ಖಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಈ ಬೀಜಗಳನ್ನು ನೆನೆಸಿ ಕುಡಿದರೆ ಏನ್ ಆಗುತ್ತೆ ಗೊತ್ತಾ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ಖಾಲಿ ಹೊಟ್ಟೆಯಲ್ಲಿ ಈ ಬೀಜಗಳನ್ನು ನೆನೆಸಿ ಕುಡಿಯುವುದರಿಂದ ಅಪಾರವಾದ ಲಾಭಗಳು ಉಂಟಾಗುತ್ತವೆ ಗೊತ್ತೇ? ಕಾಮಕಸ್ತೂರಿ ಬೀಜದ ಬಗ್ಗೆ ಹಲವರಿಗೆ ಇದು ಏನು ಎಂಬುದೇ ತಿಳಿದಿರುವುದಿಲ್ಲ. ಕಾಮಕಸ್ತೂರಿ ಒಂದು ಸುಗಂಧ ದ್ರವ್ಯವಿರುವ ಬೀಜ. ಅದರ ಬಗ್ಗೆ ಸಂಪೂರ್ಣವಾಗಿ ವಿವರವಾಗಿ ತಿಳಿಯೋಣ. ಅದು ಯಾವುದು ಅಂದರೆ ಕಾಮ ಕಸ್ತೂರಿ ಬೀಜ. ಇದನ್ನು ಸಬ್ಜಾ ಅಂತ ಕರೆಯುತ್ತಾರೆ. ಕಠಿಣ ನಮ್ ಜರಯತಿ ಅಂದರೆ, ಎಂತಹ ಕಠಿಣವಾದ ಮನಸ್ಸನ್ನು ಕೂಡ ಬದಲಾಯಿಸುತ್ತದೆ. ಇದರ ಬೀಜಗಳು ನೋಡಲು ಕಪ್ಪಾಗಿ ಇರುತ್ತವೆ ಇದನ್ನು ಸಿಹಿ ತುಳಸಿ ಇಂದ ಸಂಗ್ರಹಣೆ ಮಾಡಲಾಗುತ್ತದೆ. ಬೀಜಗಳನ್ನು ನೀರಿನಲ್ಲಿ ನೆನೆಸಿ ನಂತರ ತೆಗೆದುಕೊಳ್ಳಲಾಗುತ್ತದೆ. ಕಾಮ ಕಸ್ತೂರಿಯಲ್ಲಿ ಶೇಕಡಾ 6% ರಷ್ಟು, ತೇವಾಂಶ, ಶೇಕಡಾ 12% ,ಪ್ರೊಟೀನ್ ಮತ್ತು ಮೂರರಷ್ಟು ಕೊಬ್ಬು ಮತ್ತು ಶೇಕಡಾ 20% ನಾರಿನ ಅಂಶ, ಶೇಕಡಾ 41% ಕಾರ್ಬೋಹೈಡ್ರೇಟ್, ಕೊನೆಯದಾಗಿ 15% ಬೂದಿಯ ಅಂಶಗಳು ಅಡಗಿವೆ. ಒಂದು ಚಮಚ ಕಾಮ ಕಸ್ತೂರಿ ಬೀಜಗಳನ್ನು ನೆನೆಸಿಡಬೇಕು. ಇವುಗಳನ್ನು ಬೆಳಗ್ಗೆ ನೋಡಿದಾಗ ಲೊಳೆಯಾಗಿ ಅಂಟು ಅಂಟಾಗಿ ಹೊಂದಿಕೊಂಡಿರುತ್ತದೆ.

ಇದರಲ್ಲಿ ಕಲ್ಲು ಸಕ್ಕರೆ ಸೇರಿಸಿ, ಸೇವನೆ ಮಾಡಬೇಕು ಇದರಿಂದ ಶರೀರಕ್ಕೆ ತಂಪು ನೀಡುತ್ತದೆ. ಕಾಮ ಕಸ್ತೂರಿ ಪ್ಲವನೈಡ್ ಅಂಶವನ್ನು ಹೊಂದಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಈ ಕಾಮ ಕಸ್ತೂರಿ ಅನ್ನು ದೇಹದ ತುಂಬಾ ಹಚ್ಚಿದರೆ ದೇಹದ ದುರ್ಗಂಧ ನಾಶವಾಗುವುದು ಉಂಟು. ಕಾಮ ಕಸ್ತೂರಿ ಗಿಡದ ಎಲೆಗಳನ್ನು ಜಜ್ಜಿ ಅದರ ರಸವನ್ನು ಸೋಸಿ ಅದರಲ್ಲಿ ಜೇನುತುಪ್ಪವನ್ನು ಹಾಕಿ ನೆಕ್ಕಿದರೆ, ಗಂಟಲು ಬೇನೆ ದೂರವಾಗುತ್ತದೆ. ಶೀತ ನೆಗಡಿ ಕೆಮ್ಮು ಸಮಸ್ಯೆಗಳಿಗೆ ಕಾಮ ಕಸ್ತೂರಿ ಎಲೆಗಳ ಕಷಾಯವನ್ನು ಕುಡಿಯಿರಿ. ಇದು ಮೂಗು ಸೋರುವಿಕೆಯನ್ನು ಕಡಿಮೆ ಮಾಡುತ್ತದೆ. ಒಂದು ಚಮಚ ಬೀಜಗಳನ್ನು ಬಟ್ಟೆಯಲ್ಲಿ ನೇನೆಯಿಡಿ. ಇದರಲ್ಲಿ ಸಕ್ಕರೆ ಮಂಜುಗಡ್ಡೆ ಪುಡಿ ಸ್ವಲ್ಪ ಕೇಸರಿಬಣ್ಣ ಹಾಕಿ ತಂಪಾದ ಪಾನೀಯವನ್ನು ತಯಾರಿಸಿಕೊಳ್ಳಿ. ಹೀಗೆ ಮಾಡುವುದರಿಂದ ಬಾಯಾರಿಕೆ ಶಮನ ಆಗುತ್ತದೆ.

ರಕ್ತದ ಬೇನೆಗೆ ಒಂದು ಟೀ ಚಮಚ ಕಾಮ ಕಸ್ತೂರಿ ಬೀಜಗಳಿಗೆ ಒಂದು ತಣ್ಣೀರು ಬಟ್ಟೆ ಬೆರೆಸಿ ನುಣ್ಣಗೆ ರುಬ್ಬಿ ಶೋಧಿಸಿ ಸೇವನೆ ಮಾಡುವುದರಿಂದ ರಕ್ತ ಬೇಧಿ ವಾಸಿ ಆಗುತ್ತದೆ. ಅಜೀರ್ಣತೆ ವಾಂತಿ ಬೇಧಿ ಕಾಮ ಕಸ್ತೂರಿ ಗಿಡದ ಹೂವುಗಳನ್ನು ನೀರಿನಲ್ಲಿ ಅರೆದು ಶೋಧಿಸಿ ಸ್ವಲ್ಪ ಜೇನುತುಪ್ಪ ಹಾಕಿ ಸೇವನೆ ಮಾಡಿರಿ. ಕಾಮ ಕಸ್ತೂರಿ ಗಿಡ ಬಹಳ ಪರಿಮಳವನ್ನು ಹೊಂದಿರುವಂಥ ಗಿಡ. ಕಾಮ ಕಸ್ತೂರಿ ಬೀಜವನ್ನು ದಿನಾಲೂ ಉಪಯೋಗಿಸಿ ಇದರಿಂದ ಹೊಟ್ಟೆ ಭಾಗದ ಕೊಬ್ಬನ್ನು ಕರಗಿಸಬಹುದು. ಹಾಗು ನಮ್ಮ ದೇಹದ ತೂಕವನ್ನು ಇಳಿಸಲು ಸಹಾಯವಾಗುತ್ತದೆ.ನಿಮಗೆ ಥೈರಾಯಿಡ್ ಸಮಸ್ಯೆ ಇದ್ದರೆ ಇದೊಂದು ಒಳ್ಳೆ ಮನೆ ಮದ್ದು. ಇದನ್ನು ದಿನಾಲೂ ಕುಡಿಯುತ್ತ ಬನ್ನಿ ಥೈರಾಯಿಡ್ ಇಂದ ಮುಕ್ತಿ ಕಾಣುತ್ತೀರಿ. ಚೆನ್ನಾಗಿ ನೆನೆಸಲಾದ ಕಾಮಕಸ್ತೂರಿ ಬೀಜಗಳಿಗೆ ಸ್ವಲ್ಪ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವನೆ ಮಾಡುವುದರಿಂದ ಮಲಬದ್ಧತೆ ತೊಂದರೆ ನಿವಾರಣೆ ಆಗುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *