ಹೇನುಗಳು ಸಾಮಾನ್ಯವಾಗಿ ಶಾಲೆಗೆ ಹೋಗುವ ಮಕ್ಕಳ ತಲೆಯಲ್ಲಿ ಜಾಸ್ತಿ ಕಂಡು ಬರುತ್ತವೆ ಅಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ತುಂಬಾ ಮುಜುಗರಕ್ಕೆ ತಂಡಿದುತ್ತವೆ. ಅವರಿಂದ ಕುಟುಂಬದ ಸದಸ್ಯರಿಗೂ ಕೂಡ ಇವು ಹರಡಿ ತುಂಬಾ ಸಂಕಷ್ಟಕ್ಕೆ ತಂದಿದುತ್ತವೆ ಹೇನುಗಳನ್ನು ಕಡಿಮೆ ಮಾಡಿಕೊಳ್ಳಲು ತುಂಬಾ ರೀತಿಯ ಶಾಂಪೂಗಳು ದೊರೆಯುತ್ತವೆ. ಆದರೆ ಅವುಗಳಿಂದ ಯಾವುದೇ ರೀತಿಯ ಪ್ರಯೋಜನ ಇರುವುದಿಲ್ಲ ಹೇನುಗಳು ತಲೆಯಲ್ಲಿ ಸೇರಿಕೊಂಡರೆ ತುರಿಕೆ ಆಗುವುದು, ಅವು ಕಡಿಯುವುದರಿಂದ ತಲೆಯಲ್ಲಿ ಸಣ್ಣದಾಗಿ ಹುಣ್ಣುಗಳು ಹಾಗುತ್ತವೆ ಇವುಗಳನ್ನು ಹಾಗೆಯೇ ನಿರ್ಲಕ್ಷ ಮಾಡಿದರೆ ಸ್ಕಲ್ಪ್ ಆರೋಗ್ಯ ಪೆಟ್ಟು ತಿಂದು ಮಕ್ಕಳ ಶ್ರದ್ಧೆ, ಏಕಾಗ್ರತೆ ಕಡಿಮೆಯಾಗುತ್ತದೆ. ಆದ್ದರಿಂದ ಇವುಗಳನ್ನು ಸುಲಭವಾದ ಸಲಾಯೆಗಳಿಂದ ಕಡಿಮೆ ಮಾಡಿಕೊಳ್ಳಬಹುದು.
ಇದಕ್ಕಾಗಿ ನಾವು ಒಂದು ಐದಾರು ಕರ್ಪೂರ ಬಿಲ್ಲೆಗಳನ್ನು ತೆಗೆದುಕೊಳ್ಳಬೇಕು. ಕರ್ಪೂರ ನಮಗೆ ಒಳ್ಳೆಯ ಸುವಾಸನೆಯನ್ನು ಕೊಡುತ್ತದೆ ಇವು ಮಾನಸಿಕ ಪ್ರಶಾಂತತೆಯನ್ನು ಸಹ ಕೊಡುತ್ತವೆ. ಆದರೆ ಹೇನುಗಳಿಗೆ ಈ ಸುವಾಸನೆಯಿಂದ ತುಂಬಾ ತೊಂದರೆಗೆ ಸಿಲುಕಿ ಉಸಿರಾಟಕ್ಕೆ ತೊಂದರೆ ಮಾಡುತ್ತದೆ. ಆರು ಕರ್ಪೂರ ಬಿಲ್ಲೆಗಳನ್ನು ಮೆತ್ತಗೆ ಪುಡಿಮಾಡಿ ಇಟ್ಟುಕೊಳ್ಳಬೇಕು ನಂತರ ಒಂದು ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು. ಒಂದು ಅರ್ದ ನಿಂಬೆಹಣ್ಣಿನ ರಸವನ್ನು ತೆಗೆದುಕೊಂಡು ಈ ರಸವನ್ನು ಕರ್ಪೂರದ ಪುಡಿಯಲ್ಲಿ ಹಾಕಿಕೊಳ್ಳಬೇಕು ನಿಂಬೆರಸ ಹೇನು ಮತ್ತು ಹೇನಿನ ಮೊಟ್ಟೆಗಳನ್ನು ನಾಶ ಮಾಡುವಲ್ಲಿ ಸಹಾಯ ಮಾಡುತ್ತದೆ. ಕೂದಲಿನಲ್ಲಿ ತುರಿಕೆ, ಹುನ್ನಿನಂತ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ನಂತರ ಒಂದು ಅರ್ಧ ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಬೇಕು ಇವೆಲ್ಲವುಗಳನ್ನು ಚೆನ್ನಾಗಿ ಕಲಸಿ ಕೂದಲಿಗೆ ಹಚ್ಚಿ ನಿದಾನವಾಗಿ ಮಸಾಜ್ ಮಾಡಬೇಕು. ಈ ಎಣ್ಣೆಯಲ್ಲಿ ಇರುವ ಸುವಾಸನೆಗೆ ಹೇನುಗಲೆಲ್ಲಾ ಸತ್ತು ಹೋಗುತ್ತವೆ.
