ನಮಸ್ತೇ ಪ್ರಿಯ ಓದುಗರೇ, ಚಳಿಗಾಲ ಬದಲಾದಂತೆ ಜನರ ಆಹಾರ ಶೈಲಿ ಬದಲಾಗುತ್ತದೆ. ಚಳಿಗಾಲ ಶುರು ಆದಂತೆ ಜನರು ಡ್ರೈ ಫ್ರೂಟ್ಸ್ ಗಳನ್ನು ಹೆಚ್ಚಾಗಿ ತಿನ್ನಲು ಶುರು ಮಾಡುತ್ತಾರೆ. ಡ್ರೈ ಫ್ರೂಟ್ಸ್ ಅಂದರೆ ಬಾದಾಮಿ ಗೋಡಂಬಿ ಪಿಸ್ತಾ ದ್ರಾಕ್ಷಿ ಖರ್ಜೂರ ಮುಂತಾದವುಗಳು. ಆದರೆ ಕೆಲವರಿಗೆ ನಾವು ಏನು ಸೇವಿಸಬೇಕು ಕಾಲಕ್ಕೆ ತಕ್ಕಂತೆ ಯಾವುದನ್ನು ಸೇವಿಸಿದರೆ ಲಾಭಗಳು ಉಂಟಾಗುತ್ತವೆ ಅನ್ನುವ ಗೊಂದಲದಲ್ಲಿ ಸಿಲುಕಿತ್ತಾರೆ. ಕೇವಲ ಒಣದ್ರಾಕ್ಷಿ ಖರ್ಜೂರ ಗೋಡಂಬಿ ಸೇವನೆ ಮಾಡಿದರೆ ಸಾಕಾಗುವುದಿಲ್ಲ ಮಿತ್ರರೇ ಜೊತೆಗೆ ಶೇಂಗಾ ಬೀಜಗಳನ್ನು ಕೂಡ ಸೇವಿಸಬೇಕು. ಚಳಿಗಾಲದಲ್ಲಿ ಶೇಂಗಾ ಬೀಜ ಒಂದು ಅದ್ಭುತವಾದ ಸ್ನಾಕ್ಸ್ ಅಂತ ಹೇಳಬಹುದು. ಅಷ್ಟೇ ಅಲ್ಲದೇ ಬಡವರ ಬಾದಾಮಿ ಅಂತ ಪ್ರಸಿದ್ಧವಾಗಿರುವ ಶೇಂಗಾ ಬೀಜ ಆರೋಗ್ಯಕ್ಕೆ ಹೇಳಿ ಮಾಡಿಸಿದ ಸೂಪರ್ ಬೀಜ ಅಂತ ಹೇಳಿದರೆ ತಪ್ಪಾಗಲಾರದು. ಇದನ್ನು ಬಡವರ ಬಾದಾಮಿ ಅಂತ ಏಕೆ ಕರೆಯುತ್ತಾರೆ ಅಂದರೆ ಬಾದಾಮಿಯಲ್ಲಿರುವ ಎಲ್ಲ ಅಂಶಗಳನ್ನು ಈ ಶೇಂಗಾ ಬೀಜ ಹೊಂದಿರುತ್ತದೆ.
ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಶೇಂಗಾ ಬೀಜ ತಿನ್ನುವುದರಿಂದ ಆಗುವ ನೂರೆಂಟು ಲಾಭಗಳ ಪಟ್ಟಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಬನ್ನಿ.ನೆನೆಸಿದ ಶೇಂಗಾ ಬೀಜಗಳನ್ನು ತಿನ್ನುವುದರಿಂದ ಅದರ ಲಾಭಗಳು ದುಪ್ಪಟ್ಟು ಆಗುತ್ತವೆ. ಹೌದು ನಿಮಗೇನಾದರೂ ತಿಂದ ಆಹಾರವೂ ಸರಿಯಾಗಿ ಜೀರ್ಣವಾಗುತ್ತಿಲ್ಲವೆ ಹಾಗಾದ್ರೆ ನೆನೆಸಿದ ಶೇಂಗಾ ಬೀಜಗಳನ್ನು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ತಿನ್ನಿರಿ. ಇದರಿಂದ ಅಸಿಡಿಟಿ ಹೊಟ್ಟೆ ನೋವು ಹಾಗೂ ಉಬ್ಬರ ಎಲ್ಲವೂ ಕ್ರಮೇಣ ಕಡಿಮೆ ಆಗುತ್ತದೆ. ಇನ್ನೂ ಕೆಲವರ ದೇಹದ ಭಾಗಗಳು ಅನಾವಶ್ಯಕವಾಗಿ ವಕ್ರವಾಗಿ ಬೆಳೆಯುತ್ತವೆ. ಇದರಿಂದ ಅವರ ಲುಕ್ ಹಾಳಾಗುತ್ತವೆ. ಅಂಥವರು ನೀರಿನಲ್ಲಿ ರಾತ್ರಿವಿಡಿ ಶೇಂಗಾ ಬೀಜಗಳನ್ನೂ ಚೆನ್ನಾಗಿ ನೆನೆಸಿ ಮರುದಿನ ಬೆಳಗ್ಗೆ ತಿನ್ನಬೇಕು ಇನ್ನೂ ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ ಅಂತವರು ಕೂಡ ಶೇಂಗಾ ಬೀಜ ಸೇವನೆ ಉತ್ತಮ.
ಅಷ್ಟೇ ಅಲ್ಲದೇ ನೆನೆಸಿದ ಶೇಂಗಾ ಬೀಜ ತಿನ್ನುವುದರಿಂದ ಬ್ಲಡ್ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ. ಹಾಗೂ ರಕ್ತ ಸಂಚಾರ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಹಾಗೂ ಶೇಂಗಾ ಬೀಜದಲ್ಲಿ ಫೈಬರ್ ಮ್ಯಾಗ್ನಿಷಿಯಂ ಕಬ್ಬಿಣ ಜಿಂಕ್ ಕಾಫರ್ ಕಾರ್ಭೋಹೈಡ್ರೆಟ್ ಪೊಟ್ಯಾಶಿಯಂ ಐರನ್ ವಿಟಮಿನ್ ಎಲ್ಲವೂ ಒಳಗೊಂಡಿರುತ್ತದೆ. ಇದು ನಮ್ಮ ಒಟ್ಟಾರೆ ಆರೋಗ್ಯವನ್ನು ಅಭಿವೃದ್ದಿ ಮಾಡುವಲ್ಲಿ ಸಹಕಾರಿಯಾಗಿದೆ. ಇದರಲ್ಲಿರುವ ಐರನ್ ಅಂಶವು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚು ಮಾಡುತ್ತದೆ. ಹಾಗೂ ರಕ್ತ ಹೀನತೆ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಒಮೆಗಾ ತ್ರಿ ಫ್ಯಾಟಿ ಆಸಿಡ್ ಹಾಗೂ ವಿಟಮಿನ್ ಸಿ ಸ್ಕಿನ್ ಆರೋಗ್ಯವನ್ನು ಕಾಪಾಡುತ್ತದೆ. ಹಾಗೂ ತ್ವಚೆಯನ್ನು ಫ್ರೀ ರಾಡಿಕಲ್ ನಿಂದ ಬಚಾವ್ ಮಾಡುತ್ತದೆ. ಇದರಲ್ಲಿರುವ ಫೈಬರ್ ಅಂಶವೂ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಸೂಪರ್ ಫುಡ್ ಆಗಿದೆ. ಮಧುಮೇಹಿಗಳು ಶೇಂಗಾ ಬೀಜವನ್ನು ಆತಂಕವಿಲ್ಲದೆ ತಿನ್ನಬಹುದು. ಇನ್ನೂ ನೀವು ಈ ಶೇಂಗಾ ಬೀಜವನ್ನು ಸರಳವಾಗಿ, ಹುರಿದು ಅಥವಾ ಬೇಯಿಸಿ ತಿನ್ನಬಹುದು. ಉಪ್ಪಿಟ್ಟು ಮೊದಲಾದ ತಿನಿಸುಗಳಲ್ಲಿಎಣ್ಣೆ ಹುರಿಯುವಾಗ ಹಾಕಿ ಸೇವಿಸಬಹುದು. ಚೆಕ್ಕಿ, ಕಂಬರ್ ಕಟ್ಟು ಮೊದಲಾದ ತಿನಿಸುಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧವಾಗಿವೆ. ಆದರೆ ಈ ಶೇಂಗಾವನ್ನು ನೀವು ಹೇಗೂ ತಿಂದರೂ ಆರೋಗ್ಯಕ್ಕೆ ಲಾಭವೇ ಲಾಭಗಳು.