ನಮಸ್ತೇ ಪ್ರಿಯ ಮಿತ್ರರೇ, ಸಾಮಾನ್ಯವಾಗಿ ಸೋರೆಕಾಯಿ ಹೀರೇಕಾಯಿ ಹಾಗಲಕಾಯಿ ಎಂಬ ತರಕಾರಿ ಹೆಸರನ್ನು ನೀವು ಕೇಳಿರಬಹುದು. ಪ್ರತಿಯೊಂದು ತರಕಾರಿ ತನ್ನದೇ ಆದ ವಿಶಿಷ್ಟತೆ ಅನ್ನು ಹೊಂದಿರುತ್ತದೆ. ಹಾಗೂ ವಿಭಿನ್ನವಾದ ಗುಣ ಲಕ್ಷಣಗಳನ್ನು ಕೂಡ ಒಳಗೊಂಡಿರುತ್ತದೆ. ಕೆಲವರು ಕೆಲವೊಂದು ಆಹಾರವನ್ನು ಬಹಳ ಇಷ್ಟ ಪಟ್ಟು ಸೇವನೆ ಮಾಡಿದರೆ ಇನ್ನೂ ಕೆಲವರಿಗೆ ಇಷ್ಟ ಆಗುವುದಿಲ್ಲ. ಹಾಗೆಯೇ ವಿಷಯಕ್ಕೆ ಬಂದರೆ ಅದರಲ್ಲಿ ಹೀರೇಕಾಯಿ. ಈ ತರಕಾರಿಯನ್ನು ಕೆಲವರು ಇಷ್ಟ ಪಟ್ಟು ತಿಂದರೆ ಇನ್ನೂ ಕೆಲವರಿಗೆ ಕೆಲವು ಕಾರಣಗಳಿಂದ ಇಷ್ಟವಾಗುವುದಿಲ್ಲ. ಆದರೆ ಈ ಹೀರೇಕಾಯಿ ಆರೋಗ್ಯಕರ ಗುಣಗಳನ್ನು ತಿಳಿದುಕೊಂಡರೆ ನಿಜಕ್ಕೂ ಗೆಳೆಯರೇ ನೀವು ಇವತ್ತಿನಿಂದ ಸೇವನೆ ಮಾಡಲು ಶುರು ಮಾಡುವಿರಿ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಹೀರೇಕಾಯಿ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.
ಮೊದಲನೆಯದಾಗಿ ಹೇಳುವುದಾದರೆ ಹೀರೇಕಾಯಿ ಯಲ್ಲಿ ಉತ್ತಮವಾದ ಫೈಬರ್ ಕ್ಯಾಲ್ಷಿಯಂ ಮ್ಯಾಗ್ನಿಷಿಯಂ ವಿಟಮಿನ್ ಸಿ ವಿಟಮಿನ್ ಎ ವಿಟಮಿನ್ ಕೆ ಮತ್ತು ಐರನ್, ಫಾಸ್ಫರಸ್ ಪೋಟ್ಯಾಷಿಯಮ್ ಖನಿಜಗಳು ಮಿನರಲ್ಸ್ ಹೇರಳವಾಗಿದೆ. ಹೀರೇಕಾಯಿಯಲ್ಲಿ ಹೇರಳವಾಗಿ ನೀರಿನ ಅಂಶ ಇರುವುದರಿಂದ ಇದನ್ನು ತೂಕ ಇಳಿಸಿಕೊಳ್ಳಲು ಸುಲಭವಾಗಿ ಬಳಕೆ ಮಾಡಬಹುದು. ಹೀಗಾಗಿ ಹೀರೇಕಾಯಿ ಸೇವನೆ ಮಾಡಿದರೆ ನಿಮ್ಮ ದೇಹದ ತೂಕ ಸರಿಯಾಗಿ ಅಚ್ಚು ಕಟ್ಟಾಗಿ ಇಟ್ಟುಕೊಳ್ಳಬಹುದು. ಇನ್ನೂ ಎರಡನೆಯದು ಫೈಬರ್ ಅಂಶ ಹೀರೇಕಾಯಿಯಲ್ಲಿ ಅಧಿಕೃತವಾಗಿ ಹುದುಗಿದೆ. ಇದೇ ಒಂದು ಕಾರಣಕ್ಕೆ ಮಲಬದ್ಧತೆ ಹಾಗೂ ಜೀರ್ಣ ಕ್ರಿಯೆ ಗೆ ಸಂಭಂದ ಪಟ್ಟ ಎಲ್ಲ ಸಮಸ್ಯೆಗಳನ್ನೂ ಬಗೆ ಹರಿಸುತ್ತದೆ ಈ ಹೀರೇಕಾಯಿ. ಹಾಗೆಯೇ ಪೈಲ್ಸ್ ಸಮಸ್ಯೆ ಉಳ್ಳವರಿಗೆ ಹೀರೇಕಾಯಿ ಹೇಳಿ ಮಾಡಿಸಿದ ಸೂಪರ್ ಫುಡ್ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಪೈಲ್ಸ್ ಸಮಸ್ಯೆ ಬರುವುದಿಲ್ಲ. ಹಾಗೆಯೇ ಹೀರೇಕಾಯಿ ಯಲ್ಲಿ ಬೀಟಾ ಕೆರೋಟಿನ್ ಅಂಶ ಇರುವುದರಿಂದ ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ. ಹಾಗೂ ಕಣ್ಣಿನ ಸುತ್ತಲೂ ಇರುವ ಸ್ನಾಯುಗಳನ್ನು ಬಲಪಡಿಸುತ್ತದೆ.ಹಾಗಾಗಿ ಕಣ್ಣಿನ ಆರೋಗ್ಯಕ್ಕೆ ಹೀರೇಕಾಯಿ ತುಂಬಾನೇ ಮುಖ್ಯ ಆಗಿದೆ.
ಮತ್ತೆ ರಕ್ತವನ್ನು ಶುದ್ಧೀಕರಿಸುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಈ ಹೀರೇಕಾಯಿ. ರಕ್ತ ಶುದ್ಧವಾಗಿದ್ದರೆ ಸ್ಕಿನ್ ಸಮಸ್ಯೆಗಳು ಕಾಡುವುದಿಲ್ಲ, ಹಾಗೆಯೇ ಮೊಡವೆಗಳು ಕ್ರಮೇಣ ಮಾಯವಾಗುತ್ತವೆ.
ಅದರ ಜೊತೆ ಜೊತೆಯಾಗಿ, ದೇಹದಲ್ಲಿ ವಿಷಕಾರಿ ಅಂಶಗಳನ್ನು ಹೊರ ಹಾಕಲು ತುಂಬಾನೇ ಸಹಾಯ ಮಾಡುತ್ತದೆ. ಹೀಗಾಗಿ ನಮ್ಮ ಲಿವರ್ ತುಂಬಾನೇ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
ಅಷ್ಟೇ ಅಲ್ಲದೇ ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಣಕ್ಕೆ ತರಲು ತುಂಬಾನೇ ಸಹಾಯ ಮಾಡುತ್ತದೆ. ಇನ್ನೂ ಯಾರಿಗೆ ಗ್ಯಾಸ್ಟ್ರಿಕ್ ಮಲಬದ್ಧತೆ ಅಲ್ಸರ್ ಇರುತ್ತದೆ ಅಂಥವರು ಯಾವುದೇ ಚಿಂತೆ ಇಲ್ಲದೇ ಹೀರೇಕಾಯಿ ಸೇವನೆ ಮಾಡಬಹುದು. ಹಾಗೂ ಹೊಟ್ಟೆ ಹುಣ್ಣು ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಪ್ರತಿನಿತ್ಯ ಹೀರೇಕಾಯಿ ಚಟ್ನಿ ಪಲ್ಯ ಸಾಂಬಾರ್ ಮಾಡಿ ತಿಂದರೆ ಇಂತಹ ನೂರೆಂಟು ಲಾಭಗಳನ್ನು ಪಡೆದುಕೊಳ್ಳಬಹುದು. ನೋಡಿದ್ರಲಾ ಒಂದು ಹೀರೇಕಾಯಿ ಇಷ್ಟೊಂದು ಲಾಭಗಳನ್ನು ತಂದು ಕೊಡುತ್ತದೆ ಎಂದು. ನಿಜಕ್ಕೂ ಬಹಳ ಆರೋಗ್ಯಕ್ಕೆ ಒಳ್ಳೆಯದು. ಮಾರುಕಟ್ಟೆಯಲ್ಲಿ ಸಿಕ್ಕರೆ ಖಂಡಿತವಾಗಿ ಬಿಡಬೇಡಿ. ಸೇವನೆ ಮಾಡಿ. ಉತ್ತಮವಾದ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.