ಈ ಎಣ್ಣೆಯನ್ನು ಹಚ್ಚಿದ ಅರ್ಧ ಗಂಟೆಯ ನಂತರ ಮೈಲ್ಡ್ ಶಾಂಪುವಿನಿಂದ ಇಲ್ಲ ಅರ್ಬಲ್ ಶಾಂಪುವಿನೀಂದ ತಲೆಸ್ನಾನ ಮಾಡಬೇಕು ನಂತರ ಒಂದು ಸಣ್ಣ ಹಲ್ಲಿನಲ್ಲಿ ಇರುವಂಥ ಬಾಚಣಿಗೆಯಿಂದ ಬಾಚುವುದರಿಂದ ಸತ್ತಿರುವ ಹೇನುಗಳು, ಮೊಟ್ಟೆ ಎಲ್ಲಾನೂ ಹೊರಗಡೆ ಬರುತ್ತವೆ. ಈಗೆ ಹೇನುಗಳ ಸಮಸ್ಯೆ ಹೆಚ್ಚಾಗಿ ಕಂಡುಬಂದಾಗ ವಾರದಲ್ಲಿ ಒಂದುಬಾರಿ ಈ ಸಲಹೆಯನ್ನು ಮಾಡುವುದರಿಂದ ಕೆಲವೇ ದಿನಗಳಲ್ಲಿ ಈ ಸಮಸ್ಯೆಯಿಂದ ಶಾಶ್ವತವಾಗಿ ಪರಿಹಾರ ದೊರೆಯುತ್ತದೆ. ಈ ಮಿಶ್ರಣವನ್ನು ಹಚ್ಚಿದ ನಂತರ 40 ನಿಮಿಷಗಳಿಗಿಂತ ಹೆಚ್ಚು ಸಮಯ ಬಿಡಬಾರದು ಅದರಿಂದ ಸೈಡ್ ಎಫೆಕ್ಟ್ ಬರುವ ಸಾಧ್ಯತೆ ಇರುತ್ತದೆ. ಕನಿಷ್ಟ ಅಂದರೆ ವಾರದಲ್ಲಿ ಮುರುಬಾರಿ ತಲೆಸ್ನಾನ ಮಾಡಬೇಕು ಮತ್ತು ಒಂದು ವಾರಕ್ಕೆ ಮೂರರಿಂದ ನಾಲ್ಕು ದಿನ ಎಣ್ಣೆಯನ್ನು ಹಾಕುವುದರಿಂದ ಯಾವುದೇ ರೀತಿಯ ಹೊಟ್ಟು ಕಾಣಿಸಿಕೊಳ್ಳುವುದು ಕೂದಲು ಉದುರುವುದು ಇಂತಹ ಸಮಸ್ಯೆ ಬರುವುದಿಲ್ಲ. ತಲೆ ಕೂದಲು ಯಾವಾಗಲೂ ಶುಭ್ರವಾಗಿ ಇಟ್ಟುಕೊಳ್ಳುವುದರಿಂದ ಹೇನಿನ ಸಮಸ್ಯೆ ಕೂಡ ಅಷ್ಟಾಗಿ ಬರುವುದಿಲ್ಲ.