ಗರ್ಭಿಣಿ ಮಹಿಳೆಯರಿಗೆ ಹೊಟ್ಟೆಯ ಸುತ್ತಲೂ ಗೆರೆಗಳು ಆಗಿದ್ದರೆ ಅಲೋವೆರಾ ಜೆಲ್ ನಿಂದ ಹೀಗೇ ಮಾಡಿರಿ.

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿದರೆ ಏನಾಗುತ್ತದೆ ಗೊತ್ತೇನು ನಿಜಕ್ಕೂ ಅಚ್ಚರಿ ಆಗುತ್ತದೆ. ಅಲೋವೆರಾ ಗಿಡದ ಒಳಗಿನ ಜೆಲ್‍ನ್ನು ವಿವಿಧ ಕಾಯಿಲೆಗಳಿಗೆ ಬಳಸಬಹುದು ಎಂದು ನಿಮಗೆ ತಿಳಿದಿಯೇ? ಹೌದು ಅಲೋವೆರಾ ಜೆಲ್‍ನ್ನು ರಸದ ರೂಪದಲ್ಲಿ ಸೇವಿಸಬಹುದು ಮತ್ತು ಔಷಧೀಯ ರೂಪದಲ್ಲಿ ಬಳಸಬಹುದು ಮತ್ತುಚರ್ಮ ಮೇಲೆ ಲೇಪಿಸಿಕೊಳ್ಳಬಹುದು. ಆಯುರ್ವೇದದಲ್ಲಿ ಬಹಳ ವರ್ಷಗಳಿಂದ ಹಾಗೂ ಬಹಳ ಬೇಡಿಕೆ ಯುಳ್ಳ ಸಸ್ಯ ವರ್ಗಕ್ಕೆ ಸೇರಿದ ಗಿಡಮೂಲಿಕೆ ಆಗಿದೆ ಈ ಲೊಳೆರಸ. ಇದರಲ್ಲಿ ಅಮೈನೋ ಆಮ್ಲಗಳು ವಿಟಮಿನ್ಗಳು ಎ ಎಫ್ ಸಿ ಮತ್ತು ಬಿ ಹೇರಳವಾಗಿದೆ. ಇದರಲ್ಲಿ ಲೋಳೆ ರೂಪದ ರಸ ಇರುವ ಕಾರಣ ಇದನ್ನು ಕನ್ನಡದಲ್ಲಿ ಲೊಳೆರಸ ಎಂದು ಕರೆಯುತ್ತಾರೆ. ಈ ಅಲೋವೆರಾದಲ್ಲಿ ನೂರಕ್ಕೂ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿವೆ. ಅಷ್ಟೇ ಅಲ್ಲದೇ ಇದರಲ್ಲಿ ಕಹಿ ಅಂಶ ಇರುವ ಕಾರಣ ಕೀಟಗಳ ಕಾಟವೂ ಕಡಿಮೆ ಅಥವಾ ಹಾವಳಿ ಕಡಿಮೆ ಅಂತ ಹೇಳಿದರೆ ತಪ್ಪಾಗಲಾರದು. ಲೋಳೆರಸವನ್ನು ಬಹಳ ಹಿಂದಿನಿಂದಲೂ ಔಷಧೀಯ ತಯಾರಿಕೆಯಲ್ಲಿ ಬಳಸಲಾಗುತ್ತದೆ ಹಾಗೂ ಇದರಿಂದ ಸೋಪು ಶಾಂಪೂ ಫೆಸ್ ವಾಷ್ ಹಾಗೂ ಲೋಷನ್ ಇನ್ನಿತರ ಪ್ರೋಡಕ್ಟ್ ಗಳನ್ನು ತಯಾರಿಸುತ್ತಾರೆ.

 

ಅಸಿಡಿಟಿ ಸಮಸ್ಯೆ ಇರುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲೋಳೆರಸವನ್ನು ಸೇವನೆ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇನ್ನೂ ನಿಮಗೆ ಸುಟ್ಟ ಗಾಯವಾದರೆ ಅಲೋವೆರಾ ಜೆಲ್ ಅನ್ನು ಲೇಪನ ಮಾಡಿದರೆ ಉರಿ ಕಡಿಮೆ ಆಗುತ್ತದೆ ತಂಪು ಎಂದು ಭಾಸವಾಗುತ್ತದೆ. ಹಾಗೂ ಗಾಯವು ಮಾಯವಾಗುತ್ತದೆ ಮತ್ತು ಬೊಬ್ಬೆಗಳು ಮೂಡುವುದಿಲ್ಲ. ಲೋಳೆ ರಸವನ್ನು ತಲೆಗೆ ಹಚ್ಚಿಕೊಂಡು ಹದಿನೈದು ನಿಮಿಷಗಳ ಕಾಲ ಬಿಟ್ಟು ಸ್ನಾನವನ್ನು ಮಾಡುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತವೆ ಮತ್ತು ತಲೆ ಹೊಟ್ಟು ಆಗುವುದಿಲ್ಲ ಸೊಂಪಾಗಿ ಬೆಳೆಯುತ್ತದೆ ಮತ್ತು ಕೂದಲು ಉದುರುವುದಿಲ್ಲ. ಅಲೋವೆರಾಬಾಯಿಯ ಹುಣ್ಣುಗಳುನ್ನು ನಿವಾರಿಸುತ್ತದೆ. ತುಟಿಯ ಕೆಳಗೆ ಅಥವಾ ಒಸಡುಗಳ ಬುಡದಲ್ಲಿ ರೂಪುಗೊಳ್ಳುವ ಸಣ್ಣ ಸಣ್ಣ ಹುಣ್ಣುಗಳಿಗೆ ಚಿಕಿತ್ಸೆ ನೀಡುತ್ತದೆ. ಅಲೋವೆರಾದ ಆಂಟಿಬ್ಯಾಕ್ಟೀರಿಯಲ್ ಪರಿಣಾಮವು ಬಾಯಿಯ ಹುಣ್ಣುಗಳ ಗಾತ್ರವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಅಲೋವೆರಾ ಜೆಲ್ ನಿಯಮಿತವಾಗಿ ಸೇವನೆ ಮಾಡುವುದರಿಂದ ಜಠರ ಹಾಗೂ ಮೂಲವ್ಯಾಧಿ ಹುಣ್ಣು ಹಾಗೂ ಸಮಸ್ಯೆಗಳು ಕಾಡುವುದು ತಪ್ಪುತ್ತದೆ.

 

ಮಲಬದ್ಧತೆ ಕರುಳಿನ ಮತ್ತು ಜೀರ್ಣಕಾರಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲೋವೆರಾ ಜೆಲ್ ಅನ್ನು ನೈಸರ್ಗಿಕ ವಿರೇಚಕವಾಗಿ ಬಳಸಬಹುದು. ಇದು ತ್ಯಾಜ್ಯವನ್ನು ಕರುಳಿನಿಂದ ಸುಲಭವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಹೊರಹಾಕಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಆಗಿರುವ ಕಲೆಗಳು ಕಪ್ಪು ಬಿಳಿ ಚುಕ್ಕೆಗಳು ಎಲ್ಲವೂ ಕಡಿಮೆ ಆಗುತ್ತವೆ ಹಾಗೂ ಭಂಗು ಕೂಡ ಕಡಿಮೆ ಆಗುತ್ತದೆ. ಪ್ರತಿನಿತ್ಯವೂ ಅಲೋವೆರಾ ಜೆಲ್ ಅನ್ನು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಗರ್ಭಿಣಿ ಮಹಿಳೆಯರಿಗೆ ಹೊಟ್ಟೆಯ ಸುತ್ತಲೂ ಗೆರೆಗಳು ಆಗಿರುತ್ತವೆ ಅಂಥವರು ಏನು ಮಾಡಬೇಕೆಂದರೆ ಅಲೋವೆರಾ ಜೆಲ್ ಅನ್ನು ಹೊಟ್ಟೆಯ ಸುತ್ತಲೂ ಹಚ್ಚಬೇಕು. ಇದರಿಂದ ಗೆರೆಗಳು ಮಾಯವಾಗುತ್ತವೆ. ಅಲೋವೆರಾ ತಿರುಳನ್ನು ಹಣೆಗೆ ಹಚ್ಚಿಕೊಂಡು ಬಟ್ಟೆ ಕಟ್ಟಿಕೊಂಡು ಅರ್ಧಗಂಟೆ ವಿಶ್ರಾಂತಿ ಪಡೆದುಕೊಂಡರೆ ಖಂಡಿತವಾಗಿ ತಲೆನೋವು ಮಾಯವಾಗುತ್ತದೆ. ಲೋಳೆ ರಸವನ್ನು ಶೇವಿಂಗ್ ಕ್ರೀಮ್ ಆಗಿ ಬಳಸುವುದರಿಂದ ಚರ್ಮವೂ ಮೃದು ಆಗುತ್ತದೆ.
ಅಲೋವೆರಾವನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯಕ್ಕೆಸಹಾಯಕರವಾಗಿರುತ್ತದೆ. ಏಕೆಂದರೆ ಈ ಸಸ್ಯವು ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶದ ವಿರುದ್ಧ ಪ್ರಬಲವಾಗಿ ಹೋರಾಡುತ್ತದೆ ಎಂದು ನಂಬಲಾಗಿದೆ. ಅಲೋವೆರಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ಕೂಡ ಹೇಳಲಾಗುತ್ತದೆ. ಅಂದರೆ ನೀವು ಆಗಾಗ ಹೆಚ್ಚಾಗಿ ತಿನ್ನುವ ಅಗತ್ಯವನ್ನು ನಿವಾರಿಸುತ್ತದೆ.

Leave a Reply

Your email address will not be published. Required fields are marked *