ಉಡುದಾರವನ್ನು ಕಟ್ಟಿಕೊಂಡಿರುವ ಪ್ರತಿ ಗಂಡಸರು ತಿಳಿದುಕೊಳ್ಳಬೇಕಾದ ವಿಚಾರ

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಹುಟ್ಟಿದ ಗಂಡು ಮಗುವಿಗೆ ಉಡಿದಾರವನ್ನು ಕಟ್ಟುವುದು ವಾಡಿಕೆ ಇದೆ ಗೆಳೆಯರೇ, ಹೌದು ಇದು ಮೊದಲಿನ ಕಾಲದಿಂದಲೂ ಬಂದಿದ್ದು ಈಗಲೂ ಕೂಡ ಗಂಡು ಮಕ್ಕಳ ಸೊಂಟದಲ್ಲಿ ಉಡುದಾರವನ್ನು ಕಟ್ಟಿ ಕೊಂಡಿರುತ್ತಾರೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಈ ಉಡುದಾರವನ್ನು ಕಟ್ಟಿಕೊಳ್ಳುವುದರಿಂದ ಆಗುವ ಲಾಭಗಳಾದರು ಏನು ಹಾಗೂ ಇದರ ಹಿಂದೆ ಇರುವ ವೈಜ್ಞಾನಿಕವಾದ ಕಾರಣ ಹಾಗೂ ರಹಸ್ಯವಾದರು ಏನು ಅಂತ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಆಚರಣೆ ಮಾಡುವ ಪ್ರತಿಯೊಂದು ಹಬ್ಬಗಳು ಆಗಲಿ ಜಾತ್ರೆಗಳು ಆಗಲಿ ಅದರ ಹಿಂದೆ ವೈಜ್ಞಾನಿಕವಾದ ಕಾರಣಗಳು ಅಡಗಿದೆ. ಇದರಿಂದ ಯಾವುದೇ ರೀತಿಯ ನಷ್ಟವಂತೂ ಆಗುವುದಿಲ್ಲ ಹೊರತು ಲಾಭಗಳು ಅಡಗಿರುತ್ತವೆ. ಅದರಲ್ಲು ಹಿಂದಿನಿಂದ ಮಾಡಿಕೊಂಡು ಬಂದಿರುವ ಸಂಪ್ರದಾಯದಲ್ಲಿ ಮಹತ್ವವಾದ ವೈಜ್ಞಾನಿಕವಾದ ಕಾರಣಗಳು ಸೇರಿವೇ. ಹೌದು ಹಿಂದೂ ಧರ್ಮದಲ್ಲಿ ಗಂಡು ಮಕ್ಕಳು ಉಡುದಾರವನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಅವರು ತಂದೆ ತಾಯಿ ಮಾತಿನ ಮೇರೆಗೆ ಕಟ್ಟಿಕೊಳ್ಳುತ್ತಾರೆ. ಆದರೆ ಉಡುದಾರವನ್ನು ಕಟ್ಟಿಕೊಳ್ಳಲು ಇರುವ ಹಿಂದಿನ ವೈಜ್ಞಾನಿಕ ಕಾರಣವನ್ನು ಯಾರು ಕೂಡ ಅರಿತು ಕೊಂಡಿಲ್ಲ. ಹಾಗೂ ಅರಿತು ಕೊಳ್ಳಲು ಹೋಗುವುದಿಲ್ಲ. ಹಾಗಾದರೆ ಬನ್ನಿ ಇದರ ಬಗ್ಗೆ ತಿಳಿಯೋಣ.

ನಮ್ಮ ಆಚಾರ ವಿಚಾರಗಳು ಎಂದಿಗೂ ಸುಳ್ಳಾಗುವುದಿಲ್ಲ. ಹಾಗೂ ನಮ್ಮ ಹಿರಿಯರು, ಹೇಳಿರುವ ಅನುಭವದ ಮಾತುಗಳು ಮತ್ತು ಅವರ ಆಚಾರ ವಿಚಾರಗಳು ಅನುಭವದ ಆಧಾರ ಮೇಲೆ ಹೇಳಿರುತ್ತಾರೆ, ಹಾಗಾಗಿ ಕೆಲವರ ಮನೆಯಲ್ಲಿ ಗಂಡಸರು ಉಡುದಾರವನ್ನು ಹಾಕಿಕೊಳ್ಳದೆ ಇದ್ದರೆ ಮನೆಯಿಂದ ಆಚೆಗೂ ಕೂಡ ಬಿಡುವುದಿಲ್ಲ. ಇನ್ನೂ ವೈಜ್ನಾನಿಕ ದೃಷ್ಟಿ ಕೋನದಿಂದ ನೋಡುವುದಾದರೆ, ಗಂಡು ಮಕ್ಕಳು ಬೆಳೆಯುವ ಸಮಯದಲ್ಲಿ ಪುರುಷಾಂಗಕ್ಕೆ ಯಾವುದೇ ರೀತಿಯ ಅಸಮತೋಲನಕ್ಕೆ ಗುರಿಯಾಗದೆ ಬೆಳವಣಿಗೆ ಚೆನ್ನಾಗಿ ಆಗಬೇಕು ಅಂತ ಗಂಡಸರಿಗೆ ಉಡುದಾರವನ್ನು ಕಟ್ಟುತ್ತಾರೆ. ಇನ್ನು ಕೆಲವರ ಮನೆಯಲ್ಲಿ ಚಿಕ್ಕ ಮಕ್ಕಳು ಇರುತ್ತಾರೆ ಅವರಿಗೂ ಕೂಡ ಈ ಉಡುದರವನ್ನು ಕಟ್ಟುತ್ತಾರೆ ಕಾರಣ, ಮಕ್ಕಳ ಬೆಳವಣಿಗೆ ಚೆನ್ನಾಗಿ ಆಗಬೇಕು ಅಂತ. ಹೌದು ಮನೆಯಲ್ಲಿ ಗಂಡು ಮಕ್ಕಳು ಜನಿಸಿದ ತಕ್ಷಣವೇ ಸೊಂಟಕ್ಕೆ ಉಡುದಾರವನ್ನು ಕಟ್ಟುತ್ತಾರೆ ಅವರ ಬೆಳವಣಿಗೆ ಚೆನ್ನಾಗಿ ಆಗಬೇಕು ಬೆಳವಣಿಗೆ ಯಲ್ಲಿ ಯಾವುದೇ ರೀತಿಯ ಕುಂಠಿತ ಆಗಬಾರದು ಅಂತ ಮಕ್ಕಳಿಗೆ ಉಡುದಾರವನ್ನು ಕಟ್ಟುತ್ತಾರೆ. ಮತ್ತು ಈ ಉಡುದಾರವನ್ನು ಕಟ್ಟುವುದರಿಂದ ಇನ್ನೊಂದು ವಿಶೇಷವಾದ ಲಾಭವಿದೆ.

ಅದುವೇ ಗಂಡಸರಲ್ಲಿ ಹೇರಣೆ ಎಂಬ ಕಾಯಿಲೆ ಬರದಂತೆ ತಡೆಯುತ್ತದೆ. ಈ ಕಾಯಿಲೆಯು ಹೊಟ್ಟೆಯ ಕೆಳಭಾಗದಲ್ಲಿ ಅಂದರೆ ಹೊಕ್ಕಳು ಬಳಿ ಗಂಟು ಗಂಟು ಆಗುತ್ತದೆ. ಅಥವಾ ಹೊಟ್ಟೆ ಮುಂದೆ ಬಂದ ಹಾಗೆ ಆಗುತ್ತದೆ. ಇದು ಈ ಕಾಯಿಲೆಯ ಲಕ್ಷಣವಾಗಿದೆ. ಆದ್ದರಿಂದ ಉಡುದಾರವನ್ನು ಕಟ್ಟುವುದರಿಂದ ಈ ಕಾಯಿಲೇ ಬರುವುದಿಲ್ಲ. ಇನ್ನೂ ಯಾವ ರೀತಿಯ ಉಡುದಾರವನ್ನು ಕಟ್ಟಬೇಕು ಅಂತ ಹೇಳುವುದಾದರೆ, ಹೊಕ್ಕಳಿನ ಮೇಲೆ ಹೋಗಬಾರದು ಹಾಗೂ ಸೊಂಟದ ಕೆಳಗೆ ಹೋಗಬಾರದು. ಹೌದು ಈ ರೀತಿಯಾಗಿ ಉಡುದಾರವನ್ನು ಕಟ್ಟಿಕೊಂಡರೆ ಮಾತ್ರ ಲಾಭಗಳು ಸಿಗುತ್ತವೆ. ಇಲ್ಲವಾದರೆ ಫ್ಯಾಷನ್ ಗಾಗಿ ಕಟ್ಟಿಕೊಳ್ಳುತ್ತೇನೆ ಅಂತ ಕಟ್ಟಿಕೊಂಡರೆ ಯಾವುದೇ ರೀತಿಯ ಲಾಭಗಳು ದೊರೆಯುವುದಿಲ್ಲ ಮಿತ್ರರೇ, ನೋಡಿದ್ರಲಾ ಉಡುದಾರವನ್ನು ಕಟ್ಟಿಕೊಳ್ಳುವುದರಿಂದ ಏನು ಆಗುತ್ತದೆ ಅದರ ಹಿಂದೆ ಮುಂದೆ ಇರುವ ಸಂಪ್ರದಾಯಕ ಮತ್ತು ವೈಜ್ಞಾನಿಕ ಕಾರಣಗಳು ಯಾವುದು ಅಂತ ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ.

Leave a Reply

Your email address will not be published. Required fields are marked *