ಗ್ಯಾಸ್ಟ್ರಿಕ್ ಹುಳಿತೇಗು ಸೇರಿದಂತೆ ಹೊಟ್ಟೆಯ ಭಾದೆಗಳಿಗೆ ಮನೆಯಲ್ಲಿ ಇದೆ ಶಕ್ತಿಶಾಲಿ ಮನೆಮದ್ದು

ಆರೋಗ್ಯ

ನಮ್ಮ ಜೀವನ ಶೈಲಿ ಹಾಗೂ ಆಹಾರದ ಪದ್ಧತಿಯಿಂದಾಗಿ ಚಿಕ್ಕ ಅಥವಾ ದೊಡ್ಡ ರೀತಿಯ ಕಾಯಿಲೆಗಳು ಯಾವಾಗಲೂ ನಮ್ಮ ಸುತ್ತಲೇ ಸುತ್ತುತಿರುತ್ತವೆ. ಸೂಕ್ತ ರೀತಿಯಲ್ಲದ ಆಹಾರ ಪದ್ದತಿಯಿಂದಾಗಿ ಅಸಿಡಿಟಿಯಂತಹ ಸಮಸ್ಯೆಗಳು ಎಲ್ಲಾ ವಯೋಮಾನದ ಜನರನ್ನು ಕಾಡುವುದನ್ನು ನೋಡುತ್ತಿದ್ದೇವೆ.

ಇಂದಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಎಂಬುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಕೆಲವೊಮ್ಮೆ ಗ್ಯಾಸ್ಟ್ರೀಕ್ ಹೆಚ್ಚಾದಾಗ ಲಘು ಹೃದಯಾಘಾತ ಎಂಬುದಾಗಿ ತಪ್ಪಾಗಿ ಭಾವಿಸುಬಿಡುತ್ತೇವೆ. ಈ ಲೇಖನದ ಮೂಲಕ ನಾವು ಗ್ಯಾಸ್ಟ್ರಿಕ್, ಹುಳಿತೇಗು, ಎದೆಯುರಿ, ಅತಿಯಾದ ಗ್ಯಾಸ್ ಸಮಸ್ಯೆ ಇದ್ದರೆ ಈ ಒಂದು ಪದಾರ್ಥವನ್ನು ಬಳಸಿಕೊಂಡು ಈ ಎಲ್ಲಾ ಸಮಸ್ಯೆಗಳನ್ನೂ ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಎನ್ನುವುದನ್ನು ನೋಡೋಣ.

ದೈನಂದಿನ ಜೀವನದಲ್ಲಿ ನಾವು ತಿನ್ನುವ ಕೇಲವು ಆಹಾರಗಳು ಅತೀ ಹೆಚ್ಚು ಅನಾರೋಗ್ಯಕರ ಮತ್ತು ನಮ್ಮ ಹೊಟ್ಟೆಯ ಆರೋಗ್ಯವನ್ನು ಬಹಳ ಬೇಗನೆ ಹಾಳು ಮಾಡುತ್ತವೆ. ಈ ಗ್ಯಾಸ್ಟ್ರಿಕ್‌ ನಿಂದ ಹೊಟ್ಟೆ ತುಂಬಾ ಗಾಳಿ ತುಂಬಿಕೊಂಡು ಯಾವ ಆಹಾರವನ್ನು ಸೇವಿಸಕಾಗದ ರೀತಿ ಆಗುತ್ತದೆ ಮತ್ತು ಹುಳಿತೇಗು ಬಂದು ಹಾಸ್ಯಕ್ಕೆ ಗುರಿಯಾಗುವ ಪ್ರಸಂಗಗಳು ಬರುತ್ತವೆ. ಇದರಿಂದ ಅಜೀರ್ಣತೆ, ವಾಂತಿ, ಸುಸ್ತು ಭೇದಿ ಹೀಗೆ ಹಲವಾರು ರೋಗಗಳೂ ಸಹ ಬರುವಂತೆ ಮಾಡುತ್ತದೆ.

ಇಂತಹ ಗ್ಯಾಸ್ಟ್ರಿಕ್‌ ನಿಂದ ಮುಕ್ತಿ ಹೊಂದಬೇಕಾದರೆ ನಾವು ಇಲ್ಲಿ ತಿಳಿಸುವ ಈ ಮದ್ದನ್ನು ತಯಾರಿಸಿ ಸೇವಿಸಿದರೆ ನಿಮಗೆ ಇರುವಂತಹ ಅಜೀರ್ಣತೆ ಸಮಸ್ಯೆ, ಗ್ಯಾಸ್ಟ್ರಿಕ್‌ ಸಮಸ್ಯೆ, ಹುಳಿತೇಗು ಸಮಸ್ಯೆ ಹಾಗೂ ಮಲಬದ್ಧತೆ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಇನ್ನು ನೀವೇನಾದರೂ ಹೊರಗಡೆ ಊಟ ಮಾಡುವುದು ಜಾಸ್ತಿ ಇದ್ದರೆ ಅವರಿಗೂ ಸಹ ಇದರಿಂದ ಸಹಾಯವಾಗುತ್ತದೆ.

ಹೋಟೆಲ್ ಗಳಲ್ಲಿ ರುಚಿ ಹೆಚ್ಚಿಸಲು ಅಡುಗೆಗಳಿಗೆ ಸೋಡಾ, ಪುಡ್ ಕಲರ್ ಹಾಗೂ ಹಲವಾರು ಸಾಸ್ ಗಳನ್ನು ಬಳಸುತ್ತಾರೆ ಇದರಿಂದ ಆಹಾರದ ರುಚಿ ಹೆಚ್ಚುತ್ತದೆ ಆದರೆ ಅದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಸಾಧ್ಯವಾದಷ್ಟು ಮನೆ ಆಹಾರವನ್ನು ಬಳಸಿ. ಈ ಗ್ಯಾಸ್ಟ್ರಿಕ್‌ ಸಮಸ್ಯೆ ಯನ್ನು ಜೀವನದಲ್ಲಿ ಮತ್ತೆ ಬರದ ಹಾಗೆ ಮಾಡುವ ಈ ಮದ್ದಿಗೆ ಬೇಕಾಗಿರುವ ವಸ್ತುಗಳು ಈ ರೀತಿಯಾಗಿವೆ. ವೀಳ್ಯದೆಲೆ, ಇಂಗುಪುಡಿ, ಮತ್ತು ಜೇನುತುಪ್ಪ.

ವೀಳ್ಯದೆಲೆಯನ್ನು ದಕ್ಷಿಣ ಭಾರತೀಯರು ತುಂಬಾ ಪೂಜನೀಯವೆಂದು ಪರಿಗಣಿಸುತ್ತಾರೆ. ಪ್ರತಿಯೊಂದು ಪೂಜೆ ಹಾಗೂ ದೇವರ ಕಾರ್ಯಕ್ರಮಗಳಿಗೆ ವೀಳ್ಯದೆಲೆ ಹಾಗೂ ಅಡಕೆ ಬಳಕೆ ಮಾಡುತ್ತಾರೆ. ನಮ್ಮ ಹಿರಿಯರು ಪ್ರತಿನಿತ್ಯವು ಊಟವಾದ ಬಳಿಕ ಎಲೆ ಅಡಕೆ ಜಗಿಯುತ್ತಿದ್ದರು. ಇದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎನ್ನುವ ನಂಬಿಕೆ. ವೀಳ್ಯದೆಲೆ ಜಗಿಯುವುದು ಇಂದಿನ ದಿನಗಳಲ್ಲಿ ತುಂಬಾ ಅಸಹ್ಯವೆಂದು ಪರಿಗಣಿಸಲಾಗಿದೆ. ಆದರೆ ತಂಬಾಕು ರಹಿತ ವಾಗಿರುವಂತಹ ವೀಳ್ಯದೆಲೆಯು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಮೊದಲಿನಿಂದಲೂ ಆಯುರ್ವೇದ ವೈದ್ಯಕೀಯ ವಿಧಾನಗಳಲ್ಲಿ ವೀಳ್ಯದೆಲೆಯನ್ನು ಔಷಧಿಯಾಗಿ ಬಳಸಲಾಗುತ್ತಿದೆ. ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ಕ್ಯಾನ್ಸರ್, ಮಧುಮೇಹ ಮತ್ತು ಹಲ್ಲಿನ ಸೋಂಕನ್ನು ನಿವಾರಣೆ ಮಾಡುತ್ತದೆ ಎಂದು ಸಹ ಪರಿಗಣಿಸಲಾಗಿದೆ. ಈ ಲೇಖನದಲ್ಲಿ ನಾವು ವೀಳ್ಯದೆಲೆಯನ್ನು ಬಳಸಿಕೊಂಡು ನಾವು ಮೇಲೆ ಹೇಳಿದಂತಹ ಗ್ಯಾಸ್ಟ್ರಿಕ್, ಆಸಿಡಿಟಿ ಮುಂತಾದ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎನ್ನುವುದನ್ನು ನೋಡೋಣ.

ಸ್ವಲ್ಪ ಎಳೆಯಾಗಿ ಇರುವ ವೀಳ್ಯದೆಲೆಯನ್ನು ತರಬೇಕು ಇದರಿಂದ ನಿಮಗೆ ಹೆಚ್ಚಿನ ಲಾಭಾಗಳಿವೆ. ಇದು ತಿಂದ ಆಹಾರವನ್ನು ಜೀರ್ಣಿಸಲು ಬಹಳ ಉಪಯೋಗಕಾರಿ, ಇದರಲ್ಲಿರುವ ಅಂಶಗಳು ಗ್ಯಾಸ್ಟ್ರಿಕ್‌ ಮಲಬದ್ಧತೆ ಅಂತ ಸಮಸ್ಯೆ ಬರದಂತೆ ತಡೆಯುತ್ತದೆ. ಇಂಗು ಇನ್ನು ಇದನ್ನು ಎಲ್ಲರ ಮನೆಯಲ್ಲಿ ಒಗ್ಗರಣೆ ಗೆ ಬಳಕೆ ಮಾಡುತ್ತಾರೆ, ಇದರಲ್ಲಿ ಅತ್ಯಂತ ಹೇರಳವಾಗಿ ಜೀರ್ಣ ಕ್ರಿಯೆಗೆ ಬೇಕಾಗಿರುವ ಅಂಶಗಳನ್ನು ಹೊಂದಿದೆ. ಜೇನುತುಪ್ಪ ಇದು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡಿ ಉಬ್ಬಿದ ಹೊಟ್ಟೆಯನ್ನು ಕಡಿಮೆ ಮಾಡುತ್ತದೆ. ಕೂದಲು ಮತ್ತು ಚರ್ಮಕ್ಕೆ ಜೇನುತುಪ್ಪ ಒಳ್ಳೆಯದು.

ಇನ್ನು ಇದನ್ನು ಮಾಡುವ ವಿಧಾನ ಸರಳವಾಗಿದೆ ಮೊದಲಿಗೆ ವೀಳ್ಯದೆಲೆ ತೆಗೆದುಕೊಂಡು ಅದರ ಮೇಲೆ ಕಾಲು ಚಮಚ ಇಂಗು ಪುಡಿ ಹಾಕಿ ನಂತರ ಒಂದು ಚಮಚ ಜೇನುತುಪ್ಪ ಬೆರೆಸಿ ಚನ್ನಾಗಿ ಎಲೆಯ ಮೇಲೆ ಹರಡಿ ಅದನ್ನು ಸೇವಿಸಬೆಕು. ಇದನ್ನು ಯಾರು ಬೇಕಾದರೂ ಸೇವಿಸಬಹುದು ಯಾವುದೇ ಅಡ್ಡಪರಿಣಾಮಗಳಿಲ್ಲ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *