ನಮಸ್ತೇ ಗೆಳೆಯರೇ, ಕೇವಲ ಮೂವತ್ತು ದಿನಗಳಲ್ಲಿ ಮೆಂತ್ಯೆ ನೀರು ಕುಡಿದರೆ ದೇಹಕ್ಕೆ ಆಗುವ ಹಲವಾರು ಪ್ರಯೋಜಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮ್ಮ ಭಾರತೀಯ ಆಯುರ್ವೇದ ಪದ್ದತಿಯಲ್ಲಿ ಮೆಂತ್ಯೆ ಕಾಳು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡು ಬಂದಿದೆ. ಅಷ್ಟೇ ಅಲ್ಲದೇ ಇದು ಆರೋಗ್ಯದ ದೃಷ್ಟಿಯಿಂದ ನೋಡಿದರೆ ಇದು ನಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಇನ್ನಿತರ ಯಾವುದೇ ರೋಗಗಳು ಬರದಂತೆ ತಡೆಯುತ್ತದೆ. ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿ ಅದರ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂದರೆ, ನಮ್ಮ ಈ ಚಿಕ್ಕ ಆರೋಗ್ಯಕರ ಲೇಖನವನ್ನು ಓದುವುದನ್ನು ಮರೆಯಬೇಡಿ. ಮೊದಲಿಗೆ ರಾತ್ರಿ ಹೊತ್ತು ಒಂದು ಹಿಡಿಯಷ್ಟು ಮೆಂತ್ಯೆ ಕಾಳನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಚೆನ್ನಾಗಿ ನೆನೆಸಿಡಬೇಕು. ಬೆಳಿಗ್ಗೆ ಎದ್ದು ತಕ್ಷಣವೇ ಈ ನೀರನ್ನು ಸೋಸಿಕೊಂಡು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ ಮಾಡುವುದರಿಂದ ಆರೋಗ್ಯವು ವೃದ್ಧಿಯಾಗುತ್ತದೆ. ಆದರೆ ಈ ರೀತಿಯಾಗಿ ಸತತವಾಗಿ ಒಂದು ತಿಂಗಳು ಕಾಲ ಈ ರೀತಿ ಮುಂದುವರೆಸಬೇಕು. ಇದರ ಬಗ್ಗೆ ಮತ್ತಷ್ಟು ತಿಳಿಯುತ್ತಾ ಹೋಗೋಣ ಬನ್ನಿ ಗೆಳೆಯರೇ.
ಮೆಂತ್ಯೆ ಕಾಳಿನ ಮೊದಲನೆಯ ಲಾಭವೆಂದರೆ, ತೂಕ ಇಳಿಸಿಕೊಳ್ಳಲು ಮೆಂತ್ಯೆ ನೀರು ತುಂಬಾನೇ ಸಹಾಯ ಮಾಡುತ್ತದೆ. ಹಾಗೆಯೇ ಮೆಂತ್ಯೆ ನೀರು ಮತ್ತು ನೆನೆಸಿದ ಮೆಂತ್ಯೆ ಕಾಳನ್ನು ತಿನ್ನುವುದರಿಂದ ಹಸಿವು ಅಧಿಕವಾಗಿ ಆಗುವುದಿಲ್ಲ. ಹೊಟ್ಟೆ ತುಂಬಿದ ಹಾಗೆ ಭಾಸವಾಗುತ್ತದೆ. ಇದರಿಂದ ಸುಲಭವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಮೆಂತ್ಯೆಯಲ್ಲಿ ಉರಿ ಊತ ಶಮನಕಾರಿ ಗುಣ ಇರುವುದರಿಂದ ಇದು ಜೀರ್ಣ ಕ್ರಿಯೆಯನ್ನು ವೃದ್ಧಿಸುತ್ತದೆ. ಜೀರ್ಣ ಕ್ರಿಯೆಯನ್ನು ಅಥವಾ ಚಯಾಪಚಯ ಕ್ರಿಯೆಯನ್ನು ಸರಾಗವಾಗಿ ನಡೆಯುವಂತೆ ಮಾಡುತ್ತದೆ ಮತ್ತು ಹೊಟ್ಟೆಯ ಉರಿಯನ್ನು ತಗ್ಗಿಸುತ್ತದೆ. ಮೆಂತ್ಯೆ ಕಾಳಿನಲ್ಲಿ ಪೊಟ್ಯಾಶಿಯಂ ಅಂಶ ಇರುವುದರಿಂದ ರಕ್ತದೊತ್ತಡವನ್ನು ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೊರ ಹಾಕಿ ಉತ್ತಮವಾದ ಕೋಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಅಂತ ಕೆಲವು ಅಧ್ಯಯನಗಳು ಸಾಬೀತು ಪಡೆಸಿವೆ. ಇದು ದೇಹದಲ್ಲಿ ಉತ್ತಮವಾದ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡುತ್ತದೆ. ಮೆಂತ್ಯೆ ಆಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿರುವ ಕಾರಣ ಇದು ಸಂಧಿವಾತ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಮೆಂತ್ಯೆ ಕಾಳು ದೇಹದಲ್ಲಿ ಕ್ಯಾನ್ಸರ್ ಜೀವ ಕೋಶಗಳು ಬೆಳೆಯದಂತೆ ತಡೆಯುತ್ತದೆ. ಹಾಗೆಯೇ ಕರುಳಿನಲ್ಲಿ ಇರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಕರುಳನ್ನು ಸ್ವಚ್ಛಗೊಳಿಸುತ್ತದೆ.
ಮೆಂತ್ಯೆಯಲ್ಲಿ ನಾರಿನ ಅಂಶ ಇರುವುದರಿಂದ ಇದು ಮಧುಮೇಹಿಗಳಿಗೆ ರಾಮಬಾಣದಂತೆ ಕೆಲಸವನ್ನು ನಿರ್ವಹಿಸುತ್ತದೆ. ಮತ್ತು ರಕ್ತವು ಸಕ್ಕರೆಯ ಅಂಶವನ್ನೂ ಹೀರಿಕೊಳ್ಳದಂತೆ ತಡೆಯುತ್ತದೆ.ಇದರಿಂದ ಸುಲಭವಾಗಿ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳು ಕಾಲ ಮೆಂತ್ಯೆ ನೀರು ಕುಡಿಯುತ್ತಾ ಬಣ್ಣಿರಿ ಇದರಿಂದ ಕಿಡ್ನಿ ಕಲ್ಲು ಅಥವಾ ಕಿಡ್ನಿ ಸ್ಟೋನ್ ಕರಗಿ ಹೋಗುತ್ತವೆ. ಈ ಸಮಸ್ಯೆಯು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಒಂದು ವೇಳೆ ಕಿಡ್ನಿಯಲ್ಲಿ ಕಲ್ಲುಗಳಾದರೆ ಅವುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಹೇಳಬೇಕೆಂದರೆ ಮೆಂತ್ಯೆ ನೀರು ತಂಪುಕಾರಕ. ಇದರಿಂದ ದೇಹದ ಉಷ್ಣತೆಯನ್ನು ನಿವಾರಿಸಿ ಕೊಳ್ಳಬಹುದು. ಹಾಗೇಯೇ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮೆಂತ್ಯೆ ನೀರು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಹಲವಾರು ಲಾಭಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ಮಾಹಿತಿ ಇಷ್ಟವಾದರರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.