ಕೆಲವರಿಗೆ ಊಟದ ಜತೆಗೆ, ಇನ್ನು ಕೆಲವರಿಗೆ ಊಟವಾದ ತಕ್ಷಣವೇ ನೀರು ಕುಡಿಯುವ ಅಭ್ಯಾಸವಿರುತ್ತದೆ. ಈ ವಿಚಾರದಲ್ಲಿ ಒಬ್ಬೊಬ್ಬರದ್ದು ಒಂದೊಂದು ವಾದ. ಅಸಲಿಗೆ ಯಾವಾಗ ನೀರು ಕುಡಿಯಬೇಕೆಂಬುದೇ ಗೊಂದಲ. ಹಾಗೆ ನೋಡಿದರೆ ಊಟ ಮಾಡುವ ಸೆಕೆಂಡುಗಳ ಮೊದಲು ನೀರು ಕುಡಿಯುವುದೂ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಇದರಿಂದ ನಮ್ಮ ಜೀರ್ಣಕ್ರಿಯೆ ನಿಗದಿತ ಸಮಯಕ್ಕಿಂತ ಬೇಗನೇ ಆಗುತ್ತದೆ. ಇದರಿಂದ ಅಸಿಡಿಟಿ ಸಾಧ್ಯತೆ ಹೆಚ್ಚುತ್ತದೆ ಎಂದು ತಜ್ಞರು ಹೇಳುತ್ತಾರೆ.
ಅದೇ ರೀತಿ ಊಟದ ಜತೆಗೆ ನೀರು ಸೇವಿಸುವುದರಿಂದಲೂ ಅದು ಜೊಲ್ಲು ರಸ ಬಿಡುಗಡೆ ಅಡ್ಡಿ ಮಾಡುವುದರಿಂದ ಜೀರ್ಣಕ್ರಿಯೆ ಕಷ್ಟವಾಗುತ್ತದೆ. ಹಾಗಂತ ಊಟದ ತಟ್ಟೆ ಖಾಲಿ ಮಾಡಿದ ತಕ್ಷಣ ನೀರು ಸೇವಿಸುವುದರಿಂದಲೂ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದಂತೆ.
ಹಾಗಿದ್ದರೆ ನೀರು ಯಾವಾಗ ಕುಡಿಯಬೇಕು ಎಂಬ ಗೊಂದಲವೇ? ಊಟವಾದ ಮೇಲೆ ಮೊದಲ ಹಂತದ ಜೀರ್ಣಕ್ರಿಯೆ ಮುಗಿಯಲು 30 ನಿಮಿಷ ಬೇಕಂತೆ. ಇದಾದ ಮೇಲೆ ನೀರು ಕುಡಿದರೆ ಉತ್ತಮ. ಜೀರ್ಣಕ್ರಿಯೆಗೂ ಯಾವುದೇ ಸಮಸ್ಯೆಯಿಲ್ಲ ಎನ್ನುವುದು ತಜ್ಞರ ಅಭಿಮತ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.