ನಮಸ್ತೆ ಪ್ರಿಯ ಓದುಗರೇ, ತಲೆನೋವು ಅಂದರೆ ಸಾಕು ಯಾಕಾದರೂ ಈ ತಲೆನೋವು ಬರುತ್ತದೆ ಅಂತ ಜನರು ತಲೆನೋವಿಗೆ ಹಿಡಿ ಶಾಪವನ್ನು ಹಾಕುತ್ತಾರೆ. ಸಾಮಾನ್ಯವಾದ ತಲೆನೋವನ್ನು ಪರಿಹಾರ ಮಾಡಿಕೊಳ್ಳಬಹುದು. ಈ ತಲೆನೋವು ಬಂದರೆ ಸಾಕು ನಮಗೆ ತಕ್ಷಣವೇ ನೆನಪಾಗುವುದು ಮೆಡಿಕಲ್ ಶಾಪ್. ಅದರತ್ತ ನಾವು ಓಡಿ ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಸೇವನೆ ಮಾಡುತ್ತಾರೆ. ಕಾರಣ ತಲೆನೋವು ಕಡಿಮೆ ಆಗಲಿ ಅಂತ. ಆದರೆ ಇದು ಕೊಂಚ ಕಾಲ ತಲೆನೋವಿನಿಂದ ವಿಶ್ರಾಂತಿಯನ್ನು ನೀಡಿದರು ಕೂಡ ಶಾಶ್ವತವಾಗಿ ಪರಿಹಾರ ಸಿಗುವುದಿಲ್ಲ. ಆದರೆ ಮೈಗ್ರೇನ್ ತಲೆನೋವು ಬಂದರೆ ದೇವರೇ ಕಾಪಾಡಬೇಕು. ಏಕೆಂದರೆ ಇದರ ವಿಪರೀತ ಪ್ರಭಾವಕ್ಕೆ ಹಾಸಿಗೆ ಬಿಟ್ಟು ಮೇಲೆ ಎದ್ದೇಳಲು ಸಾಧ್ಯವಾಗುವುದಿಲ್ಲ. ತಲೆ ಹಿಡಿದು ಮಲಗಬೇಕಾಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಅರ್ಧ ತಲೆನೋವು ಅಥವಾ ತಲೆನೋವು ಅನ್ನು ಹೇಗೆ ಪರಿಹಾರ ಮಾಡಿಕೊಳ್ಳುವುದು ಅಂತ ತಿಳಿಯೋಣ. ಮೈಗರೆನ್ ಸಮಸ್ಯೆ ಅನ್ನುವುದು ಯಾವ ಕಾರಣಕ್ಕೆ ಬರುತ್ತದೆ ಅಂದರೆ, ಹೊಟ್ಟೆ ಶುದ್ದವಾಗಿಲ್ಲವೆಂದರೆ ಈ ತಲೆನೋವು ಕಂಡು ಬರುತ್ತದೆ.
ಇದನ್ನು ಪರಿಹರಿಸಲು ನೀವು ರಾತ್ರಿ ಹೊತ್ತು ಬಿಸಿ ನೀರಿನಲ್ಲಿ ಹರಳೆಣ್ಣೆ ಸೇವನೆ ಮಾಡಬೇಕು. ಇನ್ನೂ ಎರಡನೆಯದು, ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸವನ್ನು ಮಾಡದೇ ಇದ್ದರೆ ಅರ್ಧ ತಲೆನೋವು ಬರುತ್ತದೆ. ಅದಕ್ಕಾಗಿ ನೀವು ಊಟವನ್ನು ಮಾಡುವ ಮೊದಲು ನೂರು ಗ್ರಾಂ ಸೋಂಪು ಮತ್ತು ನೂರು ಗ್ರಾಂ ಓಂ ಕಾಳು ಮತ್ತು ಒಣಶುಂಠಿಯನ್ನು ಪುಡಿ ಮಾಡಿ ಇಟ್ಟುಕೊಳ್ಳಬೇಕು ಇದನ್ನು ನೀವು ಊಟವನ್ನು ಮಾಡುವ ಅರ್ಧ ಗಂಟೆ ಮುಂಚಿತವಾಗಿ ತೆಗೆದುಕೊಳ್ಳಬೇಕು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸದೃಢ ಮಾಡುತ್ತದೆ. ಮತ್ತು ಕೆಲಸವನ್ನು ಸರಿಯಾಗಿ ನಿರ್ವಹಿಸುವಂತೆ ಮಾಡುತ್ತದೆ. ಜೀರ್ಣ ಕ್ರಿಯೆ ಸರಿಯಾಗಿದ್ದರೆ ಶೇಕಡಾ ನೂರರಷ್ಟು ರೋಗಗಳು ಬರುವುದಿಲ್ಲ. ಮತ್ತು ಪಿತ್ತ ವೃದ್ಧಿ ಸಮಸ್ಯೆಗಳು ದೂರವಾಗುತ್ತದೆ. ಪಿತ್ತಕ್ಕೆ ಸಂಭಂದಿಸಿದ ಎಲ್ಲ ಸಮಸ್ಯೆಗಳು ದೂರವಾಗಲು ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಇರಬೇಕು. ಅದಕ್ಕಾಗಿ ಈ ಮಿಶ್ರಣ ಮಾಡಿ ಊಟ ಮಾಡುವ ಅರ್ಧ ಗಂಟೆ ಮುಂಚಿತವಾಗಿ ತೆಗೆದುಕೊಳ್ಳಬೇಕು.
