ಅಗಸೆ ಬೀಜ ಎಷ್ಟು ಉತ್ತಮವೋ ಅತಿಯಾದರೆ ಅಷ್ಟೇ ನಷ್ಟದಾಯಕ? ಇದರ ಅಡ್ಡ ಪರಿಣಾಮಗಳೂ ಇಲ್ಲಿವೆ!! ತಿಳಿಯಿರಿ.

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಪ್ರತಿಯೊಂದು ವಸ್ತುವಿನಲ್ಲಿ ಅಥವಾ ಯಾವುದೇ ಆಹಾರದಲ್ಲಿ ಲಾಭಗಳು ಇರುವುದರ ಜೊತೆಗೆ ಅಡ್ಡ ಪರಿಣಾಮಗಳೂ ಇದ್ದೇ ಇರುತ್ತವೆ. ನೀವು ಈಗಾಗಲೇ ಅಗಸೆ ಬೀಜದ ಬಗ್ಗೆ ಹಾಗೂ ಅದರಿಂದಾಗುವ ಲಾಭಗಳ ಬಗ್ಗೆ ನಿಮಗೆ ಗೊತ್ತಿರುವ ಸಂಗತಿ ಆಗಿದೆ ಗೆಳೆಯರೇ. ಆದರೆ ನಾವು ಇಂದಿನ ಲೇಖನದಲ್ಲಿ ನಿಮಗೆ ಅಗಸೆ ಬೀಜ ಅತಿಯಾಗಿ ಸೇವನೆ ಮಾಡಿದ್ರೆ ಏನಾಗುತ್ತದೆ ಹಾಗೂ ಇದನ್ನು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಸೂಕ್ತ ಅನ್ನುವ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ನಮ್ಮ ಹಿರಿಯರು ಯಾವಾಗ್ಲೂ ಅತಿಯಾದರೆ ಅಮೃತವೂ ವಿಷವೇ ಅನ್ನುವ ಮಾತನ್ನು ಮನೆಯ ಮಕ್ಕಳಿಗೆ ಹೇಳುತ್ತಲೇ ಇರುತ್ತಾರೆ. ಕಾರಣ ಯಾವುದೇ ಒಂದು ಆಹಾರವನ್ನು ನಾವು ಅತಿಯಾಗಿ ಸೇವನೆ ಮಾಡಿದ್ರೆ ಅದರಿಂದ ಅನುಕೂಲದ ಜೊತೆಗೆ ಅನಾನುಕೂಲಗಳು ಇರುತ್ತದೆ ಗೆಳೆಯರೇ. ಇನ್ನೂ ಈ ಅಗಸೆ ಬೀಜವನ್ನು ಯಾರು ಸೇವನೆ ಮಾಡಬಾರದು ಅಂತ ಹೇಳುವುದಾದರೆ,

 

