ಉಸಿರಾಟ ಸಮಸ್ಯೆ ಸಕ್ಕರೆ ಕಾಯಿಲೆ ಹಾಗು ಹಲವು ದೊಡ್ಡ ರೋಗಗಳಿಗೂ ರಾಮಬಾಣ ಜೀರಿಗೆ ನೀರು

ಆರೋಗ್ಯ

ನೀರು ಹೆಚ್ಚು ಹೆಚ್ಚು ಕುಡಿದಷ್ಟು ಆರೋಗ್ಯ ಉತ್ತಮವಾಗುತ್ತ ಸಾಗುತ್ತದೆ. ಬೇಸಿಗೆಕಾಲದಲ್ಲಿ ನಮ್ಮನ್ನು ನಾವು ಹೈಡ್ರೈಟ್‌ ಆಗಿರಿಸಲು ನೀರು ಕುಡಿಯುವುದು ತುಂಬಾನೆ ಮುಖ್ಯ ಅನ್ನೋದನ್ನು ನಾವು ಬಾಲ್ಯದಿಂದಲೂ ಕೇಳಿಕೊಂಡು ಬಂದಿರುತ್ತೇವೆ. ಈ ಸಮಯದಲ್ಲಿ ನೀವು ಸಾಫ್ಟ್‌ ಡ್ರಿಂಕ್‌, ಜ್ಯೂಸ್‌, ಕೋಲ್ಡ್‌ ಡ್ರಿಂಕ್‌ ಪದೆ ಪದೆ ಸೇವಿಸೋದಕ್ಕಿಂತ ಶುದ್ಧ ನೀರನ್ನು ಸೇವಿಸೋದು ಉತ್ತಮ. ಅದರಲ್ಲೂ ಒಂದು ಗ್ಲಾಸ್ ಜೀರಿಗೆ ನೀರಿನಿಂದ ನಿಮ್ಮ ದಿನವನ್ನು ಪ್ರಾರಂಭ ಮಾಡಿದರೆ ಆರೋಗ್ಯಕರ ಜೀವನಶೈಲಿ ನಿಮ್ಮದಾಗುತ್ತದೆ.

ಜೀರಿಗೆ ನೀರನ್ನು ತಯಾರಿಸಬೇಕೆಂದರೆ ನೀವು ಮಾಡಬೇಕಾಗಿದ್ದಿಷ್ಟೇ! ಸ್ವಲ್ಪ ಜೀರಿಗೆ ಕಾಳುಗಳನ್ನು ನೀರಿನಲ್ಲಿ ಬೇಯಿಸಿಕೊಳ್ಳಿ, ತಣ್ಣಗಾದ ನಂತರ ಖಾಲಿ ಹೊಟ್ಟೆಯಲ್ಲಿ ಸೇವಿಸಿ.ಜೀರಿಗೆ ನೀರು ನಮ್ಮ ದೇಹದಲ್ಲಿ ಉಂಟಾಗುವ ಬಹುತೇಕ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುತ್ತದೆ.ಇದನ್ನು ಪ್ರತಿದಿನ ಕುಡಿಯುವುದು ಅತೀ ಅಗತ್ಯ.

ಉದರಕ್ಕೆ ಉತ್ತಮ: ಜೀರಿಗೆ ನೀರು ಹೊಟ್ಟೆ ಉಬ್ಬರ ಮತ್ತು ಎದೆಯುರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅಜೀರ್ಣದಿಂದ ಮುಕ್ತಿ ನೀಡುತ್ತದೆ. ಇದು ಒಂದು ನೋವು ನಿರೋಧಕವಾಗಿ ಕೆಲಸ ಮಾಡುತ್ತದೆ, ವಿಶೇಷವಾಗಿ

ಗರ್ಭಿಣಿಯರಲ್ಲಿ ಜೀರ್ಣಕ್ರೀಯೆಗೆ ಸಹಕಾರಿ: ಜೀರಿಗೆ ನೀರು ಗರ್ಭಿಣಿಯರಲ್ಲಿ ಜೀರ್ಣಕ್ರೀಯೆಯನ್ನು ಉತ್ತಮಗೊಳಿಸುತ್ತದೆ.ಇದು ಕಾರಬೋಹೈಡ್ರೇಟ್ಸ್ ಮತ್ತು ಕೊಬ್ಬನ್ನು ಜೀರ್ಣಗೊಳಿಸುವ ಕಿಣ್ವಗಳನ್ನು ಉತ್ತೇಜನಗೊಳಿಸುತ್ತದೆ.

ಇಮ್ಮ್ಯುನಿಟಿ ಹೆಚ್ಚಿಸುತ್ತದೆ: ಜೀರಿಗೆ ಅತೀ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಂಶವನ್ನು ಹೊಂದಿದೆ. ನಿಮ್ಮ ಇಮ್ಮ್ಯುನಿಟ್ ಸಿಸ್ಟೆಮ್ ಸರಿಯಾದ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕಾದರೆ ಜೀರಿಗೆ ನೀರನ್ನು ಕುಡಿಯುವುದು ಅತೀ ಅಗತ್ಯ. ಇದು ರೋಗಾಣುಗಳ ವಿರುದ್ಧ ಹೋರಾಡಿ ಅನಾರೋಗ್ಯವನ್ನು ತಪ್ಪಿಸುತ್ತದೆ.

ಮಧುಮೇಹದ ವಿರುದ್ಧ ಹೋರಾಡುತ್ತದೆ: ಜೀರಿಗೆ ನೀರು ಮಧುಮೇಹಿಗಳಿಗೆ ಬಹಳ ಒಳ್ಳೆಯದು.ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.

ಹಾಲುಣಿಸುವ ತಾಯಂದಿರಲ್ಲಿ ಎದೆಹಾಲನ್ನು ಹೆಚ್ಚಿಸುತ್ತದೆ: ಜೀರಿಗೆ ನೀರು ಹಾಲುಣಿಸುವ ತಾಯಂದಿರಲ್ಲಿ ಸ್ತನಗಳ ಗ್ರಂಥಿಯಿಂದ ಹಾಲು ಸ್ರವಿಕೆಯಾಗುವುದನ್ನು ಉದ್ದೀಪನಗೊಳಿಸುತ್ತದೆ. ಇದರಿಂದ ತಾಯಂದಿರಲ್ಲಿ ಎದೆಹಾಲು ಹೆಚ್ಚಾಗುತ್ತದೆ.

ಉಸಿರಾಟ ವ್ಯವಸ್ಥೆಯನ್ನು ಸಮತೋಲನದಲ್ಲಿ ಇಡುತ್ತದೆ: ಜೀರಿಗೆ ನೀರು ನಿಮ್ಮ ಉಸಿರಾಟದ ಕ್ರೀಯೆಯನ್ನು ವ್ಯವಸ್ಥಿತವಾಗಿಡಲು ಸಹಾಯಕಾರಿ. ಇದರಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಲಕ್ಷಣಗಳಿದ್ದು, ಎದೆಯಲ್ಲಿ ಹೆಪ್ಪುಗಟ್ಟುವ ಕಫವನ್ನು ಕೂಡ ತಡೆಗಟ್ಟುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಜೀರಿಗೆ ನೀರಿನಲ್ಲಿ ಪೊಟಾಶಿಯಮ್ ಪ್ರಮಾಣ ಹೆಚ್ಚಾಗಿದೆ. ಪೊಟಾಶಿಯಮ್ ದೇಹದ ಕಾರ್ಯನಿರ್ವಹಣೆಗೆ ಅತ್ಯಂತ ಅಗತ್ಯವಾದ ಖನಿಜಾಂಶವಾಗಿದೆ. ಇದು ನಮ್ಮ ದೇಹಕ್ಕೆ ಸೇರುವ ಉಪ್ಪಿನ ಋಣಾತ್ಮಕ ಕ್ರೀಯೆಯನ್ನು ಕಡಿಮೆ ಮಾಡಿ ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ.

ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ: ನಿಮ್ಮ ಚಯಾಪಚಯ ಕ್ರೀಯೆಯು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದಲ್ಲಿ ಅಥವಾ ನಿಷ್ಕ್ರೀಯಗೊಂಡಿದ್ದಲ್ಲಿ ಜೀರಿಗೆ ನೀರನ್ನು ಕುಡಿಯಿರಿ. ಇದು ನಿಮ್ಮ ದೇಹದ ಶಕ್ತಿಯನ್ನು ಉದ್ದೀಪನಗೊಳಿಸಿ ನಿಮ್ಮನ್ನು ಆರೋಗ್ಯವಾಗಿಡುತ್ತದೆ.

ಯಕೃತ್ತ್ ಗೆ ಉತ್ತಮ: ಜೀರಿಗೆ ನೀರು ದೇಹದಲ್ಲಿರುವ ವಿಷದ ಅಂಶಗಳನ್ನುಹೊರಹಾಕಿ ಪಿತ್ತರಸದ ಉತ್ಪತ್ತಿಯನ್ನು ಸುಗಮಗೊಳಿಸುತ್ತದೆ. ಆದುದರಿಂದ ಇದು ಯಕೃತ್ತ್ ಆರೋಗ್ಯಕ್ಕೆ ಅತ್ಯುತ್ತಮ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *