ನಿಮಗೆ ಬಂದಿರುವ ಕೆಮ್ಮು ಕೊರೊನಾನ? ಅಥವಾ ಸಾಮಾನ್ಯ ಕೆಮ್ಮು ಎನ್ನವುದು ಕಂಡು ಹಿಡಿಯುವುದು ಹೇಗೆ

ಆರೋಗ್ಯ

ಪ್ರತಿಯೊಬ್ಬರಲ್ಲಿ ಕಂಡು ಬರುವ ಕೆಮ್ಮು ಸಾಮಾನ್ಯವಾಗಿತ್ತು ಆದರೆ ಸಧ್ಯದ ಸ್ಥಿತಿಯಲ್ಲಿ ಕೆಮ್ಮು ಎನ್ನುವುದು ಭಾರಿ ಭಯ ಹುಟ್ಟಿಸಿದೆ ಏಕೆಂದರೆ ಕೊರೊನಾ ಲಕ್ಷಣ ಕೂಡ ಕೆಮ್ಮು ಎನ್ನಲಾಗಿದ್ದು ಮನೆಯಲ್ಲೇ ಯಾರಾದರು ಕೆಮ್ಮಿದರೆ ಭಯ ಹುಟ್ಟುತ್ತೆ, ಅಂತಹ ಸ್ಥಿತಿಯನ್ನು ಈ ಕೆಮ್ಮು ತಂದಿದೆ, ಕೆಲವು ಸಮಯದಲ್ಲಿ ಕೆಮ್ಮು ಸಾಮಾನ್ಯವೆಂದು ಬಿಟ್ಟರೆ ಅದುವೇ ಕೊರೊನಾ ಆಗಿರಬಹುದು ಅದಕ್ಕಾಗಿ ಮೊದಲು ನಾವು ಎಚ್ಚರದಿಂದ ಇರುವುದು ಮುಖ್ಯವಾಗಿದೆ. ಆದರೆ ಕೆಲವೊಮ್ಮೆ ಇದು ಭಯಾನಕ ರೋಗದ ಲಕ್ಷಣವೂ ಆಗಿರಬಹುದು. ಇದೀಗ ಕೆಮ್ಮು ಬಂದ ತಕ್ಷಣ ಭಯ ಶುರುವಾಗುತ್ತದೆ. ಕೆಮ್ಮು, ಜ್ವರ ಕೊರೊನಾವೈರಸ್‌ ಸೋಂಕಿರುವ ಲಕ್ಷಣವಾಗಿದೆ. ಇನ್ನು ಕೆಮ್ಮು ಅಲರ್ಜಿಯ ಲಕ್ಷಣವಾಗಿದೆ, ಶ್ವಾಸಕೋಶದ ಕ್ಯಾನ್ಸರ್‌ನ ಲಕ್ಷಣವಾಗಿದೆ.

ದೀರ್ಘ ಕಾಲದಿಂದ ಮನುಷ್ಯನಲ್ಲಿ ಉಳಿದು ಆತನನ್ನು ದಿನೇ ದಿನೇ ಕುಗ್ಗಿಸುತ್ತಿದ್ದರೆ, ಅದು ಬೇರೆ ರೀತಿಯ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಕೆಮ್ಮಿನಲ್ಲಿ ಎರಡು ವಿಧಗಳಿವೆ. ಶೀತದ ಕೆಮ್ಮು ಮತ್ತು ಒಣ ಕೆಮ್ಮು. ಆದರೆ ಈಗ ಬಂದ ಕೆಮ್ಮು ಕೊರೊನಾ ಕೂಡ ಆಗಿರಬಹುದು ಎನ್ನಲಾಗಿದೆ. ಇದೀಗ ಕೆಮ್ಮು ಬಂದ ತಕ್ಷಣ ಭಯ ಶುರುವಾಗುತ್ತದೆ. ಅದಕ್ಕೆ ಕಾರಣ ಕೋವಿಡ್‌-19 ಆತಂಕ ಇದ್ದು, ಕೆಮ್ಮು, ಜ್ವರ ಕೊರೊನಾವೈರಸ್‌ ಸೋಂಕಿರುವ ಲಕ್ಷಣವಾಗಿದೆ. ಆದ್ದರಿಂದಾಗಿ ನಿಮಗೆ ಬಂದಿರುವ ಕೆಮ್ಮು ಯಾವುದು, ಇದು ಅಪಾಯಕಾರಿ ರೊಗದ ಲಕ್ಷಣವೇ ಎಂದು ಕಂಡು ಹಿಡಿಯುವುದಾದರೂ ಹೇಗೆ ಎನ್ನುವ ಪ್ರಶ್ನೆ ಹುಟ್ಟಿದರು ತಪ್ಪಿಲ್ಲ ಆದರೆ, ಅದೇ ವಾರಕ್ಕೆ ಮೇಲ್ಪಟ್ಟು ಕೆಮ್ಮಿನ ಸಮಸ್ಯೆ ಕಾಡುತ್ತಿದ್ದರೆ, ಕಫದಲ್ಲಿ ಬಣ್ಣದ ವ್ಯತ್ಯಾಸ ಗೋಚರಿಸಿದರೆ, ಕಫದಲ್ಲಿ ರಕ್ತ, ತಲೆಸುತ್ತು, ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡರೆ ವೈದ್ಯರನ್ನು ಕಾಣುವುದು ಒಳ್ಳೆಯದು. ಅದು ಕೊರೊನಾ ಎಂದು ಖಾತರಿಯಾಗಿ ಹೇಳಲು ಸಾಧ್ಯವಿಲ್ಲ ಆದರೆ ಮುನ್ನೆಚರಿಕೆ ವಹಿಸುವುದು ಬಹು ಮುಖ್ಯವಾಗಿದೆ. ಹಾಗಾದ್ರೆ ನಿಮಗೆ ಬಂದ ಕೆಮ್ಮು ಕೊರೊನಾ ಎಂದು ತಿಳಿಯುವುದು ಹೇಗೆ ಅಂತ ಇಲ್ಲಿದೆ ನೋಡಿ.

ಕೊರೊನಾ ಸಂಬಂಧಿಸಿದಂತೆ ಕೆಮ್ಮು ಕೋವಿಡ್‌-19 ರೋಗಿಗಳಲ್ಲಿ ಅತಿಯಾಗಿ ಕಂಡು ಬರುವ ಲಕ್ಷಣವೆಂದರೆ ಜ್ವರ ಹಾಗೂ ಕೆಮ್ಮು, ಅದರಲ್ಲೂ ಒಣಕೆಮ್ಮು, ಕೆಲವರಿಗೆ ಕಂಡು ಬರುವುದು, ಏಕೆಂದರೆ ಕೋವಿಡ್‌ 19 ರೋಗಿಗಳಲ್ಲಿ ಗಂಟಲಿನಲ್ಲಿ ಕೆರೆತ ಉಂಟಾಗುತ್ತದೆ ಹಾಗೂ ತುಂಬಾ ಕೆಮ್ಮು ಇರುತ್ತದೆ ಅಲ್ಲದೆ ಉಸಿರಾಡಲು ತೊಂದರೆ ಉಂಟಾಗುವುದು ಹಾಗೂ ಸ್ನಾಯುಗಳಲ್ಲಿ ನೋವು ಉಂಟಾಗುವುದು. ಅಷ್ಟೇ ಅಲ್ಲದೆ ಕಾಯಿಲೆ ಹೆಚ್ಚಾದಂತೆ ಶ್ವಾಸಕೋಶದಲ್ಲಿ ದ್ರವ ತುಂಬಿಕೊಳ್ಳುತ್ತದೆ, ಇದರಿಂದಾಗಿ ಉಸಿರಾಡಲು ತೊಂದರೆ ಉಂಟಾಗುವುದು ಹಾಗೂ ದೇಹಕ್ಕೆ ಅಗ್ಯತವಾದ ಆಮ್ಲಜನಕ ದೊರೆಯದೆ ತೊಂದರೆ ಉಂಟಾಗುವುದು.

ಕಫ ಇರುವ ಕೆಮ್ಮು ಇರುವವರಲ್ಲಿ ಉಬ್ಬಸ ತೊಂದರೆ ಕಾಣಿಸುವುದು ಹಾಗೂ ಕೆಮ್ಮಿದಾಗ ಬಾಯಲ್ಲಿ ಕಫ ಉಂಟಾಗುವುದು. ಅದೇ ಒಣ ಕೆಮ್ಮು ಉಂಟಾದಾಗ ಕಫ ಉಂಟಾಗುವುದಿಲ್ಲ, ಗಂಟಲಿನ ಒಳಗಿನಿಂದ ಉಂಟಾಗುವುದು ಹಾಗೂ ಕೆಮ್ಮಿದಾಗ ಹೆಚ್ಚು ಶಬ್ದ ಬರುವುದು. ಅಲ್ಲದೆ ಶ್ವಾಸಕೋಶದಲ್ಲಿ ಗಾಳಿ ಹೊರ ಹೋಗಲು ಅಡಚಣೆ ಉಂಟು ಮಾಡುವುದರಿಂದ ಆಗಾಗ ಕೆಮ್ಮು ಬರುವುದು. ಮೂಗು ಹಾಗೂ ಗಂಟಲಿನ ಸೋಂಕಿನಿಂದ ಉಂಟಾಗುವ ಕೆಮ್ಮಿನಲ್ಲಿ ಗಂಟಲಿನಲ್ಲಿ ಕೆರೆತ ಹಾಗೂ ಒಣಕೆಮ್ಮು ಉಂಟಾಗುವುದು. ಇಂಥ ಕೆಮ್ಮು ಶೀತ ಹಾಗೂ ಜ್ವರ ಬಂದಾಗ ಉಂಟಾಗುವುದು. ಕೆಲವೊಮ್ಮೆ ಮೊದಲಿಗೆ ಒಣಕೆಮ್ಮು ಬಂದು ನಂತರ ಕಫ ಬರಬಹುದು. ನಿಮ್ಮಲ್ಲಿ ಈ ಲಕ್ಷಣ ಕಂಡು ಬಂದರೆ ಕೂಡಲೇ ವ್ಯೆದ್ಯರನ್ನು ಸಂಪರ್ಕಿಸಿ ಇಲ್ಲದಿದ್ದರೆ ಕೊರೋನಾದಿಂದ ನೀವು ಮತ್ತೆ ನಿಮ್ಮ ಕುಟುಂಬಕ್ಕೂ ಅಪಾಯ ತಟ್ಟಬಹುದು ಎಚ್ಚರ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *