ಅರ್ಧ ಸ್ಪೂನ್ ಸಾಕು ಯಾವಗಲೂ ಎನರ್ಜಿಯಿಂದ ಇರಲು ಮೂಳೆಗಳು ಗಟ್ಟಿಯಾಗಲು, ಶುಗರ್,ಕೊಲೆಸ್ಟ್ರಾಲ್, ಮಾನಸಿಕ ಒತ್ತಡ ಕಡಿಮೆಯಾಗಲಿದೆ

ಆರೋಗ್ಯ

ಅಶ್ವಗಂಧ: ಅಶ್ವಗಂಧ ದ ಬಗ್ಗೆ ಬಹುತೇಕರಿಗೆ ತಿಳಿದಿದೆ ಆದರೆ ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದು ತಿಳಿದಿಲ್ಲ ಹಾಗಾಗಿ ಇಂದಿನ ನಮ್ಮ ಲೇಖನದಲ್ಲಿ ಅಶ್ವಗಂಧದ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ. ಪ್ರಾಚೀನ ಕಾಲದಿಂದಲೂ ಅಶ್ವಗಂಧಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಇದು ಹಲವಾರು ಆಂತರಿಕ ಮತ್ತು ಬಾಹ್ಯ ಕಾಯಿಲೆಗಳನ್ನು ಗುಣಪಡಿಸಬಲ್ಲದು.

ಸಾಮಾನ್ಯವಾಗಿ ಅಶ್ವಗಂಧ ಲೈಂ-ಗಿಕ ಆಸಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವ ಬಗ್ಗೆ ಅನೇಕರಿಗೆ ತಿಳಿದಿದೆ ಆದರೆ ಅದನ್ನು ಹೊರತುಪಡಿಸಿ ನಮ್ಮ ಇಡೀ ದೇಹವನ್ನು ಉತ್ಸಾಹದಿಂದ ಇರುವಂತೆ ಮಾಡಲು ಇದು ಒಂದು ಬಹಳ ಪರಿಣಾಮಕಾರಿ ಔಷಧವಾಗಿ ಕೆಲಸ ಮಾಡುತ್ತದೆ.

ಕೆಲವರಿಗೆ ಮಾನಸಿಕ ಒತ್ತಡದಿಂದ ದೈಹಿಕ ನಿಶ್ಯಕ್ತಿ ಕಾಡುತ್ತದೆ ಅಂಥವರ ದೇಹಕ್ಕೆ ಅಶ್ವಗಂಧ ಪುನರ್ ಶಕ್ತಿ ನೀಡಿ ಉಲ್ಲಾಸದಿಂದ ಇರುವಂತೆ ಮಾಡುತ್ತದೆ. ಅಶ್ವಗಂಧವನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಅಂದರೆ ದೇಹದಲ್ಲಿ ಕ್ಯಾನ್ಸರ್ ಉತ್ಪತ್ತಿ ಮಾಡುವ ಸೆಲ್ಸ್ ಗಳನ್ನು ಸಾಯಿಸುತ್ತದೆ. ಅತಿಯಾದ ಒತ್ತಡದ ಜೀವನ ಶೈಲಿಯಿಂದ ಮನಸ್ಸಿನ ನೆಮ್ಮದಿ ಹಾಳಾಗಿದ್ದರೆ ಅಶ್ವಗಂಧವನ್ನು ಪ್ರತಿದಿನ 2 ಬಾರಿ ಸೇವಿಸಿದರೆ ಸಾಕು ಮನಸ್ಸು ಶಾಂತಗೊಳ್ಳುತ್ತದೆ. ಕೈಕಾಲು ನೋವನ್ನು ನಿವಾರಿಸಿ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ನಿಶ್ಯಕ್ತಿ ಹಾಗೂ ನರಗಳಿಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನು ಅಶ್ವಗಂಧ ದೂರಮಾಡುತ್ತದೆ.

ಅಶ್ವಗಂಧದ ಪುಡಿಯನ್ನು ಸೇವಿಸುವ ವಿಧಾನ: ಪ್ರತಿದಿನ ಬೆಳಿಗ್ಗೆ ಅರ್ಧ ಚಮಚ ಮತ್ತು ಸಂಜೆ ಅರ್ಧ ಚಮಚ ನೀರಿನಲ್ಲಿ ಅಥವಾ ಹಾಲಿನಲ್ಲಿ ಬೆರೆಸಿಕೊಂಡು ಕುಡಿಯಬಹುದು. ಇದರಿಂದ ಮೂಳೆಗಳು ಬಲಿಷ್ಠಗೊಳ್ಳುತ್ತವೆ, ಮೈಕೈನೋವು, ನಿಶ್ಶಕ್ತಿ ದೂರವಾಗುತ್ತದೆ. ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಹೊರಬರಬಹುದು. ಧನ್ಯವಾದಗಳು.
#Nk

Leave a Reply

Your email address will not be published. Required fields are marked *