ಕೆಂಪು ಬಾಳೆಹಣ್ಣು ಎಲ್ಲಿ ಸಿಕ್ಕರೂ ಬಿಡಬೇಡಿ ಎಷ್ಟೊಂದು ಔಷಧೀಯ ಗುಣಗಳನ್ನು ಹೊಂದಿವೆ ಗೊತ್ತೇ

ಆರೋಗ್ಯ

ನಮಸ್ತೇ ಪ್ರಿಯ ಮಿತ್ರರೇ, ಆರೋಗ್ಯಕರ ಭಂಡಾರವನ್ನು ಹೊತ್ತು ಮೆರೆಯುವ ಹಣ್ಣುಗಳಲ್ಲಿ ಬಾಳೆಹಣ್ಣು ಪ್ರಥಮ ಸ್ಥಾನವನ್ನು ಪಡೆದಿದೆ. ಈ ಜಗತ್ತಿನಲ್ಲಿ ಅತಿ ಹೆಚ್ಚು ತಿನ್ನುವ ಹಣ್ಣುಗಳಲ್ಲಿ ಕೂಡ ಒಂದಾಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಸಾಮಾನ್ಯವಾಗಿ ನೀವು ಗಮನಿಸಿರಬಹುದು ಮಾರುಕಟ್ಟೆಯಲ್ಲಿ ಹಸಿರು ಬಾಳೆಹಣ್ಣು ಹಾಗೂ ಕೆಂಪು ಬಾಳೆಹಣ್ಣು ಮಾರಾಟ ಮಾಡುವುದನ್ನು ನೋಡಿದ್ದೀರಿ ಅವುಗಳನ್ನು ಖರೀದಿ ಮಾಡಿ ಸೇವನೆ ಕೂಡ ಮಾಡಿದ್ದೀರಿ. ಆದರೆ ನೀವು ಕೆಂಪು ಬಾಳೆಹಣ್ಣು ನೋಡಿದ್ದೀರಿಯೇ? ಅವುಗಳನ್ನು ಸೇವನೆ ಮಾಡಿದ್ದೀರಾ?ಹಳದಿ ಬಾಳೆಹಣ್ಣು ನಮ್ಮ ಆರೋಗ್ಯಕ್ಕೆ ಒಂದು ಅದ್ಭುತವಾದ ಕೊಡುಗೆ ಆಗಿದೆ. ಆದರೆ ಕೆಂಪು ಬಾಳೆಹಣ್ಣು ತನ್ನದೇ ಆದ ವಿಶಿಷ್ಟತೆ ಅನ್ನು ಹಾಗೂ ಪ್ರಯೋಜನಗಳನ್ನು ಒಳಗೊಂಡಿದೆ.

ಢಾಕಾ ಬನಾನ ಎಂದು ಕರೆಯಲ್ಪಡುವ ಕೆಂಪು ಬಾಳೆಹಣ್ಣು ಹಳದಿ ಬಾಳೆಹಣ್ಣಿಗಿಂತ ಆರೋಗ್ಯಕ್ಕೆ ಒಳ್ಳೆಯದು ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ. ಇದರಲ್ಲಿ ಅನೇಕ ಪೋಷಕಾಂಶಗಳು ವಿಟಮಿನ್ಸ್ ಗಳು ಹೇರಳವಾಗಿದೆ. ಆದ್ದರಿಂದ ಇದನ್ನು ಸೂಪರ್ ಫುಡ್ ಅಂತ ಕರೆಯುತ್ತಾರೆ. ಬಾಳೆಹಣ್ಣಿನಲ್ಲಿ ಹಲವಾರು ಪ್ರಭೇದಗಳಿವೆ. ಅದರಲ್ಲಿ ಕೆಂಪು ಬಾಳೆಹಣ್ಣು ಕೂಡ ಒಂದಾಗಿದೆ. ಮಾರುಕಟ್ಟೆಯಲ್ಲಿ ಹಳದಿ ಬಾಳೆಹಣ್ಣು ಸಿಗುವುದು ಸಾಮಾನ್ಯ ಆದರೆ ಕೆಂಪು ಬಾಳೆಹಣ್ಣು ಸಿಗುವುದು ವಿರಳ. ಆದ್ದರಿಂದ ಕೆಂಪು ಬಾಳೆಹಣ್ಣು ನಿಮಗೆ ಮಾರುಕಟ್ಟೆಯಲ್ಲಿ ಸಿಕ್ಕರೆ ಖರೀದಿ ಮಾಡಿ. ಸೇವನೆ ಮಾಡಿ. ಕೆಂಪು ಬಾಳೆಹಣ್ಣು ಒಳಗೊಂಡಿರುವ ಅಂಶಗಳೆಂದರೆ ವಿಟಮಿನ್ಸ್ ಗಳು ಖನಿಜಗಳು ಲವಣಗಳು ನಾರಿನ ಅಂಶಗಳು ಕಾರ್ಬೋಹೈಡ್ರೇಟ್ ಗಳನ್ನು ಹೊಂದಿದೆ. ಇವೆಲ್ಲ ಅಂಶಗಳು ಕೆಂಪು ಬಾಳೆಹಣ್ಣು ಹೊಂದಿರುವ ಕಾರಣ ಇದು ದೇಹದಲ್ಲಿ ಶಕ್ತಿ ದೀರ್ಘಕಾಲ ಇರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ದೇಹದಲ್ಲಿ ಶಕ್ತಿಯನ್ನು ದುಪ್ಪಟ್ಟು ಮಾಡುತ್ತದೆ.

