ನಿಮ್ಮ ಆಸ್ತಿಯ ಖಾತೆ ನಂಬರ್ ಹೇಗೆ ತಿಳಿದುಕೊಳ್ಳುದು ಅದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ಕಂದಾಯ ಇಲಾಖೆಯಲ್ಲಿ ಯಾವ ರೀತಿಯಾಗಿ ನಿಮ್ಮ ಖಾತೆಯ ನಂಬರ್ ಅನ್ನು ತಿಳಿದುಕೊಳ್ಳಬಹುದು ಅನ್ನುವ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಬನ್ನಿ. ಕೆಲವು ಅನಕ್ಷರಸ್ಥ ರೈತರಿಗೆ ಬಡವರಿಗೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇರುವುದಿಲ್ಲ ಗೆಳೆಯರೇ, ಅದಕ್ಕಾಗಿ ಈ ಖಾತೆ ಅಂದರೇನು? ಖಾತೆ ನಂಬರ್ ಯಾವುದಕ್ಕೆ ಬೇಕಾಗುತ್ತದೆ ಅನ್ನುವ ಮಾಹಿತಿ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ನಿಮಗೆ ಖಾತೆ ಇದ್ದರಷ್ಟೆ ಆಸ್ತಿಗೆ ಖಾತರಿ. ನೀವು ಆಸ್ತಿಗೆ ಒಡೆಯನಾಗಿರುತ್ತೀರಿ. ಆಸ್ತಿ ಖರೀದಿ ಇರಲಿ ಅಥವಾ ಮಾರಾಟ ಇರಲಿ, ಖಾತೆ ಇಲ್ಲದೆ ಯಾವ ಕೆಲಸವೂ ನಡೆಯುವುದೇ ಇಲ್ಲ. ಖಾತೆ ಕುರಿತು ಎಲ್ಲರಿಗೂ ಸ್ಪಷ್ಟ ಮಾಹಿತಿ ಇರುವುದಿಲ್ಲ. ಆದ್ದರಿಂದ ಖಾತೆಯ ನಂಬರ್ ಮಾಡಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ಖಾತೆ ಅಂದರೆ ಒಂದು ದಾಖಲೆ, ನಿರ್ಧಿಷ್ಟವಾದ ಆಸ್ತಿಗೆ ಭೂಮಿಗೆ ನಿವೇಶನಕ್ಕೆ ಸಂಭಂದ ಪಟ್ಟ ಎಲ್ಲ ಮಾಹಿತಿಗಳು ಇದರಲ್ಲಿ ಅಡಗಿರುತ್ತವೆ. ಅಂದರೆ ವ್ಯಕ್ತಿಯ ಹೆಸರು, ಕಟ್ಟಡ ಅಥವಾ ಭೂಮಿಯ ಅಳತೆ, ಇನ್ನಿತರ ಪ್ರಮುಖವಾದ ಅಂಶಗಳನ್ನು ಹೊಂದಿರುತ್ತದೆ.

ಹಾಗಾದರೆ ಮೊದಲಿಗೆ ಖಾತೆಯ ನಂಬರ್ ಏನು ಅಂತ ತಿಳಿಯುವುದಾದರೆ, ಎಲ್ಲರ ಕಡೆಗೆ ಭೂಮಿ ಇರುತ್ತದೆ ಅದಕ್ಕಾಗಿ ಸರಳವಾದ ನಂಬರ್ ಕೂಡ ಇರುತ್ತದೆ. ಈ ನಂಬರ್ ಅನ್ನು ವಿವಿಧ ಪ್ಯಾನ್ ಗಳಲ್ಲಿ ಜೋಡಣೆ ಮಾಡಲಾಗಿರುತ್ತದೆ. ಅವುಗಳನ್ನು ಖಾತೆಗೆ ಜೋಡಣೆ ಮಾಡಲಾಗುತ್ತದೆ. ಅಂದರೆ ಒಬ್ಬ ವ್ಯಕ್ತಿಯ ಎಲ್ಲಾ ಪ್ಯಾನ್ ಗಳನ್ನು ಒಂದು ಖಾತೆಗೆ ಜೋಡಣೆ ಮಾಡಲಾಗುತ್ತದೆ. ಈ ಖಾತೆಗೆ ಖಾತೆಯ ನಂಬರ್ ಅನ್ನು ಕೂಡ ನೀಡಿರುತ್ತಾರೆ. ಹಾಗಾದರೆ ಈ ಖಾತೆಯ ನಂಬರ್ ಅನ್ನು ಹೇಗೆ ನೋಡುವುದು ಅಂತ ಹೇಳುವುದಾದರೆ, ಮೊದಲಿಗೆ ಗೂಗಲ್ ಗೆ ಹೋಗಬೇಕು. ಅಲ್ಲಿ ನೀವು ಆರ್, ಟಿ, ಸಿ ಭೂಮಿ ಅಂತ ಟೈಪ್ ಮಾಡಿ ಹುಡುಕಬೇಕು.ಅಲ್ಲಿ ನಿಮಗೆ ಲ್ಯಾಂಡ್ ರೆಕಾರ್ಡ್ ಗವರ್ನಮೆಂಟ್. ಕರ್ನಾಟಕ. ಇನ್ ಅನ್ನುವ ಲಿಂಕ್ ನಿಮಗೆ ದೊರೆಯುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಪುಟ ತೆರೆಯುತ್ತದೆ.

ಅಲ್ಲಿ ನಿಮಗೆ ಮೊದಲಿಗೆ ದಿನಾಂಕ ಸ್ಟೇಟಸ್ ಎಲ್ಲ ಮಾಹಿತಿ ಇರುತ್ತದೆ. ಈ ಕರೆಂಟ್ ಯರ್ ನಲ್ಲಿ ಜಿಲ್ಲೆ ತಾಲೂಕು ಹೋಬಳಿ ಹೇಗೆ ಮಾಹಿತಿ ಇರುತ್ತದೆ ಹಾಗೆಯೇ ತುಂಬುತ್ತಾ ಸೆಲೆಕ್ಟ್ ಮಾಡುತ್ತಾ ಬನ್ನಿ. ಎಲ್ಲ ಮಾಹಿತಿ ತುಂಬಿದ ಮೇಲೆ ಫೆಚ್ ಡೀಟೇಲ್ಸ್ ಅಂತ ನೀವು ನೀಡಿದರೆ, ನಿಮ್ಮ ಹೆಸರಿನೊಂದಿಗೆ ಖಾತೆ ನಂಬರ್ ಕೂಡ ಪಕ್ಕದಲ್ಲಿ ಸಿಗುತ್ತದೆ. ಇದರಲ್ಲಿ ನಿಮ್ಮ ಹತ್ತಿರ ಎಷ್ಟು ಭೂಮಿ ಇದೆ ಎಲ್ಲವೂ ಅಡಗಿರುತ್ತದೆ. ಬೇರೆ ಸರ್ವೇ ನಂಬರ್ ಇದ್ದರೂ ಕೂಡ ಈ ಖಾತೆಯ ನಂಬರ್ ಗೆ ಜೋಡಣೆ ಆಗಿರುತ್ತದೆ.
ಇದನ್ನು ನೀವು ಯಾರೊಂದಿಗೆ ಕೂಡ ಹಂಚಿಕೊಳ್ಳಬೇಡಿ. ಒಂದು ಕಡೆಗೆ ಭದ್ರವಾಗಿ ಬರೆದಿಟ್ಟುಕೊಳ್ಳಿ. ಹಾಗೂ ನಿಮ್ಮ ವಿಲೇಜ್ ಆಫೀಸರ್ ಹತ್ತಿರ ಹೋಗಿ ಇದನ್ನು ಪರೀಕ್ಷೆ ಕೂಡ ಮಾಡಬಹುದು. ಈ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಹಂಚಿಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *