ನಮಸ್ತೇ ಪ್ರಿಯ ಓದುಗರೇ ಲಿಂಬೆಹಣ್ಣಿನ ಮಹಾತ್ಮೆಯನ್ನು ಎಷ್ಟು ಹೊಗಳಿದರೂ ಸಾಲದು. ಇದರಲ್ಲಿರುವ ಸಿಟ್ರಿಕ್ ಹಾಗೂ ವಿಟಮಿನ್ ಅಂಶಗಳು ಇದಕ್ಕೆ ಕಾರಣವಾಗಿವೆ. ಸಿಟ್ರಿಕ್ ಅಂಶವು ಇರುವುದಕ್ಕೆ ಇದು ಬಹಳ ಪ್ರಸಿದ್ಧತೆಯನ್ನು ಪಡೆದಿದೆ. ಬಾಯಾರಿಕೆ ತೀರಿಸಲೂ ಸೈ, ಮಾಟಮಂತ್ರಕ್ಕೂ ಜೈ ಎನ್ನುವ ನಿಂಬೆ ಹಣ್ಣು, ಹಳದಿ ಬಣ್ಣದಲ್ಲಿ ನಮಗೆ ದೊರೆಯುತ್ತದೆ. ಆದರೆ ಕೆಲವರು ನಿಂಬೆ ಹಣ್ಣು ಹಾಗೂ ಅದರ ರಸವನ್ನು ಬಳಕೆ ಮಾಡಿಕೊಂಡು ಅದರ ಸಿಪ್ಪೆಯನ್ನು ಉಪಯೋಗಿಸುವುದಿಲ್ಲ ಬದಲಾಗಿ ಅದನ್ನು ತೊಟ್ಟಿಗೆ ಬಿಸಾಡುತ್ತಾರೆ. ಆದರೆ ನಿಮಗೆ ಗೊತ್ತೇ ನಿಂಬೆ ಹಣ್ಣಿನ ಸಿಪ್ಪೆಯಿಂದ ಎಷ್ಟೊಂದು ಲಾಭಗಳಿವೆ ಎಂದು. ಹಾಗಾದ್ರೆ ಬನ್ನಿ ಅವುಗಳ ಬಗ್ಗೆ ಒಂದೊಂದಾಗಿ ತಿಳಿಯೋಣ ನಿಂಬೆ ಹಣ್ಣಿಗಿಂತ ಅದರ ಸಿಪ್ಪೆಯಲ್ಲಿ ಐದರಿಂದ ಹತ್ತು ಪಟ್ಟು ವಿಟಮಿನ್ ಗಳು ಅಡಗಿವೆ. ಇದು ನಿಮ್ಮ ಚರ್ಮದ ಎಲ್ಲ ಸಮಸ್ಯೆಗಳನ್ನೂ ದೂರ ಮಾಡುತ್ತದೆ ಅಷ್ಟೇ ಅಲ್ಲದೆ ಇನ್ನಿತರ ಸೋಂಕುಗಳನ್ನು ಕೂಡ ಹೋಗಲಾಡಿಸಲು ಸಹಾಯ ಮಾಡುತ್ತದೆ.
ನಿಂಬೆ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳು ಹೇರಳವಾಗಿ ಇರುವುದರಿಂದ ಇದು ನಮ್ಮ ದೇಹದಲ್ಲಿ ಉಂಟಾಗುವ ಫ್ರೀ ರಾಡಿಕಲ್ ಅನ್ನು ಹೋಗಲಾಡಿಸುತ್ತದೆ.ಅವುಗಳ ಜೊತೆಗೆ ಹೋರಾಡುವ ಸಾಮರ್ಥ್ಯವನ್ನು ಈ ನಿಂಬೆ ಹಣ್ಣಿನ ಸಿಪ್ಪೆ ಒಳಗೊಂಡಿದೆ. ಹಾಗೂ ದೇಹದಲ್ಲಿ ಕ್ಯಾನ್ಸರ್ ಕಾರಕ ಜೀವಕೋಶಗಳು ದೇಹದಲ್ಲಿ ಬೆಳೆಯದಂತೆ ತಡೆಯುತ್ತದೆ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ಸಿಪ್ಪೆಯ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿಯುವುದರಿಂದ ದೇಹ ಸ್ವಚ್ಛವಾಗುತ್ತದೆ ಮತ್ತು ಯಾವುದೇ ಬಗೆಯ ಬ್ಯಾಕ್ಟೀರಿಯಾಗಳ ಅಥವಾ ಇನ್ನಿತರ ಸೂಕ್ಷ್ಮಾಣುಗಳ ಸಂತತಿ ಕಡಿಮೆಯಾಗುತ್ತದೆ. ಹಾಗೂ ಹೊಟ್ಟೆಯ ಭಾಗದಲ್ಲಿ ಉಂಟಾಗುವ ಕ್ಯಾನ್ಸರ್ ಅನ್ನು ಕೂಡ ತಡೆಯುತ್ತದೆ. ಇನ್ನೂ ನಿಮಗೆ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದಾರೆ ಲಿಂಬೆ ಹಣ್ಣಿನ ಸಿಪ್ಪೆ ಪುಡಿ ಮಾಡಿ ಕಷಾಯವನ್ನು ಮಾಡಿಕೊಂಡು ಕುಡಿಯಬಹುದು. ಹೀಗೆ ಮಾಡುವುದರಿಂದ ಕಿಡ್ನಿ ಅಲ್ಲಿ ಇರುವ ಕಲ್ಲುಗಳ ಗಾತ್ರವು ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ. ಆದರೆ ಇದನ್ನು ಸೇವನೆ ಮಾಡುವುದು ಹೇಗೆ ನಿಂಬೆ ಹಣ್ಣು ತುಂಬಾ ಹುಳಿ ಇದರ ಸಿಪ್ಪೆ ತುಂಬಾ ಕಹಿಯಾಗಿ ಇರುತ್ತದೆ ಅಂತ ಹೇಳುವುದಾದರೆ, ನಿಂಬೆ ಹಣ್ಣಿನ ಸಿಪ್ಪೆಯನ್ನು ಪ್ರಿಡ್ಜನಲ್ಲಿ ಎಂಟು ಗಂಟೆಗಳ ಕಾಲ ಇಡಿ. ತದ ನಂತರ ಅದನ್ನು ಕೊಬ್ಬರಿ ತುರಿಯುವ ಸಾಧನದಿಂದ ಅದನ್ನು ತುರಿದುಕೊಳ್ಳಿ. ತುರಿದ ಈ ಸಿಪ್ಪೆಯನ್ನು ನೀವು ನೀರಿನಲ್ಲಿ ಹಾಕಿ ಕುಡಿಯಬಹುದು ಹಾಗೂ ಊಟದ ಮೇಲೆ ಹಾಕಿಕೊಂಡು ಸೇವನೆ ಮಾಡಬಹುದು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಮೂತ್ರ ಪಿಂಡ ದಲ್ಲಿ ಆಗಿರುವ ಕಲ್ಲುಗಳು ನಾಶ ಮಾಡುತ್ತದೆ ಹಾಗೂ ನಿಮಗೆ ಯಾವುದೇ ಕಾಯಿಲೆಗಳು ಬರದಂತೆ ತಡೆಯುತ್ತದೆ. ಕ್ಯಾನ್ಸರ್ ಕಾರಕ ಜೀವಕೋಶಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ. ನಿಂಬೆ ಹಣ್ಣಿನ ಸಿಪ್ಪೆಯನ್ನು ನೀವು ಸೌಂದರ್ಯ ವರ್ಧಕವಾಗಿ ಬಳಸಬಹುದು. ನಿಂಬೆ ಹಣ್ಣಿನ ಸಿಪ್ಪೆಯನ್ನು ಚರ್ಮದ ಕಾಂತಿಯನ್ನು ಹೆಚ್ಚು ಮಾಡಲು ಹೇಗೆ ಬಳಕೆ ಮಾಡುವುದು ಅಂದರೆ ನಿಂಬೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಅದರಲ್ಲಿ ನೀರು ಹಾಕದೆ ನುಣ್ಣಗೆ ಪುಡಿ ಮಾಡಿಕೊಳ್ಳಿ. ಇದರಲ್ಲಿ ಸ್ಯಾಂಡಲ್ ವುಡ್ ವಾಟರ್ ಹಾಗೂ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ ನಿಮ್ಮ ಮುಖಕ್ಕೆ ಪೇಸ್ಟ್ ಮಾಡಿಕೊಂಡು ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಮುಖದಲ್ಲಿ ಮೊಡವೆಗಳು ಆಗಿದ್ದರೇ ಸುಕ್ಕು ಗಟ್ಟಿದ್ದರೆ ಕಲೆಗಳು ಆಗಿದ್ದಾರೆ ಎಲ್ಲವೂ ದೂರವಾಗುತ್ತದೆ. ನಿಮ್ಮ ಪಾದಗಳು ಬಿರುಕು ಬಿಟ್ಟಿದ್ದರೆ ಹಾಗೂ ಮೊಣಕೈ ಮೊಣಕಾಲು ಕಪ್ಪು ಆಗಿದ್ದಾರೆ ನಿಂಬೆ ಹಣ್ಣಿನ ಸಿಪ್ಪೆಯಿಂದ ಚೆನ್ನಾಗಿ ಉಜ್ಜಿ ಇದರಿಂದ ಕಪ್ಪು ಕಲೆಗಳು ಮಾಯವಾಗುತ್ತದೆ.ಇನ್ನೂ ನಿಮ್ಮ ನಾಲಿಗೆ ರುಚಿಯನ್ನು ಕಳೆದು ಕೊಂಡಿದ್ದರೆ ನಿಂಬೆ ಹಣ್ಣಿನ ಸಿಪ್ಪೆಯ ಉಪ್ಪಿನಕಾಯಿ ಮಾಡಿ ತಿನ್ನಿ. ಇದು ನಿಮ್ಮ ನಾಲಿಗೆಯ ರುಚಿ ಹೆಚ್ಚಿಸಲು ಸಹಾಯ ಮಾಡುತ್ತದೆ.