ನರಗಳಲ್ಲಿ ನೋವು ಕಾಲುಗಳು ಜೋಮು ಹಿಡಿಯುವುದು ಮತ್ತು ಸೋತು ಬರುವುದು ಕಡಿಮೆ ಆಗುತ್ತದೆ ಈ ಎಲೆಯಿಂದ ಮಾತ್ರ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಬೆನ್ನು ನೋವು ನರಗಳ ದೌರ್ಬಲ್ಯ ಅನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹೋಗಿ ಬಿಟ್ಟಿದೆ. ಚಿಕ್ಕ ಪುಟ್ಟ ಕೆಲಸಗಳನ್ನೂ ಮಾಡುವುದರಿಂದ ಕೈ ಕಾಲುಗಳಲ್ಲಿ ಜೋಮು ಹಿಡಿಯುವುದು ಹಾಗೂ ಕಾಲುಗಳಲ್ಲಿ ಸೆಳೆತ ಉಂಟಾಗುವುದು ಆಗುತ್ತಿದೆ. ಇದರಿಂದ ಕುಳಿತು ಕೊಳ್ಳಲು ನಿಂತು ಕೊಳ್ಳಲು ತುಂಬಾನೇ ಕಷ್ಟವೆನ್ನಿಸುತ್ತದೆ. ಇದಕ್ಕೆ ಮುಖ್ಯ ಕಾರಣ ನರಗಳಲ್ಲಿ ಶಕ್ತಿಯ ಕೊರತೆ ಇದೆ ಅಂತ. ಸಾಮಾನ್ಯವಾಗಿ ವಯಸ್ಸಾದ ಮೇಲೆ ನೋವುಗಳು ಕಾಣಿಸಿ ಕೊಳ್ಳುವುದು ಸಹಜ. ಹೀಗಾಗಿ ಕುಳಿತುಕೊಂಡರೆ ಏಳಲು ಕಷ್ಟವಾಗುತ್ತದೆ ಎದ್ದರೆ ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಈ ಮೂಳೆಗಳ ಸಮಸ್ಯೆ ಅನ್ನುವುದು ಎಲ್ಲರಿಗೂ ಇದ್ದೆ ಇರುತ್ತದೆ ಆದರೆ ವಯಸ್ಸಾದವರಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ಇದಕ್ಕೆ ವೈದ್ಯರು ಮಾತ್ರೆಗಳು ಅಂತ ಇದ್ದೇ ಇರುತ್ತದೆ. ಆದರೆ ಇವುಗಳನ್ನು ಕೊನೆಯವರೆಗೂ ತಿನ್ನಲೇಬೇಕಾದ ಪರಿಸ್ಥಿತಿ ಬಂದು ಬಿಡುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಕೈ ಕಾಲುಗಳಲ್ಲಿ ಜೋಮು ಹಿಡಿಯುವುದು ನರಗಳಲ್ಲಿ ವೀಕ್ ನೆಸ್ ಆಗುವುದು ಇವುಗಳನ್ನು ಹೋಗಲಾಡಿಸಲು ಒಂದು ಸೂಪರ್ ಮನೆಮದ್ದು ತಿಳಿಯೋಣ ಬನ್ನಿ.

ಈ ಮನೆಮದ್ದು ನೀವು ಸುಲಭವಾಗಿ ಸರಳವಾಗಿ ಮನೆಯ ಹಿತ್ತಲಿನಲ್ಲಿ ಸಿಗುವ ಎಲೆಗಳಿಂದ ತಯಾರಿಸಿ ಈ ಮನೆಮದ್ದು ಮಾಡಿಕೊಂಡು ಈ ನರಗಳ ದೌರ್ಬಲ್ಯದಿಂದ ಪಾರಾಗಬಹುದು. ಸಾಮಾನ್ಯವಾಗಿ ನಮಗೆ ಯಾವುದೇ ಕಾಯಿಲೆಗಳು ಬಂದರು ಕೂಡ ತಡೆದು ಕೊಳ್ಳುವ ಸಾಮರ್ಥ್ಯವಿರುವುದಿಲ್ಲ ಹೀಗಾಗಿ ನಾವು ಮಾತ್ರೆಗಳನ್ನು ಸೇವಿಸುತ್ತೇವೆ. ಈ ಮಾತ್ರೆಗಳನ್ನು ಸೇವನೆ ಮಾಡುವುದರಿಂದಲೇ ಈ ನರಗಳ ಸವೆತ ಜೋಮು ಹಿಡಿಯುವುದು ಆಗುತ್ತದೆ. ಮತ್ತು ಚಿಕ್ಕ ಚಿಕ್ಕ ವಿಷಯಗಳಿಗೆ ತಲೆಗೆ ಒತ್ತಡ ನೀಡುವುದರಿಂದ ನರಗಳು ಸವೆದು ಹೋಗುತ್ತವೆ. ಹಾಗಾದ್ರೆ ಇದಕ್ಕೆ ಮನೆಮದ್ದು ಯಾವುದು ಅಂತ ಹೇಳುವುದಾದರೆ ಹಿತ್ತಲಿನಲ್ಲಿ ಬೆಳೆಯುವ ಒಂದೆಲಗದ ಸಸ್ಯ. ಈ ಸಸ್ಯದ ಎಲೆಗಳಿಂದ ನಾವು ಪಲ್ಯ ಚಟ್ನಿ ಮಾಡಿಕೊಂಡು ಸೇವನೆ ಮಾಡುತ್ತೇವೆ. ಈ ಒಂದೆಲಗ ಸಸ್ಯದ ಎಲೆಗಳನ್ನು ತಿನ್ನುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮತ್ತು ಚಿಕ್ಕ ಮಕ್ಕಳಿಗೆ ಕೊಟ್ಟರೆ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಈ ಒಂದೆಲಗದ ಚಟ್ನಿ ಪಲ್ಯ ಮಾಡಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ.

ಇನ್ನೂ ಈ ಸಸ್ಯದ ಎಲೆಗಳನ್ನು ಒಣಗಿಸಿ ಚೆನ್ನಾಗಿ ಪುಡಿ ಮಾಡಿ ನಿತ್ಯವೂ ಸ್ವಲ್ಪ ಸ್ವಲ್ಪ ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆ ನಿವಾರಣೆ ಆಗುತ್ತದೆ. ಮತ್ತು ಈ ಗಿಡದ ಎಲೆಗಳನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚುವುದರಿಂದ ತಲೆ ಕೂದಲು ಉದುರುವುದು ನಿಲ್ಲುತ್ತದೆ ಮತ್ತೇ ಹೊಟ್ಟು ಕೂಡ ಕಡಿಮೆ ಆಗುತ್ತದೆ.ಮೆದುಳನ್ನು ಶಾಂತಗೊಳಿಸುತ್ತದೆ ಮತ್ತು ನರಗಳನ್ನು ದಷ್ಟ ಪುಷ್ಟಾಗಿ ಮಾಡುತ್ತದೆ. ಹೃದಯಕ್ಕೆ ಮತ್ತು ಶ್ವಾಸಕೋಶಕ್ಕೆ ಆಮ್ಲಜನಕವನ್ನು ನೀಡುತ್ತದೆ. ಇಷ್ಟೆಲ್ಲ ಪ್ರಯೋಜನಗಳನ್ನು ಹೊಂದಿರುವ ಈ ಸಸ್ಯವು ನರಗಳ ವೀಕ್ ನೆಸ್ ಗೆ ಹೇಗೆ ಬಳಕೆ ಮಾಡುವುದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ಈ ಒಂದೆಲಗದ ಸಸ್ಯದ ಎಲೆಗಳನ್ನು ತೆಗೆದುಕೊಳ್ಳಿ. ಅದರ ಹಿಂದಿನ ದಂಟು ತೆಗೆದುಕೊಂಡು ಎಲೆಗಳನ್ನು ಮಾತ್ರ ಬಳಕೆ ಮಾಡಿ ನಂತರ ಎಂಟು ಕಾಳು ಮೆಣಸು ತೆಗೆದುಕೊಳ್ಳಿ. ತದ ನಂತರ ಬಾದಾಮಿಯನ್ನು ತೆಗೆದುಕೊಳ್ಳಿ. ಈ ಬಾದಾಮಿ ಬೀಜಗಳು ನರಗಳನ್ನು ಗಟ್ಟಿ ಮಾಡುತ್ತದೆ. ಈಗ ಏನು ಮಾಡಬೇಕು ಅಂದರೆ ಒಂದು ಮಿಕ್ಸಿ ಜಾರಿಗೆ ಈ ಎಲ್ಲ ಸಾಮಗ್ರಿಗಳನ್ನು ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಲೋಟ ಹಾಲನ್ನು ತೆಗೆದುಕೊಳ್ಳಿ. ಅದರಲ್ಲಿ ಮಿಕ್ಸ್ ಮಾಡಿ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ನರಗಳು ಗಟ್ಟಿಯಾಗುತ್ತವೆ. ಮತ್ತು ಕೈ ಕಾಲುಗಳು ಜೋಮು ಹಿಡಿಯುವುದು ಕಡಿಮೆ ಮಾಡುತ್ತದೆ ಹಾಗೂ ಇದನ್ನು ನಿತ್ಯವೂ ಕುಡಿಯಬಹುದು ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಶುಭದಿನ.

Leave a Reply

Your email address will not be published. Required fields are marked *