ದಿನಕ್ಕೆ ಒಂದು ಈರುಳ್ಳಿ ತಿಂದರೆ ನೂರೆಂಟು ಲಾಭಗಳು ಆರೋಗ್ಯಕ್ಕೆ

ಆರೋಗ್ಯ

ನಮಸ್ತೇ ಗೆಳೆಯರೇ ಈರುಳ್ಳಿ ಎಂದರೆ ನಮಗೆ ಮೊದಲಿಗೆ ನೆನಪು ಬರುವುದು ಕಣ್ಣೀರು ಮತ್ತು ಉರಿ. ಈರುಳ್ಳಿಯನ್ನು ಕತ್ತರಿಸಬೇಕಾದರೆ ಕಣ್ಣಲ್ಲಿ ನೀರು ಬರುತ್ತದೆ. ಇದರಿಂದ ಜನರು ಈರುಳ್ಳಿಯನ್ನು ಕತ್ತರಿಸುವಾಗ ಅದಕ್ಕೆ ಹಿಡಿ ಶಾಪ ಹಾಕುತ್ತಾರೆ. ಅಯ್ಯೋ ಕಣ್ಣು ಉರಿ ಕಣ್ಣು ಉರಿ ಅಂತ ಗೋಳೋಯ್ಯುತ್ತಾರೆ. ಇದು ಕಣ್ಣಲ್ಲಿ ಮಾತ್ರ ನೀರನ್ನು ತರುತ್ತದೆ ಆದರೆ ಇದು ಆರೋಗ್ಯಕರ ಚಮತ್ಕಾರಿ ಗುಣಗಳನ್ನು ಹೊಂದಿದೆ ಗೊತ್ತೇ? ಇದನ್ನು ಜನರು ಮರೆತು ಬಿಡುತ್ತಾರೆ. ಈ ಈರುಳ್ಳಿಯು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಆರೋಗ್ಯವನ್ನು ವೃದ್ಧಿಸುತ್ತದೆ. ಈ ಈರುಳ್ಳಿಯನ್ನು ನಿತ್ಯವೂ ಸೇವಿಸುತ್ತಾ ಬಂದರೆ ಹದಗೆಟ್ಟಿರುವ ಆರೋಗ್ಯವು ಸುಧಾರಿಸುತ್ತದೆ. ವೈದ್ಯ ಪದ್ದತಿಯಲ್ಲಿ ಔಷಧವಾಗಿ ಈರುಳ್ಳಿಯನ್ನು ಬಳಕೆ ಮಾಡುತ್ತಿರುವುದು ರೂಢಿಯಲ್ಲಿದೆ. ಹಾಗಾದರೆ ಬನ್ನಿ ಇದರ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯೋಣ. ಹೌದು ನಿತ್ಯವೂ ಈರುಳ್ಳಿಯನ್ನು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈರುಳ್ಳಿಯಲ್ಲಿ ಸಸ್ಯ ಜನ್ಯ ಪೋಷಕಾಂಶ ಅಡಗಿದೆ. ಇದು ವಿಟಮಿನ್ ಸಿ ಅಂಶ ಹೊಂದಿದ್ದು ಅಸ್ತಮಾ ಕಾಯಿಲೆಯನ್ನು ದೂರ ಮಾಡುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿದೆ. ಇದು ಅಲರ್ಜಿ ಮತ್ತು ಅಸ್ತಮಾ ಕಾಯಿಲೆಯಿಂದ ರಕ್ಷಣೆಯನ್ನು ಒದಗಿಸುತ್ತವೆ. ಹೇಗೆ ಈ ಈರುಳ್ಳಿ ಅಸ್ತಮಾ ಕಾಯಿಲೆಯನ್ನು ದೂರ ಮಾಡುತ್ತದೆ ಅಂದರೆ ಈರುಳ್ಳಿಯನ್ನು ಜೇನುತುಪ್ಪದೊಂದಿಗೇ ಬೆರೆಸಿ ತಿನ್ನಬೇಕು.