ಹಾಗೂ ದೇಹವು ಚೈತನ್ಯದಿಂದ ಕೂಡಿರುತ್ತದೆ. ಇನ್ನೂ ಈ ಕೆಂಪು ಬಾಳೆಹಣ್ಣು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಗುಣಗಳನ್ನು ಹೆಚ್ಚಿಸುತ್ತದೆ. ಮತ್ತು ನಮ್ಮ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.ಮತ್ತು ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕಣ್ಣುಗಳು ದುರ್ಬಲವಾಗಿರುವ ಅಥವಾ ದೃಷ್ಟಿ ದುರ್ಬಲವಾಗಿರುವ ಜನರು ಇದರ ಸೇವನೆಯನ್ನು ಮಾಡಬಹುದು. ಈ ಕೆಂಪು ಬಾಳೆಹಣ್ಣುಗಳಲ್ಲಿ ಕ್ಯಾಲರಿ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಹೀಗಾಗಿ ತೂಕ ಇಳಿಕೆಗೆ ಇದು ತುಂಬಾ ಉತ್ತಮ ಹಣ್ಣಾಗಿದೆ. ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಹೀಗಾಗಿ ನಿಮಗೆ ತುಂಬಾ ಕಡಿಮೆ ಹಸಿವೆಯಾಗುತ್ತದೆ. ಇದರಲ್ಲಿ ನಾರಿನ ಅಂಶ ಅಥವಾ ಫೈಬರ್ ಅಂಶ ಇರುವುದರಿಂದ ಹೊಟ್ಟೆಗೆ ಸಂಭಂದಿಸಿದ ಎಲ್ಲ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಮುಖ್ಯವಾಗಿ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಲು ತುಂಬಾನೇ ಸಹಾಯ ಮಾಡುತ್ತದೆ ಈ ಕೆಂಪು ಬಾಳೆಹಣ್ಣು.

ಕೆಂಪು ಬಾಳೆಹಣ್ಣು ನಿಯಮಿತವಾಗಿ ಸೇವನೆ ಮಾಡುವುದರಿಂದ ಕಿಡ್ನಿ ಸ್ಟೋನ್ ಆಗದಂತೆ ತಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಅಂದರೆ ಅದು ಹಿಮೋಗ್ಲೋಬಿನ್ ಕೊರತೆ ಸಮಸ್ಯೆ. ಈ ಕೆಂಪು ಬಾಳೆಹಣ್ಣು ಒಮ್ಮೆ ಸೇವನೆ ಮಾಡಲು ನೀವು ಶುರು ಮಾಡಿದರೆ ನಿಮ್ಮ ದೇಹದಲ್ಲಿ ರಕ್ತದ ಮಟ್ಟವು ಏರಿಕೆ ಆಗುತ್ತದೆ. ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ. ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಕೆಂಪು ಬಾಳೆಹಣ್ಣು ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹೈ ಬ್ಲಡ್ ಪ್ರೆಶರ್ ಅಥವಾ ಬಿಪಿ ಇರುವವರು ಕೆಂಪು ಬಾಳೆಹಣ್ಣು ಸೇವಿಸಬೇಕು. ಕೆಂಪು ಬಾಳೆಹಣ್ಣಿನಲ್ಲಿ ಕ್ಯಾಲ್ಷಿಯಂ ಹೇರಳವಾಗಿ ಇರುವುದರಿಂದ ಇದು ಮೂಳೆಗಳಿಗೆ ಬಲವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಕೆಂಪು ಬಾಳೆ ಹಣ್ಣಿನಲ್ಲಿ ಮ್ಯಾಗ್ನಿಷಿಯಂ ಅಂಶವಿರುವ ಕಾರಣ ಇದು ಮಧ್ಯಪಾನ ಧೂಮಪಾನ ಮಾಡುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಮತ್ತು ಧೂಮಪಾನ ಮತ್ತು ಮದ್ಯಪಾನ ಇದು ಒಂದು ಉತ್ತಮವಾದ ಮಾರ್ಗವಾಗಿದೆ.

Leave a Reply

Your email address will not be published. Required fields are marked *