ಚಿಕ್ಕ ಮಕ್ಕಳಿಗೆ ಸೇಬು ಹಣ್ಣು ಈ ರೀತಿಯಾಗಿ ತಪ್ಪದೇ ಸೇವಿಸಿ. ಮಕ್ಕಳ ಬೆಳವಣಿಗೆಗೆ ಅದ್ಭುತವಾಗಿರುತ್ತದೆ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎನ್ನುವುದು ಹಳೆಯ ಇಂಗ್ಲಿಷ್ ನಾಣ್ನುಡಿ. ಇದು ನಿಜಕ್ಕೂ ಸತ್ಯವಾದ ನುಡಿಯಾಗಿದೆ ಇದನ್ನು ಪಾಲನೆ ಮಾಡಿಕೊಂಡು ಬಂದರೆ ನಿಜಕ್ಕೂ ನಾವು ವೈದ್ಯರಿಂದ ದೂರವಿರಬಹುದು. ಸೇಬು ಹಣ್ಣು ಅಂದರೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಅದರಲ್ಲೂ ಚಿಕ್ಕ ಮಕ್ಕಳಿಗೆ ಅಂತೂ ಬಲು ಪ್ರಿಯ ಅಂತ ಹೇಳಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಚಿಕ್ಕ ಮಕ್ಕಳಿಗೆ ಅಂದರೆ ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಸೇಬು ಹಣ್ಣು ಯಾವ ರೀತಿಯಾಗಿ ಕೊಡಬೇಕು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಚಿಕ್ಕ ಮಕ್ಕಳಿಗೆ ಸೇಬು ಹಣ್ಣು ಡೈರೆಕ್ಟ್ ಆಗಿ ಕೊಡಲು ಸಾಧ್ಯವಿಲ್ಲ ಅದಕ್ಕಾಗಿ ನಾವು ಜ್ಯೂಸ್ ಮೂಲಕ ಕೊಟ್ಟರೆ ಮಕ್ಕಳು ಕುಡಿಯುತ್ತಾರೆ. ಹಾಗಾದರೆ ಈ ಸೇಬು ಹಣ್ಣು ಜ್ಯೂಸ್ ಯಾವ ರೀತಿ ಮಾಡಬೇಕು ಗೊತ್ತೇ?

ಮೊದಲಿಗೆ ಒಂದು ದೊಡ್ಡದಾದ ಸೇಬು ಹಣ್ಣು ತೆಗೆದುಕೊಳ್ಳಿ. ಅದನ್ನು ಚೆನ್ನಾಗಿ ತೊಳೆದು ಚಿಕ್ಕ ಚಿಕ್ಕ ದಾಗಿ ಕತ್ತರಿಸಿಕೊಳ್ಳಿ. ತದ ನಂತರ ಅದರ ಹಿಂದೆ ಇರುವ ಸಿಪ್ಪೆಯನ್ನು ತೆಗೆದು ಅದನ್ನು ಮತ್ತೆ ತುಂಡು ತುಂಡಾಗಿ ಕತ್ತರಿಸಿ. ಆಮೇಲೆ ಅದನ್ನು ಚೆನ್ನಾಗಿ ಕುದಿಸಿಕೊಳ್ಳಿ ಏಕೆಂದರೆ ಇದನ್ನು ಹಾಗೆ ಮಿಕ್ಸಿ ಮಾಡಿ ಚಿಕ್ಕ ಮಕ್ಕಳಿಗೆ ಕೊಟ್ಟರೆ ಜೀರ್ಣ ಕ್ರಿಯೆಗೆ ತೊಂದರೆ ಉಂಟಾಗುತ್ತದೆ ಆದ್ದರಿಂದ ಸ್ವಲ್ಪ ಅದನ್ನು ಬೇಯಿಸಿಕೊಳ್ಳಿ. ಆಲೂಗಡ್ಡೆಯನ್ನು ಎಷ್ಟು ಮೃದುವಾಗಿ ಬೇಯಿಸುತ್ತೀರಿ ಹಾಗೆ ಇದನ್ನು ಕೂಡ ಒಂದು ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಬೇಯಿಸಿ ಕೊಳ್ಳಿ. ಸ್ವಲ್ಪ ಆರಲು ಹಾಗೆಯೇ ಬಿಡಿ. ನಂತರ ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದು ಮಕ್ಕಳಿಗೆ ಸವಿಯಲು ಸಿದ್ಧವಾಗಿದೆ. ಚಿಕ್ಕ ಮಕ್ಕಳಿಗೆ ಸೇಬು ಹಣ್ಣು ಸೇವನೆ ಮಾಡಿಸುವುದು ತುಂಬಾನೇ ಒಳ್ಳೆಯದು. ಹೌದು ಈ ಹಣ್ಣಿನಲ್ಲಿ ಮಕ್ಕಳ ಬೆಳವಣಿಗೆಗೆ ಬೇಕಾದ ಅಗತ್ಯವಾದ ಎಲ್ಲ ಬಗೆಯ ಪೋಷಕಾಂಶಗಳು ದೊರೆಯುತ್ತವೆ ಮತ್ತು ಮಲಬದ್ಧತೆ ಸಮಸ್ಯೆಯು ಕೂಡ ಮಕ್ಕಳಲ್ಲಿ ಕಂಡುಬರುವುದಿಲ್ಲ. ಮಕ್ಕಳ ಜೀರ್ಣಕ್ರಿಯೆ ಸುಗಮವಾಗಿ ಆಗುತ್ತದೆ. ಚಿಕ್ಕ ಮಕ್ಕಳ ಆರೋಗ್ಯಕ್ಕೆ ಅವರ ದೇಹದ ಸೇಬಿನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುವ ಕಾರಣ ಹೆಚ್ಚು ಹೊತ್ತಿನವರೆಗೆ ಹೊಟ್ಟೆ ತುಂಬಿದ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ.

