ಕಸದಿಂದ ರಸ ಅಂದರೆ ಇದೆ ಅನ್ಸುತ್ತೆ ಸಗಣಿಯಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುವ ಹೊಸ ಬಿಸಿನೆಸ್..

Hit

ಕೆಲವೊಮ್ಮೆ ನಮ್ಮ ಮುಂದೆಯೇ ಹಲವು ರೀತಿಯಾದ ಆದಾಯ ಮಾಡುವ ಮಾರ್ಗಗಳು ಇರುತ್ತವೆ ಆದರೆ ಅವುಗಳು ನಮಗೆ ಗೊತ್ತಾಗುವುದಿಲ್ಲ ಅಂತಹ ಒಂದು ಸುಲಭ ಉಪಾಯ ಇಲ್ಲಿದೆ ನೋಡಿ ನೀವು ಸಗಣಿಯಿಂದ ತಿಂಗಳಿಗೆ ಲಕ್ಷ ಲಕ್ಷ ಹಣ ಸಂಪಾದನೆ ಮಾಡಬಹದು ಅನ್ನೋದು ಇಲ್ಲಿದೆ ಯಾವ ರೀತಿಯಾಗಿ ನೀವು ಸಗಣಿಯಿಂದ ಆದಾಯ ಮಾಡಬಹದು ಅನ್ನೋವು ಕೆಲ ಮಾರ್ಗಗಳು ಇಲ್ಲಿವೆ ಗಮನಿಸಿ.

ಸರ್ಕಾರ ಈಗಾಗಲೇ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ನಿಷೇಧ ಮಾಡಿದೆ ಇದೇ ಕಾರಣಕ್ಕಾಗಿಯೇ ಪೇಪರ್ ನಿಂದ ತಯಾರಾಗಿರುವ ಕೈಚೀಲಗಳಿಗೆ ಬಹಳಷ್ಟು ಬೇಡಿಕೆ ಶುರುವಾಗಿದೆ. ಹಾಗೂ ಪೇಪರ್ ಕೈಚೀಲಗಳು ಪರಿಸರಪ್ರೇಮಿಗಳ ಆದ್ಯತೆಯು ಆಗಿದೆ. ಹಾಗಾಗಿ ಪರಿಸರಸ್ನೇಹಿ ಪೇಪರ್ ಕೈಚೀಲಗಳ ಉತ್ಪಾದನೆಗೆ ಸುಲಭ ಉಪಾಯಗಳ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಆದರೆ ಹಸುವಿನ ಸಗಣಿಗು, ಪರಿಸರ ಸ್ನೇಹಿ ಪೇಪರ್ ಚೀಲಕ್ಕು ಏನು ಸಂಬಂಧ ಅಂತಾ ಯೋಚನೆ ಬರುವುದು ಸಹಜ ಇದರ ವಿವರಣೆ ಇಲ್ಲಿದೆ ನೋಡಿ.

ಪರಿಸರಸ್ನೇಹಿ ಪೇಪರ್ ಕೈಚೀಲವನ್ನು ತಯಾರು ಮಾಡಲು ಹಸುವಿನ ಸಗಣಿಯನ್ನು ಬಳಸಬಹುದಾಗಿದೆ. ಅಷ್ಟೇ ಅಲ್ಲದೆ ಹಸುವಿನ ಸಗಣಿಯಿಂದ ಪೇಪರ್ ತಯಾರು ಮಾಡಿ ಪ್ರತಿ ತಿಂಗಳಿಗೆ ಲಕ್ಷ ಲಕ್ಷ ಹಣ ಮಾಡುವ ಅವಕಾಶವೂ ಇದೆ. ಹಾಗಾದರೆ ಕಾಗದ ತಯಾರಿಕೆ ಮಾಡುವುದು ಹೇಗೆ ಅಂತಾ ನೋಡುವುದಾದರೆ, ಹಸುವಿನ ಸಗಣಿಯಿಂದ ಪೇಪರ್ ತಯಾರು ಮಾಡಬಹುದು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ ಸಗಣಿ ಮೂಲಕ ಪೇಪರ್ ತಯಾರಿಸುವ ಉದ್ಯೋಗವನ್ನು ಆರಂಭಿಸಬಹುದಾಗಿದೆ ಸರ್ಕಾರವು ಈಗಾಗಲೇ ಗೊಬ್ಬರದಿಂದ ಕಾಗದ ತಯಾರಿಸುವ ಪ್ರಯೋಗದಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲದೆ ಎಂಎಸ್ಎಂಇ ಸಚಿವಾಲಯವು ದೇಶದ ಪ್ರತಿ ಮೂಲೆಯಲ್ಲೂ ಗೊಬ್ಬರದ ಕಾಗದ ತಯಾರುಮಾಡುವ ಪ್ಲಾಂಟ್ ಸ್ಥಾಪಿಸುವ ಯೋಜನೆ ಕೂಡಾ ಮಾಡುತ್ತಿದೆ.

ಗೊಬ್ಬರದ ಕಾಗದ ತಯಾರಿಕೆಗೆ ಗೊಬ್ಬರದಿಂದ ಶೇಕಡ ಏಳರಷ್ಟು ಪ್ರಮಾಣ ಉಪಯುಕ್ತ ಮೆಟಿರಿಯಲ್ ಸಿಗುತ್ತದೆ. ಉಳಿದ 93ರಷ್ಟು ಗೊಬ್ಬರವನ್ನು ವೆಜಿಟೇಬಲ್ ಡೈ ಗೆ ನೀವು ಬಳಸಬಹುದಾಗಿದೆ. ಇದು ಸಂಪೂರ್ಣವಾಗಿ ಪರಿಸರಸ್ನೇಹಿ ಯಾಗಿರುವುದರಿಂದ ಬೇಡಿಕೆಯೂ ಹೆಚ್ಚಿದೆ ಹಾಗೂ ರಫ್ತಿಗೂ ಮುಕ್ತ ಅವಕಾಶವಿದೆ. ರೈತರಿಂದ ಹಸುವಿನ ಸಗಣಿಯನ್ನು ಪ್ರತಿ ಕೆಜಿಗೆ 5 ರೂಪಾಯಿಯಂತೆ ಖರೀದಿ ಮಾಡಬಹುದು. ಇದರಿಂದ ರೈತರಿಗೂ ಲಾಭದಾಯಕವಾಗುತ್ತದೆ ಸರ್ಕಾರ ಕೂಡ ಇದಕ್ಕೆ ನೆರವಾಗುತ್ತದೆ. ಇನ್ನೂ ಸಗಣಿಯಿಂದ ಪರಿಸರ ಸ್ನೇಹಿ ಚೀಲ ತಯಾರಿಸಲು ತಗಲಬಹುದಾದ ಖರ್ಚು ಎಷ್ಟು ಎಂದು ನೋಡುವುದಾದರೆ , ನೀವು ಗೊಬ್ಬರದ ಕಾಗದದ ಪ್ಲಾಂಟ್ ಸ್ಥಾಪಿಸಬೇಕಾದರೆ ನಿಮಗೆ ಸರಿ ಸುಮಾರು 15 ಲಕ್ಷ ಖರ್ಚು ಬೀಳಲಿದೆ, ಚಿಂತೆಬೇಡ ಇಂತಹ ಕರ್ಚು ಬರಿಸಲು ಸರ್ಕಾರದಿಂದ ಸಾಲ ಸೌಲಭ್ಯಗಳು ಸಿಗುತ್ತದೆ. ಇವುಗಳ ಲಾಭವನ್ನು ಪಡೆದುಕೊಂಡು ಒಂದು ಪ್ಲಾಂಟ್ನಲ್ಲಿ ಒಂದು ತಿಂಗಳಿಗೆ ಒಂದು ಲಕ್ಷ ಕಾಗದದ ತಯಾರಿಸಿ ಮಾರಾಟ ಮಾಡಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *