ಯಾವುದೇ ಒಂದು ಮನೆ ಆಗಲಿ ಅಥವಾ ಆಫೀಸ್ ಗಳಲ್ಲಿ ವಾಸ್ತು ದೋಷ ಅನ್ನೋದು ತುಂಬಾನೇ ಮುಖ್ಯ, ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವಾಸ್ತು ದೋಷದ ಬಗ್ಗೆ ಹೆಚ್ಚು ತಲೆಕೆಡಿಸ್ಕೊಳ್ಳುತ್ತಾರೆ ಆದ್ರೆ ಹಿಂದಿನ ಕಾಲದಲ್ಲಿ ಅಂದ್ರೆ ಪುರಾಣಗಳ ಕಾಲದಲ್ಲಿ ವಾಸ್ತು ದೋಷ ಹೋಗಲಾಡಿಸಲು ಎಲ್ಲ ಮನೆಯಲ್ಲಿ ಈ ಒಂದು ಗಿಡವನ್ನು ಬೆಳೆಸುತ್ತಿದ್ದರು ಆಗಿದ್ರೆ ಈ ಗಿಡ ಯಾವುದು ಅನ್ನೋದು ಇಲ್ಲಿದೆ ನೋಡಿ.
ಪುರಾಣಗಳ ಪ್ರಕಾರ, ತುಳಸಿ ಗಿಡದ ದರ್ಶನ ಹಾಗೂ ಸ್ಪರ್ಶದಿಂದಲೇ ಪಾಪಗಳು ಪರಿಹಾರವಾಗುತ್ತವೆ. ವಾಸ್ತುದೋಷ ಪರಿಹಾರಕ್ಕೂ ತುಳಸಿ ಗಿಡ ಬಳಕೆಯಾಗುತ್ತದೆ. ತುಳಸಿಯಲ್ಲಿ ಮೂರು ವಿಧಗಳಿವೆ. ಅವೆಂದರೆ ಕೃಷ್ಣ ತುಳಸಿ, ಶ್ರೀ ತುಳಸಿ ಮತ್ತು ಕಾಡು ತುಳಸಿ.
ವಾಸ್ತು ದೋಷ ನಿವಾರಣೆಗೆ : ಪ್ರತಿಯೊಬ್ಬರ ಮನೆಯಂಗಳದಲ್ಲಿ ಮೊದಲು ನಮಗೆ ಕಾಣುವುದು ತುಳಸಿ ಗಿಡ. ಪ್ರತಿ ದಿನ ತುಳಸಿಯ ದರ್ಶನ ಮಾಡುವುದರಿಂದ ಪಾಪ ಪರಿಹಾರವಾಗುತ್ತದೆ, ಸ್ಪರ್ಶಮಾತ್ರದಿಂದ ಪವಿತ್ರತೆ ಬರುತ್ತದೆ, ವಂದಿಸುವುದರಿಂದ ರೋಗ ಪರಿಹಾರವಾಗುತ್ತದೆ, ತುಳಸೀತೀರ್ಥ ಪ್ರೋಕ್ಷಣೆಯಿಂದ ಆಯುವೃದ್ಧಿಯಾಗುತ್ತದೆ, ಅಂದು ತುಳಸಿ ಸಸಿ ನೆಡುವುದರಿಂದ ಶ್ರೀಕೃಷ್ಣನ ಸನ್ನಿಧಿ ಲಭ್ಯವಾಗುತ್ತದೆ, ಕೃಷ್ಣ ತುಳಸಿ, ಶ್ರೀ ತುಳಸಿ ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವುದು ಸನಾತನರ ಅಭಿಪ್ರಾಯ. ಈ ಸಸ್ಯವು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಹೊರಸೂಸುವ ಕಾರಣ ಮನೆಯೊಳಗಿನ ದುಷ್ಟ ಶಕ್ತಿಗಳು ನಿವಾರಣೆಯಾಗುತ್ತವೆ. ಹಾಗಾಗಿ ಮನೆಯ ಮುಖ್ಯ ದ್ವಾರದ ಮುಂಬದಿಯಲ್ಲಿ ತುಳಸಿಗಿಡವನ್ನು ಹಾಕುವುದು ಒಳ್ಳೆಯದು.
ಮನಸ್ಸಿನ ಏಕಾಗ್ರತೆಗೆ ತುಳಸಿಮಣಿಯಿಂದ ಕೂಡಿರುವ ಜಪಮಾಲೆಯಿಂದ ಜಪ ಮಾಡಿ. ತುಳಸಿ ವೃಂದಾವನದ ಬದಿಯಲ್ಲಿ ಕುಳಿತು ಸಂಧ್ಯಾವಂದನೆ, ಧ್ಯಾನ ಮಾಡುವುದರಿಂದ ಮನಸ್ಸಿಗೂ ಮುದವಾಗುತ್ತದೆ. ದೇಹದ ಆರೋಗ್ಯಕ್ಕೂ ಪೂರಕವಾಗುತ್ತದೆ. ಏಕೆಂದರೆ ಪೂಜೆ, ಧ್ಯಾನಕ್ಕಾಗಿ ಬಳಸಲಾಗುವ ಈ ಸ್ಥಳದಲ್ಲಿ ಸಕಾರಾತ್ಮಕ ಇರುವುದರಿಂದ ವಾಸ್ತು ದೋಷ ನಿವಾರಣೆಗೆ ಪ್ರತಿನಿತ್ಯ ಒಂದು ಎಸಳಾದರೂ ತುಳಸಿ ದಳವನ್ನು ಸಾಲಿಗ್ರಾಮಕ್ಕೆ ಅರ್ಪಿಸುವುದು ಒಳ್ಳೆಯದು. ತುಳಸಿ ಮಾನವನ ಆರೋಗ್ಯಕ್ಕೆ ಸಹಕಾರಿಯಾಗುವುದರ ಜೊತೆ ಜೊತೆಗೆ ಕೋಮಲತೆ, ಪಾವಿತ್ರ್ಯದ ಉದಾತ್ತ ತತ್ವಗಳನ್ನು ಸಾರುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.