ಶ್ರೀ ಶಿವಯೋಗ ಮಂದಿರದಲ್ಲಿ ಪವಿತ್ರವಾದ ವಿಭೂತಿಯನ್ನು ಹೇಗೆ ತಯಾರಿಸುತ್ತಾರೆ ಗೊತ್ತೇ. ಇದರ ವಿಧಾನ ಇಲ್ಲಿದೆ

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ ವಿಭೂತಿ ದೇವರ ಪೂಜೆಯಲ್ಲಿ ಉಪಯೋಗಿಸುವ ಒಂದು ರೀತೆಯ ಭಸ್ಮ. ವಿಭೂತಿಯು ವೈಭವ ಮತ್ತು ಪವಿತ್ರತೆಯನ್ನು ಹೊಂದಿರುವ ಒಂದು ವಸ್ತುವಾಗಿದೆ. ಈ ವಿಭೂತಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ವಿಶಿಷ್ಟತೆಯನ್ನು ಪಡೆದಿದೆ ಹಾಗೂ ಇದನ್ನು ಹಿಂದೂಗಳು ಹೆಚ್ಚಾಗಿ ಉಪಯೋಗಿಸುತ್ತಾರೆ. ಅಷ್ಟೇ ಅಲ್ಲದೇ ಇದರ ಉಪಯೋಗ ಹಿಂದೂ ಧರ್ಮದಲ್ಲಿ ಕೂಡ ಇದೆ. ಸಾಂಪ್ರದಾಯಕವಾಗಿ ವಿಭೂತಿಯು ದೈವಾತ್ಮಕ ಅರ್ಥವನ್ನು ಹೊಂದಿದೆ ಹಾಗು ವಿಭೂತಿಯು ಶಿವನಿಗೆ ಹೊಂದಿರುವ ವಿಷಯ. ವಿಭೂತಿಯನ್ನು ಹಣೆಯ ಮೇಲೆ ಮೂರು ಗೆರೆಗಳಾಗಿ ಹಚ್ಚಿಕೊಳ್ಳುತ್ತಾರೆ. ಇದು ಹಣೆಯ ಮೇಲೆ ಹುಬ್ಬುಗಳ ವರೆಗೆ ಚಾಚಿಕೊಂಡಿರುತ್ತದೆ. ವಿಭೂತಿಯಲ್ಲಿ ಶಿವನು ವಾಸ ಮಾಡುತ್ತಾನೆ ಅಂತ ನಂಬಲಾಗಿದೆ. ಶಿವನು ಪವಿತ್ರತೆ, ಬೆಳಕು, ಕತ್ತಲು ಎರಡನ್ನೂ ಹೊಂದಿರುವ ದೇವರು ಎಂದು ವಿಭೂತಿಯನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ. ಇದರ ಅರ್ಥವೇನೆಂದರೆ ಶಿವನಲ್ಲಿ ಅನೇಕ ಶಕ್ತಿಗಳೂ ಇದ್ದು, ಆತನಲ್ಲಿ ಹಲವು ರೀತಿಯ ಮಾಯೆ ಕೂಡ ಇದೆ ಎಂಬುದು ಒಂದು ನಂಬಿಕೆಯಾಗಿದೆ. ಹಾಗಾದ್ರೆ ಇಂತಹ ಪವಿತ್ರವಾದ ವಿಭೂತಿಯನ್ನು ಹೇಗೆ ತಯಾರಿಸುತ್ತಾರೆ ಅದರಲ್ಲೂ ಶ್ರೀ ಶ್ರೀ ಶಿವಯೋಗ ಮಂದಿರದಲ್ಲಿ ಯಾವ ರೀತಿಯಾಗಿ ವಿಭೂತಿಯ ತಯಾರಿಕೆ ಘಟಕ ಇರುತ್ತದೆ ಅಂತ ನಾವು ತಿಳಿಸಿ ಕೊಡುತ್ತೇವೆ ಬನ್ನಿ.

ಮೊದಲಿಗೆ ಆಕಳು ಹಾಗೂ ಎತ್ತಿನ ಸಗಣಿಯನ್ನು ಬಿಸಿಲಿನಲ್ಲಿ ಎಂಟು ದಿನಗಳವರೆಗೆ ಚೆನ್ನಾಗಿ ಒಣಗಿಸುತ್ತಾರೆ. ನಂತರ ಕೆಂಡದಲ್ಲಿ ಅದನ್ನು ಸುಡಲಾಗುತ್ತದೆ. ಆಮೇಲೆ ಅದನ್ನು ಭಟ್ಟಿ ಇಳಿಸುತ್ತಾರೆ ಬಳಿಕ ಯಂತ್ರದ ಸಹಾಯದಿಂದ ಎಂಟು ದಿನಗಳವರೆಗೆ ಸತತವಾಗಿ ಕುಟ್ಟುತ್ತಾರೆ. ಹಾಗೂ ಅದನ್ನು ಸೋಸಿಕೊಂಡು ಉಂಡೆಯಾಗಿ ಅಥವಾ ಮುದ್ದೆ ರೂಪದಲ್ಲಿ ದುಂಡಾಕಾರದ ಮಾಡಿ ಅದಕ್ಕೆ ನಿರ್ಧಿಷ್ಟವಾದ ಆಕಾರವನ್ನು ನೀಡಲಾಗುತ್ತದೆ. ಆಮೇಲೆ ಉಂಡೆಗಳನ್ನು ಚೆನ್ನಾಗಿ ಒಣಗಿಸಿ ಅವುಗಳನ್ನು ಕೆಂಡದಲ್ಲಿ ಸುಡಲಾಗುತ್ತದೆ. ಸುಟ್ಟಿದ ಮೇಲೆ ವಿಭೂತಿ ಸಿದ್ದವಾಗುತ್ತದೆ. ಇದನ್ನು ಪ್ಯಾಕ್ ಮಾಡಲಾಗುತ್ತದೆ. ಇಷ್ಟು ವಿಧಾನಗಳನ್ನು ಅನುಸರಣೆ ಮಾಡಿದ ಮೇಲೆ ಪವಿತ್ರವಾದ ವಿಭೂತಿ ಸಿದ್ಧವಾಗುತ್ತದೆ. ಶಿವಯೋಗಿ ಮಂದಿರದಲ್ಲಿ ದೊರೆತ ಈ ವಿಭೂತಿಯನ್ನು ಹಚ್ಚುವುದರಿಂದ ಚರ್ಮದ ಯಾವುದೇ ಕಾಯಿಲೆಗಳು ಬರುವುದಿಲ್ಲ ಹಾಗೂ ಮನಸ್ಸು ಸದಾ ಕಾಲ ಶಾಂತವಾಗಿ ನೆಮ್ಮದಿಯಾಗಿ ಇರುತ್ತದೆ ಅಂತ ಭಕ್ತರು ನಂಬಿದ್ದಾರೆ. ಶ್ರೀ ಶಿವಯೋಗ ಮಂದಿರಕ್ಕೆ ರಾಜ್ಯ ದೇಶ ವಿದೇಶಗಳಿಂದ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಹಾಗೂ ಈ ಪವಿತ್ರವಾದ ವಿಭೂತಿ ದೇಶ ರಾಜ್ಯ ವಿದೇಶಗಳಿಗೆ ಮಾರಾಟ ಕೂಡ ಆಗುತ್ತದೆ.

ದಿನಕ್ಕೆ 250-300 ವಿಭೂತಿಗಳು ಸಿದ್ಧವಾಗುತ್ತವೆ. ಹೀಗಾಗಿ ಇವುಗಳು ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಆದರೆ ಉತ್ಪಾದನೆ ಕೊರತೆ ಇಂದಾಗಿ ಭಕ್ತರಿಗೆ ವಿಭೂತಿ ಸಿಗುತ್ತಿಲ್ಲ ಗೆಳೆಯರೇ. ಇದರಿಂದ ಭಕ್ತರು ನಿರಾಸೆ ಆಗುತ್ತಿದ್ದಾರೆ. ಕಾರಣ ಉತ್ಪಾದನೆಯ ಕೊರತೆಯಿಂದಾಗಿ. ಹೀಗಾಗಿ ಮಂದಿರದ ಮಂಡಳಿಯು ಬಂದಿರುವ ಭಕ್ತರ ಕುಟುಂಬಕ್ಕೆ ಒಂದೇ ವಿಭೂತಿಯನ್ನು ನೀಡುತ್ತಾರೆ. ನಮ್ಮ ಕರ್ನಾಟಕ ರಾಜ್ಯ ಮಾತ್ರವಲ್ಲದೆ ಆಂದ್ರಪ್ರದೇಶ ದವರು ಕೂಡ ಈ ವಿಭೂತಿಯನ್ನು ಬಳಕೆ ಮಾಡುತ್ತಾರೆ ಅಂತ ಅಪಾರವಾದ ನಂಬಿಕೆ ಕೂಡ ಇದೆ. ಶಿವಯೋಗಿ ಮಂದಿರದಲ್ಲಿ ಪಡೆದ ವಿಭೂತಿ ಬಹಳ ಪವಿತ್ರ ಎಂದು ನಂಬಲಾಗಿದೆ. ಇದು ಸುಮಾರು 1910 ರಲ್ಲಿ ಗೋಶಾಲೆ ಆರಂಭ ವಾದಾಗ ವಿಭೂತಿ ತಯಾರಿಕೆ ಪ್ರಾರಂಭವಾಗಿತ್ತು. ಏಕೆಂದರೆ ವಿಭೂತಿಯನ್ನು ಆಕಳು ಎತ್ತು ಅಂದ್ರೆ ಗೋಮಾತೆಯ ಮಲದಿಂದ ಮಾಡುತ್ತಾರೆ. ಹೀಗಾಗಿ ಇದು ಬಹಳ ಪವಿತ್ರ ಅಂತ ಕೂಡ ಭಾವಿಸಲಾಗುತ್ತದೆ.

Leave a Reply

Your email address will not be published. Required fields are marked *