ನಮಸ್ತೇ ಪ್ರಿಯ ಓದುಗರೇ, ಬೇಸಿಗೆ ಕಾಲ ಬಂತು ಅಂದರೆ ಯಾಕಪ್ಪಾ ಈ ಬೇಸಿಗೆ ಕಾಲ ಬರುತ್ತದೆ ಅಂತ ಜನರು ನಿಂದಿಸುತ್ತಾರೆ. ಹೌದಲ್ಲವೇ. ಮಳೆಗಾಲದಲ್ಲಿ ಮನೆಯೊಳಗೆ ಬೆಚ್ಚಗೆ ಇರಬಹುದು ಆದರೆ ಬಿಸಿಲಿನಲ್ಲಿ ಭಯಂಕರ ಬಿಸಿಲು ತಡೆಯಲು ಆಗುವುದಿಲ್ಲ. ನಿಜಕ್ಕೂ ತುಂಬಾನೇ ಕಷ್ಟವಾಗುತ್ತದೆ. ಇನ್ನೂ ಬೇಸಿಗೆ ಕಾಲದಲ್ಲಿ ಹೊರಗಡೆಯಿಂದ ಮನೆಗೆ ಬಂದಾಗ ಏನಾದ್ರೂ ತಂಪು ಕುಡಿಯಬೇಕು ಅನ್ನಿಸುತ್ತದೆ. ಹೆಚ್ಚಾಗಿ ಜನರು ಪ್ರಿಡ್ಜ ನಲ್ಲಿ ನೀರು ಇಟ್ಟು ಕುಡಿಯುತ್ತಾರೆ. ಇನ್ನೂ ಕೆಲವರು ಪಾನೀಯಗಳನ್ನು ಮಾಡಿ ಕುಡಿಯುತ್ತಾರೆ. ಇವುಗಳು ಕೇವಲ ಶಾಖವನ್ನು ತಣಿಸುತ್ತದೆ. ಆದರೆ ಆರೋಗ್ಯದ ಮೇಲೆ ಹಗುರವಾಗಿ ಪರಿಣಾಮ ಬೀರುತ್ತದೆ.
ಆದರೆ ಈ ಬೇಸಿಗೆ ಕಾಲದಲ್ಲಿ ಬೆಸ್ಟ್ ಪಾನೀಯ ಅಂದ್ರೆ ಅದು ಕಬ್ಬಿನ ಹಾಲು ಅಥವಾ ಜ್ಯೂಸ್. ಹೌದು ಇದು ಎಷ್ಟು ರುಚಿಯಾಗಿ ಇರುತ್ತದೆ ಅಂದರೆ ಒಮ್ಮೆ ಕುಡಿದರೆ ಕುಡಿಯುತ್ತಲೇ ಇರಬೇಕು ಅನ್ನಿಸುತ್ತದೆ.
ಆದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಎರಡು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಒಂದು ಕಬ್ಬಿನ ಹಾಲು ಕುಡಿಯುವುದರಿಂದ ಆಗುವ ಆರೋಗ್ಯಕರ ಲಾಭಗಳ ಜೊತೆಗೆ ಹಾಗೂ ಕಬ್ಬಿನ ಜ್ಯೂಸ್ ಕುಡಿಯುುವ ಮುನ್ನ ಯಾವೆಲ್ಲ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಅಂತ ವಿವರವಾಗಿ ನಾವು ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ.
ಬೇಸಿಗೆ ಕಾಲದಲ್ಲಿ ನಾವು ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ಆದರೆ ನೈಸರ್ಗಿಕವಾಗಿ ತಂಪು ನೀಡುವ ಎಳೆನೀರು ಕಬ್ಬಿನ ಹಾಲು, ಶರ್ಬತ ಅನ್ನು ಕುಡಿಯುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಕಬ್ಬಿನ ಜ್ಯೂಸ್ ಕೇವಲ ಬೇಸಿಗೆ ಕಾಲದಲ್ಲಿ ಮಾತ್ರವಲ್ಲದೆ ಇನ್ನಿತರ ದಿನಗಳಲ್ಲಿ ಕೂಡ ನೀವು ಕಬ್ಬಿನ ಜ್ಯೂಸ್ ಅನ್ನು ಕುಡಿಯಬಹುದು. ಇದರಲ್ಲಿ ಕಾರ್ಬೋಹೈಡ್ರೇಟ್ ಕಬ್ಬಿಣ ಪೊಟ್ಯಾಶಿಯಂ ಕ್ಯಾಲ್ಷಿಯಂ ಸತು ಅಂಶಗಳು ಅಡಗಿವೆ. ಬೇಸಿಗೆಯಲ್ಲಿ ಕಳೆದುಕೊಂಡ ಶಕ್ತಿಯನ್ನು ಮರು ಪಡೆಯಲು ಕಬ್ಬಿನ ಹಾಲು ಸಹಾಯಕ. ನಿಮಗೆ ಗೊತ್ತಾ! ಕಬ್ಬಿನ ಹಾಲು ಕುಡಿದ ತಕ್ಷಣವೇ ಅದು ರಕ್ತದಲ್ಲಿ ಸೇರಿಕೊಳ್ಳುತ್ತದೆ ಎಂತೆ. ಹಾಗೂ ನಿಮಗೇನಾದರೂ ಉರಿ ಮೂತ್ರದ ಸಮಸ್ಯೆ ಇದ್ದಾರೆ ಕಬ್ಬಿನ ಹಾಲಿನಲ್ಲಿ ಸ್ವಲ್ಪ ನೆಲ್ಲಿಕಾಯಿ ರಸ ಹಾಗೂ ಜೇನುತುಪ್ಪವನ್ನು ಮಿಕ್ಸ್ ಮಾಡಿ ಕುಡಿದರೆ ಈ ಉರಿ ಮೂತ್ರದ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ತಿಳಿದು ಬಂದಿದೆ. ಜೊತೆಗೆ ನೀವು ಗಮನಿಸಬಹುದು ಕಬ್ಬಿನ ಹಾಲನ್ನು ಕೊಡುವಾಗ ಅವರು ಅದರಲ್ಲಿ ಶುಂಠಿ ಹಾಗೂ ನಿಂಬೆ ರಸ ಐಸ್ ಕ್ಯೂಬ್ ಅನ್ನು ಹಾಕಿ ಕೊಡುತ್ತಾರೆ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ ಹಾಗೂ ಹೊಟ್ಟೆಗೆ ಸಂಭಂದಿಸಿದ ಅನೇಕ ಸಮಸ್ಯೆಗಳಾದ ಹೊಟ್ಟೆ ಉಬ್ಬರ ಹೊಟ್ಟೆ ಉರಿ ಹೊಟ್ಟೆ ನೋವು ಹೊಟ್ಟೆ ಗಟ್ಟಿಯಾಗುವುದು ಈ ರೀತಿ ಅನೇಕೆ ಸಮಸ್ಯೆಗಳನ್ನು ಒಂದೇ ಕ್ಷಣದಲ್ಲಿ ಮಾಯ ಮಾಡಿಸುತ್ತದೆ.