ಗರ್ಭಿಣಿಯರು ಈ ಅಗಸೆ ಬೀಜವನ್ನು ಸೇವನೆ ಮಾಡಲು ಹೋಗಬಾರದು. ಏಕೆಂದ್ರೆ ಗರ್ಭಾವಸ್ಥೆಯಲ್ಲಿ ರಕ್ತದೊತ್ತಡ ಹೆಚ್ಚುತ್ತದೆ.ಜೊತೆಗೆ ವಾಕರಿಕೆ ಮತ್ತು ಅತಿಸಾರವು ಉಂಟಾಗುತ್ತದೆ. ಇನ್ನೂ ಮಧುಮೇಹಿಗಳು ಈ ಅಗಸೆ ಬೀಜ ದಿಂದ ದೂರವಿರಬೇಕು. ಏಕೆಂದ್ರೆ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ವೈದ್ಯರು ಈಗಾಗಲೇ ಮಾತ್ರೆಗಳನ್ನು ಔಷಧಗಳನ್ನು ಶುರು ಮಾಡಿರುತ್ತಾರೆ ಹೀಗಾಗಿ ರಕ್ತದಲ್ಲಿ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುತ್ತಾ ಇರುತ್ತದೆ ಅದೇ ನೀವು ಏನಾದ್ರೂ ಅಗಸೆ ಬೀಜವನ್ನು ನೀವು ಅತಿಯಾಗಿ ಸೇವನೆ ಮಾಡಿದ್ರೆ ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ರಕ್ತವೂ ತೆಳು ಆಗುತ್ತದೆ. ಇದರಿಂದ ಡಯಾಬಿಟೀಸ್ ಮತ್ತಷ್ಟು ಏರಿಕೆ ಆಗುತ್ತದೆ. ಒಟ್ಟಾರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ. ಅಗಸೆ ಬೀಜವನ್ನು ಅತಿಯಾಗಿ ಸೇವನೆ ಮಾಡಿದರೆ ತುರಿಕೆ ಹೆಚ್ಚು ಕಾಡಬಹುದು. ಹಾಗೂ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಣಬಹುದು. ಅಗಸೆ ಬೀಜವನ್ನು ಸೇವನೆ ಮಾಡುವುದರಿಂದ ಕರುಳನ್ನು ಕೂಡ ಬ್ಲಾಕ್ ಮಾಡುತ್ತದೆ.

 

ಒಂದು ವೇಳೆ ಅಧಿಕವಾಗಿ ಸೇವನೆ ಮಾಡಿದರೆ ಮಲಬದ್ಧತೆ ಸ ಮಸ್ಯೆ ಕೂಡ ಹೆಚ್ಚುತ್ತದೆ. ಇಂತಹ ಕೆಲವು ಪದಾರ್ಥಗಳನ್ನು ಸೇವನೆ ಮಾಡಿದ ನಂತರ ಹೆಚ್ಚು ನೀರು ಕುಡಿಯಿರಿ. ಇನ್ನೂ ಅಗಸೆ ಬೀಜವನ್ನು ಅತಿಯಾಗಿ ಸೇವನೆ ಮಾಡಿದ್ರೆ ದೇಹದಲ್ಲಿ ರಕ್ತವೂ ತೆಳು ಆಗುತ್ತದೆ. ಒಂದು ವೇಳೆ ಗಾಯವಾಗಿ ರಕ್ತಸ್ರಾವ ಆಗುತ್ತಿದ್ದರೆ ರಕ್ತವೂ ಬೇಗನೆ ಹೆಪ್ಪುಗಟ್ಟುವುದಿಲ್ಲ ಕಾರಣ ನಿಮ್ಮ ರಕ್ತವೂ ತೆಳು ಆಗಿರುತ್ತದೆ. ರಕ್ತ ಹೆಪ್ಪುಗಟ್ಟಿದರೆ ನೀವು ಆರೋಗ್ಯವಾಗಿ ಇದ್ದೀರಿ ಎಂದು ಅರ್ಥ. ರಕ್ತ ಸಂಚಾರ ಸರಿಯಾಗಿ ಆಗಲು ರಕ್ತ ಹೆಪ್ಪುಗಟ್ಟುವಿಕೇ ಬಹಳ ಅತ್ಯಗತ್ಯ. ಅತಿಯಾಗಿ ಅಗಸೆ ಬೀಜವನ್ನು ಸೇವನೆ ಮಾಡಿದರೆ ರಕ್ತವೂ ತೆಳು ಆಗುತ್ತದೆ ಆದ್ದರಿಂದ ಇದರ ಸೇವನೆಯಿಂದ ದೂರವಿರಿ.ಅಗಸೆ ಬೀಜವನ್ನು ಸೇವನೆ ಮಾಡುವುದರಿಂದ ಅನೇಕ ಲಾಭಗಳಿವೆ. ಆದರೆ ನೀವು ಇದನ್ನು ಮಿತವಾಗಿ ಬಳಸಬೇಕು ಅನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ಬಳಕೆ ಮಾಡುವುದು ಸೂಕ್ತ. ಶುಭದಿನ.

Leave a Reply

Your email address will not be published. Required fields are marked *