ಚಿಕ್ಕ ಚಿಕ್ಕ ವಿಷಯಗಳಿಗೆ ಅಳುವವರಿಗೆ ಇಲ್ಲಿದೆ ಗುಡ್ ನ್ಯೂಸ್

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ನಗು ಅಳು ಅನ್ನುವುದು ಎರಡು ಮುಖಗಳ ನಾಣ್ಯಗಳು ಇದ್ದ ಹಾಗೆ. ಆದರೆ ಅಳುವನ್ನು ಯಾರು ಇಷ್ಟ ಪಡಲೂ ಬಯಸುವುದಿಲ್ಲ. ಎಲ್ಲರೂ ಬಯಸುವುದು ನಗುವನ್ನೇ ಹೊರತು ಅಳುವನ್ನಲ್ಲ ಗೆಳೆಯರೇ ಅಲ್ಲವೇ. ಆದರೆ ನಗು ಮತ್ತೆ ಅಳು ಎರಡೂ ಒಂದೇ ಸಮಯದಲ್ಲಿ ಸೇರಿಕೊಂಡರೆ ಅದಕ್ಕೆ ಸರಿ ಸಾಟಿ ಇಲ್ಲ ಅಂತ ದ,ರಾ ಬೇಂದ್ರೆ ಅವರು ಹೇಳಿದ್ದಾರೆ. ಏಕೆಂದರೆ ಸಂತೋಷವಾದಾಗ ನಮಗೆ ನಗುವಿನ ಜೊತೆಗೆ ಕಣ್ಣೀರು ಕೂಡ ಬರುತ್ತದೆ. ಇನ್ನೂ ಕಷ್ಟ ಅಂತ ಮನುಷ್ಯನಿಗೆ ಬಂದಾಗ ಅಥವಾ ಮನಸ್ಸಿಗೆ ನೋವಾದಾಗ ಭಾವನೆಗಳಿಗೆ ಪೆಟ್ಟು ಬಿದ್ದಾಗ ಮನುಷ್ಯನ ಕಣ್ಣಿನಿಂದ ನೀರು ಬರುವುದು ಸಹಜ. ಇನ್ನೂ ಕೆಲವು ಜನರು ಇರುತ್ತಾರೆ, ಸ್ವಲ್ಪವೂ ನೋವು ಸಹಿಸಲಾರದೆ ಚಿಕ್ಕ ಚಿಕ್ಕ ವಿಷಯಗಳಿಗೆ ಅಳುತ್ತಾ ಇರುತ್ತಾರೆ. ಜನರು ಕೂಡ ಹಾಗೆ ಅಳುವ ಜನರನ್ನು ಇಷ್ಟ ಪಡುವುದಿಲ್ಲ. ಆದರೆ ನಿಮಗೆ ಗೊತ್ತೇ ತುಂಬಾ ಅಳುವ ಜನರಿಗೆ ಗುಡ್ ನ್ಯೂಸ್ ಇದೆ ಅಂತ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಚಿಕ್ಕ ಚಿಕ್ಕ ವಿಷಯಗಳಿಗೆ ಅಳುತ್ತಾರೆ, ಚಿಕ್ಕ ಪುಟ್ಟ ವಿಚಾರಗಳನ್ನು ಮನಸ್ಸಿನ ಮೇಲೆ ತೆಗೆದುಕೊಂಡು ನೋವು ಪಡುತ್ತಾ ಕಣ್ಣೀರು ಹಾಕುತ್ತಾರೆ.

ಹೌದು ನೀವು ಕೂಡ ಆಳುವವರ ಪಟ್ಟಿಗೆ ಸೇರಿದರೆ ಬೇಜಾರು ಮುಜುಗರ ಪಡುವ ಅವಶ್ಯಕತೆ ಇಲ್ಲ ಗೆಳೆಯರೇ. ಈ ವಿಷಯ ಕೇಳಿ ನಿಮಗೆ ಅಚ್ಚರಿ ಆಗುತ್ತದೆ ನಿಜಕ್ಕೂ. ಇನ್ನೂ ಸಣ್ಣ ಸಣ್ಣ ವಿಚಾರಗಳಿಗೆ ಅಳುವವರು ಎಂದಿಗೂ ದುರ್ಬಲರು ಅಲ್ಲ ಮಿತ್ರರೇ. ಬದಲಾಗಿ ಇವರು ಮನಸ್ಸಿನಿಂದ ತುಂಬಾ ತುಂಬಾ ಒಳ್ಳೆಯ ಮನಸ್ಸಿನವರು. ಉತ್ತಮವಾದ ಗುಣಗಳನ್ನು ಹೊಂದಿರುವುದರ ಜೊತೆಗೆ ಸ್ವಭಾವದಲ್ಲಿ ತುಂಬಾನೇ ಸದ್ಗುಣಗಳನ್ನು ಹೊಂದಿರುತ್ತಾರೆ ಅಂತ ಕೆಲವು ಸಂಶೋಧನೆ ಸಾಬೀತು ಮಾಡಿದೆ.
ಹೌದು ಜನರು ಬಾಯಿ ಮುಚ್ಚಿಸಲು ಎಂದಿಗೂ ಸಾಧ್ಯವಿಲ್ಲ ಗೆಳೆಯರೇ, ಗಂಡು ಮಕ್ಕಳು ಕಣ್ಣೀರು ಹಾಕಿದರೆ ಯಾಕೆ ಹೆಂಗಸು ರೀತಿಯಲ್ಲಿ ಅಳುತ್ತಿದ್ದಿಯಾ ಅಂತ ಬೈಯುತ್ತಾರೆ. ಇನ್ನೂ ಹೆಣ್ಣು ಮಕ್ಕಳು ಪದೇ ಪದೇ ಅಳುತ್ತಿದ್ದರೆ ಯಾಕೆ ಅಳು ಮುಂಜಿ ಹಾಗೆ ಕಣ್ಣೀರು ಹಾಕುತ್ತಿದ್ದಿಯಾ ಅಂತ ನಾಮಕರಣ ಮಾಡುತ್ತಾರೆ. ಒಂದಲ್ಲ ಒಂದು ರೀತಿಯಲ್ಲಿ ಜನರು ಹೆಸರನ್ನು ಇಡುತ್ತಾರೆ. ನೀವು ಕೂಡ ಪದೇ ಪದೇ ಅಳುತ್ತಿದ್ದರೆ ನೀವು ದುರ್ಬಲರು ಅಂತ ಭಾವಿಸಬೇಡಿ. ನಮಗೆ ಯಾಕೆ ದೇವರು ಕಣ್ಣೀರು ಕಷ್ಟ ಕೊಡುತ್ತಾನೆ ಎಂದು ದೇವರಿಗೆ ಶಾಪ ಹಾಕಬೇಡಿ.

ಬೇರೆಯವರು ಏನಾದ್ರೂ ಅಂದುಕೊಳ್ಳುತ್ತಾರೆ ಅಂತ ಕೂಡ ಚಿಂತೆ ಮಾಡಬೇಡಿ ಗೆಳೆಯರೇ, ನಾವು ನಮಗಾಗಿ ಬದುಕಬೇಕು. ಅಳುವುದು ಒಂದು ಒಳ್ಳೆಯ ಗುಣ ಸ್ವಭಾವ ಅಂತ ತಿಳಿದುಕೊಳ್ಳಬೇಕು. ಮನುಷ್ಯನಿಗೆ ಕೆಲಸದ ಒತ್ತಡ, ನೋವು ಕಷ್ಟಗಳು ಖಿನ್ನತೆ ಮಾನಸಿಕ ಒತ್ತಡ ಎಲ್ಲವೂ ಬರುತ್ತದೆ ಅದನ್ನು ತಡೆಯಲು ದಿವ್ಯ ಔಷಧ ಅಂದರೆ ಅಳು. ಹೌದು ಮನಸ್ಸಿಗೆ ನೋವಾದರೆ ಮನಸ್ಸು ಪೂರ್ತಿಯಾಗಿ ಅತ್ತು ಕಣ್ಣೀರು ಹಾಕಿ ಸಮಾಧಾನ ಮಾಡಿಕೊಳ್ಳಬೇಕು. ಮನಸ್ಸಿನಲ್ಲಿ ಖಿನ್ನತೆ ಮೂಡಿ ಅನೇಕ ರೀತಿಯ ಸಮಸ್ಯೆಗಳು ಉದ್ಭವ ಆಗುತ್ತವೆ. ಅದನ್ನು ಹೋಗಲಾಡಿಸಲು ಜೋರಾಗಿ ಅತ್ತು ಬಿಡಿ. ಇದರಿಂದ ನೆಗೆಟಿವ್ ನೆಸ್ ಥಿಂಕಿಂಗ್ ಕೂಡ ದೂರ ಆಗುತ್ತದೆ. ಒತ್ತಡ ಖಿನ್ನತೆ ಕಷ್ಟಗಳು ನೋವುಗಳು ಕಾಡುತ್ತಿದ್ದರೆ ಚಿಕ್ಕ ಮಕ್ಕಳ ಹಾಗೆ ಬಿಕ್ಕಿ ಬಿಕ್ಕಿ ಅತ್ತು ಬಿಡಿ. ಇದರಿಂದ ನಿಮ್ಮ ಮನಸ್ಸಿನ ಭಾರವೆಲ್ಲವು ಕಡಿಮೆ ಆಗುತ್ತದೆ. ಜನರು ಅಳುತ್ತೇವೆ ಅಂತ ಚುಚ್ಚಿ ಮಾತನಾಡುತ್ತಾರೆ ಆದರೆ ಬದುಕು ಅನ್ನುವುದು ನಮ್ಮದು. ಹೀಗಾಗಿ ನೋವಾದರೆ ಚೆನ್ನಾಗಿ ಅತ್ತು ಕಣ್ಣೀರು ಹಾಕಿ ಸಮಾಧಾನ ಮಾಡಿಕೊಳ್ಳಿ.

Leave a Reply

Your email address will not be published. Required fields are marked *