ಮೂಲವ್ಯಾಧಿಯಿಂದ ಬಹಳ ತೊಂದರೆ ಇದನ್ನು ಬರದಂತೆ ತಡೆಯಲು ಅಥವಾ ಬಂದರೂ ಹೇಗೆ ನಿವಾರಣೆ ಮಾಡಬೇಕು ಎಂಬುದಕ್ಕೆ ಕೆಲವು ಸೂಚನೆಗಳು. ಬೆಟ್ಟದ ನೆಲ್ಲಿಕಾಯಿ ಅಥವಾ ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ಸೇವಿಸುವುದರಿಂದ ಮೂಲವ್ಯಾಧಿಯಿಂದ ದೂರವಿರಬಹುದು.
ಒಂದು ಬಟ್ಟಲು ಮಜ್ಜಿಗೆಗೆ ಅಮೃತ ಬಳ್ಳಿಯ ರಸವನ್ನು ಸೇರಿಸಿ ಚೆನ್ನಾಗಿ ಕುಡಿಯಬೇಕು. ಮೂಲಂಗಿ ರಸವನ್ನು ಪ್ರತಿನಿತ್ಯ ಕುಡಿಯುವುದರಿಂದ ಮೂಲವ್ಯಾಧಿ ದೂರವಾಗುವುದು. ಮೂಲವ್ಯಾಧಿ ರೋಗದಿಂದ ನರಳುವವರು ಎರಡು ಚಮಚ ಎಳ್ಳನ್ನು ಕುಟ್ಟಿ ಒಂದು ಚಮಚ ಬೆಣ್ಣೆಯನ್ನು ಸೇರಿಸಿ ಖಾಲಿ ಹೊಟ್ಟೆಗೆ ಬೆಳಗಿನ ಸಮಯದಲ್ಲಿ ಸೇವಿಸಬೇಕು ಆಗ ಮೂಲವ್ಯಾಧಿ ದೂರವಾಗುವುದು.
ಎಳ್ಳನ್ನು ಬಿಸಿ ಮಾಡಿ ಗುಡದ್ವಾರಕ್ಕೆ ಬಟ್ಟೆಯ ಸಮೇತ ಕಟ್ಟಬೇಕು, ಅದೇ ಸಮಯದಲ್ಲಿ ಎಳ್ಳನ್ನು ತಿನ್ನುವುದರಿಂದ ಮೂಲವ್ಯಾಧಿ ನಿವಾರಣೆ ಆಗುವುದು ಎಳ್ಳಿನಲ್ಲಿರುವ ಜಿಯೋ ಶತ್ರುಗಳು ಮೂಲವ್ಯಾದಿಯನ್ನು ಗುಣಪಡಿಸುವುದು, ಎಳ್ಳು ನಿಮ್ಮ ಮನೆಯಲ್ಲಿಯೇ ವೈದ್ಯ ಇರುವಂತೆ ಮಾಡುವುದು. ಮೂಲವ್ಯಾಧಿಯಲ್ಲಿ ಬರುವ ಮೊಳಕೆಗಳಿಗೆ ನುಗ್ಗೆಸೊಪ್ಪಿನ ರಸ ಮತ್ತು ಸೊಪ್ಪನ್ನು ಕಟ್ಟುವುದರಿಂದ ಮೊಳಕೆಗಳು ದೂರವಾಗುವುದು. ಬಾಳೆಮರದ ಕಂಡಾದ ರಸವನ್ನು ಕುಡಿಯುವುದರಿಂದ ಮೂಲವ್ಯಾಧಿ ದೂರ ಮಾಡಬಹುದು.
ಹುಣಸೆ ಚಿಗುರಿನೊಂದಿಗೆ ಎಳೆ ಮಾವಿನಕಾಯಿಯನ್ನು ಸೇರಿಸಿ ಬೇಯಿಸಿ ಇದನ್ನು ಸೇವಿಸುವುದರಿಂದ ಉಷ್ಣ ಕಡಿಮೆಯಾಗಿ ಮೂಲವ್ಯಾಧಿ ದೂರವಾಗುವುದು. ಅನಾನಸ್ ರಸಕ್ಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಮೂಲವ್ಯಾದಿ ರೋಗ ನಿವಾರಣೆಯಾಗುವುದು.
ಸೌತೆಕಾಯಿಯನ್ನು ಯಾವಾಗಲೂ ತಿನ್ನುವುದರಿಂದ ಮೂಲವ್ಯಾದಿ ಶಮನವಾಗುವುದು. ಹಾಲಿಗೆ ನಿಂಬೆರಸವನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಮೂಲವ್ಯಾಧಿ ನಿವಾರಣೆ ಆಗುವುದು. ಪ್ರಾರ್ಥಮಿಕ ಹಂತದಲ್ಲಿರುವ ಮೂಲವ್ಯಾಧಿಯನ್ನು ಪ್ರತಿದಿನ ಈರುಳ್ಳಿ ರಸಕ್ಕೆ ಕಲ್ಲುಸಕ್ಕರೆ ಸೇರಿಸಿ ಕುಡಿಯುವುದರ ಮೂಲಕ ಶಮಾನಗೊಳಿಸಬಹುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.