ಕ್ಯಾನ್ಸರ್, ಏಡ್ಸ್ ಇನ್ನು ಮುಂತಾದ ಮಾರಕ ರೋಗಗಳಿಗೆ ಈ ಹಣ್ಣು ರಾಮಬಾಣವಂತೆ..!

Hit

ಈ ಅಮೃತಾನೊನಿ ಹಣ್ಣು ಕ್ಯಾನ್ಸರ್, ಏಡ್ಸ್ ನಂತಹ ಮಾರಕ ರೋಗಗಳಿಗೆ ರಾಮಬಾಣವಂತೆ ಅಷ್ಟೇ ಅಲ್ಲದೆ ಮೂತ್ರ ಜನಕಾಂಗದ ಕಾಯಿಲೆ, ಮಧುಮೇಹ, ಕ್ಷಯ, ಚರ್ಮದ ರೋಗಗಳನ್ನೆಲ್ಲ ನಿರ್ಮೂಲನೆ ಮಾಡುವ 150ಕ್ಕೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ನೋನಿ ಹಣ್ಣು ಈ ರೋಗಗಳಿಗೆ ರಾಮಬಾಣವಂತೆ. ಅಮೃತ ನೋನಿ ಮೂಲತಃ ಭಾರತದ ಔಷಧೀಯ ಹಣ್ಣು. ಪ್ರಕೃತಿಯಲ್ಲಿ ದೊರೆಯುವ ಅದ್ಭುತ ಆರೋಗ್ಯ ವರ್ಧಕ ಹಾಗೂ ರೋಗ ನಿರೋಧಕ. ಇದು ಮೊರಿಂಡಾ ಸಿಟ್ರಿಪೋಲಿಯ ಎಂಬ ಸಸ್ಯ ಪ್ರಭೇದಕ್ಕೆ ಸೇರಿದ್ದು ಇದು ಪೊದೆಯ ರೂಪದಲ್ಲಿ ಬೆಳೆಯುವ ಗಿಡವಾಗಿದ್ದು, ಸುಮಾರು 10ರಿಂದ 12 ಅಡಿ ಎತ್ತರ ಬೆಳೆಯುತ್ತದೆ. ಗಿಡವೊಂದು ಸರಾಸರಿ 20 ಕೆ.ಜಿ.ಯಷ್ಟು ನೋನಿ ಹಣ್ಣುಗಳನ್ನು ನೀಡುತ್ತದೆ. ಅಮೃತ ನೋನಿ ಹಣ್ಣಿನ ಔಷಧೀಯ ಗುಣಗಳ ಬಗ್ಗೆ ವಿಶ್ವದ 40ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆಗಳು ನಡೆದಿವೆ. ಈಗಲೂ ಸಂಶೋಧನೆಗಳು ನಡೆಯುತ್ತಿವೆ.

ಈ ಹಣ್ಣನು ಔಷಧವಾಗಿ ಮಾತ್ರವಲ್ಲದೆ ಜೀವ ವರ್ಧಕವಾಗಿಯೂ ಈ ಹಣ್ಣನ್ನು ಬಳಸಬಹುದು. ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು, ಮಾನಸಿಕ ಶಾಂತಿ ಕಾಯ್ದುಕೊಳ್ಳಲು, ಚೆನ್ನಾಗಿ ನಿದ್ರಿಸಲು, ಲವಲವಿಕೆಯಿಂದ ಇರಲು, ದೇಹವನ್ನು ವಿಷಾಂಶಗಳಿಂದ ಮುಕ್ತಗೊಳಿಸಲು ನೋನಿ ಹಣ್ಣು ಉಪಯುಕ್ತವಾಗಿದೆ.

ಅಷ್ಟೇ ಅಲ್ಲದೆ ಉಸಿರಾಟದ ಸಮಸ್ಯೆ, ಮಲಬದ್ಧತೆ, ರಕ್ತದೊತ್ತಡ ನಿಯಂತ್ರಣಕ್ಕೂ ಅಮೃತ ನೋನಿ ಬಳಕೆಯಲ್ಲಿದೆ. ಕೀಲು ನೋವು, ಹೃದಯ ಸಂಬಂಧಿ ಕಾಯಿಲೆಗಳು, ಖಿನ್ನತೆಗೂ ನೋನಿ ಸೇವನೆ ಪರಿಣಾಮಕಾರಿ ಎಂಬುದು ಹಲವಾರು ಸಂಶೋಧನೆಗಳಲ್ಲಿ ದೃಢಪಟ್ಟಿದೆ.

ಈ ಹಣ್ಣಿನಲ್ಲಿರುವ ರಾಸಾಯನಿಕಗಳಾದ ಝರೋನಿನ್, ಡೆಮಾನ್ ಕೆಂತಾಲ್ ಮುಂತಾದವುಗಳು ಪಿತ್ಥಜನಕಾಂಗ,ಹೃದಯ, ಮೂತ್ರಜನಕಾಂಗದ ಕಾರ್ಯನಿರ್ವಹಣೆ ಸುಗಮವಾಗಿರುವಂತೆ ನೋಡಿಕೊಳ್ಳಲು ನೆರವಾಗುತ್ತವೆ. ನೋವು ನಿವಾರಕವಾಗಿಯೂ ಈ ಹಣ್ಣು ಬಹಳ ಪರಿಣಾಮಕಾರಿ ಔಷಧ. ಹೆಚ್ಐವಿ ಏಡ್ಸ್ ನಿಯಂತ್ರಣಕ್ಕೂ ವೈದ್ಯರು ಔಷಧವಾಗಿ ಶಿಫಾರಸು ಮಾಡುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *