ಸೆಪ್ಟೆಂಬರ್ 19, ಸೋಮವಾರದ ಶುಭದಿನದಂದು ನಿಮ್ಮ ಭವಿಷ್ಯ ಹೇಗಿದೆ???

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ಇಂದ್ರಿಯ ಮನಸ್ಸು ಬುದ್ಧಿ ಇವುಗಳು ಈ ಕಾಮ ಕ್ರೋಧಗಳು ಕೂರುವಂತ ಸ್ಥಾನ. ಇಲ್ಲಿ ಬಂದು ಅವು ಕುಳಿತು ಮನಸ್ಸನ್ನು ಗೆದ್ದು ಇವುಗಳಿಂದ ನಮ್ಮನ್ನು ಬರೀ ಪಾಪಗಳ ಮಾರ್ಗದಲ್ಲಿ ಕರೆದುಕೊಂಡು ಹೊರಟು ಹೋಗುತ್ತೆ. ಇಂದು ಶ್ರೀ ಶುಭಕ್ರುತ್ಥ್ ನಾಮ ಸಂವತ್ಸರ. ದಕ್ಷಿಣಾಯನ ವರ್ಷ ಋತು,ಭಾದ್ರಪದ ಮಾಸ ಕೃಷ್ಣ ಪಕ್ಷ ಇಂದು ಸೆಪ್ಟೆಂಬರ್ 19 ನೆ ತಾರೀಕು, ಸೋಮವಾರ. ಆರಿದ್ರಾ ನಕ್ಷತ್ರ. ಇಂದಿನ ದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿಯೋಣ. ಮೇಷ ರಾಶಿಗೆ ಇಂದು ನಿಮ್ಮ ಮನೆಯಲ್ಲಿ ಮತ್ತು ನಿಮ್ಮ ಆಸ್ತಿ ಪಾಸ್ತಿ ವಿಚಾರಗಳಲ್ಲಿ ಎಷ್ಟೊಂದು ವಿಚಾರಗಳು ತಿಳಿದಿರಲೇ ಇಲ್ಲವಲ್ಲ. ಇದೆಲ್ಲ ಇರುತ್ತಾ ಎನ್ನುವ ರೀತಿಯಲ್ಲಿ ಆಶ್ಚರ್ಯ ಉಂಟು ಮಾಡುವ ದಿನ ಆಗಿರುತ್ತೆ. ಅಮ್ಮನ ಅರೋಗ್ಯದ ಬಗ್ಗೆ ಗಮನ ಕೊಡಿ. ಮತ್ತು ನಿಮ್ಮ ಅರೋಗ್ಯದ ಬಗ್ಗೆ ಸಹ ಹೆಚ್ಚಿನ ಗಮನವನ್ನು ಕೊಡಿ. ತುಂಬಾ ತಲೆ ಕೆಡಿಸಿಕೊಳ್ಳಬೇಡಿ. ಎರಡು ದಿನಗಳ ನಂತರ ಎಲ್ಲವೂ ಬದಲಾಗುತ್ತೆ. ವೃಷಭ ರಾಶಿಯವರಿಗೆ ಇದು ಬಹಳ ಒಳ್ಳೆಯ ದಿನ. ನಿಮ್ಮ ಸಾಮಾಜಿಕ ವಾತಾವರಣದಲ್ಲಿ ಮತ್ತು ನಿಮ್ಮ ಬಂದು ಬಂದವರಲ್ಲಿ ಇಷ್ಟೊಂದು ನಿಮಗೆ ಸಹಕಾರ ಇದಿಯಾ ಅಂತ ಯೋಚನೆ ಆಶ್ಚರ್ಯ ಪಡುವ ಒಳ್ಳೆಯ ದಿನ ಇದಾಗಿರಿತ್ತೆ.

 

ಮಿಥುನ ರಾಶಿಯವರಿಗೆ ಬಹಳ ಒಳ್ಳೆಯ ದಿನ. ಸಂಸಾರದಲ್ಲಿ ಇಷ್ಟೊಂದು ನೆಮ್ಮದಿ ಯಾವತ್ತಾದರೂ ನಾನು ಕಾಣಲು ಸಾಧ್ಯ ಇದಿಯಾ ಎನ್ನುವ ಸಂತೋಷ ಪಡುವ ದಿನ. ಕರ್ಕಾಟಕ ರಾಶಿಗೆ ನನ್ನಲ್ಲಿ ಇಂತಹ ಒಳ್ಳೆಯ ಗುಣಗಳು ಇತ್ತಾ? ನನಗೆ ಇಷ್ಟೊಂದು ಆಧ್ಯಾತ್ಮಿಕ ಸಿದ್ಧಿ ಸಾಧ್ಯವೇ? ಇಷ್ಟೊಂದು ಸಮಾಧಾನ ಹಿಂದೆಲ್ಲ ಇತ್ತಾ ಎನ್ನುವ ರೀತಿಯಲ್ಲಿ ನೀವು ನಿಮ್ಮ ಬಗ್ಗೆ ಆಶ್ಚರ್ಯ ಪಡುವ ಒಳ್ಳೆಯ ಸುಗಮವಾದ ದಿನ. ಸಿಂಹ ರಾಶಿಯವರಿಗೆ ಒಂದೆರೆಡು ಹೆಜ್ಜೆ ಹಿಂದೆ ಇತ್ತು ಮುಂದೆ ಏನು ಮಾಡಬೇಕು ಎನ್ನುವ ಯೋಚನೆ ಮಾಡಬೇಕಾದ ದಿನ. ಗಾಢವಾದ ಆಲೋಚನೆ ಇಂದು ನಿಮ್ಮ ಒಳಗೆ ಇರುತ್ತೆ. ಯಾರು ಏನು ಬಿಟ್ಟು ಹೋಗಿಲ್ಲ ಅಥವಾ ಅಲ್ಲಿ ಏನೇ ಯಾವುದೇ ರೀತಿಯ ತೊಂದರೆಗಳು ಇಲ್ಲ. ಎರಡು ದಿನಗಳ ನಂತರ ಎಲ್ಲವೂ ಸರಿ ಹೋಗುತ್ತೆ. ಕನ್ಯಾ ರಾಶಿಗೆ ಬಹಳ ಒಳ್ಳೆಯ ದಿನ. ಸಾಮಯಜೀಕ ವಾತಾವರಣದಲ್ಲಿ ಇಷ್ಟೊಂದು ನೆಮ್ಮದಿ ಮತ್ತೆ ನನ್ನ ಮಿತ್ರರು ಇಷ್ಟೊಂದು ಗೌರವ ಕೂಡುತ್ತಾರೆ ಅಥವ ನನ್ನಿಂದ ಅವರೆ ಇಷ್ಟೊಂದು ಸಂತೋಷ ಸಾಧ್ಯವೇ ಎಂದು ನೀವು ಆಶ್ಚರ್ಯ ಪಡುವ ದಿನ. ತೂಕ ರಾಶಿಗೆ ಕಾರ್ಯ ಕ್ಷೇತ್ರದಲ್ಲಿ ಬಹಳ ಒಳ್ಳೆಯ ಯಶಸ್ಸು ಇವತ್ತು. ನನ್ನ ಪ್ರತಿಷ್ಠೆ ಇಷ್ಟೊಂದು ಮಟ್ಟಿಗೆ ಹೆಚ್ಚಾಗಲು ಸಾಧ್ಯವೇ? ಈ ಜನರಿಗೆ ನನ್ನ ಕೆಲಸದಿಂದ ಇಷ್ಟೊಂದು ಅನುಕೂಲ ಆಗುತ್ತದೆಯೇ ಎಂದು ಆಶ್ಚರ್ಯ ಪಡುವ ದಿನ.

 

ವೃಶ್ಚಿಕ ರಾಶಿಗೆ ಭಾಗ್ಯೋದಯ ಆಗುತ್ತೆ ದೊಡ್ಡವರಿಂದ ಆಶೀರ್ವಾದ ಪ್ರಾಪ್ತಿ ಆಗುತ್ತೆ. ವಿನಯವಾಗು ನಡೆದುಕೊಳ್ಳಿ ಆಗ ಇಂತಹ ದೊಡ್ಡವರು ನನ್ನ ಮೇಲೆ ಇಷ್ಟು ಕಾಳಜಿ ಮಾಡುತ್ತಾರೆಯೇ ಎಂದು ಆಶ್ಚರ್ಯ ಆಗಿ ಸಂತೋಷ ಪಡುವ ದಿನ. ಧನಸ್ಸು ರಾಶಿಗೆ ಸ್ವಲ್ಪ ಮನಸ್ಸಿಗೆ ಭಾವನೆಗಳು ಜಾಸ್ತಿನೇ ವ್ಯತಿತೇಕ ಆಗುತ್ತೆ. ಆದ್ದರಿಂದ ದಾನಗಳನ್ನು ಮಾಡಿ. ಆಧ್ಯಾತ್ಮ ಹೆಚ್ಚಾದಷ್ಟೂ ನೆಮ್ಮದಿ ಜಾಸ್ತಿ. ಮಕರ ರಾಶಿಗೆ ನಿಮ್ಮ ಪ್ರೀತಿ ಪಾತ್ರರು ನಿಮ್ಮ ಬಗ್ಗೆ ಇಷ್ಟೊಂದು ಪ್ರೀತಿ ಇಟ್ಟುಕೊಂಡಿದ್ದು ನನಗೆ ಗೊತ್ತೇ ಇರಲಿಲ್ಲ ಎಂದು ಆಶ್ಚರ್ಯ ಪಡುವ ದಿನ. ಎಲ್ಲಾ ಕಡೆ ನಿಮಗೆ ಜಯ ಪ್ರಾಪ್ತಿ ಆಗುತ್ತೆ. ಕುಂಭ ರಾಶಿಗೆ ಸಾಮಾಜಿಕ ವಾತಾವರಣದಲ್ಲಿ ನೀವು ಎನಿಸಲಾಗದಷ್ಟು ಒಳ್ಳೆಯದನ್ನು ನೋಡುತ್ತೀರಿ. ಮಿತ್ರರಿಂದ ಬಹಳ ಒಳ್ಳೆಯ ದಿನ ಕಾಣುತ್ತೀರಿ. ನಿಮ್ಮ ಅಭಿಮಾನವನ್ನು ಸ್ವಲ್ಪ ಪಕ್ಕಕ್ಕೆ ಇಡೀ ಇಲ್ಲದೆ ಹೋದರೆ ಮಿತ್ರರು ಶತ್ರುಗಳು ಆಗುವ ಸಾಧ್ಯತೆ ಇರುತ್ತೆ ಆದ್ರೆ ಶತ್ರುಗಳು ಖಂಡಿತ ಹಿಮ್ಮೆಟ್ಟುತ್ತಾರೆ. ಮೀನಾ ರಾಶಿಗೆ ನಿಮ್ಮ ಕ್ರಿಯಾ ಶೀಲತೆ ಎಷ್ಟು ಜಾಸ್ತಿ ಇದೆ ಅಂದ್ರೆ ನೀವು ಏನೋ ಒಂದು ದೊಡ್ಡದನ್ನು ಸಾಧಿಸುವ ದಿನ ಇಡಾಗಿರಿತ್ತೆ. ಮಕ್ಕಳಿಂದ ನೆಮ್ಮದಿ ಪೋಷಕರಿಗೆ ಮತ್ತು ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ದಾಂಪತ್ಯದಲ್ಲಿ ಹಿಂದೆದು ಕಾಣದಷ್ಟು ನೆಮ್ಮದಿಯನ್ನು ಸಂತೋಷವನ್ನು ಇವತ್ತು ಕಾಣುತ್ತೀರಿ. ಮಿತ್ರರೇ ಪುನಃ ನಾಳೆ ನಿಮ್ಮ ದಿನ ಭವಿಷ್ಯದ ಜೊತೆ ಮತ್ತೆ ಭೇಟಿಯಾಗೋಣ. ಶುಭದಿನ.

Leave a Reply

Your email address will not be published. Required fields are marked *