ಹಾಗೂ ದೇಹದಲ್ಲಿ ನಿರ್ಜಲೀಕರಣ ಆಗುವುದನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿ ನೀರಿನ ಅಂಶವು ಸರಿಯಾಗಿ ಸಮತೋಲನದಲ್ಲಿ ಇಡುವಂತೆ ನೋಡಿಕೊಳ್ಳುತ್ತದೆ. ಇನ್ನೂ ಮುಖ್ಯವಾಗಿ ಕಬ್ಬಿನ ಹಾಲಿನ ಆರೋಗ್ಯಕರ ಪ್ರಯೋಜನವನ್ನು ಹೇಳುವುದಾದರೆ, ಕಿಡ್ನಿ ಸ್ಟೋನ್ ಅನ್ನು ಕರಗಿಸುವಲ್ಲಿ ಬಹಳ ಪರಿಣಾಮಕಾರಿ ಆಗಿದೆ. ಕಿಡ್ನಿ ಯಲ್ಲಿ ಕಲ್ಲು ಇದ್ದರೆ ಅದು ಗುಣಮುಖವಾಗಲು ನೆರವಾಗುತ್ತದೆ ಎಂದು ತಿಳಿದು ಬಂದಿದೆ. ಕಬ್ಬುಗಳಲ್ಲಿ ಇರುವ ಕ್ಯಾಲ್ಷಿಯಂ ಸ್ನಾಯುಗಳನ್ನು ಬಲಪಡಿಸುತ್ತದೆ. ಹಾಗೂ ಕಬ್ಬನ್ನು ಜಗಿದು ತಿನ್ನುವುದರಿಂದ ಹಲ್ಲುಗಳಿಗೆ ಹಾಗೂ ಒಸಡುಗಳಿಗೆ ಉತ್ತಮ. ಮೇಲೆ ಹೇಳಿರುವ ಎಲ್ಲ ವಿಷಯಗಳು ಕಬ್ಬಿನ ಹಾಲಿನ ವಿಶೇಷ ಗುಣಗಳು ಆಗಿವೆ. ಈಗ ಕಬ್ಬಿನ ಹಾಲು ಕುಡಿಯುವಾಗ ವಹಿಸಬೇಕಾದ ಎಚ್ಚರಿಕೆ ಕ್ರಮಗಳನ್ನು ತಿಳಿಯೋಣ. ಹೌದು ತುಂಬಾ ಬಾಯಾರಿಕೆ ಆದಾಗ ರಸ್ತೆ ಬದಿಯಲ್ಲಿ ಇರುವ ಕಬ್ಬಿನ ಜ್ಯೂಸ್ ಕುಡಿಯಲು ಓಡಿ ಹೋಗುತ್ತೇವೆ. ಆದರೆ ನಿಮಗೆ ಗೊತ್ತೇ ಕಬ್ಬಿನ ಅಂಗಡಿಯಲ್ಲಿ ಕೇವಲ ಒಬ್ಬ ವ್ಯಕ್ತಿ ಇದ್ದು ಆತನೇ ಕಬ್ಬಿನ ಜ್ಯೂಸ್ ಮಾಡುತ್ತಾನೆ ಹಾಗೂ ಪದೇ ಪದೇ ಮಶೀನ್ ಅನ್ನು ಹಿಡಿಯುತ್ತಾನೆ ಹೀಗಾಗಿ ಕೆಮಿಕಲ್ ಜ್ಯೂಸ್ ನಲ್ಲಿ ಬೆರೆಯುವ ಸಾಧ್ಯತೆ ಇರುತ್ತದೆ. ಹಾಗೂ ಕಬ್ಬಿನ ಹಾಲು ತಯಾರಿಸುವ ಮಶೀನ್ ಅನ್ನು ಆಗಾಗ ಸ್ವಚ್ಚ ಮಾಡುತ್ತಾ ಇರಬೇಕು. ಹಾಗೂ ಕಬ್ಬಿನ ಜ್ಯೂಸ್ ನಲ್ಲಿ ಬಳಕೆ ಮಾಡುವ ಪುದೀನಾ ಶುಂಠಿ ನಿಂಬೆಹಣ್ಣು ತೊಳೆದೀರುತ್ತಾರೆ ಇಲ್ಲವೋ ಅನ್ನುವುದರ ಬಗ್ಗೆ ಎಚ್ಚರಿಕೆ ವಹಿಸಬೇಕು.
ಶುಭದಿನ.