ನಮಸ್ತೆ ಪ್ರಿಯ ಓದುಗರೇ, ಸುಂದರವಾಗಿ ಕಾಣಲು ನಾವು ಮುಖಕ್ಕೆ ಎಷ್ಟೊಂದು ಅಲಂಕಾರವನ್ನು ಮಾಡುತ್ತೇವೆ ಅಲ್ವಾ ಮಿತ್ರರೇ. ನಾವು ಚೆನ್ನಾಗಿ ಕಾಣಬೇಕು ಅಂದ್ರೆ ನಮ್ಮ ದೇಹದ ಪ್ರತಿಯೊಂದು ಭಾಗವೂ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅದರಲ್ಲಿ ಮುಖ್ಯವಾಗಿ ಕೂದಲು. ಹೆಣ್ಣಿಗೆ ಕೇಶರಾಶಿ ಇದ್ದರೆ ಎಷ್ಟೊಂದು ಸುಂದರವಾಗಿ ಕಾಣುತ್ತಾಳೆ. ಅದೇ ತಲೆಯ ತುಂಬಾ ಕೂದಲು ಇಲ್ಲದೆ ಇದ್ದರೆ ಮೈ ಮೇಲೆ ಚೀಲಗಟ್ಟಲೆ ಬಂಗಾರ ಹಾಕಿದರು ಕೂಡ ನಾಯಿಯ ಬಾಲಿಗೆ ಇರುವ ಬೆಲೆ ಆಕೆಯ ಸೌಂದರ್ಯಕ್ಕೆ ಇರುವುದಿಲ್ಲ ಅವಳು ಸುಂದರವಾಗಿ ಕಾಣುವುದು ಅಸಾಧ್ಯ. ಅದಕ್ಕಾಗಿ ನಾವು ಕೂದಲಿನ ಬಗ್ಗೆ ಕೂಡ ಕಾಳಜಿಯನ್ನು ವಹಿಸಬೇಕು. ಈಗಿನ ದಿನಗಳಲ್ಲಿ ಮಹಿಳೆಯರಲ್ಲಿ ಕೂದಲು ಉದುರುವ ಸಮಸ್ಯೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅದಕ್ಕಾಗಿ ಮಹಿಳೆಯರು ಮಾಡಬಾರದ್ದನ್ನು ಮಾಡುತ್ತಾರೆ ಬ್ಯೂಟಿ ಸಲೂನ್ ಗೆ ಹೋಗಿ ತುಂಬಾನೇ ದುಡ್ಡು ಖರ್ಚು ಮಾಡುತ್ತಾರೆ. ಕೂದಲನ್ನು ಕತ್ತರಿಸುತ್ತಾರೆ. ಅದಕ್ಕೆ ವಿವಿಧ ರೀತಿಯ ಕೆಮಿಕಲ್ ಶಾಂಪೂಗಳನ್ನೂ ಬಳಕೆ ಮಾಡುತ್ತಾರೆ. ಇದಲ್ಲದೆ ವೈದ್ಯರಿಂದ ಚಿಕಿತ್ಸೆ ಕೂಡ ಪಡೆದು ಮಾತ್ರೆಗಳನ್ನು ನುಂಗುತ್ತಾರೆ. ಇದು ಎಲ್ಲವೂ ವ್ಯರ್ಥ ಸ್ನೇಹಿತರೇ. ಅದಕ್ಕಾಗಿ ನೀವು ಕೂದಲು ಉದುರಲು ಮುಖ್ಯವಾದ ಕಾರಣವನ್ನು ಅರಿತುಕೊಳ್ಳಬೇಕು ಮೊದಲು. ಅದಕ್ಕೆ ತಕ್ಕಂತೆ ನೀವು ವ್ಯಾಯಾಮವನ್ನು ಮಾಡಬೇಕು ಹೆಚ್ಚಾಗಿ ನೀರು ಕುಡಿಯಬೇಕು.
ಹೊಟ್ಟೆ ತುಂಬಾ ಪೌಷ್ಠಿಕವಾದ ಆಹಾರವನ್ನು ಸೇವಿಸಬೇಕು. ಜೊತೆಗೆ ನಿಮ್ಮ ಕೂದಲಿಗೆ ಕಲರಿಂಗ್ ಮಾಡುವುದು ಕೆಮಿಕಲ್ ಶಾಂಪೂ ಬಳಕೆ ಮಾಡುವುದು ಕೂಡ ನೀವು ನಿಮ್ಮ ಕೂದಲಿಗೆ ನೀವೇ ಹಾನಿ ಉಂಟು ಮಾಡಿದ ಹಾಗೆ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಕೂದಲು ಮತ್ತಷ್ಟು ಉದುರಲು ಶುರು ಆಗುತ್ತದೆ. ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ನೈಸರ್ಗಿಕವಾಗಿ ಕೂದಲು ಉದುರುವುದನ್ನು ತಡೆಯಲು ದಪ್ಪವಾಗಿ ಬೆಳೆಯಲು ಕಪ್ಪಾಗಿ ಬೆಳೆಯಲು ನೆರಿಗೆ ಕೂದಲು ಆಗದೆ ಇರುವುದಕ್ಕೆ ಒಂದು ಸೂಪರ್ ಮನೆಮದ್ದು ತಿಳಿಸಿಕೊಡುತ್ತೇವೆ. ಈ ಮನೆಮದ್ದು ತಯಾರಿಸಲು ಬೇಕಾದ ಮೊದಲ ಸಾಮಗ್ರಿ ಕರಿಬೇವು. ಈ ಕರಿಬೇವು ನಮ್ಮ ತಲೆ ಕೂದಲಿಗೆ ಮತ್ತು ಕೂದಲಿನ ಬೆಳವಣಿಗೆಗೆ ತುಂಬಾನೇ ಒಳ್ಳೆಯದು. ಕೂದಲಿಗೆ ಬೇಕಾದ ಎಲ್ಲ ಪೋಷಕಾಂಶಗಳು ಇದರಲ್ಲಿ ಅಡಗಿರುತ್ತವೆ. ಮೊದಲಿಗೆ ನೀವು ಕರಿಬೇವು ಎಲೆಗಳನ್ನು ತೆಗೆದುಕೊಳ್ಳಿ. ಅದನ್ನು ಚೆನ್ನಾಗಿ ತೊಳೆದು ಅದನ್ನು ಒರೆಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ನಂತ್ರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ.
ಈ ಥರ ಪುಡಿ ಮಾಡಿ ಇದನ್ನು ನಿಮಗೆ ಬೇಕಾದಾಗ ಬಳಕೆ ಮಾಡಿಕೊಳ್ಳಬಹುದು. ನಂತ್ರ ಏನು ಮಾಡ್ಬೇಕು ಅಂದ್ರೆ ನೀವು ನಿತ್ಯವೂ ಬಳಕೆ ಮಾಡುವ ಎಣ್ಣೆಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಬೇಕು. ಇದರಲ್ಲಿ ಈ ಪುಡಿ ಮಾಡಿದ ಕರೀಬೇಕು ಪುಡಿಯನ್ನು ಹಾಕಿಕೊಂಡು ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಿ. ಇನ್ನೂ ನಿಮಗೆ ತುಂಬಾನೇ ತಲೆ ಹೊಟ್ಟು ಇದರಲ್ಲಿ ನೀವು ನಿಂಬೆ ಹಣ್ಣಿನ ರಸವನ್ನು ಹಾಕಿಕೊಂಡು ತಲೆಯ ತುಂಬಾ ಹಚ್ಚಿಕೊಳ್ಳಬಹುದು. ಇನ್ನೂ ಒಣಗಿದ ಕೂದಲು ತುಂಬಾನೇ ಇದ್ದರೆ ನೀವು ನಿಂಬೆ ಹಣ್ಣು ಬಳಕೆ ಮಾಡಬೇಡಿ ಇದರಿಂದ ಮತ್ತಷ್ಟು ಕೂದಲು ಒಣಗುತ್ತದೆ. ಈ ಮೂರು ಸಾಮಗ್ರಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ತಲೆಯ ಕೂದಲಿನ ಬುಡಕ್ಕೆ ನೆತ್ತಿಯ ಭಾಗಕ್ಕೆ ಹಚ್ಚಿಕೊಳ್ಳಿ. ಇದು ಕೂದಲು ಉದುರುವುದನ್ನು ತಡೆಯಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಕೂದಲು ಬೆಳ್ಳಗೆ ಆಗುವುದನ್ನು ತಡೆಯುತ್ತದೆ. ನಿಮ್ಮ ಕೂದಲಿನ ಬೆಳವಣಿಗೆ ತುಂಬಾನೇ ಆಗಲು ಈ ಮನೆಮದ್ದು ತುಂಬಾನೇ ಅದ್ಭುತವಾಗಿ ಸಹಾಯ ಮಾಡುತ್ತದೆ. ಶುಭದಿನ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.