ಸಾಮಾನ್ಯವಾಗಿ ಈ ಮಂಡಿ ನೋವು ಸಮಸ್ಯೆ 40 ರಿಂದ 50 ವರ್ಷ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಕಾಡುವುದುಂಟು. ಮಂಡಿ ನೋವಿಗೆ ಮಾರುಕಟ್ಟೆಗಳಲ್ಲಿ ಹಲವು ರೀತಿಯಲ್ಲಿ ಔಷಧಿ ಸಿಗುತ್ತದೆ, ಆದರೆ ಅವುಗಳಿಗಿಂತ ಗಿಡಮೂಲಿಕೆಯಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲದೆ ನೋವು ನಿವಾರಣೆಯನ್ನು ಮಾಡಿಕೊಳ್ಳಬಹುದು. ನಾವು ನಿಮಗೆ ತಿಳಿಸುವ ಮನೆ ಮದ್ದನು ಬಳಸಿ ನೋಡಿ ಸುಲಭ ಹಾಗು ಸರಳವಾಗಿ ನೋವು ನಿವಾರಣೆಯನ್ನು ಮಾಡಿ ಕೊಳ್ಳಬಹುದು.
ಮಂಡಿ ನೋವಿಗೆ ಅರಿಶಿನ ಮದ್ದು: ಕೊಂಚ ಅರಿಶಿನವನ್ನು ನೀರಿನೊಂದಿಗೆ ಬೆರೆಸಿ ಲೇಪನ ತಯಾರಿಸಿ ನೋವಿದ್ದ ಕಡೆ ದಿನಕ್ಕೆರಡು ಬಾರಿ ಕೊಂಚವೇ ಮಸಾಜ್ ನೊಂದಿಗೆ ಹಚ್ಚಿ ಒಣಗಲು ಬಿಡಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡರೆ ಶೀಘ್ರವೇ ನೋವು ಕಡಿಮೆಯಾಗುತ್ತದೆ.
ತೆಂಗಿನ ಎಣ್ಣೆ: ಸ್ವಲ್ಪ ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಬಿಸಿ ಮಾಡಿದ ಎಣ್ಣೆಯನ್ನು ನೋವಿರುವ ಜಾಗಕ್ಕೆ 10-15 ನಿಮಿಷಗಳಿಗೆ ಹಚ್ಚಿ ಹಾಗೂ ವೃತ್ತಾಕಾರವಾಗಿ ಮಸಾಜ್ ಮಾಡಿ. ಎಣ್ಣೆ ಮಸಾಜ್ ನೋವಿನಿಂದ ತ್ವರಿತ ಆರಾಮವನ್ನು ನೀಡುತ್ತದೆ.
ಅಡುಗೆ ಮನೆಯಲ್ಲಿ ಬಳಸುವ ಓಮ್ ಕಾಳು: ಕೊಂಚ ಓಂ ಕಾಳುಗಳನ್ನು ನೀರಿನೊಂದಿಗೆ ಬೆರೆಸಿ ಕಲ್ಲಿನಲ್ಲಿ ಅರೆದು (ಮಿಕ್ಸಿಯಲ್ಲಿ ಅರೆಯಬಾರದು, ಬಿಸಿಗೆ ಸುಟ್ಟುಹೋಗುತ್ತದೆ) ಈ ಲೇಪನವನ್ನು ನೋವಿದ್ದ ಮಂಡಿಗಳ ಮೇಲೆ ಹಚ್ಚಿದರೆ ಶೀಘ್ರವಾಗಿ ಗುಣವಾಗುತ್ತದೆ.
ಕರ್ಪೂರದ ಎಣ್ಣೆ :ಬಹಳ ಒಳ್ಳೆಯದು ನೋವಿರುವ ಭಾಗಕ್ಕೆ ಕರ್ಪೂರದ ಎಣ್ಣೆ ಹಚ್ಚುವ ಮೂಲಕ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಸೆಳೆತ ಮತ್ತು ಒತ್ತಡವನ್ನು ನಿವಾರಿಸಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ಒಂದು ಕಪ್ ಕೊಬ್ಬರಿ ಎಣ್ಣೆಯನ್ನು ಕೊಂಚವೇ ಬಿಸಿ ಮಾಡಿ, ಅಂದರೆ ಬರೆ ಕರಗಿದರೆ ಸಾಕು, ಕುದಿ ಬರಬಾರದು.
ಇದಕ್ಕೆ ಒಂದು ಚಿಕ್ಕ ಚಮಚ ಪುಡಿಮಾಡಿದ ಕರ್ಪೂರದ ಬಿಲ್ಲೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ತಣಿಯಲು ಬಿಟ್ಟು ಒಂದು ಚಿಕ್ಕ ಡಬ್ಬಿಯಲ್ಲಿ ಸಂಗ್ರಹಿಸಿ. ಮಂಡಿನೋವಿದ್ದರೆ ದಿನಕ್ಕೆರಡು ಬಾರಿ ಕೊಂಚ ಪ್ರಮಾಣವನ್ನು ನೋವಿರುವಲ್ಲಿ ಕೊಂಚ ಮಸಾಜ್ ಮೂಲಕ ಹಚ್ಚ ನೋವು ಬೇಗನೆ ಕಡಿಮೆಯಾಗುವುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.