ರೈತರ ಪಾಲಿನ ಸಂಪತ್ತು ಏನಿದು ಕಡಕ್ ನಾಥ್ ಕೋಳಿ, ಯಾಕಿಷ್ಟು ಇದಕ್ಕೆ ಇಷ್ಟೊಂದು ಬೆಲೆ ಇದೆ. ಗೊತ್ತೇ?

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಸ್ನೇಹಿತರೆ, ಕೋಳಿ ಮಾಂಸ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಅಂತ ಯೋಚಿಸುವ ಜನರು ಇದ್ದಾರೆ ಇದರ ಜೊತೆಗೆ ತೀವ್ರ ಬರಗಾಲು ಬಂದು ತತ್ತರಿ ಹೋಗುವ ರೈತರು ಕೂಡ ಇದ್ದಾರೆ. ಆದರೆ ರೈತರ ಪಾಲಿಗೆ ಈ ಕೋಳಿ ತಳಿ ಒಂದು ಸಂಪತ್ತು ಆಗಿದೆ ಅಂತ ಹೇಳಬಹುದು ಅಧಿಕವಾದ ಬೆಲೆ ಮಾರಾಟ ಮಾಡಿ ಆದಾಯ ಹೆಚ್ಚಿಸಿಕೊಳ್ಳುವ ಮೂಲ ಇದಾಗಿದೆ ಅಂತ ಹೇಳಬಹುದು. ಆ ಕೋಳಿ ತಳಿ ಹೆಸರು ಕಪ್ಪು ಕೋಳಿ ಅಥವಾ ಕಡಕ್ ನಾಥ್ ಕೋಳಿ. ಕೇವಲ ರೈತರಿಗೆ ಇದು ಅಧಿಕವಾದ ಲಾಭವನ್ನು ಒದಗಿಸಿ ಕೊಡುವ ಮೂಲ ಆದಾಯ ಆದರೂ ಕೂಡ ಇದು ನಮ್ಮ ಕರ್ನಾಟಕ ರಾಜ್ಯದಲ್ಲಿ ಬರುವ ಮುನ್ನವೇ ಇದರ ಸಾಕಾಣಿಕೆಯನ್ನು ಒಬ್ಬ ಮಹಾನ್ ವ್ಯಕ್ತಿಯು ಮುಂಚಿತವಾಗಿ ಶುರು ಮಾಡಿದ್ದಾರೆ. ಅವರೇ ಮಹೇಂದ್ರ ಸಿಂಗ್ ಧೋನಿ. ಈ ಖ್ಯಾತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಯಾರಿಗೆ ಗೊತ್ತಿಲ್ಲ ಹೇಳಿ ಇವರು ಎಲ್ಲರಿಗೂ ಅಚ್ಚುಮೆಚ್ಚು.

ಇವರ ಬಳಿ ಇರುವ ಹಣಕ್ಕೆ ಇವರು ಒಂದು ದೊಡ್ಡದಾದ ಕಂಪನಿಯನ್ನು ಖರೀದಿ ಮಾಡಬಹುದು ಆದರೆ ಇವರು ಕಡಕ್ ನಾಥ್ ಕೋಳಿ ಫಾರ್ಮ್ ಅನ್ನು ಶುರು ಮಾಡಲು ಮುಂದಾಗಿದ್ದಾರೆ. ಏನಿದು ಕಡಕ್ ನಾಥ್ ಕೋಳಿ. ಇದು ಹೇಗೆ ಇರುತ್ತದೆ ಯಾಕೆ ಇವರು ಈ ಉದ್ಯಮವನ್ನು ಮಾಡಲು ಬಯಸಿದ್ದಾರೆ ಅಂತ ಹೇಳುವುದಾದರೆ ಈ ಕಡಕ್ ನಾಥ್ ಕೋಳಿ ನೋಡಲು ಕಪ್ಪಾಗಿದ್ದು ಇದರ ಮಾಂಸವು ಕೂಡ ಕಪ್ಪು ಬಣ್ಣದಾಗಿರುತ್ತದೆ. ಕಾಲಿನಿಂದ ಹಿಡಿದು ಜುಟ್ಟಿನವರೆಗು ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಹಾಗೂ ಈ ಕಪ್ಪು ಕೋಳಿಯಲ್ಲಿ ಹಲವಾರು ಬಗೆಯ ಪ್ರಯೋಜನಗಳು ಅಡಗಿವೆ. ಈ ಕಪ್ಪು ಕೋಳಿಯನ್ನು ಮಧ್ಯಪ್ರದೇಶದಲ್ಲಿ ಅಧಿಕವಾಗಿ ಬೆಳೆಯಲಾಗುತ್ತದೆ. ಹೌದು ಮೇಲೆ ಹೇಳಿದ ಹಾಗೇ ಮಹೇಂದ್ರ ಸಿಂಗ್ ಧೋನಿಯವರು ಮಧ್ಯಪ್ರದೇಶದಿಂದ 2000ಕ್ಕು ಹೆಚ್ಚು ಕಪ್ಪು ಕೋಳಿಗಳನ್ನು ತಂದು ತಮ್ಮ ಹೊಸದಾದ ಕೋಳಿ ಫಾರ್ಮ್ ಅನ್ನು ಶುರು ಮಾಡಲು ಬಯಸಿದ್ದಾರೆ.