ಇದರಿಂದ ಅಸ್ತಮಾ ನಿವಾರಣೆ ಆಗುತ್ತದೆ. ಈರುಳ್ಳಿಯಲ್ಲಿ ವಿಟಮಿನ್ ಸಿ ಅಂಶವಿರುವ ಕಾರಣ ಇದು ಕ್ಯಾನ್ಸರ್ ನಂತಹ ಜೀವಕೋಶಗಳನ್ನು ಹೊಡೆದಾಕುತ್ತದೆ. ಹಾಗೂ ಸಕ್ಕರೆ ಕಾಯಿಲೆ ಇಂದ ಕೂಡ ದೂರವಿರಬಹುದು. ಹೌದು ಅದು ಹೇಗೆ ಅಂದರೆ ಈರುಳ್ಳಿಯನ್ನು ನಿತ್ಯವೂ ಸೇವನೆ ಮಾಡುವುದರಿಂದ ಇದು ದೇಹದಲ್ಲಿ ಗ್ಲುಕೋಜನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಮತ್ತು ದಂತ ಕ್ಷಯ ರೋಗದಿಂದ ಪಾರಾಗಬಹುದು. ಈರುಳ್ಳಿಯನ್ನು ನಿತ್ಯವೂ ಸೇವನೆ ಮಾಡುವುದರಿಂದ ಬಾಯಿಯ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ ಹಲ್ಲುಗಳನ್ನು ಕೂಡ ಕಾಪಾಡುತ್ತದೆ ಈರುಳ್ಳಿಯನ್ನು ಜಗಿದು ತಿನ್ನುವುದರಿಂದ. ಮೂರು ನಿಮಿಷಗಿಂತ ಅಧಿಕವಾಗಿ ಈರುಳ್ಳಿಯನ್ನು ಜಗಿಯುವುದರಿಂದ ಇದು ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ. ಈರುಳ್ಳಿಯು ದೇಹದ ಆರೋಗ್ಯಕ್ಕೆ ಮಾತ್ರವಲ್ಲದೇ ಇದು ಸೌಂದರ್ಯಕ್ಕೂ ಒಳ್ಳೆಯದು. ಕೂದಲಿನ ಆರೋಗ್ಯಕ್ಕೆ ಉತ್ತಮವಾದ ಮನೆಮದ್ದು ಅಂತ ಹೇಳಬಹುದು.

ಈರುಳ್ಳಿಯಲ್ಲಿ ವಿಟಮಿನ್ ಎ ಮತ್ತು ಬಿ ಇರುವುದರಿಂದ ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಈರುಳ್ಳಿ ರಸವನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲು ಬಲಗೊಳ್ಳುತ್ತವೆ. ನೆತ್ತಿಯ ಭಾಗವು ಗಟ್ಟಿಯಾಗುತ್ತದೆ ಇದರಿಂದ ಕೂದಲು ಉದುರುವುದಿಲ್ಲ. ಅಷ್ಟೇ ಅಲ್ಲದೇ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ಡಯೆಟ್ ಮತ್ತು ವ್ಯಾಯಾಮ ಮಾಡುವವರಿಗೆ ಮತ್ತು ಕೊಬ್ಬು ಕರಗಿಸಲು ಬಯಸುವವರಿಗೆ ಉತ್ತಮವಾಗಿದೆ. ಇನ್ನೂ ನಿದ್ರಾ ಹೀನತೆಗೆ ಕೂಡ ಇದು ದಿವ್ಯ ಔಷಧ. ಅದಕ್ಕಾಗಿ ರಾತ್ರಿ ಮಲಗುವ ಮುನ್ನ ಈರುಳ್ಳಿ ಸೂಪ್ ಕುಡಿದು ಮಲಗಿ.ಇದರಿಂದ ನಿದ್ರೆ ಚೆನ್ನಾಗಿ ಬರುತ್ತದೆ ಹಾಗೂ ನಿದ್ರಾ ಹೀನತೆ ಸಮಸ್ಯೆಯು ನಿವಾರಣೆ ಆಗುತ್ತದೆ. ಮನುಷ್ಯನ ಜೀರ್ಣಾಂಗದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡುವಂತಹ ಶಕ್ತಿ ಈರುಳ್ಳಿಗಿದೆ. ಇನ್ನೂ ನೀವು ಅಲರ್ಜಿ ಸಮಸ್ಯೆಯನ್ನು ಹೊಂದಿದ್ದರೆ ಮೆಡಿಕಲ್ ಶಾಪ್ ಬಾಗಿಲು ತಟ್ಟುವ ಅವಶ್ಯಕತೆ ಬೇಡ. ಈ ಸಮಸ್ಯೆಯನ್ನು ದೂರ ಮಾಡಲು ಮತ್ತು ಔಷಧಿಗಳು ಮಾಡುವ ಕೆಲಸವನ್ನು ಈರುಳ್ಳಿಯಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶ ಮಾಡುತ್ತದೆ. ಅದಕ್ಕಾಗಿ ಒಂದು ಹಸಿ ಈರುಳ್ಳಿ ತಿನ್ನುವ ಅಭ್ಯಾಸವನ್ನು ಇಟ್ಟುಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *