ನಮಸ್ತೆ ಪ್ರಿಯ ಓದುಗರೇ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಆಭರಣಗಳು ವಸ್ತ್ರಗಳು ಇದು ಸಂಪತ್ತಿನ ಸಂಕೇತವಾಗಿದೆ ಅಲ್ಲದೇ ಘನತೆ ಗೌರವ ಪ್ರತಿಷ್ಠೆಯ ಸಂಕೇತವು ಕೂಡ ಆಗಿದೆ. ಅದರಲ್ಲೂ ಮುಖ್ಯವಾಗಿ ಖಡ್ಗ ಲಾಕೆಟ್ ಧರಿಸುವುದು ಕೆಲವೊಂದು ಪದ್ಧತಿಯಲ್ಲಿ ಕಡ್ಡಾಯವಾಗಿದೆ. ಮಹಿಳೆಯರಿಗೆ ಆಭರಣಗಳು ಈ ಬಗೆಯ ವಸ್ತುಗಳನ್ನು ಉಡುವುದು ಧರಿಸುವುದು ಅಂದ್ರೆ ತುಂಬಾನೇ ಪ್ರಿಯವಾಗಿದೆ. ಎಲ್ಲರೂ ಕೂಡ ಚಿನ್ನದ್ದೂ ಖಡ್ಗ ಮತ್ತು ಲಾಕೆಟ್ ಅನ್ನು ಧರಿಸಲು ಸಾಧ್ಯವಿಲ್ಲ ಅವರು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಧರಿಸುತ್ತಾರೆ. ಅದರಲ್ಲೂ ಖಡ್ಗಗಳನ್ನೂ ಲಾಕೇಟ್ ಗಳನ್ನು ಧರಿಸುವುದು ಈಗಿನ ಕಾಲೇಜಿನ ಹುಡುಗರ ಹುಡುಗೀರ ಯಾರ ಫ್ಯಾಷನ್ ಕೂಡ ಆಗಿದೆ.
ಅದು ಸಾಮಾನ್ಯವಾಗಿ ಚಿನ್ನದ್ದು ಆಗಿರುತ್ತದೆ, ಬೆಳ್ಳಿ ತಾಮ್ರ ಸ್ಟೀಲ್ ಲೋಹ ಹೀಗೆ ವಿವಿಧ ಬಗೆಯಲ್ಲಿ ಅವರು ಖಡ್ಗ ಮತ್ತು ಲಾಕೆಟ್ ಗಳನ್ನು ಮಾಡಿಕೊಂಡು ಹಾಕಿಕೊಳ್ಳುತ್ತಾರೆ. ಈ ಖಡ್ಗಗಳನ್ನು ಹಾಕಿಕೊಳ್ಳುವ ಮುನ್ನ ನಾವು ಇದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳಬೇಕು. ಹಾಗಾದ್ರೆ ಬನ್ನಿ ಈ ಇವುಗಳನ್ನು ಧರಿಸುವುದರಿಂದ ಆಗುವ ಲಾಭಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಹಲವಾರು ಜನರು ಅವರಿಗೆ ತಿಳಿಯದೆ ಅವರು ಕಬ್ಬಿಣದ ಖಡ್ಗ ಸ್ಟೀಲ್ ಖಡ್ಗವನ್ನೂ ಧರಿಸುತ್ತಾರೆ. ಇವರಿಗೆ ಇದು ಸಕಾರಾತ್ಮಕವಾಗಿ ಅಲ್ಲದೇ ನಕಾರಾತ್ಮಕವಾಗಿ ತುಂಬಾನೇ ಪರಿಣಾಮ ಬೀರುತ್ತದೆ.
ಜೊತೆಗೆ ಕಬ್ಬಿಣದ ಖಡ್ಗವನ್ನು ಧರಿಸುವುದರಿಂದ ಜೀವನದಲ್ಲಿ ತುಂಬಾನೇ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಆರೋಗ್ಯದಲ್ಲಿ ಕೂಡ ತುಂಬಾನೇ ಏರು ಪೇರು ಆಗುತ್ತದೆ. ಚಿನ್ನ ಬೆಳ್ಳಿ ತಾಮ್ರ ಖಡ್ಗಗಳನ್ನೂ ಬಿಟ್ಟು ಬೇರೆ ಯಾವುದೇ ರೀತಿಯ ಖಡ್ಗವನ್ನು ಧರಿಸಬೇಡಿ. ಧರಿಸುವುದರಿಂದ ಜೀವನದಲ್ಲಿ ತುಂಬಾನೇ ಹಾನಿ ಆಗುತ್ತದೆ. ಆದರೆ ಬೆಳ್ಳಿಯ ಖಡ್ಗ ತಾಮ್ರದ ಖಡ್ಗ ಚಿನ್ನದ ಖಡ್ಗ ಧರಿಸುವುದರಿಂದ ನಿಮ್ಮ ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿ ಆಗುತ್ತದೆ. ಅದರಲ್ಲೂ ಬೆಳ್ಳಿಯ ಖಡ್ಗ ಧರಿಸುವುದರಿಂದ ಕೂಡ ಹಲವಾರು ಲಾಭಗಳು ಇವೆ ಚಿಕ್ಕ ಮಕ್ಕಳಿಗೆ ಬೆಳ್ಳಿಯ ಖಡ್ಗವನ್ನು ಹಾಕುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಮಕ್ಕಳ ಮನಸ್ಸು ಬಹಳಷ್ಟು ಚಂಚಲ. ಆದ್ದರಿಂದ ಅವರಿಗೆ ಅರ್ಧ ಚಂದ್ರ ಲಾಕೇಟ್ ಅನ್ನು ಹಾಕಬೇಕು. ಒಟ್ಟಿನಲ್ಲಿ ಬೆಳ್ಳಿಯ ಲಾಕೆಟ್ ಅನ್ನು ಹಾಕಬೇಕು ಇದರಿಂದ ಅವರ ಮನಸ್ಸು ತುಂಬಾನೇ ಚಂಚಲತೆ ಇಂದ ಹೊರಗಡೆ ಬರುತ್ತದೆ. ಹಾಗೆಯೇ ವಿವಿಧ ರೀತಿಯಲ್ಲಿ ದೇವಾನು ದೇವತೆಗಳ ರೂಪದಲ್ಲಿ ದೊರೆಯುವ ಲಾಕೆಟ್ ಹಾಕುವುದರಿಂದ ಮುಕ್ಕೋಟಿ ದೇವತೆಗಳ ಆಶೀರ್ವಾದ ಸಿಗುತ್ತದೆ.
ಆದರೆ ಯಾವುದೇ ಕಾರಣಕ್ಕೂ ಸ್ಟೀಲ್ ಅಥವಾ ಕಬ್ಬಿಣದ ಲಾಕೆಟ್ ಅನ್ನು ಧರಿಸಬಾರದು. ಕೇವಲ ಬೆಳ್ಳಿಯ ಚಿನ್ನ ತಾಮ್ರದ ಲಾಕೆಟ್ ಅನ್ನು ಹಾಕಿ. ಇದರಿಂದ ನಿಮಗೆ ತುಂಬಾನೇ ಲಾಭಗಳು ಇದ್ದಾವೆ. ಮುಖ್ಯವಾಗಿ ಹೇಳಬೇಕು ಅಂದ್ರೆ ಜನರು ದೇಹದ ಉಷ್ಣತೆ ಕಡಿಮೆ ಆಗಲು ತಾಮ್ರದ ಲಾಕೆಟ್ ಅಥವಾ ಖಡ್ಗವನ್ನು ಧರಿಸುತ್ತಾರೆ. ಇದರಿಂದ ದೇಹದ ಉಷ್ಣತೆ ಕಡಿಮೆ ಆಗುತ್ತಾ ಬರುತ್ತದೆ. ಅಲ್ಲದೆ ಇದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಾಮ್ರದ ಖಡ್ಗ ಧರಿಸುವುದು ತುಂಬಾನೇ ಶುಭ ಅಂತ ಹೇಳಿದ್ದಾರೆ ಜೊತೆಗೆ ಇದು ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯಕ ಮಾಡುತ್ತದೆ. ಬೆಳ್ಳಿಯ ಕಣಗಳನ್ನು ನೀರು ಹೊಂದಿರುವುದರಿಂದ ಇದು ಚರ್ಮದ ಸಮಸ್ಯೆಗಳನ್ನೂ ನಿವಾರಿಸಬಲ್ಲದು. ಹೀಗೆ ಈ ವಸ್ತುಗಳನ್ನು ಧರಿಸುವುದರಿಂದ ತುಂಬಾನೇ ಆರೋಗ್ಯಕ್ಕೆ ಲಾಭವಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.