ನಮಸ್ತೇ ಪ್ರಿಯ ಓದುಗರೇ, ನಮ್ಮ ರೈತರು ಭೂಮಿಯಲ್ಲಿ ಅನೇಕ ಬಗೆಯ ಬೆಳೆಗಳನ್ನು ಬೆಳೆದು ಲಾಭವನ್ನು ಗಳಿಸುತ್ತಾರೆ. ಅಂಥಹ ಬೆಳೆಗಳಲ್ಲಿ ಅಣಬೆ ಕೂಡ ಒಂದಾಗಿದೆ. ನಾಯಿಕೊಡೆ ಅಂತ ಪ್ರಸಿದ್ದತೆ ಪಡೆದಿರುವ ಈ ಅಣಬೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಹಾಗಾದರೆ ಈ ಅಣಬೆಯನ್ನು ಹೇಗೆ ಬೆಳೆಯುವುದು ಅನ್ನುವುದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ ಬನ್ನಿ. ಮೊದಲಿಗೆ ಮುಖ್ಯವಾದ ವಿಷಯ ಅಂದರೆ ಈ ಬೆಳೆಯನ್ನು ಬೆಳೆಯಲು ನಿಮಗೆ ಭೂಮಿ ಬೇಕಾಗಿಲ್ಲ. ಮನೆಯ ಪಕ್ಕದಲ್ಲಿ ಖಾಲಿ ಜಾಗವಿದ್ದರೆ ಸಾಕಾಗುತ್ತದೆ. ಅಲ್ಲಿ ಒಂದು ಶೆಡ್ ರೀತಿಯಲ್ಲಿ ಮಾಡಿಕೊಂಡು ನೀವು ಈ ಬೆಳೆಯನ್ನು ಬೆಳದು ಆದಾಯವನ್ನು ಮಾಡಿಕೊಳ್ಳಬಹುದು. ಈ ಅಣಬೆಯಲ್ಲಿ ಮೇಲೆ ಹೇಳಿದ ಹಾಗೆ ಜೀವಸತ್ವಗಳು ಪ್ರೊಟೀನ್ ಗಳು ಖನಿಜಗಳು ಅನೇಕ ಪೌಷ್ಟಿಕತೆ ಅಡಗಿದೆ. ಇದರಲ್ಲಿ ಶರ್ಕರ ಪಿಷ್ಟ ಕಡಿಮೆ ಇರುವ ಕಾರಣ ಇದು ಸಕ್ಕರೆ ಕಾಯಿಲೆಗೆ ಉತ್ತಮ. ಮತ್ತು ಈ ಆಹಾರವು ಗರ್ಭಿಣಿಯರಿಗೆ ಹೇಳಿ ಮಾಡಿಸಿದ ಸೂಪರ್ ಫುಡ್ ಅಂತ ಹೇಳಿದರೆ ತಪ್ಪಾಗಲಾರದು. ಈ ಮಶ್ರೂಮ್ ಅನ್ನು ನಮ್ಮ ಭಾರತ ದೇಶದಲ್ಲಿ ಕಡಿಮೆ ಬಳಕೆ ಮಾಡಿದರು ಕೂಡ ಪಾಶ್ಚಿಮಾತ್ಯದಲ್ಲಿ ಇದು ತನ್ನ ಸೊಬಗನ್ನು ಹೆಚ್ಚಿಸಿದೆ. ವಿದೇಶಿಗರು ಈ ಅಣಬೆಯ ಸೇವನೆಯನ್ನು ನಿಯಮಿತವಾಗಿ ಮಾಡುತ್ತಾರೆ ಆದರೆ ನಮ್ಮ ಭಾರತ ದೇಶದಲ್ಲಿ ಇದರ ಬಳಕೆ ತುಂಬಾನೇ ವಿರಳ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತ ದೇಶದಲ್ಲಿ ಇದರ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ರೈತರು ಜನರ ಬೇಡಿಕೆಗೆ ಅನುಗುಣವಾಗಿ ಅಣಬೆಯನ್ನು ಬೆಳೆದು ಹೆಚ್ಚುಹೆಚ್ಚು ಲಾಭವನ್ನು ಗಳಿಸಬಹುದು.
ಹಾಗಾದರೆ ಬನ್ನಿ ಯಾವ ರೀತಿ ಇದನ್ನು ಬೇಸಾಯ ಮಾಡುವುದು ಅಂತ ತಿಳಿಯೋಣ. ಅಣಬೆಯನ್ನು ಬೆಳೆಯಲು ನಿಮಗೆ ಸಾಕಷ್ಟು ಭೂಮಿ ಬೇಕಾಗಿಲ್ಲ. ಕೇವಲ ಹಾಳು ಬಿದ್ದ ಜಾಗ ಅಥವಾ ಖಾಲಿ ಇರುವ ಸ್ಥಳದಲ್ಲಿ ನೀವು ಶೆಡ್ ಮಾಡಿಕೊಂಡು ಅಣಬೆ ಬೇಸಾಯ ಮಾಡಬಹುದು. ಈ ಅಣಬೆಗೆ ತಂಪಾದ ವಾತಾವರಣ ಬೇಕಾಗುತ್ತದೆ ಹಾಗೂ ಮಂದ ಬೆಳಕು ಬೇಕಾಗುತ್ತದೆ. ಸ್ವಚ್ಛವಾದ ಗಾಳಿಯಲ್ಲಿ ಈ ಅಣಬೆ ಸೂಕ್ತವಾಗಿ ಬೆಳೆಯುತ್ತದೆ. ಇನ್ನೂ ಇದಕ್ಕೆ ಕೃಷಿ ತ್ಯಾಜ್ಯ ಬೇಕಾಗುತ್ತದೆ. ಅಂದರೆ ಒಣಗಿದ ಹುಲ್ಲು ಅಥವಾ ಗೋಧಿಯ ಹುಲ್ಲು ಬೇಕಾಗುತ್ತದೆ. ಅಥವಾ ಜೋಳದ ದಂಟು ಕೂಡ ಉಪಯೋಗಿಸಬಹುದು. ಮೊದಲಿಗೆ ರಾತ್ರಿ ಹೊತ್ತು ಈ ಕೃಷಿ ತ್ಯಾಜ್ಯವನ್ನು ಚಿಕ್ಕದಾಗಿ ಕತ್ತರಿಸಿ ನೇನೆಸಿದಿಡಬೇಕು. ಎಂಟರಿಂದ ಹತ್ತು ತಾಸು ನೆನೆಸಿದ ಮೇಲೆ ಇದನ್ನು ಮರುದಿನ ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಆಗ ಇದು ಮೆತ್ತಗಾಗಿ ಇದರಲ್ಲಿ ಇರುವ ಬ್ಯಾಕ್ಟೀರಿಯಾ ಕ್ರಿಮಿ ಕೀಟಗಳು ನಾಶವಾಗಿ ಉತ್ತಮವಾದ ಹುಲ್ಲು ನಿಮಗೆ ಸಿಗುತ್ತದೆ ಅದರಲ್ಲಿ ನೀವು ಇದನ್ನು ಬೆಳೆಯಬಹುದು. ಮೊದಲಿಗೆ ಏನು ಮಾಡಬೇಕು ಅಂದರೆ ಒಂದು ಚೀಲದಲ್ಲಿ ಈ ಹುಲ್ಲು ಹಾಕಬೇಕು. ಅದರ ಸುತ್ತಲೂ ಅಣಬೆ ಬೀಜವನ್ನು ಹಾಕಬೇಕು.
ತದ ನಂತರ ಮತ್ತೆ ಸ್ವಲ್ಪ ಹುಲ್ಲು ಹಾಕಬೇಕು. ಆಮೇಲೆ ಮತ್ತೆ ಅದರ ಸುತ್ತಲೂ ಅಣಬೆ ಬೀಜವನ್ನು ಹಾಕಬೇಕು. ಕೊನೆಯದಾಗಿ ಹುಲ್ಲಿನ ಮೇಲೆ ಬೀಜವನ್ನು ಹಾಕಿ ಚೆನ್ನಾಗಿ ಚೀಲವನ್ನು ಕಟ್ಟಬೇಕು. ಹಾಗೂ ಗಾಳಿ ಆಡಲು ಸ್ವಲ್ಪ ಅಲ್ಲಲ್ಲಿ ತೂತುಗಳನ್ನು ಮಾಡಬೇಕು. ಬಳಿಕ ಇದನ್ನು ಅಣಬೆ ಶೆಡ್ ನಲ್ಲಿ ಇಡಬೇಕು. ನಿಮಗೆ ಹೇಗೆ ಅನುಕೂಲವಾಗುತ್ತದೆ ಅಷ್ಟೊಂದು ಚೀಲವನ್ನು ತಯಾರಿಸಿ ನೀವು ಇವುಗಳನ್ನು ಬೆಳೆಯಬಹುದು. 15-20 ದಿನಗಳ ನಂತರ ಬಳಿಕ ನಿಮಗೆ ಈ ಅಣಬೆ ಬೇರುಗಳು ಬೆಳೆಯುತ್ತವೆ. ಆಗ ನೀವು ಅದರಲ್ಲಿ ಇರುವ ಹುಲ್ಲನ್ನು ತೆಗೆದು ಹಾಕಿ ಅಣಬೆ ಬೇರುಗಳನ್ನು ಹಾಗೆ ಇಡಬೇಕು. ನಿತ್ಯವೂ ಸ್ವಲ್ಪ ಸ್ವಲ್ಪ ನೀರು ಚಿಮುಕಿಸಬೇಕು. ಬಳಿಕ 10 ದಿನವಾದ ಮೇಲೆ ನಿಮಗೆ ಅಣಬೆ ಹುಟ್ಟುತ್ತದೆ. ಆಗ ಅದನ್ನು ನೀವು ಕಾಟವೂ ಮಾಡಿ ಬೇಡಿಕೆಗೆ ಅನುಗುಣವಾಗಿ ಅಣಬೆಯನ್ನು ಮಾರಾಟ ಮಾಡಿ ಆದಾಯವನ್ನು ಗಳಿಸಬಹುದು. ಅಣಬೆ ಬೀಜಗಳು 80-90 ರೂಪಾಯಿಗೆ ಬೆಲೆ ಬಾಳುತ್ತವೆ ಆದರೆ ಅಣಬೆಯು 150-300 ವರೆಗೆ ಬಾಳಿಕೆ ಬರುತ್ತದೆ. ತೋಟಗಾರಿಕೆಯಲ್ಲಿ ನಿಮಗೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಸಿಗುತ್ತದೆ. ನಿಮಗೂ ಈ ಬೇಸಾಯ ಮಾಡಲು ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.