ಇದನ್ನು ಅರಿತ ಜನರು ತುಂಬಾನೇ ಆಶ್ಚರ್ಯ ಚಕಿತರು ಆದರು. ಇಷ್ಟೂ ದೊಡ್ಡ ಆಟಗಾರ ಹಣವುಳ್ಳ ವ್ಯಕ್ತಿ ಯಾಕೆ ಈ ಕಪ್ಪು ಕೋಳಿಗಳನ್ನು ಖರೀದಿ ಮಾಡುತ್ತಿದ್ದಾರೆ ಎಂದು ಕಕ್ಕಾ ಬಿಕ್ಕಿಯಾದರು. ಮತ್ತು ಯಾಕೆ ಇವರು ಈ ಕಪ್ಪು ಕೋಳಿ ಫಾರ್ಮ್ ಅನ್ನು ಶುರು ಮಾಡುವ ಇಚ್ಛೆಯನ್ನು ಹೊಂದಿದ್ದಾರೆ ಎಂದು ಪ್ರಶ್ನೆ ಕೂಡ ಮೂಡಿದವು. ಇದಕ್ಕೆ ಪ್ರತಿಯಾಗಿ ಉತ್ತರ ಅಂದರೆ ಈ ಕಡಕ್ ನಾಥ್ ಕೋಳಿಯ ಮಾಂಸದಲ್ಲಿ ಅಧಿಕವಾದ ಪ್ರೊಟೀನ್ ಅಂಶವು ಅಡಗಿದೆ. ಸಾಮಾನ್ಯವಾದ ಕೋಳಿಗಳ ಮಾಂಸಗಳಿಗೆ ಈ ಕಡಕ್ ನಾಥ್ ಕೋಳಿ ಮಾಂಸವನ್ನು ಹೋಲಿಕೆ ಮಾಡಿದರೆ ಶೇಕಡಾ 30-40 ಅಷ್ಟು ಅಧಿಕವಾದ ಪ್ರೊಟೀನ್ ಇದೆ. ಮತ್ತು ಫ್ಯಾಟ್ ಅಥವಾ ಕೊಬ್ಬಿನ ಅಂಶವು ಕೇವಲ ಶೇಕಡಾ 1% ಮಾತ್ರ ಇರುತ್ತದೆ. ಆದರೆ ಸಾಧಾರಣ ಕೋಳಿಗಳಲ್ಲಿ 20%-25% ಫ್ಯಾಟ್ ಇರುತ್ತದೆ. ಆದರೆ ಈ ಕಡಕ್ ನಾಥ್ ಕೋಳಿಯಲ್ಲಿ ತುಂಬಾನೇ ಕಡಿಮೆ ಕೊಬ್ಬು ಇರುವುದರಿಂದ ಇದರ ಸೇವನೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಅಧಿಕ ತೂಕ ಹೊಂದಿದವರು ಹೆಚ್ಚು ಕೊಬ್ಬು ಇರುವ ಆಹಾರವನ್ನು ತಿನ್ನುವುದಿಲ್ಲ. ಒಂದು ವೇಳೆ ತಿಂದರೆ ದೀರ್ಘಕಾಲದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈಗ ಕಡಿಮೆ ಕೊಬ್ಬು ಇರುವ ಆಹಾರವನ್ನು ತಿನ್ನಲು ಹೆಚ್ಚಾಗಿ ಬಯಸುತ್ತಾರೆ. ಆದ ಕಾರಣ ಈ ಕಡಕ್ ನಾಥ್ ಕೋಳಿ ಈ ಅದ್ಭುತವಾದ ಪ್ರಯೋಜನವನ್ನು ಹೊಂದಿರುವ ಕಾರಣ ಇದಕ್ಕೆ ತುಂಬಾನೇ ಬೆಲೆ ಬಂದಿದೆ. ಇದೇ ಒಂದು ಕಾರಣಕ್ಕೆ ಮಹೇಂದ್ರ ಸಿಂಗ್ ಧೋನಿಯವರೂ ಈ ಕೋಳಿ ಫಾರ್ಮ್ ಶುರು ಮಾಡಿರಬಹುದು.

Leave a Reply

Your email address will not be published. Required fields are marked *