ನಮಸ್ತೇ ಪ್ರಿಯ ಓದುಗರೇ, ಸಾವಿರ ಕಾಲು ಇರುವ ಹುಳು ಅಥವಾ ಜಾರಿ ನಿಮ್ಮ ಮನೆಗೆ ಬಂದರೆ ಏನೆಲ್ಲ ಆಗುತ್ತದೆ ಗೊತ್ತೇ? ಹೌದು ಮನೆಗೆ ಒಂದಲ್ಲ ಒಂದು ಕೀಟಗಳು ಹುಳುಗಳು ಪಕ್ಷಿಗಳು ಬರುತ್ತಲೇ ಇರುತ್ತವೆ. ನಮ್ಮ ಶಾಸ್ತ್ರದಲ್ಲಿ ಹೀಗೆ ಉಲ್ಲೇಖವಿದೆ ಹೌದು ಮನೆಗೆ ಬರುವ ಪ್ರತಿಯೊಂದು ಜೀವಿಯೂ ಒಂದೊಂದು ಸಂಕೇತವನ್ನು ನೀಡುತ್ತವೆ ಎಂದು. ಅಂದರೆ ಕೆಲವು ಕೀಟಗಳು ಜಂತು ಹುಳಗಳು ಮನೆಗೆ ಬಂದರೆ ಒಳ್ಳೆಯದಾಗುತ್ತದೆ ಇನ್ನೂ ಕೆಲವು ಬಾರಿ ಅಪಶಕುನ ಆಗುತ್ತದೆ ಅಂತ ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು ಶಾಸ್ತ್ರದಲ್ಲಿ ಕೂಡ ಹೇಳಲಾಗುತ್ತದೆ. ಇನ್ನೂ ಮನೆಯಲ್ಲಿ ಅಥವಾ ಮನೆಯ ಮಹಡಿಯ ಮೇಲೆ ಗುಬ್ಬಚ್ಚಿಗಳು ತಮ್ಮ ಗೂಡನ್ನು ಕಟ್ಟಿದರೆ ನಿಮಗೆ ಲಾಭವೂ ಲಾಭ ಗೊತ್ತೇ? ಆದರೆ ಮನೆಯಲ್ಲಿ ಜೇಡ ಪದೇ ಪದೇ ಮನೆಯನ್ನು ಅಥವಾ ಗೂಡನ್ನು ಕಟ್ಟುತ್ತಿದ್ದರೆ ಅದು ಮನೆಗೆ ಕೆಟ್ಟ ದರಿದ್ರ ಅಂತ ಹೇಳಲಾಗುತ್ತದೆ ಕಷ್ಟಗಳು ಒಂದೊಂದಾಗಿ ಬರುತ್ತಲೇ ಇರುತ್ತವೆ ಸಾಲಗಳು ಅಂತೂ ಮುಗಿಲು ಮುಟ್ಟುತ್ತದೆ.
ಹೀಗೆ ಕಷ್ಟಗಳ ಸುರಿಮಳೆ ಕಷ್ಟಗಳ ಸರಮಾಲೆ ಬರುತ್ತಲೇ ಇರುತ್ತದೆ. ಆದ್ದರಿಂದ ಮನೆಯಲ್ಲಿ ಜೇಡರ ಬಲೆ ಕಾಣಿಸಿಕೊಂಡರೆ ಅದನ್ನು ನೀವು ಸ್ವಚ್ಛ ಗೊಳಿಸಬೇಕು. ಹೌದು ಏಕೆಂದ್ರೆ ಜೇಡರ ಗೂಡು ಮನೆಗೆ ನಕಾರಾತ್ಮಕ ಶಕ್ತಿಗಳನ್ನು ಹೆಚ್ಚಿಸಿ ಮನೆಗೆ ತೊಂದರೆಯನ್ನು ಉಂಟು ಮಾಡುತ್ತದೆ. ಹೀಗಾಗಿ ಮನೆಯಲ್ಲಿ ಜೇಡರ ಬಲೆ ಇರದಂತೆ ನೋಡಿಕೊಳ್ಳಬೇಕು. ಇನ್ನೂ ಎರಡನೆಯದಾಗಿ, ಹಾವುಗಳು ಮನೆಗೆ ಬಂದರೆ ಏನಾಗುತ್ತದೆ. ಗೊತ್ತೇ? ಹಾವುಗಳು ದೇವರಿಗೆ ಸಮಾನ ಅಂತ ನಂಬಲಾಗುತ್ತದೆ. ಕೆಲವರಿಗೆ ಹಾವುಗಳು ಅಂದರು ಕೂಡ ಬಲು ಪ್ರೀತಿ ಇರುತ್ತದೆ. ಅವುಗಳ ಬಗ್ಗೆ ಆಳವಾಗಿ ಅಧ್ಯಯನ ಕೂಡ ಮಾಡಲಾಗುತ್ತದೆ. ಇನ್ನೂ ಮನೆಗೆ ಅಪ್ಪಿ ತಪ್ಪಿ ಹಾವುಗಳು ಮನೆಗೆ ಬಂದರೆ ನಾವು ಹೆದರಿ ಬೆದರಿ ಕಿರುಚಾಡಿ ಅವುಗಳನ್ನು ಹೊಡೆಯುತ್ತೇವೆ ಸಾಯಿಸಲು ಮುಂದಾಗುತ್ತೇವೆ. ಆದರೆ ಈ ಸರ್ಪಗಳು ಮನೆಗೆ ಬರುವ ಸಂಕೇತ ಏನೆಂದರೆ ಅನಾರೋಗ್ಯದ ಸಂಕೇತವನ್ನು ನೀಡುತ್ತದೆ. ಅನಾರೋಗ್ಯದ ಸಮಸ್ಯೆಗಳು ಹಾಗೂ ಮನೆಯ ಮುಖ್ಯ ಯಜಮಾನನಿಗೆ ತೊಂದರೆಗಳು ಅಪಘಾತ ಆಘಾತಗಳು ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ಹೀಗಾಗಿ ಮನೆಗೆ ಒಂದು ವೇಳೆ ಹಾವುಗಳು ಬಂದು ಹೋದರೆ ಅವುಗಳನ್ನು ಏನು ಮಾಡದೇ ಹಾನಿ ಮಾಡದೆ ಹೋದ ಮೇಲೆ ಮನೆಯ ಜನರು ತಮ್ಮ ಆರೋಗ್ಯದ ಮೇಲೆ ತೀವ್ರವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ.
ಆದರೆ ಕೆಲವು ಉದಾಹರಣೆಗೆ ಗಳ ಬಗ್ಗೆ ಹೇಳುವುದಾದರೆ, ಮನೆಗೆ ಹಾವುಗಳು ಬಂದು ಹೋಗಿರುವುದರಿಂದ ಮನೆಗೆ ಒಳ್ಳೆಯದಾಗಿದೆ ಅಂತ ಕೂಡ ನಾವು ಕೇಳಿರಬಹುದು ಆದರೆ ಇದು ಕೇವಲ 1% ಮಾತ್ರ ಸತ್ಯ ಮಿತ್ರರೇ ಆದರೆ ಹಾವುಗಳು ಮನೆಗೆ ಬಂದು ಹೋದರೆ ಅನಾರೋಗ್ಯದ ತೊಂದರೆಗಳು ಉದ್ಭವಿಸುತ್ತದೆ. ಇನ್ನೂ ಮನೆಗೆ ಇರುವೆಗಳು ಪದೇ ಪದೇ ಬರುತ್ತಿದ್ದರೆ ನಿಮಗೆ ತುಂಬಾನೇ ಒಳ್ಳೆಯದಾಗುತ್ತದೆ. ಹೌದು ಕೆಂಪು ಇರುವೆ ಹಾಗೂ ಕಪ್ಪು ಇರುವೆಗಳು ಇರುತ್ತವೆ ಇವೆರಡದಲ್ಲಿ ಕಪ್ಪು ಇರುವೆಗಳು ಹೆಚ್ಚಾಗಿ ಮನೆಗೆ ಬಂದರೆ ನಿಮಗೆ ಶುಭವೋ ಶುಭ ಆಗುತ್ತದೆ. ಮನೆಯಲ್ಲಿ ಶುಭ ಕಾರ್ಯ ನಡೆಯುತ್ತದೆ. ಇನ್ನೂ ಮನೆಗೆ ಬಾವಲಿಗಳು ಬಂದರೆ ಏನಾಗುತ್ತದೆ ಅಂದರೆ ನಿಜಕ್ಕೂ ಇದು ಅಪಶಕುನ 10-18 ವರ್ಷಗಳವರೆಗೆ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಮನೆಯಲ್ಲಿ ಜಗಳಗಳು ಕಷ್ಟಗಳು ಸಾಲದ ಹರಿವು ಆಗುತ್ತಲೇ ಇರುತ್ತದೆ ಬೆನ್ನು ಬಿಡದೇ ಕಾಡುತ್ತವೆ. ಇದರಿಂದ ಚಿತ್ರಹಿಂಸೆ ಕೂಡ ಆಗಿ ಸಾಯಬೇಕೆನ್ನಿಸುತ್ತದೆ. ಇನ್ನೂ ಸಾವಿರ ಕಾಲು ಜಂತು ಹುಳು ಮನೆಗೆ ಬಂದ್ರೆ ಸಾಮಾನ್ಯವಾಗಿ ಇದು ವಿಷದ ಹುಳು ಅಂತ ಎಲ್ಲರೂ ಭಯಭೀತಿ ಪಡುತ್ತಾರೆ.
ಆದರೆ ಈ ಜರಿ ಮನೆಗೆ ಬಂದರೆ ಸಾಕ್ಷಾತ್ ಮಹಾಲಕ್ಷ್ಮೀ ದೇವಿ ಮನೆಗೆ ಬರುವ ಸೂಚನೆ ಆಗಿರುತ್ತದೆ. ಈ ಜರಿ ಮನೆಗೆ ಬಂದಾಗ ನೀವು ಅದಕ್ಕೆ ಅರಿಶಿನ ಹಾಕಿ ಪೂಜೆ ಮಾಡಿ ನಮಸ್ಕಾರ ಮಾಡಬೇಕು. ಆಮೇಲೆ ನೋಡಿ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆ ಅನ್ನು. ನಿಮಗೆ ಅಚ್ಚರಿ ಮೂಡಿಸುತ್ತದೆ. ಶುಭದಿನ.