ಆಯುರ್ವೇದದ ಪ್ರಕಾರ ಜ್ವರ ಹಾಗು ಹೃದಯ ಸಂಬಂದಿ ಕಾಯಿಲೆ ಜೊತೆ ಈ ಎಲ್ಲ ಹತ್ತು ದೊಡ್ಡ ರೋಗಗಳಿಗೆ ರಾಮಬಾಣ ಈ ತುಳಿಸಿ ಎಲೆ

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈಗಂತೂ ಪ್ರತಿಯೊಬ್ಬರ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ನಮಗೆ ನೋಡಲು ದೊರೆಯುತ್ತದೆ. ಈ ತುಳಸಿ ಗಿಡವನ್ನು ಸಾಕ್ಷಾತ್ ದೇವರು ಅಂತ ಪೂಜೆಯನ್ನು ಕೂಡ ಮಾಡುತ್ತಾರೆ. ಇದು ಹಿಂದೂ ಧರ್ಮದಲ್ಲಿ ಇದರ ಬಗ್ಗೆ ಉಲ್ಲೇಖವೂ ಕೂಡ ಇದೆ. ಈ ಸಸ್ಯವು ಕ್ರಿಮಿಕೀಟಗಳನ್ನು ತಡೆಯುವುದರ ಜೊತೆಗೆ ವಾತಾವರಣದಲ್ಲಿರುವ ಆಮ್ಲಜನಕವನ್ನು ಅಧಿಕವಾಗಿ ಉತ್ಪತ್ತಿ ಮಾಡುತ್ತದೆ. ತುಳಸಿ ಎಲೆ ಕೇವಲ ಪೂಜೆಗೆ ಮಾತ್ರ ಸೀಮಿತವಲ್ಲದೇ ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಿತ್ಯವೂ ತುಳಸಿ ಎಲೆಗಳನ್ನು ತಿನ್ನುವುದರಿಂದ ಆಗುವ ನೂರೆಂಟು ಲಾಭಗಳ ಪಟ್ಟಿಯನ್ನು ಮತ್ತು ಮನೆಯ ಅಂಗಳದಲ್ಲಿ ತುಳಸಿ ಗಿಡ ಇರುವುದರಿಂದ ಆಗುವ ಪ್ರಯೋಜನಗಳನ್ನು ನಿಮ್ಮೊಂದಿಗೆ ಇಡುತ್ತೇವೆ. ಮೊದಲಿಗೆ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಬಿಡುಗಡೆ ಆಗುತ್ತದೆ, ಇದರಿಂದ ವಾತಾವರಣವು ಶುದ್ಧವಾಗಿರುತ್ತದೆ ವಾತಾವರಣ ಶುದ್ಧವಾಗಿದ್ದರೆ ನಿಮ್ಮ ಹತ್ತಿರ ಯಾವುದೇ ರೋಗ ರುಜಿನಗಳು ಸುಳಿಯುವುದಿಲ್ಲ. ಹಾಗೆಯೇ ತುಳಸಿ ಗಿಡವು ಕ್ರಿಮಿ ಕೀಟಗಳು ಮನೆಯೊಳಗೆ ಸೇರದಂತೆ ನಾಶ ಮಾಡುತ್ತದೆ. ತುಳಸಿ ಎಲೆಗಳನ್ನು ಸೇವನೆ ಮಾಡುವುದರಿಂದ ಹಲವಾರು ಸೋಂಕುಗಳಿಂದ ದೂರವಿರಬಹುದು.

ಮತ್ತು ನಿತ್ಯವೂ ತುಳಸಿ ಗಿಡದ ಪೂಜೆಯನ್ನು ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಸಂತೋಷ ಸಿಗುತ್ತದೆ. ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ. ಇನ್ನೂ ವಯಸ್ಸು ಮೀರಿದವರು ತುಳಸಿ ಎಲೆಗಳನ್ನು ಸೇವನೆ ಮಾಡುವುದರಿಂದ ಸುಸ್ತು ಆಯಾಸ ನಿಶ್ಯಕ್ತಿ ಕಡಿಮೆ ಆಗುತ್ತದೆ. ಮತ್ತು ತುಳಸಿ ಎಲೆಗಳು ಜ್ಞಾಪಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಪ್ರಮುಖವಾಗಿ ಸಹಾಯ ಮಾಡುತ್ತದೆ. ಮತ್ತು ವಾಂತಿ ಅತಿಸಾರವನ್ನು ಕೂಡ ತಡೆಯುವಲ್ಲಿ ಸಹಕಾರಿಯಾಗಿದೆ ಈ ತುಳಸಿ ಎಲೆಗಳು. ತುಳಸಿ ಎಲೆಗಳಲ್ಲಿ ಇರುವ ಆಂಟಿ ಸೆಪ್ಟಿಕ್ ಆಂಟಿ ಬಯೋಟಿಕ್ ಆಂಟಿ ವೈರಲ್ ಆಂಟಿ ಬ್ಯಾಕ್ಟೀರಿಯಾ ಗುಣಗಳು ಫಂಗಸ್, ತುರಿಕೆ ಅಲರ್ಜಿಯನ್ನು ಹೋಗಲಾಡಿಸುತ್ತದೆ. ಇನ್ನೂ ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆ ನೀರನ್ನು ಸೊಳ್ಳೆಗಳು ಇರುವ ಜಾಗದಲ್ಲಿ ಸಿಂಪಡಣೆ ಮಾಡಬೇಕು. ಇದರಿಂದ ಸೊಳ್ಳೆಗಳು ಕಾಟ ತಪ್ಪುತ್ತದೆ. ಚರ್ಮದ ವಿರುದ್ದ ಹೋರಾಡಲು ತುಳಸಿ ಒಂದು ರಾಮಬಾಣದಂತೆ ಕೆಲಸವನ್ನು ನಿರ್ವಹಿಸುತ್ತದೆ. ತುಳಸಿ ಎಲೆಗಳ ಕಷಾಯವನ್ನು ಮಾಡಿಕೊಂಡು ಕುಡಿಯುವುದರಿಂದ ಮಾನಸಿಕ ಒತ್ತಡವನ್ನು ನಿಯಂತ್ರಣ ಮಾಡಬಹುದು. ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ತುಳಸಿ ಎಲೆಗಳು ಪ್ರಮುಖವಾಗಿದೆ. ದೇಹದಲ್ಲಿ ರಕ್ತದ ಮಟ್ಟವನ್ನು ತುಳಸಿ ಎಲೆಗಳನ್ನು ತಿನ್ನುವುದರಿಂದ ಹೆಚ್ಚಿಸಬಹುದು.

ಬೆಳಿಗ್ಗೆ ಎದ್ದು ತಕ್ಷಣ ಖಾಲಿ ಹೊಟ್ಟೆಯಲ್ಲಿ ನಾಲ್ಕೈದು ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮತ್ತು ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿ ಆಗಿದೆ. ಶೀತ ನೆಗಡಿ ಕೆಮ್ಮು ಅಲರ್ಜಿ ಹೃದ್ರೋಗದ ಯಾವುದೇ ಸಮಸ್ಯೆಗಳನ್ನು ಇದು ದೂರ ಮಾಡುತ್ತದೆ. ಶರೀರದಲ್ಲಿ ಇರುವ ಕಲ್ಮಶಗಳನ್ನು ಹೊರಹಾಕುತ್ತದೆ. ಆಯುರ್ವೇದದ ಪ್ರಕಾರ ಹಂದಿಜ್ವರಕ್ಕೆ ತುಳಸಿ ಎಲೆಗಳು ರಾಮಬಾಣ ಇದ್ದಂತೆ ಆದ್ದರಿಂದ ಹಂದಿ ಜ್ವರದಿಂದ ಬಳಲುತ್ತಿದ್ದವರು ನಿತ್ಯವೂ ತುಳಸಿ ಎಲೆಗಳನ್ನು ಸೇವಿಸಬೇಕು. ಇದರಿಂದ ಹಂದಿ ಜ್ವರವು ಕಡಿಮೆ ಆಗುತ್ತದೆ. ತುಳಸಿ ಎಲೆಗಳಲ್ಲಿ ಇರುವ ಅಂಶಗಳು ಹೆಚ್ 1 ಮತ್ತು ಏನ್1 ದೇಹವನ್ನು ಸೇರದಂತೆ ತಡೆಯುತ್ತದೆ. ಅಷ್ಟೇ ಅಲ್ಲದೇ ಈ ರೋಗವು ಕ್ರಮೇಣ ಉಪಶಮನ ಆಗುತ್ತದೆ ಅಂತ ವೈದ್ಯರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತುಳಸಿಯನ್ನು ನಿತ್ಯವೂ ತಿನ್ನುವುದರಿಂದ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಜೊತೆಗೆ ದೇಹವನ್ನು ಬಲಶಾಲಿಯಾಗಿ ಮಾಡುತ್ತದೆ.

ತುಳಸಿ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಕುಟ್ಟಿ ಅದರ ರಸವನ್ನು ಬೆಲ್ಲದ ಜೊತೆಗೆ ತಿನ್ನುವುದರಿಂದ ನೆಗಡಿ ಕೆಮ್ಮು ಶ್ವಾಸಕೋಶ ಸೋಂಕುಗಳನ್ನು ನಿವಾರಣೆ ಮಾಡುತ್ತದೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿ ಕಟ್ಟೆ ಇಲ್ಲದ ಮನೆ ಇಲ್ಲ ಅಂತ ಹೇಳಿದರೆ ತಪ್ಪಾಗಲಾರದು. ಅಷ್ಟೊಂದು ಪುರಾಣಗಳಲ್ಲಿ ತುಳಸಿ ಕಟ್ಟೆಯ ಮಹತ್ವವನ್ನು ಉಲ್ಲೇಖ ಮಾಡಲಾಗಿದೆ. ಸಾಕ್ಷಾತ್ ವಿಷ್ಣುವಿಗೆ ತುಳಸಿ ತುಂಬಾನೇ ಇಷ್ಟ ಮತ್ತು ಪ್ರಿಯ ಅಂತ ಹೇಳಲಾಗಿದೆ. ಇದರಲ್ಲಿ ರೋಗ ನಿರೋಧಕ ಶಕ್ತಿಗಳು ಸೇರಿದಂತೆ ಆರೋಗ್ಯಕ್ಕೆ ಉತ್ತಮ ಅಂತ ಕೆಲವು ವೈದ್ಯರು ಮತ್ತು ಸಂಶೋಧನೆ ತಿಳಿಸಿವೆ. ತುಳಸಿ ಎಲೆಗಳನ್ನು ಹಿಂಡಿ ಅದರ ರಸವನ್ನು ಎಣ್ಣೆಯಲ್ಲಿ ಹಾಕಿ ಮಿಕ್ಸ್ ಮಾಡಿ ತಲೆಗೆ ಹಚ್ಚಿಕೊಂಡು ಹೊಟ್ಟು ಹೇನು ಕೂದಲು ಉದುರುವಿಕೆಗೆ ನಿಲ್ಲುತ್ತದೆ ಮತ್ತು ಚರ್ಮವ್ಯಾಧಿ ಸಮಸ್ಯೆಗಳನ್ನು ತಡೆಹಿಡಿಯುತ್ತದೆ. ಹೊಟ್ಟೆಯ ಆರೋಗ್ಯಕ್ಕೆ ತುಳಸಿ ಎಲೆಗಳ ಸೇವನೆ ಉತ್ತಮ. ಶುಭದಿನ.

Leave a Reply

Your email address will not be published. Required fields are marked *