ನಮಸ್ತೇ ಪ್ರಿಯ ಓದುಗರೇ ಪೈಲ್ಸ್ ಹಾಗೂ ಮಲಬದ್ಧತೆ ಮತ್ತು ಅಲ್ಸರ್ ಸಮಸ್ಯೆಗೆ ನಾವು ಸುಲಭವಾದ ಮನೆಮದ್ದು ತಿಳಿಸಿ ಕೊಡುತ್ತೇವೆ ಗೆಳೆಯರೇ. ಹೌದು ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದಿಂದ ಹಾಗೂ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಕೆಲಸವನ್ನು ಮಾಡುವುದರಿಂದ ಈ ಪೈಲ್ಸ್ ಸಮಸ್ಯೆ ಬರುತ್ತದೆ ಹಾಗೂ ಕೆಲಸದ ಟೆನ್ಷನ್ ಇಂದಾಗೀ ನಾವು ಫಾಸ್ಟ್ ಫುಡ್ ಹಾಗೂ ಜಂಕ್ ಫುಡ್ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇನ್ನೂ ಇವೆಲ್ಲವನ್ನೂ ತಿನ್ನುತ್ತಾ ಹಾಗೂ ನೀರನ್ನು ಹೆಚ್ಚಾಗಿ ಕುಡಿಯದೇ ಇದ್ದಾಗ ದೇಹದಲ್ಲಿ ಉಷ್ಣತೆ ಪ್ರಮಾಣ ಹೆಚ್ಚಾಗಿ ಅಲ್ಸರ್ ಸಮಸ್ಯೆ ಬರುತ್ತದೆ. ಹೌದು ಕೆಲಸದ ಒತ್ತಡ ಹಾಗೂ ಇನ್ನಿತರ ಅನೇಕ ಸಮಸ್ಯೆಗಳಿಂದ ದೈಹಿಕವಾಗಿ ಮಾನಸಿಕವಾಗಿ ಕುಗ್ಗಿ ಕೊರಗಿ ಹೋಗಿ ನಮ್ಮ ಆಹಾರದ ಮೇಲೆ ಹಾಗೂ ಆರೋಗ್ಯದ ಗಮನವನ್ನು ಹರಿಸದೇ ಮೇಲಾಗಿ ನಮಗೆ ನಾವೇ ಸಮಯವನ್ನು ಕೊಡಲಾರದಷ್ಟು ಬಿಝಿ ಆಗಿದ್ದೇವೆ ಗೆಳೆಯರೇ.
ಹಾಗೂ ಸತತವಾಗಿ ಕೆಲಸವನ್ನು ಮಾಡುವುದು ದೇಹವನ್ನು ಸಾಕಷ್ಟು ದಣಿಸುವುದು ಹಾಗೂ ಅಗತ್ಯಕ್ಕೆ ತಕ್ಕಂತೆ ನೀರನ್ನು ಕುಡಿಯದೇ ಇರುವುದು ಅತಿಯಾದ ಮಸಾಲೆ ಆಹಾರಗಳನ್ನು ಸೇವಿಸುವುದು ಕರಿದ ಹಾಗೂ ಎಣ್ಣೆ ಪದಾರ್ಥಗಳನ್ನು ಸಾಕಷ್ಟು ಸೇವನೆ ಮಾಡುವುದರಿಂದ ಇಂತಹ ಸಮಸ್ಯೆಗಳಾದ ಅಲ್ಸರ್ ಪೈಲ್ಸ್ ಮಲಬದ್ಧತೆ ಸಮಸ್ಯೆ ಚಿಕ್ಕ ವಯಸ್ಸಿನಲ್ಲಿಲೇ ನಾವು ಬಳಸುತ್ತಿದ್ದೇವೆ. ಹೌದು ಪೈಲ್ಸ್ ಸಮಸ್ಯೆ ಬಂದರೆ ಅದರ ನೋವು ಸಾಕಪ್ಪಾ ಸಾಕು ಅನ್ನಿಸುತ್ತದೆ ಮಲ ಮೂತ್ರ ವಿಸರ್ಜನೆ ಮಾಡಬೇಕಾದ್ರೆ ಎಷ್ಟೊಂದು ಹಿಂಸೆ ಅನ್ನಿಸುತ್ತದೆ ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಬೇಕು ಅಂತ ವೈದ್ಯರು ಹೇಳುತ್ತಾರೆ ಹೀಗಾಗಿ ಇಂತಹ ಅನೇಕ ಸಮಸ್ಯೆಗಳಿಗೆ ಜನರು ಆಸ್ಪತ್ರೆಗೆ ಹೋಗಲು ತುಂಬಾನೇ ಹೆದರುತ್ತಾರೆ. ಹೌದು ಹಾಗೂ ಅನಾವಶ್ಯಕವಾಗಿ ದುಡ್ಡು ಖರ್ಚು ಮಾಡುತ್ತಾರೆ. ಗುಣಮುಖ ಆಗುವುದು ನಿಜವೇ ಆದರೆ 100% ಪರಿಹಾರ ಆಗುವುದಿಲ್ಲ. ಹೀಗಾಗಿ ನೀವು ಮನೆಯಲ್ಲಿ ಕೆಲವು ಮನೆಮದ್ದುಗಳನ್ನು ಮಾಡಿಕೊಂಡು ಇಂತಹ ಅನೇಕ ಸಮಸ್ಯೆಗಳಿಂದ ಪಾರಾಗಬಹುದು. ಪಟಿಕವನ್ನು ನೀವು ನೋಡಿರಬಹುದು ಸಾಮಾನ್ಯವಾಗಿ ಇದನ್ನು ಪೊಟ್ಯಾಶಿಯಂ, ಅಲ್ಯುಮಿನಿಯಂ ಪದಾರ್ಥಗಳನ್ನು ಬಳಸಿಕೊಂಡು ಮಾಡಿರುತ್ತಾರೆ.
ಹೌದು ಇದು ನೋಡಲು ಬಿಳಿ ಬಣ್ಣದಲ್ಲಿದ್ದು ಉಪ್ಪಿನ ಹಾಗೆ ಕಾಣುತ್ತದೆ. ಅಥವಾ ಬೆಳ್ಳಗೆ ಹರಳಿನಂತೆ ಕಾಣುತ್ತದೆ. ಈ ಪಟಿಕವು ಆರೋಗ್ಯಕ್ಕೆ ಎಷ್ಟೊಂದು ಒಳ್ಳೆಯದು ಅಂದರೆ ಚರ್ಮದ ಸಮಸ್ಯೆಯಿಂದ ಹಿಡಿದು ರಕ್ತಸ್ರಾವ ರಕ್ತಹೀನತೆ ಅಲಸರ್ ಮತ್ತು ನೀರನ್ನು ಶುದ್ಧ ಮಾಡಲು ಈ ಪಟಿಕವನ್ನು ಬಳಕೆ ಮಾಡುತ್ತಾರೆ. ಇದನ್ನು ಯಾವ ರೀತಿಯಾಗಿ ಬಳಕೆ ಮಾಡಬೇಕು ಅಂದರೆ, ಈ ಪಟಿಕವನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ತೆಗೆದಿಟ್ಟುಕೊಳ್ಳಿ. ತದ ನಂತರ ಎರಡು ಏಲಕ್ಕಿ ಹಾಗೂ ಎರಡು ಬಾಳೇಹಣ್ಣು ತೆಗೆದುಕೊಳ್ಳಿ. ಆಮೇಲೆ ಅವುಗಳನ್ನು ಉದ್ದವಾಗಿ ಕತ್ತರಿಸಿ ಒಂದು ಪ್ಲೇಟ್ ಮೇಲೆ ಹಾಕಿಕೊಳ್ಳಿ ಅದರ ಮೇಲೆ ಶುದ್ಧವಾದ ಜೇನುತುಪ್ಪ ಹಾಗೂ ಈ ಪಟಿಕವನ್ನು ಅದರ ಮೇಲೆ ಉದುರಿಸಿ. ಬಾಳೆಹಣ್ಣು ಚೆನ್ನಾಗಿ ತುಂಬಿರಬೇಕು ಈ ಜೇನುತುಪ್ಪ ಹಾಗೂ ಪಟಿಕ ದಿಂದ ಹಾಗೆ ಅದರ ಮೇಲೆ ಸವರಬೇಕು ಈ ರೀತಿ ನೀವು ಪ್ರತಿನಿತ್ಯವೂ ಸೇವನೆ ಮಾಡುತ್ತಾ ಕನಿಷ್ಠ ಏಳು ದಿನಗಳವರೆಗೆ ಸತತವಾಗಿ ಮಾಡಬೇಕು. ಹೌದು ಖಂಡಿತವಾಗಿ ಹೀಗೆ ಮಾಡುವುದರಿಂದ ನಿಮಗೆ ಪೈಲ್ಸ್ ಅಲ್ಸರ್ ಹಾಗೂ ಮಲಬದ್ಧತೆ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿ ಕೊಳ್ಳಬಹುದು. ಇಲ್ಲವಾದರೆ ನಿಮಗೆ ಗುಣಮುಖ ಆಗದೇ ಹೋದಲ್ಲಿ ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ. ಶುಭದಿನ.