ಬೆಳವಣಿಗೆಗೆ ತುಂಬಾನೇ ಸೂಕ್ತ. ಪ್ರತಿ ನೂರು ಗ್ರಾಂ ಸೇಬುಹಣ್ಣಿನಲ್ಲಿ 54 ಕಿಲೋಕ್ಯಾಲೋರಿ ಶಕ್ತಿ ಇದೆ. ಉಳಿದಂತೆ ಇದರಲ್ಲಿರುವ ಇತರ ಪೋಷಕಾಂಶಗಳೆಂದರೆ,0.41 ಗ್ರಾಂ ಪ್ರೋಟೀನ್,14.05 ಗ್ರಾಂ ಕಾರ್ಬೋಹೈಡ್ರೇಟ್ 2.1 ಗ್ರಾಂ ಕರಗುವ ನಾರು, ಸಕ್ಕರೆ 0.15 ಮಿಲಿಗ್ರಾಂ ಕಬ್ಬಿನ, ಪೊಟ್ಯಾಶಿಯ, ವಿಟಮಿನ್ ಸಿ ಮತ್ತು ವಿಟಮಿನ್ ಎ ಹೇರಳವಾಗಿದೆ. ಸೇಬುಗಳ ಆರೋಗ್ಯಕರ ಪ್ರಯೋಜನಗಳು ಹಲವಾರು ಇವೆ. ಚಿಕ್ಕ ಮಕ್ಕಳಿಗೆ ಇದು ಹೇಳಿ ಮಾಡಿಸಿದ ಸೂಪರ್ ಫ್ರೂಟ್ ಅಂತ ಹೇಳಬಹುದು. ನಿಯಮಿತವಾಗಿ ಸೇಬುಹಣ್ಣಿನ ಸೇವನೆ ಮಾಡಿದ್ದಲ್ಲಿ, ಆರೋಗ್ಯವಾಗಿ, ಶಕ್ತಿಯುತರಾಗಿ ಇರುತ್ತಾರೆ. ಮುಖದಲ್ಲಿರುವ ಮೊಡವೆ ಗುಳ್ಳೆಗಳು ಮಾಯವಾಗಿ ತ್ವಚೆ ಕಾಂತಿಯುತವಾಗಿರಬೇಕು ಅಂದ್ರೆ ಪ್ರತಿದಿನ ಒಂದು ಸೇಬು ಹಣ್ಣು ಸೇವಿಸಬಹುದು. ತೂಕ ಇಳಿಸಲು ಬಯಸುವವರು ಸೇಬು ಹಣ್ಣು ಸೇವನೆ ಮಾಡಿ. ಇನ್ನೂ ಚಿಕ್ಕ ಮಕ್ಕಳಿಗೆ ಇದನ್ನು ತಪ್ಪದೇ ನೀಡಿ. ಶುಭದಿನ.

Leave a Reply

Your email address will not be published. Required fields are marked *