ನಮಸ್ತೇ ಪ್ರಿಯ ಓದುಗರೇ, ನಿಮಗೆ ತುಂಬಾನೇ ಹಳೆಯದಾದ ನೆಗಡಿ ಒಣಕೆಮ್ಮು ಸಮಸ್ಯೆಯಿಂದ ನರಳಾಡುತ್ತಿದ್ದೀರಿ ಅಥವಾ ಬಾಧೆ ಪಡುತ್ತೀದ್ದೀರಿ. ಹಾಗಾದರೆ ಇದಕ್ಕೆ ಪರಿಹಾರ ಯಾವುದು ಇದಕ್ಕೆ ಏನು ಮಾಡಬೇಕು. ಹೇಗೆ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಯಾವ ರೀತಿಯಾಗಿ ಎಷ್ಟೇ ಹಳೆಯದಾದ ಒಣಕೆಮ್ಮು ನೆಗಡಿ ಕಡಿಮೆ ಮಾಡಿಕೊಳ್ಳಬಹುದು ಅಂತ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ. ಈ ಒಣಕೆಮ್ಮು ಮತ್ತು ನೆಗಡಿ ಹೋಗಲಾಡಿಸಲು ಬಳಸುವ ಸುಲಭವಾದ ಗಿಡ ಮೂಲಿಕೆ ವಣ ವಣೆ ಸೊಪ್ಪು. ಈ ಸೊಪ್ಪು ಸಾಮಾನ್ಯವಾಗಿ ಕಾಲುವೆ ಅಂಚಿನಲ್ಲಿ ಕೆರೆಗಳ ಬದಿಯಲ್ಲಿ ತೇವಾಂಶ ಸ್ಥಳಗಳಲ್ಲಿ ಹುಲಿಸಾಗಿ ಬೆಳೆದಿರುತ್ತದೆ. ಇದು ಒಣಕೆಮ್ಮು ಹೋಗಲಾಡಿಸಲು ಉತ್ತಮವಾದ ಮನೆಮದ್ದು ಇದಾಗಿದೆ ಹಾಗಾದರೆ ಬನ್ನಿ ಇದನ್ನು ಹೇಗೆ ಬಳಕೆ ಮಾಡಬೇಕು ಅಂತ ತಿಳಿಯೋಣ. ಮೊದಲಿಗೆ ವಣ ವಣೆ ಸೊಪ್ಪು ಮತ್ತು ಜೇನುತುಪ್ಪವು ಬೇಕಾಗುತ್ತದೆ.
ಮೊದಲಿಗೆ ಈ ವಣ ವಣೆ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಕುಟ್ಟಿಕೊಳ್ಳಿ. ಕುಟ್ಟಿಕೊಂಡು ಅದರ ರಸವನ್ನು ಹಿಂಡಿ ತೆಗೆಯಿರಿ. ಈ ಸಸ್ಯದಿಂದ ಅನೇಕ ರೀತಿಯ ಕಾಯಿಲೆಗಳು ನಿವಾರಣೆ ಆಗುತ್ತವೆ ಅದುವೇ ಕೆಮ್ಮು ದಮ್ಮು ಮೂಲವ್ಯಾಧಿ ಕ್ರಿಮಿ ಕೀಟಗಳ ಕಡಿತವನ್ನು ಕೂಡ ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ. ಈ ಸಸ್ಯವು ಕೇವಲ ದೊಡ್ಡವರಿಗೆ ಮಾತ್ರ ಸೀಮತವಲ್ಲದೆ. ಎಲ್ಲರಿಗೂ ಒಳ್ಳೆಯದು. ಇದನ್ನು ಔಷಧಕ್ಕೆ ಮಾತ್ರವಲ್ಲದೆ ಪಲ್ಯ ಸಾಂಬಾರ ಚಟ್ನಿ ಮಾಡಿಕೊಂಡು ಕೂಡ ಸೇವನೆ ಮಾಡಬಹುದು. ಕಣ್ಣಿಗೆ ಬೇಕಾದ ಸಂಪೂರ್ಣ ಪೋಷಕಾಂಶ ಮತ್ತು ಪೌಷ್ಟಿಕತೆ ದೊರೆಯುತ್ತದೆ. ಹೌದು ಈ ಎಲೆಗಳನ್ನು ಚೆನ್ನಾಗಿ ಕುಟ್ಟಿ ಇದರ ರಸವನ್ನು ಹಿಂಡಿ ತೆಗೆದು ಅದರಲ್ಲಿ ಎರಡು ಚಮಚ ಜೇನು ತುಪ್ಪವನ್ನು ಹಾಕಿ ಕುಡಿಯಬೇಕು. ಇದನ್ನು ಎಲ್ಲರೂ ಸೇವನೆ ಮಾಡಬಹುದು. ಆದರೆ ವಯಸ್ಸಿಗೇ ತಕ್ಕಂತೆ ಪ್ರಮಾಣ ವನ್ನು ನೋಡಿಕೊಂಡು ಸೇವನೆ ಮಾಡಬೇಕು. ಅಂದರೆ ದೊಡ್ಡವರಿಗೆ 3-4 ಚಮಚದಷ್ಟು ಕೊಟ್ಟರೆ ಚಿಕ್ಕ ಮಕ್ಕಳಿಗೆ ಒಂದು ಚಮಚ ಕೊಡಬೇಕು. ಇದು ಯಾವುದೇ ರೀತಿಯಾಗಿ ರುಚಿಯಲ್ಲಿ ವಗ್ರವಾಗಿ ಇರುವುದಿಲ್ಲ.
ತಿನ್ನಲು ತುಂಬಾನೆ ಚೆನ್ನಾಗಿ ಇರುತ್ತದೆ ಕಾರಣ ಇದರಲ್ಲಿ ಜೇನುತುಪ್ಪವನ್ನು ಬೆರೆಸುವುದರಿಂದ ಇದು ಸವಿಸಲು ರುಚಿಯಾಗಿ ಇರುತ್ತದೆ ನೀವು ಇದನ್ನು ವಯೋಮಾನಕ್ಕೆ ತಕ್ಕಂತೆ ಬಳಕೆ ಮಾಡಬೇಕು. ಇದನ್ನು ಮೊದಲಿನ ಕಾಲದಿಂದಲೂ ಕೂಡ ಪಲ್ಯ ಚಟ್ನಿ ಯಾಗಿ ಬಳಕೆ ಮಾಡಿಕೊಂಡು ಬಂದಿದ್ದಾರೆ. ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಈ ವಣ ವಣೆ ಗಿಡ ಮೂಲಿಕೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಮೊದಲಿನ ಕಾಲದಿಂದಲೂ ಬಳಕೆ ಮಾಡಿಕೊಂಡು ಬಂದಿರುವ ಕಾರಣ ನೀವು ಯಾವುದೇ ಆತಂಕ ಭಯವಿಲ್ಲದೆ ಇದನ್ನು ಬಳಕೆ ಮಾಡಿ ಸೇವನೆ ಮಾಡಬಹುದು. ಇದನ್ನು ನಿಮಗೆ ಕೆಮ್ಮು ಜಾಸ್ತಿ ಇದ್ದರೆ ಒಂದು ದಿನ ಬಿಟ್ಟು ಅಥವಾ ಎರಡು ದಿನಕ್ಕೆ ಒಮ್ಮೆಯಾದರೂ ಕುಡಿಯಿರಿ ಇದು ಒಣಕೆಮ್ಮು ನೆಗಡಿ ದೂರ ಮಾಡುತ್ತದೆ. ಜೊತೆಗೆ ಕಣ್ಣಿನ ದೃಷ್ಟಿ ಅನ್ನು ಉತ್ತಮಗೊಳಿಸುತ್ತದೆ. ಆದರೆ ನೀವು ನಿಮ್ಮ ವಯಸ್ಸಿಗೆ ತಕ್ಕ ಹಾಗೆ ಪ್ರಮಾಣವನ್ನು ನೋಡಿ ಮಾಡಿ ಕುಡಿಯಿರಿ. ಈ ಆರೋಗ್ಯಕರ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಶುಭದಿನ.