ಮೊಳಕೆ ಕಾಳುಗಳನ್ನು ಸೇವನೆ ಮಾಡುವುದರಿಂದ ಏನಾಗುತ್ತದೆ ಗೊತ್ತೇ?????

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಈಗಿನ ಆಧುನಿಕ ಕಾಲದಲ್ಲಿ ಆರೋಗ್ಯವಂತ ಜೀವನ ನಡೆಸುವುದು ಬಹಳ ಕಷ್ಟದಾಯಕ ಆಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಈಗಿನ ಕಾಲದ ಯುವಜನತೆ ಆರೋಗ್ಯಕ್ಕಿಂತ ಕೆಲಸ ಜೀವನ ಶೈಲಿಗೆ ಬಹಳ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಆರೋಗ್ಯ ಬಗ್ಗೆ ಕಾಳಜಿ ವಹಿಸುವುದು ಅವರಲ್ಲಿ ಅಧಿಕವಾಗಿ ಕಂಡು ಬರುವುದಿಲ್ಲ. ಅದರಲ್ಲೂ ಸಸ್ಯಾಹಾರಿ ಸೇವನೆ ಮಾಡುವ ಜನರಿಗೆ ಆರೋಗ್ಯವಂತ ಪೋಷಕಾಂಶ ಭರಿತ ಆಹಾರ ಸೇವನೆ ಮಾಡುವುದು ಬಹಳ ಅತ್ಯಗತ್ಯವಾಗಿದೆ. ಆದರೆ ಈಗಿನ ಕಾಲದಲ್ಲಿ ಕಲಬೆರಕೆ ಕಲುಷಿತ ಹೆಚ್ಚಾಗಿರುವ ಕಾರಣ ಕಲಬೆರಕೆ ಪತ್ತೆ ಹಚ್ಚುವುದು ಕಷ್ಟದಾಯಕ ಆಗಿದೆ. ಆದರೆ ನಾವು ಕೆಲವೊಂದು ಕಾಳುಗಳನ್ನು ತಂದು ಮೊಳಕೆ ಬರಸಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಪ್ರೊಟೀನ್ ಎಲ್ಲವೂ ಸಿಗುತ್ತದೆ ಎಂದು ಆಯುರ್ವೇದದಲ್ಲಿ ಹಾಗೂ ವೈದ್ಯರು ಕೂಡ ತಿಳಿಸಿದ್ದಾರೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಮೊಳಕೆ ಬರಿಸಿದ ಕಾಳುಗಳನ್ನು ಸೇವನೆ ಮಾಡುವುದರಿಂದ ಏನೆಲ್ಲ ಆಗುತ್ತದೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ.

 

ಮೊಳಕೆ ಬರಿಸಿದ ಕಾಳುಗಳಲ್ಲಿ ಅತ್ಯಗತ್ಯವಾದ ಪ್ರೊಟೀನ್ ವಿಟಮಿನ್ ಖನಿಜಗಳು ಪೋಷಕಾಂಶಗಳು ಆಹಾರ ರೂಪದಲ್ಲಿ ನಮ್ಮ ದೇಹಕ್ಕೆ ದೊರೆಯುತ್ತದೆ. ಬೆಳಗಿನ ಉಪಹಾರಕ್ಕೆ ನೀವು ಈ ಮೊಳಕೆ ಬರಿಸಿದ ಕಾಳುಗಳನ್ನು ಡಯೆಟ್ ರೂಪದಲ್ಲಿ ಸೇವನೆ ಮಾಡಿದರೆ ನಿಮ್ಮ ಮೂಳೆಗಳು ಸ್ನಾಯುಗಳು ಬಲಗೊಳ್ಳುತ್ತವೆ. ಮಾಂಸ ಖಂಡಗಳಿಗೆ ಬಲ ಬರುತ್ತದೆ. ಬೊಜ್ಜು ಕರಗಿಸಲು ಸಹಾಯ ಮಾಡುತ್ತವೆ ಜೊತೆಗೆ ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನ ಮಾಡುವವರಿಗೆ ಇದು ಸೂಪರ್ ಫುಡ್ ಅಂತ ಹೇಳಬಹುದು. ಮೊಳಕೆ ಬರಿಸಿದ ಕಾಳುಗಳಲ್ಲಿ ಫೈಬರ್ ಅಂಶ ಹೇರಳವಾಗಿ ಇರುವುದರಿಂದ ಇವುಗಳ ಸೇವನೆ ಮಾಡುವುದರಿಂದ ನಮಗೆ ಮಲಬದ್ಧತೆ ಸಮಸ್ಯೆಗಳು ಬರುವುದಿಲ್ಲ. ವಿಟಮಿನ್ ಕೆ ಸಿ ಡಿ ಎ ಎಲ್ಲ ಬಗೆಯ ವಿಟಮಿನ್ ಗಳು ನಮ್ಮ ದೇಹಕ್ಕೆ ಈ ಮೊಳಕೆ ಬರಿಸಿದ ಕಾಳುಗಳ ಸೇವನೆ ಇಂದ ಸಿಗುತ್ತದೆ. ಇವುಗಳು ಪಚನ ಕ್ರಿಯೆ ಹಾಗೂ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದು ನಿಷ್ಯಕ್ತಿಯನ್ನು ದೂರ ಮಾಡುತ್ತದೆ. ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

 

ಮಕ್ಕಳಿಗೆ ಮೊಳಕೆ ಕಾಳುಗಳನ್ನು ತಿನ್ನಿಸುವುದರಿಂದ ಮಕ್ಕಳ ದೇಹದ ಬೆಳವಣಿಗೆ ಹಾಗೂ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಮೊಳಕೆ ಬರಿಸಿದ ಕಾಳುಗಳಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ದೃಷ್ಟಿ ಸುಧಾರಿಸಲು ನೆರವು ಆಗುತ್ತದೆ. ಅಷ್ಟೇ ಅಲ್ಲದೇ ಕಣ್ಣುಗಳಿಗೆ ಫ್ರೀ ರಾಡಿಕಲ್ ನಿಂದ ಉಂಟಾಗುವ ಅಪಾಯವನ್ನು ತಪ್ಪಿಸಬಹುದು. ಮೊಳಕೆ ಕಾಳುಗಳನ್ನೂ ಬೇಯಿಸಿ ತಿನ್ನುವ ಬದಲು ಹಸಿಯಾಗಿ ಸೇವನೆ ಮಾಡಿದರೆ ಇನ್ನಷ್ಟು ಲಾಭಗಳು ಉಂಟಾಗುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕತೆ ಪ್ರೊಟೀನ್ ಎಲ್ಲವೂ ಸಿಗುತ್ತದೆ. ನಿಮಗೆ ಗೊತ್ತಿರಲಿ ಗೆಳೆಯರೇ ಮೊಳಕೆ ಬರಿಸಿದ ಕಾಳುಗಳನ್ನು ಬಹಳ ದಿನಗಳ ಕಾಲ ಇಡುವುದರಿಂದ ಅವುಗಳಲ್ಲಿ ಇರುವ ಪೌಷ್ಟಿಕತೆ ಪೋಷಕಾಂಶಗಳು ಬೇಗನೆ ಹಾಳಾಗುತ್ತವೆ. ಆದ್ದರಿಂದ ಅವುಗಳು ತಾಜಾ ಇರುವಾಗಲೇ ಸೇವನೆ ಮಾಡಿ. ಈಗಿನ ಆಧುನಿಕ ಕಾಲದಲ್ಲಿ ಕಲಬೆರಕೆ ಅತಿಯಾಗಿ ಕಾಣುವುದರಿಂದ ಆದಷ್ಟು ನಾವು ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡುವುದು ಒಳ್ಳೆಯದು. ಅದರಲ್ಲೂ ಹೆಸರು ಕಾಳು ಮೊಳಕೆ ಕಾಳು ಕಡಲೆ ಕಾಳುಗಳನ್ನು ನೆನೆಸಿ ತಿನ್ನುವುದರಿಂದ ದೇಹಕ್ಕೆ ಬಹಳಷ್ಟು ಲಾಭಗಳು ಉಂಟಾಗುತ್ತವೆ. ಅದಕ್ಕಾಗಿ ಆದಷ್ಟು ಇಂತಹ ಕಾಳುಗಳನ್ನು ಸೇವನೆ ಮಾಡಿ. ಶುಭದಿನ.

Leave a Reply

Your email address will not be published. Required fields are marked *