ನಮಸ್ತೇ ಪ್ರಿಯ ಓದುಗರೇ, ನಿಮ್ಮ ಮನೆಯ ಸುತ್ತ ಮುತ್ತಲೂ ಈ ಸಸ್ಯ ಸಿಕ್ಕರೆ ಬಿಡಬೇಡಿ. ಅದರ ಪ್ರಯೋಜನಗಳನ್ನು ಪಡೆದುಕೊಳ್ಳಿ. ಅದುವೇ ಅಮೃತ ಬಳ್ಳಿ ಸಸ್ಯ. ಹೆಸರೇ ಸೂಚಿಸುವಂತೆ ಈ ಸಸ್ಯದಲ್ಲಿ ಅಮೃತದಂತಹ ಔಷಧೀಯ ಗುಣಗಳು ಅಡಗಿವೆ. ಅಮೃತಕ್ಕೆ ಸಮಾನವಾದ್ದದ್ದು ಅಮೃತ ಬಳ್ಳಿಯೇ ಅಂತ ಹೇಳಿದರೆ ತಪ್ಪಾಗಲಾರದು. ಏಕೆಂದರೆ ನೂರಾರು ರೋಗಗಳನ್ನು ಗುಣಪಡಿಸುವ ಈ ಸಸ್ಯವು ಅದಕ್ಕಾಗಿ ಇದು ಅಮೃತ ಬಳ್ಳಿ ಎಂದು ಹಿರಿಯರಿಂದ ನಾಮಕರಣ ಮಾಡಿಕೊಂಡಿದೆ ಅಂತ ಹೇಳಬಹುದು. ಹೌದು ಅಮೃತ ಅಂದರೆ ಸಾವೇ ಇಲ್ಲವೆಂದು ಅರ್ಥವನ್ನು ಸೂಚಿಸುತ್ತದೆ. ಪ್ರತಿ ಕಾಯಿಲೆಗೂ ಇದು ರಾಮಬಾಣ ಅಂತ ಹೇಳಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಅಮೃತ ಬಳ್ಳಿಯಿಂದ ಆಗುವ ಲಾಭಗಳ ಬಗ್ಗೆ ತಿಳಿಸಿಕೊಡುತ್ತೇವೆ. ನಮ್ಮ ಈ ಚಿಕ್ಕ ಆರೋಗ್ಯಕರ ಲೇಖನವನ್ನು ಓದುವುದನ್ನೂ ಮರೆಯದಿರಿ. ಮಧುಮೇಹಿಗಳು ನಿಯಮಿತವಾಗಿ ಈ ಅಮೃತ ಬಳ್ಳಿ ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಇನ್ನೂ ಎರಡನೆಯದು ನಿಮಗೆ ನೆನಪಿನ ಶಕ್ತಿ ಹೆಚ್ಚಾಗಬೇಕೆಂದರೆ ಈ ಅದ್ಭುತ ಬಳ್ಳಿಯ ಜ್ಯುಸ್ ಅನ್ನು ಕುಡಿಯಿರಿ. ಇದರಿಂದ ಬುದ್ದಿ ಶಕ್ತಿ ಹೆಚ್ಚುತ್ತದೆ ಮತ್ತು ಮಾನಸಿಕ ಒತ್ತಡವು ಕೂಡ ಕಡಿಮೆ ಆಗುತ್ತದೆ ಇನ್ನೂ.
ನೀವು ಪಿತ್ತ ಹೆಚ್ಚಾಗಿ ತಲೆ ಸುತ್ತುವಿಕೆ ಬರುತ್ತಿದ್ದರೆ ಹಾಗೂ ಪಿತ್ತದಿಂದ ದೇಹದಲ್ಲಿ ಉರಿ ಆಗುತ್ತಿದ್ದರೆ ಈ ಅಮೃತ ಬಳ್ಳಿಯ ಜ್ಯುಸ್ ನಲ್ಲಿ ಜೀರಿಗೆ ಹಾಕಿ ಕುಡಿಯಿರಿ ಇದರಿಂದ ಪಿತ್ತವು ನಿವಾರಣೆ ಆಗುತ್ತದೆ. ಇನ್ನೂ ನಿಮಗೆ ಏನಾದರೂ ಅಲ್ಲಲ್ಲಿ ಸಂಧಿಯಲ್ಲಿ ನೋವಿದ್ದರೆ ಅಮೃತ ಬಳ್ಳಿಯ ಜ್ಯೂಸ್ ಗೆ ಹಸುವಿನ ತುಪ್ಪವನ್ನು ಹಾಕಿ ಕುಡಿಯಿರಿ. ಇದರಿಂದ ನೋವು ನಿವಾರಣೆ ಆಗುತ್ತದೆ. ಇನ್ನೂ ನೀವು ವಾಂತಿ ಭೇಧಿ ಇಂದ ತುಂಬಾ ನರಳಾಡುತ್ತಿದ್ದರೆ ಈ ಅಮೃತ ಬಳ್ಳಿಯ ಕಷಾಯದಲ್ಲಿ ಜೇನುತುಪ್ಪವನ್ನು ಹಾಕಿ ಬೆರೆಸಿ ಕುಡಿಯಿರಿ ಇದರಿಂದ ವಾಂತಿ ಕಡಿಮೆ ಆಗುತ್ತದೆ. ಇನ್ನೂ ನಿಮಗೆ ಯಾವುದೇ ಬಗೆಯ ಜ್ವರವಿದ್ದರೂ ಕೂಡ ಅಮೃತ ಬಳ್ಳಿ ಅದ್ಭುತವಾಗಿ ಕೆಲಸವನ್ನು ಮಾಡಿ ಗುಣಪಡಿಸುತ್ತದೆ. ಮತ್ತು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಅಮೃತ ಬಳ್ಳಿಯ ಕಾಂಡದ ರಸದ ಜೊತೆಗೆ ಎರಡು ಚಮಚದಷ್ಟು ಜೇನುತುಪ್ಪವನ್ನು ಹಾಕಿ ಸೇವನೆ ಮಾಡುವುದರಿಂದ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಷ್ಟೇ ಅಲ್ಲದೇ ಇದು ಕಣ್ಣಿನ ದೃಷ್ಟಿಯನ್ನು ಉತ್ತೇಜನಗೊಳಿಸುತ್ತದೆ. ಕಣ್ಣಿನ ಆರೋಗ್ಯಕ್ಕೆ ಇದು ರಾಮಬಾಣ ಇದ್ದಂತೆ. ಹಾಗೂ ಕನ್ನಡಕವೇ ಧರಿಸದಂತೆ ಎಲ್ಲವೂ ಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೇ ಈ ಅಮೃತ ಬಳ್ಳಿ. ಇನ್ನೂ ಮುಖದ ಮೇಲೆ ಆಗಿರುವ ಕಲೆಗಳನ್ನು ಕೂಡ ಹೋಗಲಾಡಿಸುತ್ತದೆ ಈ ಅಮೃತ ಬಳ್ಳಿ. ನಿತ್ಯವೂ ಬೇಳ್ಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಮೃತಬಳ್ಳಿ ರಸವನ್ನು ಕುಡಿಯಿರಿ ಇದರಿಂದ ನಿಜಕ್ಕೂ ಮೊಡವೆಗಳು ಕಡಿಮೆ ಆಗುತ್ತಾ ಬರುತ್ತವೆ. ಹಾಗೂ ಗಾಢವಾದ ಕಲೆಗಳು ಕೂಡ ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ. ನೋಡಿದ್ರಲಾ ಅಮೃತಕ್ಕೆ ಸಮಾನವಾದ ಅಮೃತ ಬಳ್ಳಿಯ ಆರೋಗ್ಯಕರ ಲಾಭಗಳನ್ನು. ಇದು ನಿಮಗೆ ಮಾರುಕಟ್ಟೆಯಲ್ಲಿ ಅಥವಾ ಮೆಡಿಕಲ್ ಸ್ಟೋರ್ ನಲ್ಲಿ ದೊರೆಯುತ್ತದೆ. ಖಂಡಿತವಾಗಿ ಇದರ ಲಾಭಗಳನ್ನು ಪಡೆದುಕೊಳ್ಳಿ. ಶುಭದಿನ.