ನಮಸ್ತೇ ಪ್ರಿಯ ಓದುಗರೇ, ಈ ಜಗತ್ತಿನ ಸೃಷ್ಟಿಯನ್ನು ಮೂರು ತ್ರಿಮೂರ್ತಿಗಳಿಂದ ರಚಿತವಾಗಿದೆ ಅವರೇ ಬ್ರಹ್ಮ ವಿಷ್ಣು ಮಹೇಶ್ವರ. ಶಿವನನ್ನು ತ್ರಿಲೋಕದ ಲಯಕಾರ ಎಂದು ಕರೆಯುತ್ತಾರೆ. ಶಿವನನ್ನು ಅದೆಷ್ಟೋ ಶತಮಾನಗಳಿಂದ ಕೋಟಿ ಸಂವತ್ಸರಗಳಿಂದ ಭಕ್ತರು ಶಿವನನ್ನು ಅತಿರೇಕ ಭಕ್ತಾದಿಗಳಿಂದ ಪೂಜೆಯನ್ನು ಮಾಡುತ್ತಾ ಹಾಗೂ ಆರಾಧಿಸುತ್ತಾ ಬಂದಿದ್ದಾರೆ. ಸಾಮಾನ್ಯವಾಗಿ ನಾವು ಎಲ್ಲರೂ ಶಿವನನ್ನು ನೋಡಿಯೇ ಇರುತ್ತೇವೆ. ದೇವಾಲಯದಲ್ಲಿ ಮೂರ್ತಿಗಳ ರೂಪದಲ್ಲಿ ಲಿಂಗ ರೂಪಿಯಾಗಿ ಅಥವಾ ನಟರಾಜನ ರೂಪದಲ್ಲಿ ನೋಡಿರುತ್ತೇವೆ. ಇವುಗಳನ್ನು ಬಿಟ್ಟರೆ ತಪ್ಪಸ್ಸಿನಲ್ಲಿ ಮಗ್ನನಾಗಿರುವ ಶಿವನನ್ನು ಹಾಗೂ ಅನೇಕ ದೇವಾಲಯಗಳನ್ನು ಕೂಡ ನೋಡಿರುತ್ತೇವೆ. ಇವುಗಳ ಹೊರತಾಗಿ ನಮ್ಮ ದಕ್ಷಿಣ ಭಾರತದಲ್ಲಿ ಒಂದು ಅಪರೂಪವಾದ ವಿಭಿನ್ನವಾದ ವಿಶಿಷ್ಟವಾದ ಶಿವನ ದೇವಾಲಯವಿದೆ. ಇಲ್ಲಿ ಶಿವನು ತಲೆ ಕೆಳಮುಖವಾಗಿ ದರ್ಶನವನ್ನು ನೀಡುತ್ತಾನೆ ಅಂದರೆ ಶೀರ್ಷಾಸನ ಹಾಕಿರುವಂತೆ ದರ್ಶನವನ್ನು ಕೊಡುತ್ತಾನೆ. ಈ ದೇವಾಲಯದ ವಿಶಿಷ್ಟ ಲಕ್ಷಣವೇ ಶಿವನ ಮುಖವೂ ಭೂಮಿಯೇಡೆಗೆ ಮಾಡಿದರೆ ಶಿವನ ಪಾದಗಳು ಆಕಾಶದ ಕಡೆಗೆ ಚಾಚಿಕೊಂಡಿರುತ್ತದೆ.
ಹೌದು ಈ ದೇವಾಲಯ ನಿಜಕ್ಕೂ ಒಂದು ವಿಸ್ಮಯಕಾರಿ. ಇಂತಹ ದೇವಾಲಯ ಇರುವುದು ಆಂಧ್ರಪ್ರದೇಶ ದ ಭೀಮಾವರಂನ್ ಯನಮದುರ ಎಂಬಲ್ಲಿ. ಇಲ್ಲಿರುವ ಈಶ್ವರನಿಗೆ ಶಕ್ತೇಶ್ವರ ಅಂತ ಕೂಡ ಕರೆಯುತ್ತಾರೆ. ಕಾರಣ ಶಕ್ತಿ ಮತ್ತು ಈಶ್ವರ ಇಬ್ಬರು ಜೊತೆಯಾಗಿ ನೆಲೆಸಿರುವ ಕಾರಣ ಈ ಹೆಸರು ಬಂದಿದೆ ಅಂತ ತಿಳಿಯಲಾಗಿದೆ. ಈ ಶೀರ್ಷಾಸನ ಈಶ್ವರನ ಬಳಿ ಪಾರ್ವತಿ ದೇವಿಯ ವಿಗ್ರಹವಿದೆ. ಆಕೆಯ ಮಡಿಲಿನಲ್ಲಿ ಹಸುಗೂಸು ಕಾರ್ತಿಕೇಯನನ್ನು ಕೂಡ ಕಾಣಬಹುದು. ಈ ದೇವರ ದರ್ಶನವನ್ನು ಪಡೆಯಲು ಭಕ್ತರು ತುಂಬಾನೇ ಕಷ್ಟ ಪಡಬೇಕಾಗುತ್ತದೆ. ಈ ದೇವಾಲಯದ ಹೊರಗಡೆ ಪವಿತ್ರವಾದ ಕಲ್ಯಾಣಿ ಕೂಡ ಇದೆ.
ಶಿವ ಪಾರ್ವತಿ ಇಬ್ಬರು ಯಾವಾಗ್ಲೂ ಜೊತೆಯಾಗಿ ಇರುತ್ತಾರೆ. ಈ ಊರಿಗೆ ಯನಮದುರ ಎಂಬ ಹೆಸರು ಬರಲು ಕಾರಣ ಹಿಂದೆ ಶಂಭೂರ ಎಂಬ ರಾಕ್ಷಸನು ತನ್ನ ತಪ್ಪಸಿನಿಂದ ತನಗೆ ಕೇವಲ ಯಮಧರ್ಮನಿಂದ ಮಾತ್ರವೇ ಸಾವು ಬರಬೇಕೆಂದು ಶಿವನಲ್ಲಿ ವರವನ್ನು ಕೇಳಿಕೊಳ್ಳುತ್ತಾನೆ. ಆದರೆ ಈ ವರವನ್ನು ದುರುಪಯೋಗ ಮಾಡಿಕೊಂಡು ಋಷಿ ಮುನಿಗಳಿಗೆ ಶಂಭೂರ ರಾಕ್ಷಸ ತೊಂದರೆಯನ್ನು ಕೊಡಲು ಶುರು ಮಾಡುತ್ತಾನೆ. ಇದರಿಂದ ವಿಚಲಿತರಾದ ಋಷಿಮುನಿಗಳು ಆತನನ್ನು ಸಾಯಿಸಲು ಯಮಧರ್ಮರಾಯನಲ್ಲಿ ಯಾಚಿಸುತ್ತಾರೆ.
ಆಗ ಶಂಬೂರ ರಕ್ಷಸ ಮತ್ತು ಯಮಧರ್ಮರಾಯ ನಡುವೆ ಯುದ್ದವಾಗಿ ಯಮಧರ್ಮರಾಯನಿಗೆ ಸೋಲು ಉಂಟಾಗುತ್ತದೆ. ಇದರಿಂದ ಚಿಂತೆಗೀಡಾದ ಯಮಧರ್ಮರಾಯ ಶಿವನನ್ನು ಮೊರೆ ಹೋಗುತ್ತಾನೆ. ಇಂತಹ ಸಂದರ್ಭದಲ್ಲಿ ಶಿವನು ಶೀರ್ಷಾಸನ ರೂಪದಲ್ಲಿ ಧ್ಯಾನ ಭಂಗಿಯಾಗಿರುತ್ತಾರೆ.ಎಷ್ಟು ಸಮಯವಾದರು ಶಿವನು ಧರ್ಮರಾಯನಿಗೆ ದರ್ಶನವನ್ನು ನೀಡುವುದಿಲ್ಲ ಇದನ್ನು ಅರಿತ ಪಾರ್ವತಿ ದೇವಿ ತನ್ನ ಶಕ್ತಿಯಿಂದ ಶಿವನನ್ನು ಭೂಮಿಗೆ ಕರೆತರುತ್ತಾಳೆ. ಬಳಿಕ ರಾಕ್ಷಸನನ್ನು ಸಂಹಾರ ಮಾಡಲು ಯಮಧರ್ಮರಾಯನಿಗೆ ಅಸ್ತ್ರವನ್ನು ನೀಡುತ್ತಾಳೆ. ಆಗ ರಾಕ್ಷಸನ ಸಂಹಾರ ಆಗುತ್ತದೆ. ಹೀಗಾಗಿ ಶಿವನು ಧ್ಯಾನಸ್ಥನಾಗಿ ಅಲ್ಲಿಯೇ ಕುಳಿತುಕೊಳ್ಳುತ್ತಾನೆ.ಆತನ ರಕ್ಷಣೆಗೆ ತಾಯಿ ಪಾರ್ವತಿದೇವಿ ಮಗನೊಂದಿಗೆ ಅಲ್ಲಿಯೆ ನೆಲೆಸುತ್ತಾಳೆ. ಅದಕ್ಕಾಗಿ ಈ ಊರಿಗೆ ಯನಮಧುರ ಅಂತ ಹೆಸರಿಡಲಾಗಿದೆ. ಪಾರ್ವತಿದೇವಿ ಯಮನಿಗೆ ಅಸ್ತ್ರವನ್ನು ನೀಡಿದ ಈ ಸ್ಥಳದಲ್ಲಿ ಕಲ್ಯಾಣಿ ಉದ್ಭವ ಆಗುತ್ತದೆ.ಇದು ದೇವಾಲಯದ ಹೊರಗಡೆ ಇರುತ್ತದೆ. ಇದರಲ್ಲಿ ಬರುವ ನೀರಿನಿಂದ ಪ್ರಸಾದವನ್ನು ತಯಾರಿಸಲು ಮತ್ತು ಪೂಜೆ ಮಾಡಲು ಬಳಕೆ ಮಾಡುತ್ತಾರೆ. ಇಲ್ಲಿ ಬಂದ ಭಕ್ತಾದಿಗಳ ಎಲ್ಲ ಬೇಡಿಕೆಗಳನ್ನು ಶಿವನು ನೆರವೇರಿಸುತ್ತಾರೆ ಎಂಬ ಅಚಲವಾದ ನಂಬಿಕೆ ವಿಶ್ವಾಸ ಭಕ್ತರಲ್ಲಿ ಇದೆ. ಇದು ಹೊರ ರಾಜ್ಯದಲ್ಲಿ ಇಲ್ಲ ಗೆಳೆಯರೇ. ನಮ್ಮ ಕರ್ನಾಟಕ ರಾಜ್ಯದಲ್ಲಿದೇ. ನಮ್ಮ ದಕ್ಷಿಣ ಭಾರತದ ವಿಶಿಷ್ಟ ಅಪರೂಪವಾದ ಶಿವನ ದೇವಾಲಯ ಇದಾಗಿದೆ.