಉಪಾಯ ಮಾಡಬೇಕು. ಮೊದಲಿಗೆ ತಾಮ್ರದ ಒಂದು ಪಾತ್ರೆಯನ್ನು ತೆಗೆದುಕೊಳ್ಳಬೇಕು ಅದರಲ್ಲಿ ಶುದ್ಧವಾದ ನೀರನ್ನು ಹಾಕಿಕೊಳ್ಳಬೇಕು ತದ ನಂತರ ಶ್ರೀಗಂಧವನ್ನು ತೆಗೆದುಕೊಳ್ಳಬೇಕು. ಶ್ರೀಗಂಧ ದೇವರಿಗೆ ತುಂಬಾನೇ ಶುಭ ಅಂತ ತಿಳಿಯಲಾಗಿದೆ.

ಇದನ್ನು ತೇದು ದೇವರಿಗೆ ಹಚ್ಚುತ್ತಾರೆ ಹಾಗೆಯೇ ಮನುಷ್ಯರು ಕೂಡ ಉಪಯೋಗಿಸುತ್ತಾರೆ. ಇದು ಸಾಮಾನ್ಯವಾಗಿ ಮಾರ್ಕೆಟ್ ನಲ್ಲಿ ನಿಮಗೆ ದೊರೆಯುತ್ತದೆ. ತದ ನಂತರ ಈ ಶ್ರೀಗಂಧದ ಪುಡಿಯನ್ನು ತೆಗೆದುಕೊಂಡು ತಾಮ್ರದ ಪಾತ್ರೆಯಲ್ಲಿ ಇರುವ ನೀರನ್ನು ಈ ಪುಡಿಗೆ ಹಾಕಿ ಒಂದು ಪೇಸ್ಟ್ ರೀತಿಯಾಗಿ ಮಾಡಿಕೊಳ್ಳಬೇಕು. ಶ್ರೀಗಂಧದಿಂದ ತಾಮ್ರದ ಪಾತ್ರೆಯನ್ನೂ ತುಂಬಬೇಕು. ಈ ನೀರನ್ನು ನೀವು ಎರಡು ಸ್ಥಾನದಲ್ಲಿ ಹಾಕಬೇಕು. ಆ ಎರಡು ಸ್ಥಾನಗಳು ಯಾವುವು ಅಂತ ಹೇಳುವುದಾದರೆ, ಮೊದಲಿಗೆ ಈ ನೀರನ್ನು ಆಲದ ಮರಕ್ಕೆ ಹಾಕಬೇಕು. ಆಲದ ಮರದಲ್ಲಿ ಸಾಕ್ಷಾತ್ ಶಿವ ವಾಸ ಮಾಡುತ್ತಾರೆ. ಹೌದು ಇದರಲ್ಲಿ ಯಾವುದೇ ಸಂದೇಹವಿಲ್ಲ. ಅಷ್ಟೇ ಅಲ್ಲದೇ ಆಲದ ಮರವನ್ನು ನಾವು ಹೆಣ್ಣು ಮಕ್ಕಳು ಮುತ್ತೈದೆಯರು ಆಲದ ಮರವನ್ನು ಪೂಜಿಸುತ್ತಾರೆ. ಅಷ್ಟೇ ಅಲ್ಲದೇ ಈ ಗಿಡದಲ್ಲಿ ಬ್ರಹ್ಮ ದೇವ ಹಾಗೂ ಇನ್ನಿತರ ದೇವಾನು ದೇವತೆಗಳು ವಾಸ ಮಾಡುತ್ತಾರೆ. ಇನ್ನೂ ಯಾವ ಸಮಯದಲ್ಲಿ ಈ ನೀರನ್ನು ಹಾಕಬೇಕು ಅಂತ ತಿಳಿಯೋಣ ಬನ್ನಿ.

ಬ್ರಹ್ಮ ಮುಹೂರ್ತದಲ್ಲಿ ಈ ನೀರನ್ನು ಆಲದ ಮರಕ್ಕೆ ಹಾಕಬೇಕು. ಇಲ್ಲಿ ಮುಂಜಾನೆ ನಾಲ್ಕು ಗಂಟೆಗೆ ಮುಂಚೆ ಅಥವಾ ಸೂರ್ಯೋದಯ ಆಗುವ ತೊಂಬತ್ತು ನಿಮಿಷಗಳ ಕಾಲವನ್ನು ಬ್ರಹ್ಮ ಮುಹೂರ್ತ ಅಂತ ಕರೆಯುತ್ತಾರೆ. ಈ ಸಮಯದಲ್ಲಿ ದೇವಾನು ದೇವತೆಗಳು ತುಂಬಾನೇ ಜಾಗ್ರತೆಯಿಂದ ಇರುತ್ತಾರೆ. ಕೇವಲ ಒಂದು ಸೋಮವಾರ ದಿನದಂದು ಈ ನೀರನ್ನು ಆಲದ ಮರಕ್ಕೆ ಹಾಕಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವ ಎಲ್ಲ ಕಷ್ಟಗಳು ದೂರವಾಗುತ್ತವೆ. ಇದಕ್ಕೆ ಕಾರಣ ಆಲದ ಮರದಲ್ಲಿ ಅಡಗಿರುವ ದೈವ ಶಕ್ತಿಗಳೇ ಕಾರಣ. ಎರಡನೆಯ ಉಪಾಯ ಅಂದರೆ ನಿಮ್ಮ ಮನೆಯ ಹತ್ತಿರ ತುಂಬಾ ಹಳೆಯದಾದ ಅಥವಾ 10-14 ವರ್ಷದ ಬಿಳಿ ಎಕ್ಕದ ಗಿಡವಿದ್ದರೆ ತಾಮ್ರದ ಈ ಪಾತ್ರೆಯನ್ನು ಈ ಶ್ರೀಗಂಧದಿಂದ ತುಂಬಿದನ್ನು ಹಾಕಬೇಕು. ಇದರಿಂದ ನಿಮಗೆ ಭಗವಂತನಾದ ಶ್ರೀ ಕೃಷ್ಣನ ಕೃಪೆ ಸಿಗುತ್ತದೆ. ಗಣೇಶನು ಎಲ್ಲ ಕಷ್ಟಗಳ ನಿವಾರಕ. ಈತನ ಕೃಪೆ ನಿಮಗೆ ಹೀಗೆ ಮಾಡುವುದರಿಂದ ಆದಷ್ಟು ಬೇಗನೆ ಸಿಗುತ್ತದೆ. ನಿಮ್ಮ ಮನಸ್ಸಿಚ್ಛೆಗಳು ಪೂರ್ತಿಯಾಗುತ್ತವೆ.

Leave a Reply

Your email address will not be published. Required fields are marked *