ಬೀಟ್ರೂಟ್ ತಿನ್ನುವುದರಿಂದ ನಿಮ್ಮ ಆರೋಗ್ಯದಲ್ಲಿ ಏನು ಬದಲಾವಣೆ ಆಗುತ್ತದೆ ಗೊತ್ತೇ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ನಾವು ಮಾರುಕಟ್ಟೆಗೆ ಹೋದರೆ ಅಲ್ಲಿ ದೊರೆಯುವ ಹಣ್ಣುಗಳು ತರಕಾರಿಗಳನ್ನು ನಾವು ಖರೀದಿ ಮಾಡುತ್ತೇವೆ ಆದರೆ ತರಕಾರಿಗಳಲ್ಲಿ ಎಲ್ಲ ತರಕಾರಿಗಳನ್ನು ತೆಗೆದುಕೊಂಡು ಬೀಟ್ರೂಟ್ ಅನ್ನು ತೆಗೆದುಕೊಳ್ಳುವುದನ್ನು ಮರೆತು ಹೋಗುತ್ತೇವೆ. ಬೀಟ್ರೂಟ್ ಅನ್ನು ಕೆಲವರು ಇಷ್ಟ ಪಡುತ್ತಾರೆ ಇನ್ನೂ ಕೆಲವರು ಮೂಗು ಮುರಿಯುತ್ತಾರೆ. ಆದರೆ ನಮ್ಮ ಈ ಲೇಖನವನ್ನು ಓದುವುದರ ಮೂಲಕ ನೀವು ಇಂದಿನಿಂದಲೇ ಬೀಟ್ರೂಟ್ ತಿನ್ನಲು ಶುರು ಮಾಡಿಕೊಳ್ಳುತ್ತೀರಿ ಅಷ್ಟೊಂದು ಆರೋಗ್ಯಕರ ಗುಣಗಳನ್ನು ಹೊಂದಿದೆ ಈ ಬೀಟ್ರೂಟ್. ನಮ್ಮ ದೇಹವು ಸಧೃಢವಾಗಿ ಇರಬೇಕೆಂದರೆ ನಾವು ಉತ್ತಮವಾದ ಪೋಷಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ನಮ್ಮ ಆರೋಗ್ಯಕ್ಕೆ ಒಳ್ಳೆಯದು ಅಂದರೆ ಅದು ಕೆಟ್ಟದಿರಲಿ ಒಳ್ಳೆಯದಿರಲಿ ನಾವು ಸೇವಿಸಬೇಕು. ಏಕೆಂದರೆ ಎಲ್ಲ ಬಗೆಯ ಪೋಷಕಾಂಶಗಳು ಪೌಷ್ಟಿಕತೆ ಒಂದೇ ಆಹಾರದಲ್ಲಿ ಸಿಗುವುದಿಲ್ಲ ಹಾಗೂ ಇದು ತುಂಬಾನೇ ಕಷ್ಟವೂ ಕೂಡಾ ಆಗಿದೆ. ಆದ್ದರಿಂದ ಎಲ್ಲ ಬಗೆಯ ಆಹಾರವನ್ನು ಸೇವಿಸಬೇಕು ಜೊತೆಗೆ ಬೀಟ್ರೂಟ್ ನಂತಹ ಆರೋಗ್ಯಕರ ಆಹಾರವನ್ನು ವಾರದಲ್ಲಿ ಎರಡು ಬಾರಿ ಆದರೂ ತಿನ್ನಬೇಕು. ಬೀಟ್ರೂಟ್ ನಲ್ಲಿ ಇರುವ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾನೇ ಅವಶ್ಯಕ. ಬೀಟ್ರೂಟ್ ನಲ್ಲಿ ಯಾವೆಲ್ಲ ಅಂಶಗಳು ಇವೆ ಹಾಗೂ ಇದು ಆರೋಗ್ಯದ ಮೇಲೆ ಎಷ್ಟೊಂದು ಲಾಭವನ್ನು ಒದಗಿಸುತ್ತದೆ ಹಾಗೂ ಆರೋಗ್ಯದ ದೃಷ್ಟಿಯಿಂದ ಇದನ್ನು ಯಾಕೆ ತಿನ್ನಬೇಕು ಅಂತ ತಿಳಿದು ಕೊಳ್ಳೋಣ.

ಮೊದಲಿಗೆ ಈ ಬೀಟ್ರೂಟ್ ತಿನ್ನುವುದರಿಂದ ಒಂದು ಅದ್ಭುತವಾದ ಲಾಭ ಸಿಗುತ್ತದೆ ಅದುವೇ ಯಾರಿಗೆ ರಕ್ತ ಹೀನತೆ ಸಮಸ್ಯೆ ಇರುತ್ತದೆಯೋ ಅಂಥವರಿಗೆ ಈ ಬೀಟ್ರೂಟ್ ಒಂದು ರಾಮಬಾಣ ಇದ್ದಂತೆ. ಹಿಮೋಗ್ಲೋಬಿನ್ ಹೀನತೆ ಇದ್ದವರಿಗೆ ಈ ಬೀಟ್ರೂಟ್ ತರಕಾರಿ ಒಂದು ವರದಾನ ಇದ್ದಂತೆ. ಯಾರಿಗೆ ರಕ್ತ ಹೀನತೆ ಸಮಸ್ಯೆ ಇರುತ್ತದೆಯೋ ಅಂಥವರು ಈ ಬೀಟ್ರೂಟ್ ಒಂದು ಸೂಪರ್ ಫುಡ್ ಅಂತ ಹೇಳಬಹುದು ಹಾಗೆಯೇ ಈ ಬೀಟ್ರೂಟ್ ಜ್ಯುಸ್ ಕುಡಿಯಬೇಕು. ಬೆಳಿಗ್ಗೆ ಉಪಹಾರ ಮಾಡುವಾಗ ಸಲಾಡ್ ರೂಪದಲ್ಲಿ ತಿನ್ನಬೇಕು. ಇದರಿಂದ ದೇಹದಲ್ಲಿ ರಕ್ತದಕಣಗಳು ಹೆಚ್ಚುತ್ತವೆ. ಮತ್ತು ಈ ಬೀಟ್ರೂಟ್ ನಲ್ಲಿ ವಿಟಮಿನ್ ಎ ವಿಟಮಿನ್ ಸಿ ಕ್ಯಾಲಶಿಯಂ ಪೊಟ್ಯಾಷಿಯಂ ಅಂಶವು ಅಧಿಕವಾಗಿದೆ. ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಯಾರಿಗೆ ವಾಂತಿ ಮತ್ತು ತಲೆನೋವು ಆಗುತ್ತಿದ್ದರೆ ಅಂಥವರು ಬೀಟ್ರೂಟ್ ಜ್ಯುಸ್ ಕುಡಿಯಬೇಕು ಹಾಗೂ ನಿತ್ಯವೂ ಸಲಾಡ್ ರೂಪದಲ್ಲಿ ನಿತ್ಯವೂ ಸೇವಿಸಬೇಕು. ಇದರಿಂದ ತಲೆನೋವು ನಿವಾರಣೆ ಆಗುತ್ತದೆ ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಇರುವ ಅಂಶವು ಕ್ಯಾನ್ಸರ್ ಕೂಡ ಬರದಂತೆ ತಡೆಯುತ್ತದೆ.

ಬೀಟ್ರೂಟ್ ಜ್ಯುಸ್ ಮಾಡಿ ಕುಡಿಯುವುದರಿಂದ ಹಾಗೂ ತರಕಾರಿ ರೂಪದಲ್ಲಿ ತಿನ್ನುವುದರಿಂದ ತ್ವಚೆಗೆ ಸಂಭಂದ ಪಟ್ಟ ಎಲ್ಲ ಸಮಸ್ಯೆಗಳು ದೂರವಾಗುತ್ತದೆ. ಜೊತೆಗೆ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ಯಾರು ನಿರ್ಜಲೀಕರಣ ಸಮಸ್ಯೆಯಿಂದ ಬಾಧೆ ಪಡುತ್ತಿರುತ್ತಾರೆಯೋ ಅಂಥವರು ಬೀಟ್ರೂಟ್ ತಿನ್ನಿ. ಇನ್ನು ಇದರಲ್ಲಿ ಫೈಬರ್ ಅಂಶವಿರುವ ಕಾರಣ, ಇದು ಜೀರ್ಣಕ್ರಿಯೆಗೆ ಉತ್ತಮ. ಹಾಗೂ ಇದು ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಮತ್ತು ಇದು ದೇಹಕ್ಕೆ ಆಕ್ಸಿಜನ್ ಅನ್ನು ಸರಿಯಾಗಿ ಪೂರೈಕೆ ಮಾಡುತ್ತದೆ. ಗರ್ಭಿಣಿಯರು ಪೊಲೀಕ್ ಆಸಿಡ್ ಅನ್ನು ಬೀಟ್ರೂಟ್ ತಿನ್ನುವುದರ ಮೂಲಕ ಪಡೆಯಬಹುದು. ಇನ್ನೂ ನಿಮ್ಮ ತುಟಿಗಳು ಒರಟಾಗಿದ್ದರೆ ಬೀಟ್ರೂಟ್ ಪೇಸ್ಟ್ ಅನ್ನು ತುಟಿಗೆ ಹಚ್ಚಿಕೊಳ್ಳಿ. ಇದರಿಂದ ತುಟಿಗಳು ಮೃದು ಆಗುವುದರ ಜೊತೆಗೆ ಕಪ್ಪು ತುಟಿಗಳು ಕೆಂಪಗೆ ಆಗುತ್ತವೆ. ಬೀಟ್ರೂಟ್ ಒಟ್ಟಾರೆಯಾಗಿ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಆದ್ದರಿಂದ ಬೀಟ್ರೂಟ್ ಅನ್ನು ವಾರದಲ್ಲಿ ಒಮ್ಮೆಯಾದರೂ ತಿನ್ನಿ. ಶುಭದಿನ.

Leave a Reply

Your email address will not be published. Required fields are marked *