ಇನ್ನೂ ನಿಮಗೆ ತುಂಬಾನೇ ತಲೆನೋವು ಬರುತ್ತಿದೆ ತಡೆದು ಕೊಳ್ಳಲು ಸಾಧ್ಯವಾಗುತ್ತಿಲ್ಲ ತಲೆ ಭಾರ ಆಗುತ್ತಿದೆ ಒಂದೇ ಜಾಗದಲ್ಲಿ ಅಧಿಕವಾಗಿ ನೋವುಂಟು ಆಗುತ್ತಿದೆ ಅಂತ ನೀವು ತುಂಬಾನೇ ಹಿಂಸೆ ಅನುಭವಿಸುತ್ತಿದ್ದರೆ ಈ ಮನೆಮದ್ದುಗಳನ್ನು ಮಾಡಿರಿ. ಎಡಭಾಗದಲ್ಲಿ ತಲೆನೋವು ಬಂದರೆ ಬಲ ಭಾಗದ ಮೂಗಿನ ತುದಿಗೆ ಶುಂಠಿಯ ವಾಸನೆಯನ್ನು ತೋರಿಸಬೇಕು. ಹಸಿ ಶುಂಠಿ ಮತ್ತು ಮುಕ್ಕಾಲು ಭಾಗ ಬೆಲ್ಲ ಸೇರಿಸಿ ಅದರ ರಸವನ್ನು ತೆಗೆದು ಅದರ ಎಂಟು ಹನಿಗಳನ್ನು ಹಾಕಿಕೊಳ್ಳಬೇಕು. ಎಡಭಾಗದಲ್ಲಿ ನೋವು ಆಗುತ್ತಿದ್ದರೆ ಬಲಭಾಗಕ್ಕೆ ಮಾಡಬೇಕು. ಇದರಿಂದ ನಾಡಿ ಶುದ್ಧವಾಗುತ್ತದೆ. ಅಲ್ಲಿ ರಕ್ತಸಂಚಾರ ಸರಿಯಾಗಿ ಆಗುತ್ತಿದ್ದರೆ ನಿಮಗೆ ಅರ್ಧ ತಲೆನೋವು ಕಡಿಮೆ ಆಗುತ್ತದೆ. ಇಲ್ಲವಾದರೆ ತುಂಬೆ ಗಿಡದ ರಸವನ್ನು ಕೂಡ ಹಾಕಿಕೊಳ್ಳಬಹುದು. ಅತಿಯಾಗಿ ತಲೆನೋವು ಬಂದರೆ ನೀವು ಸ್ಟಿಮ್ ಅನ್ನು ತೆಗೆದುಕೊಳ್ಳಬೇಕು. ಮತ್ತು ಮೂಗಿನ ಎರಡು ಹೊಳ್ಳೆಗಳಿಗೆ ಶುಂಠಿ ಮತ್ತು ಬೆಲ್ಲದ ರಸವನ್ನು ಮೂಗಿಗೆ ಎಂಟು ಹನಿಗಳಾಗಿ ಹಾಕಬೇಕು. ಇದರಿಂದ ಪಿತ್ತ ವಿಕಾರಕ ಮೈಗ್ರೆನ್ ಎಲ್ಲವೂ ತಕ್ಷಣವೇ ಕಡಿಮೆ ಆಗುತ್ತದೆ.